ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Artificial intelligence: ಕೃತಕ ಬುದ್ದಿಮತ್ತೆಯ ಈ ಯುಗದಲ್ಲಿ ಯುವಜನರಿಗೆ ಸಾಕಷ್ಟು ಉದ್ಯೋಗಾವಕಾಶಗಳಿವೆ: ಸಿಇಓ ಡಾ.ವೈ.ನವೀನ್ ಭಟ್

ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ನಂತರ ಮುಂದಿನ ಹೆಜ್ಜೆಯನ್ನು ಹೇಗಿಡಬೇಕು, ಯಾವ ಕ್ಷೇತ್ರದ ಉದ್ಯೋಗದಲ್ಲಿ ಮುಂದುವರೆಯಬೇಕು, ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆ ಮತ್ತು ಮುಂದುವರೆಯಬೇಕು. ಯಾವ ಕ್ಷೇತ್ರದಲ್ಲಿ ಕೌಶಲ್ಯಗಳನ್ನು ಕಲಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂಬ ಮಾರ್ಗದರ್ಶನವನ್ನು ನೀಡುವಲ್ಲಿ ವೃತ್ತಿಪರ ಶಿಕ್ಷಣ, ವೃತ್ತಿ ಮಾರ್ಗದರ್ಶನ ಮತ್ತು ಕೆರಿಯರ್ ಮೇಳಗಳು ಸಹಕಾರಿಯಾಗಲಿವೆ

ಕೃತಕ ಬುದ್ದಿಮತ್ತೆಯ ಯುಗದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ

ಕೃತಕ ಬುದ್ದಿಮತ್ತೆಯ ಈ ಯುಗದಲ್ಲಿ ಯುವಜನರಿಗೆ ಸಾಕಷ್ಟು ಉದ್ಯೋಗಾವಕಾಶಗಳಿವೆ ಎಂದು ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ವೈ.ನವೀನ್ ಭಟ್ ತಿಳಿಸಿದರು. -

Ashok Nayak
Ashok Nayak Mar 24, 2026 11:57 PM

ಚಿಕ್ಕಬಳ್ಳಾಪುರ: ಜಗತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿ ನಾಗಲೋಟ ವೇಗ ದಲ್ಲಿ ಮುಂದುವರೆಯುತ್ತಿದ್ದು, ಕೃತಕ ಬುದ್ದಿಮತ್ತೆ(Artificial intelligence)ಯ ಈ ಯುಗ ದಲ್ಲಿ ಯುವಜನರಿಗೆ ಸಾಕಷ್ಟು ಉದ್ಯೋಗಾವಕಾಶಗಳಿವೆ. ಆದರೆ, ಯುವಜನರು ಜಾಗತಿಕ ಸ್ಪರ್ಧೆಯ ಉದ್ಯೋ ಗಾವಕಾಶಗಳಿಗೆ ಪೂರಕವಾಗಿ ಅಗತ್ಯವಿರುವ ಎಲ್ಲಾ ಕೌಶಲ್ಯ ಗಳೊಂದಿಗೆ ಸನ್ನದ್ಧರಾಗಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್(Chikkaballapur Zilla Panchayat) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ವೈ.ನವೀನ್ ಭಟ್ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಚಿಕ್ಕಬಳ್ಳಾಪುರ ನಗರದ ಜಿಲ್ಲಾ ಕನ್ನಡ ಭವನದಲ್ಲಿ "ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾಗೂ ಜಿಲ್ಲಾ ವೃತ್ತಿಪರ ವೃತ್ತಿ ಮಾರ್ಗದರ್ಶನ ಘಟಕದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವೃತ್ತಿ ಶಿಕ್ಷಣ ಪ್ರದರ್ಶನ ಮತ್ತು ಕೆರಿಯರ್ ಮೇಳ ಕಾರ್ಯಕ್ರಮ ಉದ್ಘಾ ಟಿಸಿ ಮಾತನಾಡಿದರು.

ಇದನ್ನೂ ಓದಿ: Chikkaballapur News: ಮಾ.26ಕ್ಕೆ ಅಂಬೇಡ್ಕರ್ ಕೊಲಾಜ್ ನಾಟಕ ನೋಡಿ ಅಂಬೇಡ್ಕರ್ ಬಗ್ಗೆ ಅರಿಯಿರಿ: ಕೋಟಿಗಾನಹಳ್ಳಿ ರಾಮಯ್ಯ

ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ನಂತರ ಮುಂದಿನ ಹೆಜ್ಜೆಯನ್ನು ಹೇಗಿಡಬೇಕು, ಯಾವ ಕ್ಷೇತ್ರದ ಉದ್ಯೋಗದಲ್ಲಿ ಮುಂದುವರೆಯಬೇಕು, ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆ ಮತ್ತು ಮುಂದುವರೆಯಬೇಕು. ಯಾವ ಕ್ಷೇತ್ರದಲ್ಲಿ ಕೌಶಲ್ಯಗಳನ್ನು ಕಲಿತು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂಬ ಮಾರ್ಗದರ್ಶನ ನೀಡುವಲ್ಲಿ ವೃತ್ತಿಪರ ಶಿಕ್ಷಣ, ವೃತ್ತಿ ಮಾರ್ಗದರ್ಶನ ಮತ್ತು ಕೆರಿಯರ್ ಮೇಳಗಳು ಸಹಕಾರಿಯಾಗಲಿವೆ ಎಂದರು.

ಉದ್ಯೋಗಾವಕಾಶಗಳು ಒಂದು ರಾಜ್ಯ ಅಥವಾ ದೇಶಕ್ಕಷ್ಟೇ ಸೀಮಿತವಾಗದೇ ಇಡೀ ಜಾಗತಿಕ ಮಟ್ಟದಲ್ಲಿ ಎಲ್ಲರಿಗೂ ಮುಕ್ತವಾಗಿ ಅವಕಾಶಗಳ ಹೆಬ್ಬಾಗಿಲು ತೆರೆದಿದೆ. ಇಂದಿನ ಕೃತಕ ಬುದ್ದಿಮತ್ತೆ, ರೋಬೋಟಿಕ್ ತಂತ್ರಜ್ಞಾನ, ವ್ಯವಹಾರ ನಿರ್ವಹಣಾ ಕೌಶಲ್ಯಗಳ ಕ್ಷೇತ್ರಗಳಲ್ಲಿ ಅಪರಿಮಿತ ಅವಕಾಶಗಳಿವೆ. ಜಾಗತಿಕ ಮಟ್ಟದಲ್ಲಿ ಲಭ್ಯವಿರುವ ಅವಕಾಶಗಳ ಕಡೆಗೆ ಕಣ್ಣು ಹಾಯಿಸಿ, ಅವುಗಳನ್ನು ಬಳಸಿಕೊಂಡು ಯಶಸ್ವಿಯಾಗಬೇಕೇ ಹೊರತು ಒಂದೆರಡು ಸಣ್ಣಪುಟ್ಟ ಕೆಲಸಗಳ ಕ್ಷೇತ್ರಗಳಿಗಷ್ಟೇ ಸೀಮಿತವಾಗಿ ಕೂಪಮಂಡೂಕ ಗಳಂತಾಗಬಾರದು ಎಂದರು.

cbpm1k ಒಕ

ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಅಪಾರ ಜ್ಞಾನವನ್ನು ಹೊಂದಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯವರೇ ಆದ ಭಾರತರತ್ನ ಡಾ.ಸರ್.ಎಂ.ವಿಶ್ವೇಶ್ವರಯ್ಯ ಅವರು ಹಲವು ಬೃಹತ್ ಅಣೆಕಟ್ಟೆಗಳ ನಿರ್ಮಾಣಕ್ಕೆ ಕಾರಣವಾದರು. ಮಾತ್ರವಲ್ಲ ಇಡೀ ಏಷ್ಯಾ ಖಂಡದಲ್ಲೇ ಕರ್ನಾಟಕ ರಾಜ್ಯಕ್ಕೆ ಮೊಟ್ಟಮೊದಲು ವಿದ್ಯುತ್ತನ್ನು ತಂದ ಕೀರ್ತಿಯೂ ಅವರಿಗೇ ಸಲ್ಲುತ್ತದೆ.

ಖ್ಯಾತ ವಿಜ್ಞಾನಿ ಡಾ.ಸಿ.ಎನ್.ಆರ್ ರಾವ್(Renowned scientist Dr.C.N.R.Rao), ಡಾ.ಹೆಚ್. ನರಸಿಂಹಯ್ಯ, ಇನ್ಫೋಸಿಸ್ ನಾರಾಯಣ ಮೂರ್ತಿ ಅವರಂತ ಸಾಧಕ ಮಹನೀಯರನ್ನು ಇಂದಿನ ವಿದ್ಯಾರ್ಥಿ ಯುವ ಪೀಳಿಗೆ ಮಾದರಿಯನ್ನಾಗಿ ಸ್ವೀಕರಿಸಿ ಸಾಧನಾ ಪಥದತ್ತ ದಿಟ್ಟ ಹೆಜ್ಜೆ ಇಟ್ಟು ಸಾರ್ಥಕ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಳ್ಳಿ ಎನ್ ರಮೇಶ್ ಮಾತನಾಡಿ ,ಜಿಲ್ಲಾ ವೃತ್ತಿಪರ ವೃತ್ತಿ ಮಾರ್ಗದರ್ಶನ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡಿರುವ ವೃತ್ತಿ ಶಿಕ್ಷಣ ಪ್ರದರ್ಶನ ಮತ್ತು ಕೆರಿಯರ್ ಮೇಳ ಕಾರ್ಯಕ್ರಮ ಜಿಲ್ಲೆಯ ಉದ್ಯೋಗ ಕಾಂಕ್ಷಿಗಳಿಗೆ  ಬಹಳ ಪ್ರಯೋಜನಕಾರಿಯಾಗಲಿದೆ.ಯುವ ಜನತೆಯ ಉಜ್ವಲ ಭವಿಷ್ಯಕ್ಕಾಗಿ ರಾಜ್ಯ ಸರ್ಕಾರ ಯಶಸ್ವಿಯಾಗಿ ಜಾರಿ ಮಾಡಿರುವ ಯುವನಿಧಿ ಯೋಜನೆಯು ಯುವ ಸಮೂಹಕ್ಕೆ ವರವಾಗಿದೆ ಎಂದರು.

cbpm1carrier mela

ಪಂಚ ಗ್ಯಾರಂಟಿ ಯೋಜನೆಗಳು ವಿಶೇಷವಾಗಿ  ಬಡವರಿಗೆ, ಮಧ್ಯಮವರ್ಗದವರಿಗೆ ಹಾಗೂ ಕಡು ಸಂಕಷ್ಟದಲ್ಲಿ ಇರುವ ಕುಟುಂಬಗಳಿಗೆ ಬಹಳ ಪ್ರಯೋಜನ ಆಗುವ ನಿಟ್ಟಿನಲ್ಲಿ ಬಹಳ ಚಿಂತನೆ ಮಾಡಿ ತಜ್ಞರ ಅಭಿಪ್ರಾಯದಂತೆ ರಾಜ್ಯ ಸರ್ಕಾರ ಜಾರಿ ಮಾಡಿದೆ. ಅರ್ಹ ಫಲಾನುಭವಿಗಳು ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು.

ಉದ್ಯೋಗಾಕಾಂಕ್ಷಿ ವಿದ್ಯಾವಂತ ಯುವ ಸಮೂಹಕ್ಕೆ ನೆರವಾಗುವ ನಿಟ್ಟಿನಲ್ಲಿ ನಿರುದ್ಯೋಗಿ ಭತ್ಯೆ (ಸೈಪಂಡರಿ) ಯೋಜನೆಯನ್ನು ದಿವಂಗತ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದರು ಎಂದು ಸ್ಮರಿಸಿದರು.

ಇಂದಿನ ಯುವನಿಧಿ ಯೋಜನೆಯು ಅದರ ಮುಂದುವರೆದ ಭಾಗವಾಗಿದ್ದು, ಉದ್ಯೋಗಾ ಕಾಂಕ್ಷಿ ಪದವೀಧರರಿಗೆ ೩೦೦೦ ರೂ, ಡಿಪ್ಲೊಮೋ ಅಭ್ಯರ್ಥಿಗಳಿಗೆ 1500 ರೂ ನೀಡಲಾಗು ತ್ತಿದೆ. ಈ ಯೋಜನೆಯಡಿ ಅಭ್ಯರ್ಥಿಗಳನ್ನು ನೋಂದಣಿ ಮಾಡುವ ಪ್ರಕ್ರಿಯೆಯು ನಿರಂತರ ವಾಗಿ ಚಾಲನೆಯಲ್ಲಿದ್ದು, ಅಭ್ಯರ್ಥಿಗಳೆ ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಳ್ಳ ಬಹುದಾಗಿದೆ. ಈ ಸಂಬಂಧ ಯಾವುದೇ ತೊಡಕುಗಳಿದ್ದಲ್ಲಿ ಜಿಲ್ಲಾ ಉದ್ಯೋಗ ವಿನಿಯಮ ಕಚೇರಿಯನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.

ಈ ಮೇಳದಲ್ಲಿ ತರಬೇತಿಯನ್ನು ಅನಹತ ಯುನೈಟೆಡ್ ಫೌಂಡೇಷನ್ ಡಿವಿಷನ್ ವ್ಯವಸ್ಥಾಪಕ ರಾಘವೇಂದ್ರ, ಕಾದಲವೇಣಿ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಹೆಚ್. ಸುಧಾಕರರೆಡ್ಡಿ, ಹಾಸನ ಸರ್ಕಾಋಇ ತಾಂತ್ರಿಕ ಕಾಲೇಜಿನ ಹೆಡಿ ಡಾ.ಎಲ್.ತಿಮ್ಮೇಶ್, ನಂದಿ ಮೋಕ್ಷಗುಡಂ ಸಂಸ್ಥೆಯ ಮ್ಯಾನೇಜರ್ ಕೆ.ಸಿ.ಸಚಿನ್ ರವರು ನೀಡಿದರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಮೇಶ್, ಡಯಟ್ ಉಪ ನಿರ್ದೇಶಕ ಎಂ. ಮುನಿಕೆಂಪೇಗೌಡ, ಡಯಟ್ ಹಿರಿಯ ಉಪನ್ಯಾಸಕಿ ಟಿ.ಹೆಚ್.ಯಶೋಧ, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಬಿ.ಇಡಿ, ಐಟಿಐ, ಪಿಯುಸಿ ಹಾಗೂ ಪ್ರೌಢ ಶಾಲೆ ವಿದ್ಯಾರ್ಥಿಗಳು ಹಾಜರಿದ್ದರು.