ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಸತ್ಯ ಸಾಯಿ ಗ್ರಾಮದಲ್ಲಿ ವೈಭವದಿಂದ ನಡೆದ ಉಮಾ-ಮಹೇಶ್ವರ ಕಲ್ಯಾಣ ಮಹೋತ್ಸವ

ಸಂಪ್ರದಾಯಬದ್ಧವಾಗಿ ನಡೆದ ಕಲ್ಯಾಣ ಮಹೋತ್ಸವನ್ನು ನೆರೆದ ಭಕ್ತರು ಶ್ರದ್ಧೆಯಿಂದ ಕಣ್ತುಂಬಿ ಕೊಂಡರು. ಕನ್ಯಾವರಣದಲ್ಲಿ ವರನ ಪಕ್ಷದವರು ಕನ್ಯಾದಾನಕ್ಕಾಗಿ ಕೋರುವ ಪವಿತ್ರ ಕ್ಷಣವೊಂದು ಇತ್ತು. ಬಳಿಕ ದೇವತಾ ಆಹ್ವಾನದ ಮೂಲಕ ಭಕ್ತಿಭಾವದೊಂದಿಗೆ ವೈವಾಹಿಕ ಕಾರ್ಯಗಳು ಆರಂಭ ವಾದವು. ಮಹಾ ಸಂಕಲ್ಪದ ಘೋಷಣೆಯಿಂದ ವಿವಾಹದ ಉದ್ದೇಶವು ಪ್ರಕಟವಾಯಿತು. ನಂತರ ಮಧುಪರ್ಕ ಪೂಜೆ ನೆರವೇರಿತು.

ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಶ್ರೀ ಸತ್ಯ ಸಾಯಿ ಲೋಕ ಸೇವಾ ವೇದ ಗುರುಕುಲದ ಪವಿತ್ರ ಪರಿಸರದಲ್ಲಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಶುಕ್ರವಾರ  ಸದ್ಗುರು ಶ್ರೀ ಮಧುಸೂದನ ಸಾಯಿಯವರ ದಿವ್ಯ ಸಾನ್ನಿಧ್ಯದಲ್ಲಿ ಉಮಾಮಹೇಶ್ವರ ಕಲ್ಯಾಣ ಮಹೋತ್ಸವ ವೈಭವದಿಂದ ಜರುಗಿತು.

ಈ ಕಲ್ಯಾಣೋತ್ಸವವು ಸಾಮಾನ್ಯ ವಿವಾಹವಲ್ಲ. ಇದು ಕೇವಲ ವರ–ವಧುವಿನ ಬಾಂಧವ್ಯದ ಸಂಕೇತವಲ್ಲ. ಇದು ಪ್ರಕೃತಿ (ಉಮಾ) ಮತ್ತು ಪುರುಷರ (ಮಹೇಶ್ವರ) ದಿವ್ಯ ಸಂಯೋಗದ ಪ್ರತೀಕ. ಲೋಕಕಲ್ಯಾಣಕ್ಕಾಗಿ ನಡೆಯುವ ಈ ಕಲ್ಯಾಣ ಮಹೋತ್ಸವವು ಭಕ್ತರಿಗೆ ಶಾಶ್ವತ ಆನಂದವನ್ನು ನೀಡುವ ಆಧ್ಯಾತ್ಮಿಕ ಯಜ್ಞವಾಗಿದೆ.

ಸಂಪ್ರದಾಯಬದ್ಧವಾಗಿ ನಡೆದ ಕಲ್ಯಾಣ ಮಹೋತ್ಸವನ್ನು ನೆರೆದ ಭಕ್ತರು ಶ್ರದ್ಧೆಯಿಂದ ಕಣ್ತುಂಬಿಕೊಂಡರು. ಕನ್ಯಾವರಣದಲ್ಲಿ ವರನ ಪಕ್ಷದವರು ಕನ್ಯಾದಾನಕ್ಕಾಗಿ ಕೋರುವ ಪವಿತ್ರ ಕ್ಷಣವೊಂದು ಇತ್ತು. ಬಳಿಕ ದೇವತಾ ಆಹ್ವಾನದ ಮೂಲಕ ಭಕ್ತಿಭಾವದೊಂದಿಗೆ ವೈವಾಹಿಕ ಕಾರ್ಯಗಳು ಆರಂಭವಾದವು. ಮಹಾ ಸಂಕಲ್ಪದ ಘೋಷಣೆಯಿಂದ ವಿವಾಹದ ಉದ್ದೇಶವು ಪ್ರಕಟವಾಯಿತು. ನಂತರ ಮಧುಪರ್ಕ ಪೂಜೆ ನೆರವೇರಿತು.

ಇದನ್ನೂ ಓದಿ:Chief minister: ಮುಖ್ಯಮಂತ್ರಿ ಬದಲಾವಣೆ ವಿಚಾರ ಮಾತನಾಡಿದ್ದ ನಾಯಕರಿಗೆ ಕಾಂಗ್ರೆಸ್‌ ಶಿಸ್ತು ಸಮಿತಿ ನೋಟಿಸ್‌

ಕನ್ಯಾದಾನದಲ್ಲಿ ಹಿಮವಂತನ ಪಾತ್ರವನ್ನು ಸ್ಮರಿಸುತ್ತಾ ಪವಿತ್ರ ಜಲಧಾರೆಯೊಂದಿಗೆ ಪುತ್ರಿಯನ್ನು ವರನಿಗೆ ಅರ್ಪಿಸುವ ದಿವ್ಯ ಸಂಪ್ರದಾಯ ನೆರವೇರಿಸಲಾಯಿತು. ಮಾಂಗಲ್ಯ ಧಾರಣೆಯ ಸಮಯ ದಲ್ಲಿ ಮಹೇಶ್ವರನು ಉಮೆಯ ಕಂಠದಲ್ಲಿ ಮಾಂಗಲ್ಯವನ್ನು ಕಟ್ಟಿದ ಕ್ಷಣವು ಭಕ್ತರ ಮನಗಳನ್ನು ಮಂತ್ರಮುಗ್ಧಗೊಳಿಸಿತು. ಅಕ್ಷತಾರೋಪಣೆಯಲ್ಲಿ ಅಕ್ಷತೆಗಳನ್ನು ಸಮರ್ಪಿಸಿ ಆಶೀರ್ವಾದವನ್ನು ಕೋರುವ ಪವಿತ್ರ ಆಚರಣೆ ನಡೆಯಿತು. ಮಹಾಮಂಗಳಾರತಿ, ರಾಜೋಪಚಾರ ಮತ್ತು ಸಂಗೀತ ಸೇವೆಗಳೊಂದಿಗೆ ಕಲ್ಯಾಣೋತ್ಸವ ವಿಧಿಗಳು ಸಂಪನ್ನಗೊಂಡವು.

ಈ ಸಂದರ್ಭದಲ್ಲಿ ಆಶೀರ್ಚನ ನೀಡಿದ ಸದ್ಗುರು ಶ್ರೀ ಮಧುಸೂದನ ಸಾಯಿ, “ಎಲ್ಲರ ತಂದೆಯಾದ ಮಹೇಶ್ವರ ಹಾಗೂ ಎಲ್ಲ ತಾಯಿ ಉಮೆಯು ಇಲ್ಲಿಯೇ ವಾಸಿಸುತ್ತಿದ್ದಾರೆ. ಅವರ ಆರಾಧನೆಯು ನಿರಂತರವಾಗಿರಬೇಕು. ಪ್ರತಿ ತಿಂಗಳು ಮಾಸ ಶಿವರಾತ್ರಿಗಳನ್ನು ಆಚರಿಸಿ, ನಮ್ಮ ಸಂಸ್ಕೃತಿ–ಸಂಪ್ರದಾಯಗಳನ್ನು ನಿರಂತರವಾಗಿ ಪೋಷಿಸಬೇಕು. ಆಶ್ರಮವಾಸಿಗಳು ನಿತ್ಯಸೇವೆಯ ಅವಕಾಶ ವನ್ನು ಸದ್ವಿನಿಯೋಗಿಸಿಕೊಳ್ಳಬೇಕು” ಎಂದು ಮಾರ್ಗದರ್ಶನ ನೀಡಿದರು.