Chintamani News: ಅಧ್ಯಕ್ಷರಾಗಿ ವೆಂಕಟೇಶಪ್ಪ ಉಪಾಧ್ಯಕ್ಷರಾಗಿ ಹನುಮಪ್ಪ ಅವಿರೋಧವಾಗಿ ಆಯ್ಕೆ
ಅಧ್ಯಕ್ಷರ ಸ್ಥಾನಕ್ಕೆ ವೆಂಕಟೇಶಪ್ಪ ಉಪಾಧ್ಯಕ್ಷರ ಸ್ಥಾನಕ್ಕೆ ಹನುಮಪ್ಪ ನಾಮ ಪತ್ರ ಸಲ್ಲಿಸಿದ್ದು,ಬೇರೆ ಯಾರು ನಾಮಪತ್ರ ಸಲ್ಲಿಸದೇ ಇರುವ ಕಾರಣಕ್ಕೆ ಚುನಾವಣಾ ಅಧಿಕಾರಿ ಯಾದ ಭಾಸ್ಕರ್ ರೆಡ್ಡಿ ಕೆ ಎಸ್ ರವರು ಇಬ್ಬರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಣೆ ಮಾಡಿದರು.
-
ಚಿಂತಾಮಣಿ: ತಾಲ್ಲೂಕಿನ ಸಂತೇಕಲ್ಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಕ್ಕಿಮಂಗಲ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವೆಂಕಟೇಶಪ್ಪ ಉಪಾಧ್ಯಕ್ಷರಾಗಿ ಹನುಮಪ್ಪ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಸದರಿ ಹಾಲು ಉತ್ಪಾದಕರ ಸಹಕಾರ ಸಂಘದ ಎಲ್ಲಾ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಇಂದು ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಿತು.
ಇದನ್ನೂ ಓದಿ: Chinthamai News: ಚಿಂತಾಮಣಿ ನಗರದಲ್ಲಿ ಏಪ್ರಿಲ್ 1ರಿಂದ ಜನಗಣತಿ ಕಾರ್ಯ ಆರಂಭ : ಪೌರಾಯುಕ್ತ ಚಲಪತಿ
ಅಧ್ಯಕ್ಷರ ಸ್ಥಾನಕ್ಕೆ ವೆಂಕಟೇಶಪ್ಪ ಉಪಾಧ್ಯಕ್ಷರ ಸ್ಥಾನಕ್ಕೆ ಹನುಮಪ್ಪ ನಾಮ ಪತ್ರ ಸಲ್ಲಿಸಿದ್ದು, ಬೇರೆ ಯಾರು ನಾಮಪತ್ರ ಸಲ್ಲಿಸದೇ ಇರುವ ಕಾರಣಕ್ಕೆ ಚುನಾವಣಾ ಅಧಿಕಾರಿ ಯಾದ ಭಾಸ್ಕರ್ ರೆಡ್ಡಿ ಕೆ.ಎಸ್. ರವರು ಇಬ್ಬರನ್ನು ಅವಿರೋಧವಾಗಿ ಆಯ್ಕೆ ಮಾಡಲಾ ಗಿದೆ ಎಂದು ಘೋಷಣೆ ಮಾಡಿದರು.
ನೂತನವಾಗಿ ಆಯ್ಕೆಯಾದ ಅಧ್ಯಕ್ಷರಾದ ವೆಂಕಟೇಶಪ್ಪರವರು ಮಾಧ್ಯಮದವರೊಂದಿಗೆ ಮಾತನಾಡಿ ಪಕ್ಷಾತೀತವಾಗಿ ಎಲ್ಲಾ ನಿರ್ದೇಶಕರನ್ನು ಒಟ್ಟಿಗೆ ತೆಗೆದುಕೊಂಡು ಹಾಲು ಉತ್ಪಾದಕರ ಸಹಕಾರ ಸಂಘವನ್ನು ಇನ್ನಷ್ಟು ಹೆಚ್ಚಾಗಿ ಅಭಿವೃದ್ಧಿಪಡಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎ.ಟಿ.ಚಂದ್ರಶೇಖರ್, ಮುನಿರಾಮಪ್ಪ, ಮಂಜುನಾಥ, ವೆಂಕಟರೆಡ್ಡಿ, ಶ್ರೀನಿವಾಸ್, ಸಾವಿತ್ರಮ್ಮ, ಪಿ.ರವೀಂದ್ರ, ಸುರೇಶ ಎ.ಎನ್., ಕವಿತಾ, ಲಲಿತಮ್ಮ, ಡೈರಿ ಕಾರ್ಯದರ್ಶಿ ಶಿವಕುಮಾರ ಇದ್ದರು.