ಚಿಕ್ಕಬಳ್ಳಾಪುರ : ಧ್ಯಾನದಿಂದ ವ್ಯಕ್ತಿಯ ವಿಕಸನ ಆಗುತ್ತದೆ. ಧ್ಯಾನದ ಮೂಲಕ ಸಮಾಜ ದ ಪರಿವರ್ತನೆ ಸಾಧ್ಯ ಎಂದು ಕೋಲಾರ ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್.ಜಯಶ್ರೀ ( Kolar District Judge B.S. Jayashree)ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕೈವಾರದಲ್ಲಿ ಗ್ರಾಂಡ್ ಮಾಸ್ಟರ್ ಪ್ರಬೋಧ್ ಅಚ್ಯುತರವರ ಗುಡಾಕೇಶ ಧ್ಯಾನ ಮಹೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ದರು.
ಇಂದಿನ ಯುವ ಜನತೆ ದುಶ್ಚಟಗಳಿಗೆ ದಾಸರಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಪೋಷಕರು ತಮ್ಮ ತಮ್ಮ ಮಕ್ಕಳ ಬಗ್ಗೆ ಗಮನ ಕೊಡಬೇಕು. ಅತ್ಯಂತ ಆಧುನಿಕತೆಯು ಯುವಜನತೆಯನ್ನು ದಾರಿ ತಪ್ಪಿಸುತ್ತಿದೆ. ಯುವಜನತೆ ಧ್ಯಾನದಲ್ಲಿ ತೊಡಗಿಕೊಂಡಾಗ ಅವರಲ್ಲಿ ಹಲವಾರು ಬದಲಾವಣೆಗಳನ್ನು ಕಾಣಬಹುದು. ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ತೊಂದರೆಗಳನ್ನು ಸರಿಪಡಿಸುವ ಶಕ್ತಿ ಧ್ಯಾನದಲ್ಲಿದೆ. ಧ್ಯಾನ ನಮ್ಮ ಸನಾತನ ಪರಂಪರೆಯ ಋಷಿಮುನಿಗಳು ನೀಡಿರುವ ಆಸ್ತಿ ಎಂದರು.
ಇದನ್ನೂ ಓದಿ: Chintamani News: ಅಧ್ಯಕ್ಷರಾಗಿ ವೆಂಕಟೇಶಪ್ಪ ಉಪಾಧ್ಯಕ್ಷರಾಗಿ ಹನುಮಪ್ಪ ಅವಿರೋಧವಾಗಿ ಆಯ್ಕೆ
ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ||ಎಂ.ಆರ್.ಜಯರಾಮ್ ಮಾತನಾಡಿ, ಮನಸ್ಸೇ ಆತ್ಮೋದ್ಧಾರದ ಎಲ್ಲಾ ಮಾರ್ಗಗಳಿಗೂ ಮೂಲದ್ವಾರವಾಗಿದೆ. ವೈರಾಗ್ಯಭಾವದ ಶಕ್ತಿ ಯನ್ನು ಕೊಡುವುದೂ ಕೂಡ ಮನಸ್ಸೇ. ಯೋಗಿಗಳಾದ ಕೈವಾರ ತಾತಯ್ಯನವರು ಯೋಗದ ರಹಸ್ಯವೇ ಮನಸ್ಸು ಎಂದಿದ್ದಾರೆ. ಮನಸ್ಸಿನಲ್ಲಿ ಉದ್ಭವಿಸುವ ಆಲೋಚನೆಗಳ ಪ್ರಭಾವದಿಂದ ಮಾನವರ ಜೀವನವು ನಡೆಯುತ್ತದೆ. ಆಲೋಚನೆಗಳು ಉತ್ತಮವಾದ ಜೀವನ ಉತ್ತಮವಾಗಿರುತ್ತದೆ. ಆಲೋಚನೆಗಳು ಉತ್ತಮವಾಗಬೇಕಾದರೆ ಧ್ಯಾನಮಾರ್ಗವು ಅತ್ಯಂತ ಸಹಕಾರಿ, ಈ ಕಾರಣದಿಂದಲೇ ಕೈವಾರದಲ್ಲಿ ಆತ್ಮಧ್ಯಾನ ಮಂದಿರದ ನಿರ್ಮಾಣ ವಾಗಿದೆ. ಗುರುಚಿಂತನೆಯ ಮೂಲಕ ಧ್ಯಾನ ಮಾಡುವುದು ಅತ್ಯಂತ ಶ್ರೇಷ್ಠವಾದುದು ಎಂದರು.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್(Higher Education Minister Dr. M.C. Sudhakar), ಡಾ.ಎಂ.ಸಿ.ಬಾಲಾಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಧ್ಯಾನಸಕ್ತರಿಗೆ ಶುಭ ಕೋರಿದರು. ಗ್ರಾಂಡ್ ಮಾಸ್ಟರ್ ಪ್ರಬೋಧ್ ಅಚ್ಯುತರವರು ಧ್ಯಾನದ ಮಾರ್ಗದರ್ಶನ ನೀಡಿದರು.
ಹೈದ್ರಾಬಾದ್‌ನ ಸಂಗೀತ ವಿದ್ವಾಂಸರಾದ ಡಾ.ಪಿಪ್ಪಲ ಪ್ರಸಾದ್ ಮತ್ತು ತಂಡದವರಿAದ ನಾಮ ಸಂಕೀರ್ತನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಉದ್ಯಮಿ ಸಿ.ಎಂ.ಆರ್. ಶ್ರೀನಾಥ್, ಎಂ.ಪ್ರದೀಪ್ ಹಾಗೂ ನಾನಾ ಭಾಗಗಳಿಂದ ಬಂದಿದ್ದ ಧ್ಯಾನಸಕ್ತರು ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದರು.