ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕಾಂಗ್ರೆಸ್‌ನಲ್ಲಿ ಸಚಿವರ ಬಣ ಶಾಸಕರ ಬಣ ಎಂಬುದಿಲ್ಲ, ಡೆಲಿಗೇಟ್ಸ್ ಆಶೀರ್ವಾದ ಇದ್ದವರು ಗೆಲುವು ಸಾಧಿಸುವರು: ಭರಣಿ ವೆಂಕಟೇಶ್ ಅಭಿಮತ

ನಾನು ಕಳೆದ 6 ವರ್ಷಗಳಿಂದ ಹಾಲು ಒಕ್ಕೂಟದಲ್ಲಿ ಮತ್ತು ತಾಲೂಕಿನ 205 ಹಾಲು ಉತ್ಪಾ ದಕ ಸಹಕಾರ ಸಂಘಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದೇನೆ. ಯಾವ ರೀತಿ ಕೆಲಸ ಮಾಡಿದ್ದೇನೆ ಎಂಬುದು ಎಲ್ಲಾ ಹಾಲು ಉತ್ಪಾದಕ ರೈತ ಬಾಂದವರಿಗೆ ಗೊತ್ತಿದೆ.ನಾನು ಕೆಲಸ ಮಾಡಿರುವು ದರಿಂದ ಮತ್ತೊಮ್ಮೆ ನನ್ನನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ

ಕಾಂಗ್ರೆಸ್‌ನಲ್ಲಿ ಸಚಿವರ ಬಣ ಶಾಸಕರ ಬಣ ಎಂಬುದಿಲ್ಲ

-

Ashok Nayak
Ashok Nayak Jan 25, 2026 4:01 PM

ಚಿಕ್ಕಬಳ್ಳಾಪುರ: ಚಿಮುಲ್ ಚುನಾವಣೆ(Chimul Election)ಯಲ್ಲಿ ನಾನು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ನಾನು ಸ್ಪರ್ಧೆ ಮಾಡಿದ್ದು ನನ್ನ ಗುರುತು ರೈತರ ಮಿತ್ರನಾದ ದ್ರಾಕ್ಷಿಯಾಗಿದೆ. ಎಲ್ಲಾ ಮತದಾರರು ನನ್ನ ಗುರುತಿಗೆ ತಪ್ಪದೆ ಮತ ಚಲಾಯಿಸುವ ಮೂಲಕ ನನ್ನನ್ನೆ ಗೆಲ್ಲಿಸಿ ಎಂದು ನಲ್ಲಕದಿರೇನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಎನ್.ಸಿ ವೆಂಕಟೇಶ್ ಮನವಿ ಮಾಡಿದರು.

ನಗರ ಹೊರವಲಯ ಚಿಮುಲ್ ಆಡಳಿತ ಕಚೇರಿಯ ಎದುರು ಚುನಾವಣೆಯ ಚಿನ್ಹೆ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ನಾನು ಕಳೆದ 6 ವರ್ಷಗಳಿಂದ ಹಾಲು ಒಕ್ಕೂಟದಲ್ಲಿ ಮತ್ತು ತಾಲೂಕಿನ 205 ಹಾಲು ಉತ್ಪಾದಕ ಸಹಕಾರ ಸಂಘಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದೇನೆ. ಯಾವ ರೀತಿ ಕೆಲಸ ಮಾಡಿದ್ದೇನೆ ಎಂಬುದು ಎಲ್ಲಾ ಹಾಲು ಉತ್ಪಾದಕ ರೈತ ಬಾಂದವರಿಗೆ ಗೊತ್ತಿದೆ.ನಾನು ಕೆಲಸ ಮಾಡಿರುವುದರಿಂದ ಮತ್ತೊಮ್ಮೆ ನನ್ನನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಇದನ್ನೂ ಓದಿ: Chimul Election: ಸಚಿವರ ಬೆಂಬಲದಿಂದ ಚಿಮುಲ್ ಚುನಾವಣೆಗೆ ಸ್ಪರ್ಧೆ ಮಾಡಿದ್ದು ಗೆಲ್ಲುವ ವಿಶ್ವಾಸವಿದೆ: ಕೆ.ಆರ್.ರಾಜಣ್ಣ

ಯಲುವಹಳ್ಳಿ ರಮೇಶಣ್ಣ ಹಿರಿಯರು.ಕಾಂಗ್ರೆಸ್ ಸರಕಾರ ಬಂದ ಮೇಲೆ ಅವರ ಹಿರಿತನ ಪರಿಗಣಿಸಿ ಜಿಲ್ಲಾ ಗ್ಯಾರೆಂಟಿ ಸಮಿತಿಗಳ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಜಿಲ್ಲೆಯ ಒಕ್ಕಲಿಗ ಸಮುದಾಯದ ಬಂಧುಗಳು ಕಾಂಗ್ರೆಸ್ ಅಭ್ಯರ್ಥಿ ಎಂದೇ 4 ಬಾರಿ ಅವರನ್ನು ಸಂಘದ ನಿರ್ದೇಶಕರನ್ನಾಗಿ ಆರಿಸಿ ಕಳಿಸಿದ್ದಾರೆ.ನಾವೂ ಕೂಡ ಮತ ಹಾಕಿ ಗೆಲ್ಲಿಸಿದ್ದೀವಿ.ಎರಡು ಹುದ್ದೆಗಳು ಇವೆ.ನನಗೆ ವಯಸ್ಸಿದೆ ನೀವು ಕಣದಿಂದ ಹಿಂದೆ ಸರಿಯಿರಿ ಎಂದು ಯಾರೂ ಕೂಡ  ಹೇಳಿಲ್ಲ.ಎರಡು ಹುದ್ದೆಯಿರುವವರು ಈಬಗ್ಗೆ ಯೋಚಿಸಿದ್ದರೆ ಒಳಿತಾಗುತ್ತಿತ್ತು.

ತೀರ್ಮಾನಕ್ಕೆ ಬದ್ದನಿದ್ದೆ!!
ಈ ಸಂಬಂಧ ಚರ್ಚೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರು 2 ಬಾರಿ ಕುಡಾ ಅಧ್ಯಕ್ಷ ಕೇಶವರೆಡ್ಡಿ ಬಳಿ ಹೇಳಿ ಕಳಿಸಿದ್ದರು.ಅವರ ಬರಲೇ ಇಲ್ಲ.ನನ್ನನ್ನೂ ಕೂಡ ಕರೆದಿದ್ದರು. 2 ಬಾರಿಯೂ ನಾನು ಹೋಗಿದ್ದೆ.ಮಂತ್ರಿಗಳು ಏನು ತೀರ್ಮಾನ ಮಾಡುತ್ತಿದ್ದರೋ ಅದಕ್ಕೆ ನಾನು ಬದ್ಧನಿರುವುದಾಗಿ ತಿಳಿಸಿದ್ದೆ. ಆದರೆ ಇವರು ಬರಲೇಯಿಲ್ಲ. ಹೀಗಾಗಿ ನಾನು ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ ಎಂದು ಹೇಳಿದರು.

ಬಣ ಇಲ್ಲ!!
ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆನಲ್ಲಿ ಶಾಸಕರ ಬಣ, ಮಂತ್ರಿ ಬಣ ಎಂದು ಯಾವುದೂ ಇಲ್ಲ.ಇರುವುದೆಲ್ಲಾ ಕಾಂಗ್ರೆಸ್ ಬಣ, ಕಾಂಗ್ರೆಸ್ ಪಕ್ಷದ ಚುನಾವಣೆ ನಡೆಯುತ್ತಿದೆ.ಅದು ಕಾಂಗ್ರೆಸ್ ಲೀರ‍್ಸ್ಗೆ ಬಿಟ್ಟಿರುವ ವಿಚಾರ.ಮುಖ್ಯವಾಗಿ ಯಾರು ಕೆಲಸ ಮಾಡುತ್ತಾರೆ, ಯಾರು ಕೆಲಸ ಮಾಡುತ್ತಿದ್ದಾರೆ, ಯಾರು ಯುವಕರಿದ್ದಾರೆ ಎಂಬುದನ್ನು ಮತದಾರರಾದ ಡೆಲಿ ಗೇಟ್ಸ್ ಗಮನಿಸುತ್ತಿದ್ದಾರೆ. ಮತದಾರರಾದ ಡೆಲಿಗೇಟ್ಸ್ ಆಶೀರ್ವಾದ ಇರುವವರು ಮಾತ್ರ ಗೆಲುವು ಸಾಧಿಸುವರು ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಎಮರ್ಜೆನ್ಸಿಗೆ ಸ್ಪಂದನೆ!!

ನಾನು 24 ಗಂಟೆಯೂ ಪೋನ್ ಸ್ವಿಚ್ ಆಫ್ ಮಾಡುವುದಿಲ್ಲ. ಕಾರಣ ಎಮರ್ಜೆನ್ಸಿ ರೂಟ್ ಎಂದು ಮಾಡಿದ್ದೇವೆ. ಹಸುಗಳಿಗೆ ಸಮಸ್ಯೆ ಆದಾಗ ಕೂಡಲೇ ವೈದ್ಯರಿಗೆ ಕರೆ ಮಾಡಿ 20 ನಿಮಿಷದಲ್ಲಿ ರೈತರ ಮನೆಬಳಿ ಕಳಿಸುವ ವ್ಯವಸ್ಥೆ ಮಾಡುತ್ತಿದ್ದೇನೆ.ಏಕೆಂದರೆ ನನಗೆ ರೈತರು ಅಧಿಕಾರ ಕೊಟ್ಟಾಗ ಅವರ ಸೇವೆ ಮಾಡಬೇಕಲ್ಲ. ಹೀಗಾಗಿ 24 ಗಂಟೆಯೂ ನನ್ನ ಪೋನ್ ಸ್ವಿಚ್‌ಆಫ್ ಮಾಡುವುದಿಲ್ಲ ಎಂದರು.