ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Health Camp: ಹಳೇ ಉಪ್ಪಾರಹಳ್ಳಿಯಲ್ಲಿ ‘ವತ್ಸಲಾ’ ಪಶು ಆರೋಗ್ಯ ಶಿಬಿರ ಯಶಸ್ವಿ

ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನು ಭವ  ಕಾರ್ಯಕ್ರಮದ ಅಂಗವಾಗಿ ‘ವತ್ಸಲಾ–ಪಶುಗಳ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಮಮತೆಯ ಹೆಜ್ಜೆ’ ಎಂಬ ಶೀರ್ಷಿಕೆ ಯಡಿ ಪಶು ಆರೋಗ್ಯ ತಪಾಸಣಾ ಶಿಬಿರ ಹಾಗೂ ಮಿಶ್ರ ತಳಿ ಕರುಗಳ ಪ್ರದರ್ಶನವನ್ನು ಹಳೇ ಉಪ್ಪಾರ ಹಳ್ಳಿ ಗ್ರಾಮದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.

ಗೌರಿಬಿದನೂರು: ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನು ಭವ  ಕಾರ್ಯಕ್ರಮದ ಅಂಗವಾಗಿ ‘ವತ್ಸಲಾ–ಪಶುಗಳ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಮಮತೆಯ ಹೆಜ್ಜೆ’ ಎಂಬ ಶೀರ್ಷಿಕೆಯಡಿ ಪಶು ಆರೋಗ್ಯ ತಪಾಸಣಾ ಶಿಬಿರ ಹಾಗೂ ಮಿಶ್ರ ತಳಿ ಕರುಗಳ ಪ್ರದರ್ಶನವನ್ನು ಹಳೇ ಉಪ್ಪಾರಹಳ್ಳಿ ಗ್ರಾಮದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಗಣ್ಯರು ಎತ್ತಿನ ಗಾಡಿಯಲ್ಲಿ ವೇದಿಕೆಗೆ ಆಗಮಿಸಿ, ರೈತರು ಹಾಗೂ ಕೃಷಿಯ ಪ್ರತೀಕವಾಗಿ ಹಸಿರು ಟವೆಲ್ ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಇದೇ ಸಂದರ್ಭದಲ್ಲಿ ‘ವತ್ಸಲಾ’ ಕಾರ್ಯಕ್ರಮದ ಹೆಸರನ್ನು ಅನಾವರಣಗೊಳಿಸಲಾಯಿತು.

ಶ್ರೀ ಎಚ್.ವಿ. ಮಂಜುನಾಥ್ (ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಹೊಸೂರು), ಶ್ರೀ ನರಸಿಂಹ ಮೂರ್ತಿ (ಜಿಪಂ), ಡಾ. ಮಾರುತಿ ಎಚ್., ಡಾ. ಸವಿತಾ, ಡಾ. ಎ.ಜೆ. ಶಂಕರೇಗೌಡ, ಡಾ. ರಾಘವೇಂದ್ರ ಸೇರಿದಂತೆ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

ಇದನ್ನೂ ಓದಿ: Gauribidanur News: ಸ್ವಯಂ ತೆರವುಗೊಳಿಸದಿದ್ದರೆ ಮುನ್ಸೂಚನೆ ಇಲ್ಲದೆ ನಗರಸಭೆಯಿಂದ ಕಾರ್ಯಾಚರಣೆ: ಪೌರಾಯುಕ್ತ ರಮೇಶ್

ಶಿಬಿರದಲ್ಲಿ ಪಶುವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ ಹಾಗೂ ಔಷಧ ವಿತರಣೆ ಮಾಡಲಾಯಿತು. ಚರ್ಮಗಂಟು ರೋಗ ನಿಯಂತ್ರಣಕ್ಕಾಗಿ LHD ಲಸಿಕೆ ಹಾಗೂ ಕುರಿಗಳಿಗೆ ಜಂತು ನಾಶಕ ಔಷಧ ನೀಡಲಾಯಿತು. ಒಟ್ಟು 43 ಹಸುಗಳು, 26 ಕರುಗಳು ಹಾಗೂ 350ಕ್ಕೂ ಅಧಿಕ ಕುರಿ-ಮೇಕೆಗಳು ಶಿಬಿರದ ಪ್ರಯೋಜನ ಪಡೆದವು.

ಕಾರ್ಯಕ್ರಮದ ಮತ್ತೊಂದು ವಿಶೇಷ ಆಕರ್ಷಣೆಯಾಗಿದ್ದ 6 ರಿಂದ 8 ತಿಂಗಳ ಮಿಶ್ರ ತಳಿ ಕರುಗಳ ಪ್ರದರ್ಶನದಲ್ಲಿ ಪಶುವೈದ್ಯರು ಕರುಗಳ ಆರೋಗ್ಯ, ಬೆಳವಣಿಗೆ ಮತ್ತು ಸಾಕಾಣಿಕೆ ವಿಧಾನಗಳನ್ನು ಪರಿಶೀಲಿಸಿದರು. ಉತ್ತಮವಾಗಿ ಕರುಗಳನ್ನು ಸಾಕಾಣಿಕೆ ಮಾಡಿದ 12 ರೈತರಿಗೆ ಖನಿಜ ಮಿಶ್ರಣ ಹಾಗೂ ಪಶುಸಂಗೋಪನೆ ಕುರಿತ ಮಾಹಿತಿ ಪುಸ್ತಕಗಳನ್ನು ವಿತರಿಸಲಾಯಿತು. ಇತರ ಭಾಗವಹಿಸಿದ ರೈತರಿಗೆ ಸಮಾಧಾನಕರ ಬಹುಮಾನಗಳನ್ನು ನೀಡಲಾಯಿತು.

ಗ್ರಾಮಸ್ಥರು ಹಾಗೂ ರೈತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವದ ಅಂಗವಾಗಿ ನಡೆದ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.