ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shidlaghatta News: ನರೇಗಾ ಮತ್ತು ವಿವಿಧ ಯೋಜನೆಗಳ ಕಾಮಗಾರಿ ವೀಕ್ಷಿಸಿದ: ಜಿಪಂ ಉಪಕಾರ್ಯದರ್ಶಿ

ನಾಗಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡಿಪಿನಾಯಕನಹಳ್ಳಿ ಗ್ರಾಮದ ಉದ್ಯಾನವನ, ಜಂಗಮ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉದ್ಯಾನವನ, ಪ್ರಾಥಮಿಕ ಆರೋಗ್ಯ ಕೇಂದ್ರ, ಡಿಜಿಟಲ್ ಲೈಬ್ರರಿ, ಗ್ರಾಮ ಪಂಚಾಯಿತಿ ಸಭಾಂಗಣ, ಕುಂಭಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಳ ನಾಯಕನಹಳ್ಳಿ ಗ್ರಾಮದ ಅಡುಗೆ ಕೋಣೆ, ಕೂಸಿನ ಮನೆ, ಲೈಬ್ರರಿ ಕೇಂದ್ರ, ಮಾದರಿ ಅಂಗನವಾಡಿ ಕೇಂದ್ರವನ್ನು ಕಾಮಗಾರಿಯನ್ನು ವೀಕ್ಷಿಸಿದರು.

ಕಾಮಗಾರಿ ವೀಕ್ಷಿಸಿದ ಜಿಪಂ ಉಪಕಾರ್ಯದರ್ಶಿ

-

Ashok Nayak Ashok Nayak Oct 17, 2025 1:20 AM

ಶಿಡ್ಲಘಟ್ಟ: ತಾಲ್ಲೂಕಿನ ವಿವಿಧ ಗ್ರಾ.ಪಂ ವ್ಯಾಪ್ತಿಯಲ್ಲಿನ ನರೇಗಾ ಯೋಜನೆ ಕಾಮಗಾರಿಗಳ ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಗುರುವಾರ ಭೇಟಿ ನೀಡಿ ವೀಕ್ಷಿಸಿದರು.

ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎನ್ ಆರ್ ಎಲ್ ಎಂ ಕಟ್ಟಡ, ಡಿಜಿಟಲ್ ಲೈಬ್ರರಿ ಕೇಂದ್ರ, ಸಭಾಂಗಣ,ತಾದೂರು ಗ್ರಾಮದ ಮಾದರಿ ಅಂಗನವಾಡಿ ಕೇಂದ್ರ, ಮಳೆ ನೀರು ಕೊಯ್ಲು ಕಾಮಗಾರಿ, ವೀಕ್ಷಿಸಿ ಮಾತನಾಡಿದ ಅವರು ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಿ ನರೇಗಾ ಸೇರಿ ವಿವಿಧ ಯೋಜನೆಗಳ ಅನುದಾನ ಬಳಸಿ ಅಭಿವೃದ್ಧಿ ಮಾಡಬೇಕು ಎಂದರು.

ಇದನ್ನೂ ಓದಿ: Shidlaghatta News: ಪೊಲೀಸ್ ಇಲಾಖೆಯ ಬಗ್ಗೆ ಸಾರ್ವಜನಿಕರಿಗೆ ವಿಶ್ವಾಸವಿರಲಿ ಭಯಬೇಡ: ಪಿ.ಎಸ್.ಐ ವೇಣುಗೋಪಾಲ್

ನಾಗಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡಿಪಿನಾಯಕನಹಳ್ಳಿ ಗ್ರಾಮದ ಉದ್ಯಾನವನ, ಜಂಗಮಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉದ್ಯಾನವನ, ಪ್ರಾಥಮಿಕ ಆರೋಗ್ಯ ಕೇಂದ್ರ, ಡಿಜಿಟಲ್ ಲೈಬ್ರರಿ, ಗ್ರಾಮ ಪಂಚಾಯಿತಿ ಸಭಾಂಗಣ, ಕುಂಭಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಳನಾಯಕನಹಳ್ಳಿ ಗ್ರಾಮದ ಅಡುಗೆ ಕೋಣೆ, ಕೂಸಿನ ಮನೆ, ಲೈಬ್ರರಿ ಕೇಂದ್ರ, ಮಾದರಿ ಅಂಗನವಾಡಿ ಕೇಂದ್ರವನ್ನು ಕಾಮಗಾರಿಯನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಹೇಮಾವತಿ,ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ಜಿಲ್ಲಾ ಪಂಚಾಯತ್ ವ್ಯವಸ್ಥಾಪಕರು ಮದನ್, ನಾರಾಯಣಯಸ್ವಾಮಿ,ಎಸ್.ಬಿ.ಎಂ.ಜಿ ಕೃಷ್ಣಪ್ಪ, ನಾಗೇಂದ್ರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು,ಟಿಐಇಸಿ, ಇಂಜಿನಿಯರ್ಸ್, ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿ ಮತ್ತು ನರೇಗಾ ಸಿಬ್ಬಂದಿ ಸೇರಿದಂತೆ ಇತರರು ಹಾಜರಿದ್ದರು.