ಮಂಗಳವಾರ ಸಂಪೂರ್ಣ ಮಾಹಿತಿ ಹಂಚಿಕೊಳ್ಳುವುದಾಗಿ ಎಸ್ಪಿ ಹೇಳಿಕೆ : ನಿರಾಳರಾದ ನಗರಸಭೆ ಕಮಿಷನರ್
ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ನಗರಸಭೆ ಆಯುಕ್ತೆ ಅಮೃತಗೌಡ ಅವರನ್ನು ಯಕಶ್ಛಿತ್ ಬ್ಯಾನರ್ ತೆರವು ಸಂಬಂಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ನಗರಸಭೆಗೆ ಬೆಂಕಿಹಾಕುವ ಬೆದರಿಕೆ ಹಾಕಿ ಸುದ್ದಿಯಾಗಿದ್ದ ಧಮ್ಕಿ ರಾಜೀವ್‌ಗೌಡ ಅಂತೂ ಇಂತೂ ೧೩ ದಿನಗಳ ಬಳಿಕೆ ಕೇರಳದಲ್ಲಿ ಬಂಧಿಯಾಗಿದ್ದಾರೆ ಎಂಬುದನ್ನು ಪೊಲೀಸ್ ಮೂಲಗಳು ತಿಳಿಸಿವೆ.
ಹೌದು. ಶಿಡ್ಲಘಟ್ಟ ನಗರದಲ್ಲಿ ಜಮೀರ್‌ಅಹ್ಮದ್ ಪುತ್ರನ ಕಲ್ಟ್ ಸಿನಿಮಾ ಪ್ರಪೋಷನ್‌ಗೆ ಹಾಕಿದ್ದ ಪ್ಲೆಕ್ಸ್ ಒಂದನ್ನು ನಗರಸಭೆ ಆಯುಕ್ತೆ ಅಮೃತಗೌಡ ಮತ್ತು ಸಿಬ್ಬಂದಿ ತೆರವು ಗೊಳಿಸಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡಪೋನ್ ಮಾಡಿ ಅಶ್ಲೀಲವಾಗಿ ಮಾತನಾಡಿದ್ದಲ್ಲದೆ ಶಾಸಕರನ್ನು ಕೂಡ ಏಕವಚನದಲ್ಲಿ ನಿಂದಿಸಿ ಆಯುಕ್ತೆಗೆ ಧಮ್ಕಿ ಹಾಕಿದ್ದರು.
ಇದಾದ ಕೂಡಲೇ ಆಯುಕ್ತರು ಜ.14ರಂದು ನಗರದಲ್ಲಿ ಪ್ರತಿಭಟನೆ ನಡೆಸಿದ ನಗರಸಭೆ ಸಿಬ್ಬಂದಿ ಮತ್ತು ಆಯುಕ್ತರು,ಈ ಸಂಬಂಧ ನಗರ ಠಾಣೆಯಲ್ಲಿ ರಾಜೀವ್‌ಗೌಡನ ವಿರುದ್ದ ಕ್ರಮಕ್ಕೆ ಆಗ್ರಹಿಸಿ ದೂರು ನೀಡಿ ಕಾನೂನು ಮೊರೆ ಹೋಗಿದ್ದರು. ಇದಕ್ಕೆ ಪುಷ್ಟಿ ನೀಡು ವಂತೆ ಬಿಜೆಪಿ ಮತ್ತು ಜೆಡಿಎಸ್ ಕೂಡ ಪ್ರತಿಭಟನೆ ನಡೆಸಿ ರಾಜೀವ್ ಗೌಡನ ವರ್ತನೆ ವಿರುದ್ಧ ಕ್ರಮವಹಿಸುವಂತೆ ಮತ್ತೆರಡು ದೂರು ದಾಖಲಿಸಿದ್ದರು. ಈ ಸಂಬಂಧ ಎರಡು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿತ್ತು.
ಇದನ್ನೂ ಓದಿ: Raghavendra Chitravani: ರಾಘವೇಂದ್ರ ಚಿತ್ರವಾಣಿಗೆ 50ರ ಸಡಗರ; ಲೋಗೋ ಲಾಂಚ್
ತನ್ನ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡ ರಾಜೀವ್ ಗೌಡ ಸೋಷಿ ಯಲ್ ಮೀಡಿಯಾದ ಮೂಲಕ ಘಟನೆಗೆ ವಿಷಾಧವನ್ನು ವ್ಯಕ್ತಪಡಿಸುತ್ತಾ, ಇದು ಯಾವುದೋ ದುರುದ್ದೇಶದಿಂದ ಆಡಿದ ಮಾತಲ್ಲ. ನನಗೆ ನಮ್ಮ ಕಾರ್ಯಕರ್ತರು ನೀಡಿದ ದೂರನ್ನು ಆಧರಿಸಿ ಆಯುಕ್ತರನ್ನು ಮಾತನಾಡಿದೆ. ಮಾತಿಗೆ ಮಾತು ಬೆಳೆದು ಹೀಗಾಗಿದೆ. ಇದರಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ವಿಡಿಯೋ ಹಂಚಿಕೊಂಡಿದ್ದರು.
ಅಲ್ಲಿಂದ ಈವರೆಗೆ ತೆರೆಮರೆಯಲ್ಲಿಯೇ ಇದ್ದುಕೊಂಡು ಪ್ರಕರಣ ರದ್ದುಪಡಿಸುವಂತೆ ಕೋರಿ ಚಿಂತಾಮಣಿ ಕೋರ್ಟಿಗೆ ಬೇಲ್ ಸಂಬಂಧ ಅರ್ಜಿ ಸಲ್ಲಿಸಿದ್ದರು. ಸಾಲದು ಎಂದು ಹೈಕೋರ್ಟಿನಲ್ಲಿ ಕೂಡ ಅರ್ಜಿ ಸಲ್ಲಿಸಿದ್ದರು. ಎರಡೂ ಕಡೆ ಬೇಲ್ ಅರ್ಜಿ ವಜಾಗೊಂಡ ಬೆನ್ನಲ್ಲೇ ಈ ಪ್ರಕರಣ ವಿಧಾನ ಸಭೆ, ಪರಿಷತ್ತಿನಲ್ಲಿ ಕೂಡ ತೀವ್ರ ಚರ್ಚೆಯನ್ನು ಹುಟ್ಟು ಹಾಕಿತ್ತು.
ಕಾಂಗ್ರೆಸ್ ಪಕ್ಷದ ಮಂತ್ರಿಗಳು, ಉಪಮುಖ್ಯಮಂತ್ರಿ, ಗೃಹಮಂತ್ರಿ ಮುಖ್ಯಮಂತ್ರಿ ಗಳಾದಿಯಾಗಿ ಸಚಿವ ಶಾಸಕರಿಗೆ ಹೋದಲ್ಲಿ ಬಂದಲ್ಲಿ ಮಾಧ್ಯಮದವರು ರಾಜೀವ್ ಗೌಡನ ಬಂಧನ ಯಾವಾಗ ಎಂದು ಕೇಳಿದ ಪ್ರಶ್ನೆಗಳಿಂದ ಮುಜುಗರ ಅನುಭವಿಸಬೇಕಾಗಿತ್ತು.
ಎಲೆಕ್ಟ್ರಾನಿಕ್ಸ್ ಮಾಧ್ಯಮಗಳಂತೂ ಆಡಳಿತ ಪಕ್ಷ ವಿರೋಧ ಪಕ್ಷಗಳ ಮುಖಂಡರನ್ನು ಕೂರಿಸಿಕೊಂಡು ಚರ್ಚೆ ಮಾಡುವ ಮೂಲಕ ಸರ್ಕಾರದ ವರ್ಚಸ್ಸು ಕುಂದುವಂತೆ ಮಾಡಿದ್ದವು. ಹೀಗಾಗಿ ಸರಕಾರ ರಾಜೀವ್‌ಗೌಡನ ಬಂಧನವಾಗುವಂತೆ ಎಸ್ಪಿಗೆ ಕಡಕ್ ಸಂದೇಶ ರವಾನೆ ಮಾಡಿದ್ದರು. ಜಿಲ್ಲಾ ಪೊಲೀಸರು ಹಲವು ತಂಡಗಳಾಗಿ ಈತನ ಹುಡುಕಾಟದಲ್ಲಿ ತೊಡಗಿದ್ದವು.
ಜಿಲ್ಲಾ ಪೊಲೀಸರ ನಿರಂತರ ತನಿಖೆ ಫಲ ನೀಡಿದ್ದು ಪರಾರಿಯಾಗಿದ್ದ ರಾಜೀವ್‌ಗೌಡ ಕೊನೆಗೂ ಕೇರಳ ಭಾಗದಲ್ಲಿ ಪೊಲೀಸರ ವಶಕ್ಕೆ ಸಿಕ್ಕಿದ್ದಾರೆ. ವಿವಿಧ ಪ್ರಕರಣಗಳ ಹಿನ್ನೆಲೆ ಯಲ್ಲಿ ಅವರನ್ನು ಬಂಧಿಸಲು ಪೊಲೀಸರು ನಡೆಸುತ್ತಿದ್ದ ಶೋಧ ಕಾರ್ಯ ಯಶಸ್ವಿ ಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಾಹಿತಿ ದೊರೆತ ಕೂಡಲೇ ಬಂಧನದ ನೇತೃತ್ವ ವಹಿಸಿರುವ ಸರ್ಕಲ್ ಇನ್ʼಸ್ಪೆಕ್ಟರ್ ಆನಂದ್‌ಕುಮಾರ್ ನೇತೃತ್ವದ ವಿಶೇಷ ತಂಡ ಕೇರಳಕ್ಕೆ ತೆರಳಿ, ಅಲ್ಲಿನ ಸ್ಥಳೀಯ ಪೊಲೀ ಸರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ರಾಜೀವ್ ಗೌಡರನ್ನು ವಶಕ್ಕೆ ಪಡೆದಿದೆ. ಪೊಲೀಸರು ಬಂಧನದ ನಂತರ ಮುಂದಿನ ಕಾನೂನು ಕ್ರಮಗಳಿಗಾಗಿ ಅವರನ್ನು ಕರ್ನಾ ಟಕಕ್ಕೆ ಕರೆ ತರಲು ಸಿದ್ಧತೆ ಕೈಗೊಳ್ಳಲಾಗಿದೆ.
ರಾಜೀವ್‌ಗೌಡ ವಿರುದ್ಧ ಈಗಾಗಲೇ ಹಲವು ಆರೋಪಗಳು ದಾಖಲಾಗಿದ್ದು, ಈ ಕಾರಣ ದಿಂದಲೇ ಅವರು ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ. ಅವರ ಬಂಧನದಿಂದ ಪ್ರಕರಣ ದ ತನಿಖೆಗೆ ವೇಗ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ನ್ಯಾಯಾಲಯಕ್ಕೆ ಹಾಜರು ಪಡಿಸ ಲಾಗುವುದು ಎಂದು ಪೊಲೀಸರು ಮೂಲಗಳಿಂದ ತಿಳಿದು ಬಂದಿದೆ. ಈ ಬೆಳವಣಿಗೆ ಸ್ಥಳೀಯವಾಗಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
*
ಕೇರಳದಲ್ಲಿ ರಾಜೀವ್‌ಗೌಡ ಅವರ ಬಂಧನವಾಗಿರುವುದು ನಿಜ.ಈ ವಿಚಾರದಲ್ಲಿ ಹೆಚ್ಚಿನ ಮಾಹಿತಿಯನ್ನು ಮಂಗಳವಾರ ಸುದ್ದಿಗೋಷ್ಟಿ ನಡೆಸಿ ಹಂಚಿಕೊಳ್ಳಲಾಗುವುದು ಎಂದು ಮಾಧ್ಯಮಕ್ಕೆ ಎಸ್ಪಿ ಕುಶಾಲ್ ಚೌಕ್ಸೆ ಹೇಳಿದ್ದಾರೆ.