ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chikkaballapur News: ಶಿಕ್ಷಣದ ಜೊತೆಗೆ ಸ್ವಂತತನ ಬೆಳೆದಾಗಲೇ ಹಿಂಸೆ ದೂರವಾಗುತ್ತದೆ: ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್

ನಗರದ ಹೊರವಲಯದ ಸಿ.ವಿ.ವಿ. ಕ್ಯಾಂಪಸ್‌ನ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಶ್ರೀ ಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ೩೦ನೇ ದತ್ತಿ ದಿನಾಚರಣೆ ಹಾಗೂ ಶಿಕ್ಷಣ ತಜ್ಞ, ಮಾಜಿ ನಗರಸಭೆ ಅಧ್ಯಕ್ಷ ದಿವಂಗತ ಸಿ.ವಿ. ವೆಂಕಟರಾಯಪ್ಪ ಅವರ 111ನೇ ಜನ್ಮಜಯಂತಿ ಕಾರ್ಯ ಕ್ರಮದಲ್ಲಿ ದತ್ತಿ ಪುರಸ್ಕಾರ ಸ್ವೀಕರಿಸಿ ಮಾತನಾಡಿದರು.

ಚಿಕ್ಕಬಳ್ಳಾಪುರ: ಶಿಕ್ಷಣವು ಕೇವಲ ಜ್ಞಾನಕ್ಕೆ ಸೀಮಿತವಾಗದೆ ಮನುಷ್ಯರಲ್ಲಿ ಸಂತತನ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವಂತಾಗಬೇಕು. ಇದಾದಾಗ ಮಾತ್ರ ಹಿಂಸೆಯನ್ನು ಆರಾಧಿ ಸುವ ಮನೋಭಾವ ದೂರವಾಗುತ್ತದೆ ಬ್ರಾತೃತ್ವ ಬೆಳಗಲಿದೆ ಎಂದು ಹಿರಿಯ ಸಾಹಿತಿ, ಚಿಂತಕ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಹೇಳಿದರು.

ನಗರದ ಹೊರವಲಯದ ಸಿ.ವಿ.ವಿ. ಕ್ಯಾಂಪಸ್‌ನ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಶ್ರೀ ಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ 30ನೇ ದತ್ತಿ ದಿನಾಚರಣೆ ಹಾಗೂ ಶಿಕ್ಷಣ ತಜ್ಞ, ಮಾಜಿ ನಗರಸಭೆ ಅಧ್ಯಕ್ಷ ದಿವಂಗತ ಸಿ.ವಿ.ವೆಂಕಟರಾಯಪ್ಪ ಅವರ 111ನೇ ಜನ್ಮಜಯಂತಿ ಕಾರ್ಯಕ್ರಮ ದಲ್ಲಿ ದತ್ತಿ ಪುರಸ್ಕಾರ ಸ್ವೀಕರಿಸಿ ಮಾತನಾಡಿದರು.

ಸಮುದ್ರವು ತನ್ನಿಂತಾನೇ ಹುಟ್ಟುವುದಿಲ್ಲ. ಹನಿ ಹನಿಯಾಗಿ ಸೇರಿದ್ದರಿಂದಲೇ ಅದು ಸಮುದ್ರ ವಾಗುತ್ತದೆ. ಅದೇ ರೀತಿ ಉತ್ತಮ ಸಮಾಜವೂ ಪ್ರತಿಯೊಬ್ಬರ ಸತ್ಕಾರ್ಯಗಳಿಂದ ರೂಪುಗೊಳ್ಳುತ್ತದೆ. ಆದರೆ ಇಂದು ಕ್ರೌರ್ಯವನ್ನೇ ಆರಾಧಿಸುವ ಮನೋಭಾವದ ಸಮಾಜ ನಿರ್ಮಾಣವಾಗುತ್ತಿದ್ದು, ಹಿಂಸೆಯಿಂದ ಯಾವುದೇ ಸೃಷ್ಟಿ ಸಾಧ್ಯವಿಲ್ಲ ಎಂದು ಹೇಳಿದರು.

ಇದನ್ನೂ ಓದಿ: Chikkaballapur News: ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ತ್ವರಿತ ನ್ಯಾಯ: ಜಿಲ್ಲಾ ಕುಂದುಕೊರತೆ ಸಭೆಯಲ್ಲಿ ಒತ್ತಾಯ

ಆನಂದವನ್ನು ಆರ್ಭಟದಲ್ಲಿ ಹುಡುಕಿದರೆ ಶಾಂತಿ ಸಿಗುವುದಿಲ್ಲ. ಕರ್ನಾಟಕವು ಉತ್ತರ ಪ್ರದೇಶ, ಮಣಿಪುರ ಅಥವಾ ಗುಜರಾತ್‌ನಂತಹ ದ್ವೇಷದ ನೆಲೆಯಾಗದಿರುವುದಕ್ಕೆ ಕನಕದಾಸ, ಶಿಶುನಾಳ ಶರೀಫ, ಕೈವಾರ ತಾತಯ್ಯ, ವೀರಬ್ರಹ್ಮಯ್ಯರಂತಹ ಮಹಾನ್ ತತ್ವಜ್ಞಾನಿಗಳ ಮಾನವೀಯ ಸಂದೇಶವೇ ಕಾರಣ ಎಂದು ಅಭಿಪ್ರಾಯಪಟ್ಟರು.

ಇಂದಿನ ಸಮಾಜ ಆತಂಕವನ್ನೇ ಆನಂದವೆಂದು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದೆ. ಆಧುನಿಕತೆಯ ನಾಗಾಲೋಟದ ನಡುವೆಯೂ ಅಸಮಾನತೆ ಹೆಮ್ಮರವಾಗಿದ್ದು,ಇದರಿಂದ ದೂರವಾಗಲು ಸಮತೆ ಯ ಬೀಜ ಬಿತ್ತುವ ಅಗತ್ಯವಿದೆ. ಜಾತೀಯತೆ ಸಮಾಜಕ್ಕಂಟಿರುವ ದೊಡ್ಡ ರೋಗವಾಗಿದ್ದು, ಅದು ಮನುಷ್ಯನ ಸ್ಪರ್ಶಜ್ಞಾನವನ್ನೇ ಕಸಿದುಕೊಳ್ಳುವ ಕುಷ್ಠರೋಗದಂತಿದೆ. ಇದು ಅತ್ಯಂತ ಅಪಾಯ ಕಾರಿ ಬೆಳವಣಿಗೆಯಾಗಿದೆ ಎಂದು ಎಚ್ಚರಿಸಿದರು.

cbpm2dt

ಗಾಂಧೀಜಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರಂತೆ ಎಲ್ಲೆಗಳನ್ನು ಮೀರಿ ಬೆಳೆಯುವ ಮನೋಭಾವವನ್ನು ಮಕ್ಕಳಲ್ಲಿ ಬೆಳೆಸಬೇಕು. ತಾವು ಹೃದಯಾಘಾತದಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಶಾಶ್ವತ ನೀರಾವರಿ ಹೋರಾಟಕ್ಕಾಗಿ "ನೀರಿಗಾಗಿ ಕೊಂಚ ಮಾತನಾಡುವಿರಾ" ಎಂಬ ಸಂಕಲ್ಪಗೀತೆಯನ್ನು ರಚಿಸಿದ್ದೆ. ಬದುಕುವುದೇ ದುಸ್ತರವಾಗಿದ್ದ ಆ ಕ್ಷಣದಲ್ಲಿ ಹುಟ್ಟಿದ ಆ ಗೀತೆ ಹೋರಾಟಕ್ಕೆ ಮರುಹುಟ್ಟು ನೀಡಿದಂತೆ,ನನಗೂ ಪುನರ್ಜನ್ಮ ನೀಡಿದೆ.ಹೀಗಾಗಿ ನಿಜವಾದ ಸಾಧನೆ ಸದಾಕಾಲ ಅಜರಾಮರವಾಗಿರುತ್ತದೆ ಎಂದು ಹೇಳಿದರು.

ಶ್ರೀ.ಕೆ.ವಿ.ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಆಶ್ರಯದಲ್ಲಿ ಕಳೆದ ೩೦ ವರ್ಷಗಳಿಂದ ವಿವಿಧ ಕ್ಷೇತ್ರಗಳ ಗಣ್ಯರನ್ನು ವೇದಿಕೆಗೆ ಕರೆಸಿ ದತ್ತಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಹೆಮ್ಮೆಯ ವಿಚಾರ.ಈ ಬಾರಿ ನನ್ನನ್ನು ಜಾನಪದ ಅಕಾಡೆಮಿ ಅಧ್ಯಕ್ಷ ಎಂಬ ಕಾರಣಕ್ಕಿಂತ ಹೆಚ್ಚಾಗಿ ಜನಚಳವಳಿಗಳಿಗೆ ನೀಡಿದ ಅನುಪಮಸೇವೆ ಪರಿಗಣಿಸಿ ಸತ್ಕರಿಸಿದ್ದಕ್ಕೆ ಶ್ರೀ ಕೆ.ವಿ.ನವೀನ್‌ಕಿರಣ್ ಅವರ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕಾರ್ಯಕ್ರಮ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಕೆ.ವಿ.ನವೀನ್‌ಕಿರಣ್ ಶ್ರೀಕೆ.ವಿ.ಮತ್ತು ಪಂಚಗಿರಿ ಶಿಕ್ಷಣ ದತ್ತಿ ಹಾಗೂ ಸಿ.ವಿ.ವೆಂಕಟರಾಯಪ್ಪ ಅವರ ಜನ್ಮದಿನಾಚರಣೆಯ ಕಾರ್ಯಕ್ರಮ ಎನ್ನುವುದು ಸಮುದಾಯದ ಕಾರ್ಯಕ್ರಮವಾಗಿ ಬದಲಾಗಿರುವುದು ಸಂತೋಷ ತಂದಿದೆ.ಜಿಲ್ಲೆಯ ಜನತೆ ನಮ್ಮ ಮೇಲೆ ಇಟ್ಟಿರುವ ಅಭಿಮಾನ ಅಕ್ಕರೆ ಪ್ರೀತಿಯನ್ನು ಕಾಪಿಟ್ಟುಕೊಂಡು ಹೋಗುವುದೇ ನಮ್ಮ ಮೇಲಿರುವ ದೊಡ್ಡ ಜವಾಬ್ದಾರಿಯಾಗಿದೆ.ವರ್ಷದಿಂದ ವರ್ಷಕ್ಕೆ ಈ ಕಾರ್ಯಕ್ರಮವು ಹೊಸ ಹೊಸ ಸ್ವರೂಪದಲ್ಲಿ ಅಕ್ಷಯವಾಗುತ್ತಾ,ರಕ್ತದಾನದ ಮೂಲಕ ವಿಶ್ವಮಾನ್ಯವಾಗುತ್ತಾ ಸಾಗಿರು ವುದು ನೋಡಿದಾಗ ಹೃದಯ ತುಂಬಿಬರುತ್ತದೆ. ಇದಕ್ಕೆ ಕಾರಣವಾದ ಸಂಸ್ಥೆ ಎಲ್ಲಾ ಸಿಬ್ಬಂದಿಗೆ, ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕಾರ ನೀಡಿದ ಸಕಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಶಿಕ್ಷಣ ಭೀಷ್ಮ ಎಂಬ ಅಭಿದಾನಕ್ಕೆ ಪಾತ್ರವಾದ ಸಿ.ವಿ. ವೆಂಕಟರಾಯಪ್ಪ ಅವರು ರಾಜಕೀಯ ಮುತ್ಸದ್ದಿಯಾಗಿ, ಮೂರು ಬಾರಿ ಶಾಸಕರಾಗಿ ಸಮಾಜ ಸುಧಾರಕರಾಗಿ ಜಿಲ್ಲೆಯಷ್ಟೇ ಅಲ್ಲದೆ ರಾಜ್ಯದಲ್ಲಿ ಹೆಸರಾಗಿದ್ದಾರೆ.೭೦ರ ದಶಕದಲ್ಲಿಯೇ ಚಿಕ್ಕಬಳ್ಳಾಪುರದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದ ಅವರು ನಿಜಾರ್ಥದಲ್ಲಿ ಅಪ್ರತಿಮ ಸಾಧಕರೇ ಸರಿ.

ಸಮಾಜದಲ್ಲಿ ಸಾಧಕರು ಮತ್ತು ಸಮಯ ಸಾಧಕರ ಎಂಬ ಎರಡು ವರ್ಗವಿದೆ.ಸಮಯ ಸಾಧಕರು ಸತ್ತ ಕೂಡಲೇ ಮರೆಯಾಗುತ್ತಾರೆ, ಆದರೆ ಸಾಧಕರು ಕಾಯವಳಿದರೂ ಆಚಂದ್ರಾರ್ಕವಾಗಿ ಶಾಶ್ವತವಾಗಿ ಜನಮನದಲ್ಲಿ ಉಳಿಯುತ್ತಾರೆ. ಸಿ.ವಿ. ವೆಂಕಟರಾಯಪ್ಪ ಅವರದ್ದು ಅಂತಹ ಅಜರಾಮರ ವ್ಯಕ್ತಿತ್ವ. ಅವರ ಮೊಮ್ಮಗ ಕೆ.ವಿ. ನವೀನ್ ಕಿರಣ್ ಕೂಡ ತಾತನ ಆದರ್ಶಗಳ ಹಾದಿಯಲ್ಲೇ ಸಾಗುತ್ತಿರುವ ಜನನಾಯಕರಾಗಿದ್ದಾರೆ ಎಂದು ಗೊಲ್ಲಹಳ್ಳಿ ಶಿವಪ್ರಸಾದ್ ಶ್ಲಾಘಿಸಿದರು.

ಶ್ರೀ.ಕೆ.ವಿ.ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಆಶ್ರಯದಲ್ಲಿ ನಡೆದ ದತ್ತಿ ದಿನಾಚರಣೆ ಹಾಗೂ ಸಿವಿವಿ ಅವರ 111ನೇ ಜನ್ಮದಿನಾಚರಣೆ ಅಂಗವಾಗಿ 10 ಮಂದಿ ಸಾಧಕರಿಗೆ ದತ್ತಿ ಪ್ರಶಸ್ತಿ ನೀಡಿ ಸನ್ಮಾನಿಸ ಲಾಯಿತು.

ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ವೈದ್ಯ ಡಾ ಪ್ರಶಾಂತ್ ಮೂರ್ತಿ,ಸಿಎಸ್‌ಐ ಚರ್ಚ್ನ ಹೆನ್ರಿ ಪ್ರಸನ್ನಕುಮಾರ್,ಕನ್ನಡ ಮತ್ತು ಸಂಸ್ಕತಿ ಇಲಾಖೆ ನಿವೃತ್ತ ಮಾಜಿ ಸಹಾಯಕ ನಿರ್ದೇಶಕ ಬಿ.ಎಸ್.ವೆಂಕಟಾಚಲಪತಿ, ಸಿಐಟಿಯು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಗಂಜಿಗುAಟೆ ಲಕ್ಷ್ಮೀದೇವಮ್ಮ,ಪ್ರಧಾನ ಅಂಚೆ ಕಚೇರಿ ಅಸಿಸ್ಟೆಂಟ್ ಪೋಸ್ಟ್ ಮಾಸ್ಟರ್- ವಿ.ಆರ್ ಚಂದ್ರಶೇಖರ್, ನಿವೃತ್ತ ಪ್ರಾಂಶುಪಾಲ ಅಗಲಗುರ್ಕಿ ಪ್ರೋಫೆಸರ್ ಎನ್.ಚಂದ್ರಪ್ಪ, ಗುಡ್ ಶೆಪರ್ಡ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ವಿಜಯಾ ಜೇಮ್ಸ್, ಕೆಎಎಸ್ ಅಧಿಕಾರಿ ಬಿ.ಎನ್.ವರಪ್ರಸಾದರೆಡ್ಡಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಇದೇ ವೇಳೆ ದತ್ತಿ ದಿನಾಚರಣೆ ಹಾಗೂ ಸಿವಿವಿ ಜನ್ಮದಿನಾಚರಣೆ ಅಂಗವಾಗಿ ಸತತ ಒಂದು ತಿಂಗಳು ನಡೆದ ಕ್ರೀಡೆ, ಸಾಂಸ್ಕೃತಿಕ, ಸಮಾಜಸೇವೆ,ರಕ್ತದಾನ ಶಿಬಿರದ ಇತ್ಯಾದಿ ಕಾರ್ಯಕ್ರಮಗಳ ಯಶಸ್ಸಿಗೆ ಕಾರಣರಾದ ಸಿಬ್ಬಂದಿಗೆ,ನಿವೃತ್ತ ನೌಕರರಿಗೆ ಸನ್ಮಾನ ಗುರುಕುಲಾಶ್ರಮ ಮಕ್ಕಳಿಗೆ ವಸ್ತ್ರದಾನ, ಸಿವಿವಿ ಅಭಿಮಾನಿಗಳಿಗೆ, ಟ್ರಸ್ಟ್ ಸದಸ್ಯರಿಗೆ ಗೌರವನಮನ ಸಲ್ಲಿಸಲಾಯಿತು. ವಿಶೇಷವಾಗಿ ಅವರಿವರೆನ್ನದೆ ಎಲ್ಲಾ ಧರ್ಮ ಪಕ್ಷದ ಮುಖಂಡರು ಆಗಮಿಸಿ ಕೆ.ವಿ.ನವೀನ್‌ಕಿರಣ್ ಅವರಿಗೆ ಬೃಹತ್ ಗಾತ್ರದ ಹಾರತುರಾಯಿ ಪೇಟ ತೊಡಿಸಿ ಸನ್ಮಾನಿಸಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಕೆ.ವಿ. ನವೀನ್ ಕಿರಣ್, ಡಾ. ಸಾಯಿಪ್ರಭು, ನಿರ್ಮಲ ಪ್ರಭು, ದತ್ತಿಯ ಸದಸ್ಯ ರಾದ ಲೀಲಾ ದೇವರಾಜ, ಅಶ್ವಿನಿ, ಸುಜಾತಾ ಕಿರಣ್, ವಿಜಯಲಕ್ಷ್ಮಿ, ಇಮ್ರಾನ್ ಖಾನ್, ಆಸಿಫ್ ಪಾಷಾ ಹಾಗೂ ಶ್ರೀನಿವಾಸ್ ಉಪಸ್ಥಿತರಿದ್ದರು.