ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chikkaballapur News: ಸಮಸಮಾಜದ ಆಶಯಗಳಿಗೆ ಜೀವ ತುಂಬುವ ಮೌಲ್ಯಗಳೇ ಸಾಹಿತಿ ಸರಸಮ್ಮ ಕೃತಿಗಳ ಜೀವಾಳ : ಚಂದ್ರ ಶೇಖರ ನಂಗಲಿ ಅಭಿಮತ

ಸಾಹಿತಿ ಸರಸಮ್ಮ ಅವರ "ಮಾನವ ಬಂಧುತ್ವ" ಕಾದಂಬರಿ ಮುದ್ದಣ್ಣನ ರಾಮಾಶ್ವಮೇದ ಕೃತಿಯಲ್ಲಿರುವ ಬರುವ ಮನೋರಮೆಯರ ಸರಸ ಸಲ್ಲಾಪದ ಸಂದರ್ಭವನ್ನು ನೆನಪಿಗೆ ತರುವ ಕೃತಿಯಾಗಿದೆ. ಸಾಮಾನ್ಯದ ಚಿತ್ರಕ್ಕೆ ಸುವರ್ಣದ ಚೌಕಟ್ಟು ಎಂದು ಎಸ್.ವಿ.ರಂಗಣ್ಣ ಕರೆದಂತೆ, ಕಸದ ತೊಟ್ಟಿಯಲ್ಲಿ ಸಿಕ್ಕಿಕುವ ಮಗುವನ್ನು ಯಶೋಧ ತನ್ನದೆಂಬಂತೆೆ ಬೆಳೆಸುತ್ತಾಳೆ. ಸುಬ್ಬ ಲಕ್ಷ್ಮೀ ಮತ್ತು ಮೋಹನ್ ಅದಕ್ಕೆ ಬೆಂಬಲವಾಗಿ ನಿಲ್ಲುತ್ತಾರೆ.

ಸಮಸಮಾಜದ ಆಶಯಗಳಿಗೆ ಜೀವ ತುಂಬುವ ಮೌಲ್ಯಗಳೇ ಸಾಹಿತಿ ಸರಸಮ್ಮ ಕೃತಿಗಳ ಜೀವಾಳ  ಎಂದು ಹಿರಿಯ ಸಾಹಿತಿ, ವಿಮರ್ಶಕ ಚಂದ್ರಶೇಖರ ನಂಗಲಿ ಅಭಿಪ್ರಾಯಪಟ್ಟರು.

ಚಿಕ್ಕಬಳ್ಳಾಪುರ: ಸಬ್‌ ಕೋ ಸನ್ಮತಿ ದೇ ಭಗವಾನ್ ಎಂಬ ಸಮಸಮಾಜದ ಆಶಯಗಳಿಗೆ ಜೀವ ತುಂಬುವ ಮೌಲ್ಯಗಳೇ ಸಾಹಿತಿ ಸರಸಮ್ಮ ಕೃತಿ(Litereur Sarasamma Book) ಗಳ ಜೀವಾಳವಾಗಿದೆ ಎಂದು ವಿಮರ್ಶಕ ಚಂದ್ರಶೇಖರ್ ನಂಗಲಿ ಅಭಿಪ್ರಾಯಪಟ್ಟರು.

ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ನಿವೃತ್ತ ನೌಕರರ ಸಂಘ, ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಹಿರಿಯ ಸಾಹಿತಿ ಸರಸಮ್ಮ ಅವರ
ಮಾನವ ಬಂಧುತ್ವ, ಸತ್ಯ ದರ್ಶನ, ಬಾಳದೀವಿಗೆ ಎಂಬ ಮೂರು ಕೃತಿಗಳ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ವೃತ್ತಿಗೆ ನಿವೃತ್ತಿಯಿದೆ, ಪ್ರವೃತ್ತಿಗೆ ನಿವೃತ್ತಿಯಿಲ್ಲ. ಶಾಲಾ ಶಿಕ್ಷಕಿಯಾದರೂ ಬಿಡುವಿನ ವೇಳೆಯಲ್ಲಿ ಸಾಹಿತ್ಯದ ಪರಿಚಾರಿಕೆ ಮಾಡಿದ್ದರ ಫಲವಾಗಿ ಇವರಿಂದ 45 ಕೃತಿಗಳು ರಚಿತವಾಗಿವೆ.ಇಷ್ಟು ಕೃತಿಗಳನ್ನು ಬರೆಯುವುದು ಸಾಮಾನ್ಯವಲ್ಲ. ಇದಕ್ಕಾಗಿ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದರು.

ಇದನ್ನೂ ಓದಿ: Chikkaballapur News: ಕೈಗಾರಿಕೆಗೆ ಭೂಮಿ ಕೊಡಲು ರೈತರು ಸಿದ್ಧ ಸರಕಾರ ಮುಂದಾಗುತ್ತಿಲ್ಲ: ಪ್ರತಿಭಟನಾಕಾರರ ಆಕ್ರೋಶ

ಸಾಹಿತಿ ಸರಸಮ್ಮ ಅವರ "ಮಾನವ ಬಂಧುತ್ವ" ಕಾದಂಬರಿ ಮುದ್ದಣ್ಣನ ರಾಮಾಶ್ವಮೇದ ಕೃತಿಯಲ್ಲಿರುವ ಬರುವ ಮನೋರಮೆಯರ ಸರಸ ಸಲ್ಲಾಪದ ಸಂದರ್ಭವನ್ನು ನೆನಪಿಗೆ ತರುವ ಕೃತಿಯಾಗಿದೆ.ಸಾಮಾನ್ಯದ ಚಿತ್ರಕ್ಕೆ ಸುವರ್ಣದ ಚೌಕಟ್ಟು ಎಂದು ಎಸ್.ವಿ. ರಂಗಣ್ಣ ಕರೆದಂತೆ, ಕಸದ ತೊಟ್ಟಿಯಲ್ಲಿ ಸಿಕ್ಕಿಕುವ ಮಗುವನ್ನು ಯಶೋಧ ತನ್ನದೆಂಬಂತೆೆ ಬೆಳೆಸುತ್ತಾಳೆ. ಸುಬ್ಬಲಕ್ಷ್ಮೀ ಮತ್ತು ಮೋಹನ್ ಅದಕ್ಕೆ ಬೆಂಬಲವಾಗಿ ನಿಲ್ಲುತ್ತಾರೆ. ಹೀಗೆ ಇಡೀ ಕಾದಂಬರಿಯಲ್ಲಿ ಪೌರಾಣಿಕ ಇತಿಹಾಸ ವರ್ತಮಾನದ ಸಂಗತಿಗಳು ಅಡಕವಾಗಿವೆ. ಹೀಗಾಗಿ ಸಾಹಿತಿ ಸರಸಮ್ಮ ಅವರು ಬರೆದ ಮಾನವ ಬಂಧುತ್ವ ಕಾದಂಬರಿಯು ಸುವರ್ಣ ದ ಚೌಕಟ್ಟು ಹಾಕಿದಂತೆ ಕಂಡಿದೆ.ಅಷ್ಟು ಸೊಗಸಾಗಿ ಅವರು ಈ ಕೃತಿಯನ್ನು ಬರೆದಿದ್ದಾರೆ ಎಂದು ಬಣ್ಣಿಸಿದರು.

ಕುವೆಂಪು ಕಾರಂತ, ಬೇಂದ್ರೆ, ರಾವ್‌ಬಹಾದ್ದೂರ್, ಅನಕೃ ಇಂತಹ ಮೇರು ಸಾಹಿತಿಗಳು ಬೃಹತ್ ಕಾದಂಬರಿಗಳನ್ನು ಬರೆದಿದ್ದಾರೆ. ಇವುಗಳನ್ನು ಓದಲು, ಓದಿದ್ದನ್ನು ಅರ್ಥೈಸಿ ಕೊಳ್ಳಲು ಅಪಾರವಾದ ಜ್ಞಾಪಕಶಕ್ತಿ ಬೇಕೇಬೇಕು.ಇಲ್ಲದಿದ್ದಲ್ಲಿ ಸಾಹಿತಿ ಸಾಹಿತ್ಯ ಮತ್ತು ಓದುಗರ ನಡುವೆ ಅನುಸಂದಾನ ಉಂಟಾಗುವುದಿಲ್ಲ. ಸರಸಮ್ಮ ಅವರ ಕೃತಿಗಳು ಸರಳ ವಾಗಿ ಓದಿಸಿಕೊಳ್ಳುವ ಗುಣವುಳ್ಳವು ಎಂದರು.

cbpm2u

ಕನ್ನಡ ಸಾಹಿತ್ಯ ಒಂದು ಮಹಾರಣ್ಯವಿದ್ದಂತೆ, ಇದರಲ್ಲಿ ಗಗನ ಚುಂಬಿ ವೃಕ್ಷಗಳಿದ್ದಂತೆ ಕುರುಚಲು ಗಿಡಗಂಟೆ ಬಳ್ಳಿ ಪೊದೆಗಳೂ, ಹುಲ್ಲು ಗರಿಕೆಗಳೂ ಮುಖ್ಯ. ಹೀಗಾಗಿ ಬಹುತ್ವವೇ ಕಾಡು. ಅರಣ್ಯದಲ್ಲಿ ವೈವಿಧ್ಯತೆಯಿದೆ.ತಾನೂ ಬದುಕು ಇತರರನ್ನು ಬದುಕಿಸುವುದು ಕಾಡು. ತಾನೊಂದೇ ಬೆಳೆಯುವುದು ತೋಪು. ಸರಸಮ್ಮ ಅವರ ಕೃತಿಗಳು ಕಾಡಿನ ಸಂಸ್ಕೃತಿ ಯ ರೂಪಕವಾಗಿವೆ ಎಂದರು.

ಪರಿವರ್ತನೆಯ ತತ್ವಗಳನ್ನು ಒಳಗೊಂಡ ಕೃತಿಯೇ ಸತ್ಯದರ್ಶನ ಎಂಬ ಕಥಾ ಸಂಕಲನ ವಾಗಿದೆ. ಸಂಬಂಧ ಮತ್ತು ಬಾಂಧವ್ಯಗಳನ್ನು ಸಾರುವ ಕಥೆಗಳು ಇಲ್ಲಿ ಹೇರಳವಾಗಿವೆ. ಬದುಕಿನಲ್ಲಿ ಎದುರಾಗುವ ಆಕಸ್ಮಿಕ ಸಂಬಂಧಗಳೇ ಲೇಖಕಿಯನ್ನು ಈ ಎತ್ತರಕ್ಕೆ ರೂಪಿಸಿವೆ. ಇಂತಹ ಆಕಸ್ಮಿಕ ಸಂಬAಧಗಳೇ ಮಾನವತೆ ಪೊರೆಯುವ ಜೀವದ್ರವ್ಯವಾಗಿವೆ ಎಂದರು.

ಹನಿಗವನಗಳ ಬಗ್ಗೆ ನನಗೆ ಒಲವಿಲ್ಲ.ಬರೆದರೆ ದಿನಕರ ದೇಸಾಯಿ ಥರ ಬರೆಯಿರಿ, ಇಲ್ಲವಾ ದಲ್ಲಿ ಕವನವೇ ಬರೆಯಿರಿ ಎಂಬುದು ಕವಿಗಳಿಗೆ ನನ್ನ ಸಲಹೆ. ನಮ್ಮ ಬದುಕು ಪಾವನ ಆಗಬೇಕು.ಅಪಹಾಸ್ಯದ ಬದುಕಿನಲ್ಲಿ ಸತ್ಯ ದರ್ಶನ ಅಸಾಧ್ಯ.ಕನ್ನಡಕ್ಕೆ ಚಾರಣ ಯಾರೆಂದರೆ ಕವಿ ಸರ್ವಜ್ಞ. ತೆಲುಗಿನ ವೇಮನ ಹಾಗೆ ಇವರಿದ್ದರು ಎಂದರು.

ಸರಸಮ್ಮ ಅವರ ಹನಿಗವನ ಸಂಕಲ ಸರಳವಾಗಿದೆ ನೇರವಾದ ಅನುಭವ ದ್ರವ್ಯರಾಶಿ ಯನ್ನು ಒಳಗೊಂಡಿದೆ. ಇಂದಿನ ಮನುಷ್ಯರಿಗೆ ಸ್ವಾರ್ಥವೇ ಬುನಾದಿ. ಗಾಜಿನ ತೊಟ್ಟಿಯ ಮೀನುಗಳಾಗಿದ್ದಾರೆ. ವ್ಯಕ್ತಿ ಕೇಂದ್ರವೇ ಪ್ರಧಾನವಾದ ಸ್ವಾರ್ಥ ಕೇಂದ್ರಿತ ಬದುಕನ್ನು ಹೊದ್ದುವರ ಅಟ್ಟಹಾಸ ನಮ್ಮ ನಡುವಿದೆ. ಮನೆಯಂತೆ ಪ್ರಕೃತಿಯೂ ನಮಗೆ ಪಾಠಶಾಲೆ ಆಗಿದೆ. ಇದನ್ನು ಮಾದರಿಯಾಗಿ ತೆಗೆದು ಕೊಂಡರೆ ಸಮಾಜ ಆರೋಗ್ಯವಂತವಾಗಿರಲಿದೆ ಎಂದು ಕರೆ ನೀಡಿದರು.

ಸಹಕಾರ ಇಲಾಖೆಯ ನಿವೃತ್ತ ಅಧಿಕಾರಿ ಸಿ.ಅಶ್ವತ್ಥ್ ನಾರಾಯಣ ಮಾತನಾಡಿ, ಸರಸಮ್ಮ ಅವರಂತಹ ಸಾಹಿತಿಗಳ ಸಂತತಿ ಹೆಚ್ಚು ಆಗಲಿ.ನಿವೃತ್ತಿಗೂ ಮೊದಲೆ ಗೊತ್ತಿದ್ದರೆ ಪ್ರಸಾರ ಮಾಡಲು ಸಹಾಯ ಮಾಡಬಹುದಿತ್ತು.ಹಳೆಯ ಮಿತ್ರರೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಸಂತೋಷ ಆಗಿದೆ ಎಂದರು.

ಆರೋಗ್ಯ ಇಲಾಖೆಯ ನಿವೃತ್ತ ವೈದ್ಯ ಡಾ.ಶ್ಯಾಮಸುಂದರ್ ಮಾತನಾಡಿ, ನಾನು ಮಕ್ಕಳ ತಜ್ಞ. ಮಕ್ಕಳಿಗೆ ಚಿಕಿತ್ಸೆ ಕೊಡುವಾಗ ಸಂತೋಷ ಪಟ್ಟಿದ್ದೇನೆ. ಇವತ್ತಿನ ಕಾರ್ಯಕ್ರಮದಲ್ಲಿ ಹಿರಿಯರೇ ತುಂಬಿದ್ದೀರಿ. ನಿಮಗೇನು ಹೇಳಲಿ? ಹಿರಿಯ ನಾಗರಿಕರೂ ಕೂಡ ಮಕ್ಕಳ ಮನಸ್ಸು ಹೊಂದಿರುವುದು ಅಗತ್ಯವಿದೆ.ಹಿರಿಯ ಅನುಭವಸ್ಥ ನಾನೇ ಮೇಲು ನನ್ನ ಮಾತೇ ನಡೆಯಬೇಕು ಎಂಬ ಈ ಎಲ್ಲವನ್ನೂ ಬಿಡಬೇಕು. ಆಗಲೇ ಆರೋಗ್ಯ ಚೆನ್ನಾಗಿರುತ್ತದೆ. ವಯೋ ಸಹಜ ಆರೋಗ್ಯ ಸಮಸ್ಯೆ ಸಹಜ. ಚಿಕಿತ್ಸೆ ಪಡೆದು ಬದುಕು ಸಾಗಿಸಿ. ಆರೋಗ್ಯ ವಿಮೆ ಮಾಡಿಸಿಕೊಳ್ಳಿ. ಇದರಿಂದ ಕುಟುಂಬದ ಹೊರೆ ಕಡಿಮೆ ಮಾಡಬಹುದು. ಸರಸಮ್ಮ ಸಾಹಿತ್ಯದ ಮೂಲಕ ಆರೋಗ್ಯವನ್ನು ಪ್ರತಿಷ್ಠಾಪನೆ ಮಾಡಿಕೊಂಡಿದ್ದಾರೆ ಎಂದರು.

ಕೋಡಿ ರಂಗಪ್ಪ ಮಾತನಾಡಿ, ಮನುಷ್ಯ ಸಂಬಂಧಗಳ ದುರ್ಭಿಕ್ಷದ ಕಾಲದಲ್ಲಿ ಸರಸಮ್ಮ ಅವರ ಕೃತಿಗಳು ಲೋಕಾರ್ಪಣೆ ಆಗಿರುವುದು ಸಂತೋಷದ ಸಂಗತಿ. ಮನುಷ್ಯ ಜಾತಿ ತಾನೊಂದೇ ವಲಂ ಸ್ಮರಣೆಯೇ ವಿಶೇಷ. ಮೌಖಿಕ ಪರಂಪರೆಯ ಮೂಲಕ ಬಂದ ಶಿಷ್ಠ ಸಾಹಿತ್ಯ ಗಟ್ಟಿಗೊಂಡಿದೆ. ಟಾಗೋರ್ ಶ್ರೇಷ್ಠ ಸಾಹಿತ್ಯ ಕೊಡಲು ಹೋದೆ. ಎಲ್ಲವನ್ನೂ ಕೊಟ್ಟೆ, ಆದರೆ ಪೂರ್ಣ ಮಾಡುವಲ್ಲಿ ಸಾವು ಬಂದಿತು ಎನ್ನುತ್ತಾರೆ. ಸದಾ ಹಸನ್ಮುಖಿ ಗಳಾಗಿರಬೇಕು. ಮೋಸ ವಂಚನೆಗಳು ಮೌಲ್ಯಗಳಾಗುತ್ತಿರುವ ಈ ಹೊತ್ತಿನಲ್ಲಿ ಒಂದಿನ ಸಂಸ್ಕೃತಿಗೆ ಹಚ್ಚಿದ ಸರಸಮ್ಮ ಅಭಿನಂದನಾರ್ಹರು ಎಂದರು.

ಕೃತಿಕಾರರಾದ ಸರಸಮ್ಮ ಮಾತನಾಡಿ, ಸಾಹಿತ್ಯವೇ ನನ್ನ ಜೀವಾಳ, ಪುಸ್ತಕ ಕೊಂಡು ಓದುವ ಮೂಲಕ ಸಾಹಿತಿಗಳನ್ನು ಪ್ರೋತ್ಸಾಹಿಸಬೇಕು. ನನ್ನ ಕೃತಿಗಳ ಬಗ್ಗೆ ಮನಬಿಚ್ಚಿ ಮಾತನಾಡಿದ ನಂಗಲಿ ಸರ್ ಅವರಿಗೆ ನಮಿಸುತ್ತೇನೆ. ನನ್ನ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಎಲ್ಲಾ ಸಹೃದಯರಿಗೆ, ಸಹಿತ್ಯಾಭಿಮಾನಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಸಹಕಾರ ಇಲಾಖೆ ನಿವೃತ್ತ ಅಧಿಕಾರಿ ಸಿ.ಅಶ್ವತ್ಥ ನಾರಾಯಣ, ನಿವೃತ್ತ ಇಂಜನಿಯರ್ ಪುರುಷೋತ್ತಮ, ನಿವೃತ್ತ ಪ್ರಾಂಶುಪಾಲ ಚಂದ್ರಶೇಖರ್ ನಂಗಲಿ,ಜಿಕೆವಿಕೆ ನಿವೃತ್ತ ಪ್ರಾಧ್ಯಾಪಕ ಮುನಿರಾಜು,  ಕಸಾಪ ಜಿಲ್ಲಾಧ್ಯಕ್ಷ ಕೋಡಿ ರಂಗಪ್ಪ, ಮಕ್ಕಳ ವೈದ್ಯ ಡಾ.ಶ್ಯಾಮಸುಂದರ್, ಹಿರಿಯ ಸಾಹಿತಿ ಗೋಪಾಲ ಗೌಡ ಕಲ್ವಮಂಜಲಿ, ಕಾರ್ಯದರ್ಶಿ ರಾಮಕೃಷ್ಣ ರೆಡ್ಡಿ, ಖಜಾಂಚಿ ತಿರುಮಳಪ್ಪ, ಕಸಾಪ ಪ್ರಧಾನ ಕಾರ್ಯದರ್ಶಿ ಅಮೃತ ಕುಮಾರ್, ಲೇಖಕಿ ಸರಸಮ್ಮ , ನಿ.ನೌ.ಸಂಘದ ಅಧ್ಯಕ್ಷ ಬಿ.ವಿ.ಕೃಷ್ಣ ಇದ್ದರು.