ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr.K.Sudhakar: ದೇಶವಾಸಿಗಳ ಪ್ರಗತಿಯ ಮುನ್ನೋಟವೇ ಪ್ರಧಾನಿಗಳ ಮನದ ಮಾತಾಗಿದೆ: ಡಾ.ಕೆ.ಸುಧಾಕರ್

ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿ ಈಗಿನ ಪ್ರಧಾನಿ ನರೇಂದ್ರ ಮೋದಿ ಅವರಂತೆ ದೇಶದ ಜನತೆಯ ಜತೆ ಮಾತನಾಡಿದ್ದು ನಾನು ಕಾಣೆ. ಅವರ ಮನ್‌ಕಿ ಬಾತ್ 129 ಕಂತುಗಳ ಮೂಲಕ ಭಾರತದ ಸಾಂಸ್ಕೃತಿಕ, ಐತಿಹಾಸಿಕ, ಹಾಗೂ ಜನಸಾಮಾನ್ಯರ  ಸಾಧನೆಗಳನ್ನು ರಾಷ್ಟçದೊಳಗೆ ಹಂಚಿಕೊಂಡಂತೆ ಯಾವ ಪ್ರಧಾನಿಯೂ ಕೂಡ ಹಂಚಿಕೊಂಡು ಪ್ರೋತ್ಸಾಹಿಸಲೇ ಇಲ್ಲ. ಹೀಗಾಗಿ ಜನತೆ ಅವರೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ

ಚಿಕ್ಕಬಳ್ಳಾಪುರ : ಜಮ್ಮು ಕಾಶ್ಮೀರದಿಂದ ಹಿಡಿದು ಕರ್ನಾಟಕದ ಉಡುಪಿಯವರೆಗೆ ರೈತರು ಜೇನು ಸಾಗಣೆ ಪ್ರಗತಿ ಅವರ ಆರ್ಥಿಕ ಶಕ್ತಿಯನ್ನು ಅನಾವಣ ಮಾಡಿದ್ದಾರೆ. 30 ಸಾವಿರ ಟನ್ ಜೇನುತುಪ್ಪ ಹೊರದೇಶಗಳಿಗೆ ರಫ್ತಾಗುತ್ತಿದೆ ಎಂದು ತಿಳಿಸುವ ಮೂಲಕ ನವ್ಯೋದ್ಯಮಕ್ಕೆ ಶಕ್ತಿ ತುಂಬಿದ್ದಾರೆ. ಹೀಗಾಗಿ ಮನದ ಮಾತು ವೀಕ್ಷಣೆ ಮಾಡಲು ಬಂದಿರುವ ಎಲ್ಲಾ ಜನತೆಗೆ, ಕಾರ್ಯಕ್ರಮದ ಆಯೋ ಜನೆ ಮಾಡಿರುವ ಅಗಲಗುರ್ಕಿ ಪಂಚಾಯಿತಿ ಮುಖಂಡರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

ತಾಲೂಕಿನ ಅಗಲಗುರ್ಕಿ ಗ್ರಾಮದಲ್ಲಿನ ಮಾರಮ್ಮ ದೇವಾಲಯದ ಆವರಣದಲ್ಲಿ ಏರ್ಪಡಿಸಿದ್ದ ಮನದ ಮಾತು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಜನತೆಯನ್ನು ಉದ್ದೇಶಿಸಿ ಮಾತನಾಡಿ ದರು.

ಪ್ರತಿ ತಿಂಗಳು ಕೊನೇ ಭಾನುವಾರ ಬೆಳಿಗ್ಗೆ 11 ಗಂಟೆಗೆ ಆಕಾಶವಾಣಿಯಲ್ಲಿ ಪ್ರಸಾರವಾಗುವ ಪ್ರಧಾನಿ ನರೇಂದ್ರಮೋದಿ ಅವರ ಮನದ ಮಾತು ಕಾರ್ಯಕ್ರಮವು ದೇಶಭಕ್ತಿ, ದೇಶವಾಸಿಗಳ ಕೌಶಲ್ಯ, ಯುವಶಕ್ತಿ ಮತ್ತು ಸಾಮಾಜಿಕ ಪ್ರಗತಿಯ ಬಗ್ಗೆ ಅವಲೋಕನ ಮಾಡುವುದೇ ಆಗಿದೆ. ಇಂದಿನ ಸಭೆಯಲ್ಲಿ ಭಾರತದ ವೈವಿಧ್ಯಮಯ ಭಾಷೆಗಳು, ದೇಶದ ಒಳಗೆ ಮತ್ತು ಹೊರಗೆ ನಮ್ಮ ಸಾಂಸ್ಕೃತಿಕ ದೃಢತೆಯನ್ನು ಹೇಗೆ ತೋರಿಸುತ್ತವೆ ಎಂಬುದನ್ನು ದುಬೈನಲ್ಲಿರುವ ಕನ್ನಡ ಪಾಠ ಶಾಲೆಯ ಒಂದು ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಕನ್ನಡ ಭಾಷೆ ಸಂಸ್ಕೃತಿ ಪರಂಪರೆಯ ಅರಿವು ಮೂಡಿಸುವ ವಿಚಾರದ ಮೂಲಕ ತಿಳಿಸಿದ್ದು ಸಂತೋಷ ತಂದಿದೆ ಎಂದರು.

ಇದನ್ನೂ ಓದಿ: Chitradurga Bus Accident: ಚಿತ್ರದುರ್ಗ ಬಸ್‌ ಅಪಘಾತದಲ್ಲಿ ಇಬ್ಬರು ಮಹಿಳಾ ಟೆಕ್ಕಿಗಳು ಕಣ್ಮರೆ

ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿ ಈಗಿನ ಪ್ರಧಾನಿ ನರೇಂದ್ರ ಮೋದಿ ಅವರಂತೆ ದೇಶದ ಜನತೆಯ ಜತೆ ಮಾತನಾಡಿದ್ದು ನಾನು ಕಾಣೆ. ಅವರ ಮನ್‌ಕಿ ಬಾತ್ 129 ಕಂತುಗಳ ಮೂಲಕ ಭಾರತದ ಸಾಂಸ್ಕೃತಿಕ, ಐತಿಹಾಸಿಕ, ಹಾಗೂ ಜನಸಾಮಾನ್ಯರ  ಸಾಧನೆಗಳನ್ನು ರಾಷ್ಟçದೊಳಗೆ ಹಂಚಿಕೊಂಡಂತೆ ಯಾವ ಪ್ರಧಾನಿಯೂ ಕೂಡ ಹಂಚಿಕೊಂಡು ಪ್ರೋತ್ಸಾಹಿಸಲೇ ಇಲ್ಲ. ಹೀಗಾಗಿ ಜನತೆ ಅವರೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ ಎಂದರು.

ಪ್ರತಿ ತಿಂಗಳು ವಿಶ್ವದಲ್ಲಿ ಏನಾಗುತ್ತಿದೆ, ಭಾರತೀಯರು ಯಾವ ಕ್ಷೇತ್ರದಲ್ಲಿ ಪ್ರಗತಿಯನ್ನು ಹೊಂದು ತ್ತಿದ್ದಾರೆ. ನಮ್ಮ ಮೂಲ ತತ್ವ ಸಿದ್ಧಂತವನ್ನು ಮರೆಯದೆ ಯಾವ ರೀತಿ ಕೃಷಿಯಲ್ಲಿ, ತಂತ್ರಜ್ಞಾನ ದಲ್ಲಿ,ಆವಿಷ್ಕಾರಗಳಲ್ಲಿ, ಕಲೆ ಸಂಗೀತ ಇತ್ಯಾದಿ ಕ್ಷೇತ್ರಗಳಲ್ಲಿ ವಿನೂತನವಾಗಿ ಯಾರು ಸಾಧನೆ ಮಾಡಿದ್ದಾರೆ ಅವರ ಯಶೋಗಾಥೆಯನ್ನು ಪ್ರಧಾನಿಗಳು ಹಂಚಿಕೊಳ್ಳುತ್ತಿದ್ದಾರೆ.ಇದು ವಿಶೆಷವೇ ಸದರಿ ಎಂದರು.

ಸ್ವಾತಂತ್ರ್ಯ ಪಡೆದು 78 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಮಹಿಳೆಯರು ವಿಶ್ವಕಪ್ ಕ್ರಿಕೆಟ್ ಗೆದ್ದಿರುವುದನ್ನು ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ. ಹೀಗೆ ಅನೇಕ ಸಂಗತಿಗಳನ್ನು ಅವರು ನಮಗೆ ಹೇಳುವ ಮೂಲಕ ಸಾಧನೆಗೆ ಪ್ರೋತ್ಸಾಹಿಸುತ್ತಿದ್ದಾರೆ. ನಮ್ಮ ಗ್ರಾಮಗಳಲ್ಲೇ ಒಳ್ಳೆಯ ಕಲಾವಿಧರು ಇರುತ್ತಾರೆ.ಅವರನ್ನು ಗುರುತಿಸಿರುವುದಿಲ್ಲ. ಅವರಿಗೆ ಮಾಹಿತಿ ನೀಡಿದರೆ ತಾವೇ ಅದನ್ನು ದೇಶಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ. ಚಿಂತಾಮಣಿ, ದೊಡ್ಡಬಳ್ಳಾಪುರ ನೇಕಾರಿಕೆ ಬಗ್ಗೆ 128ನೇ ಮನದ ಮಾತಲ್ಲಿ ಹಂಚಿಕೊಂಡಿದ್ದಾರೆ. ಚಿಕ್ಕಬಳ್ಳಾಪುರದ ದ್ರಾಕ್ಷಿಗೂ ಕೂಡ ಜಿ.ಐಟ್ಯಾಗ್ ಇದೆ.ಹೀಗೆ ದೇಶದ ಪ್ರಗತಿಗೆ ಮುನ್ನೋಟ ಬರೆಯುತ್ತಿದ್ದಾರೆ ಎಂದು ಹೇಳಿದರು.

ಚಳಿಗಾಲದಲ್ಲಿ ನಮ್ಮ ರಕ್ತ ಬೇಗನೆ ಹೆಪ್ಪುಗಟ್ಟುತ್ತದೆ. ತೀವ್ರ ಚಳಿಯನ್ನು ತಡೆಯಲು ಚಳಿ ತಡೆ ಯುವ ಬಟ್ಟೆ ಹಾಕಬೇಕು ಎಂದು ಕರೆ ನೀಡಿದ್ದಾರೆ.ಮುಖ್ಯವಾಗಿ ಬೆಳಿಗ್ಗೆ ವ್ಯಾಯಾಮದಲ್ಲಿ ತೊಡಗಿ ಫಿಟ್ ಇಂಡಿಯಾ ನಿರ್ಮಾಣ ಮಾಡಿ ಎಂದು ಒಬ್ಬ ತಂದೆಯ, ಹಿರಿಯಣ್ಣನ ಹಾಗೆ ನಮ್ಮ ಆರೋ ಗ್ಯದ ಕಾಳಜಿ ಮಾಡಿದ್ದಾರೆ. ಹೀಗಾಗಿ ನಮ್ಮ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಸೈಕಲ್ ರ‍್ಯಾಲಿ ಮೂಲಕ ಆರೋಗ್ಯ ಕಾಪಾಡಿಕೊಳ್ಳೋಣ ಎಂಬ ಸಂದೇಶ ಸಾರೋಣ ಎಂದರು.

ಮುಂದಿನ ಮನ್‌ ಕಿ ಬಾತ್ ಕಾರ್ಯಕ್ರಮವನ್ನು ಮಂಚೇನಹಳ್ಳಿಯಲ್ಲಿ ನಾನು ವೀಕ್ಷಣೆ ಮಾಡು ತ್ತೇನೆ. ಒಂದು ತಿಂಗಳ ಮೊದಲೇ ಮಾಹಿತಿ ನೀಡುತ್ತಿರುವ ಉದ್ದೇಶ ಅಲ್ಲಿನ ಕಾರ್ಯಕರ್ತರು ಮುಖಂಡರು ಇದರ ಆಯೋಜನೆ ಮಾಡಲಿ ಎನ್ನುವುದೇ ಆಗಿದೆ. ಆದಿನ ನಾನು ಕಾರ್ಯಕರ್ತರ ಜತೆಗಿದ್ದು ಅವರ ಜತೆಯೇ ಬೆಳಗಿನ ಉಪಾಹಾರ ಸೇವಿಸುತ್ತೇನೆ ಎಂದರು.

ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋವಿಂದ್, ಬಾಲಕುಂಟಹಳ್ಳಿ ಗಂಗಾಧರ್, ಕುಡ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ,ಮಾಜಿ ಗ್ರಾಪಂ ಅಧ್ಯಕ್ಷ ಚಂದ್ರಣ್ಣ,ಯುವ ಮುಖಂಡ ಅಭಿಷೇಕ್ ಮತ್ತಿತರರು ಇದ್ದರು.

*
ದೇವಾಲಯ ಆವರಣದಲ್ಲಿ ಬಿರಿಯಾನಿ ಹಂಚಿಕೆ
ಅಗಲಗುರ್ಕಿ ಗ್ರಾಮದ ಮಾರಮ್ಮ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಪ್ರಧಾನಿಗಳ ೧೨೯ನೇ ಮನ್‌ಕಿ ಬಾತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜನತೆಗೆ ಬಿಜೆಪಿ ಪಕ್ಷದ ಮುಖಂಡರು ಭರ್ಜರಿಯಾಗಿ ಚಿಕನ್ ಬಿರಿಯಾನಿ ಮಾಡಿ ಉಣ ಬಡಿಸಿದರು.

ಚಿಕನ್ ಬಿರಿಯಾನಿ ಪಡೆಯಲು ಜನತೆ ನಾಮುಂದು ತಾ ಮುಂದು ಎಂಬಂತೆ ಮುಗಿ ಬಿದಿದ್ದರು. ಇದೇ ದೇವಾಲಯದ ಆವರಣದಲ್ಲಿ ಶ್ರೀರಾಮರ ದೇವಾಲಯ, ವೀರಭದ್ರಸ್ವಾಮಿಯ ದೇವಾ ಲಯವೂ ಇದೆ.ಇದ್ಯಾವುದನ್ನೂ ಗಮನಿಸದ ಆಯೋಜಕರು ದೇವಾಲಯಗಳ ಎದುರೇ ಚಿಕನ್ ಬಿರಿಯಾನಿ ಹಂಚಿದ್ದು ಭಕ್ತಾಧಿಗಳ ಬೇಸರಕ್ಕೆ ಕಾರಣವಾಗಿದ್ದರೂ ಹೇಳಿಕೊಳ್ಳಲಾಗದೆ ಗೊಣಗಿಕೊಂಡೇ ಹೋಗಿದ್ದು ಕಂಡು ಬಂತು.

ಮತ್ತೂ ಕೆಲವರು ಬಿಜೆಪಿಯವರು ಮಾಡಿದರೆ ಎಲ್ಲವೂ ಸರಿ ಬೇರೆಯವರು ಮಾಡಿದರೆ ಮಾತ್ರ ತಪ್ಪು, ಸಣ್ಣದೂ ದೊಡ್ಡದಾಗುತ್ತದೆ, ಇದು ಯಾವ ನ್ಯಾಯ ಎಂದು ಬಹಿರಂಗವಾಗಿಯೇ ಹೇಳಿಕೊಂಡು ಹೋದರು.

ಒಟ್ಟಾರೆ ಪ್ರಧಾನಿಗಳ ಮನ್‌ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಗತಿಯ ಮುನ್ನೋಟವಿದ್ದರೆ, ಕಾರ್ಯ ಕರ್ತರಲ್ಲಿ ಮಾತ್ರ ಮಾಂಸ್‌ಕಿ ಬಾತ್ ಚರ್ಚೆಯಲ್ಲಿದ್ದದ್ದು ಮಾತ್ರ ವಿಚಿತ್ರವಾದರೂ ಸತ್ಯ.