ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪರಂಪರೆ ಕಟ್ಟಿಕೊಟ್ಟಿರುವ ಜಿಲ್ಲೆಯ ಹಿರಿಯರಿಗೆ ನಾವು ಋಣಿಗಳಾಗಿದ್ದೇವೆ: ಜಿ.ಹೆಚ್.ನಾಗರಾಜ್ ಅಭಿಮತ

ಚಿಕ್ಕಬಳ್ಳಾಪುರ ಜಿಲ್ಲಾ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಶ್ರೀಮತಿ ಸಂಜೀವಮ್ಮ ಶ್ರೀ ಹನುಮಂತೇಗೌಡರ ದತ್ತಿ, ಶ್ರೀ ಕೆಬಿ ಪಿಳ್ಳಪ್ಪ ಸ್ಮಾರಕ ದತ್ತಿ, ಶ್ರೀ ಸಿವಿ ವೆಂಕಟರಾಯಪ್ಪ ಶ್ರೀಮತಿ ಸಿ ವಿ ಕಮಲಮ್ಮನವರ ದತ್ತಿ ಮತ್ತು ಶ್ರೀ ಅಂಗಡಿ ನಾರಾಯಣಪ್ಪ ದತ್ತಿ ಕಾರ್ಯಕ್ರಮವನ್ನು ಹಾರೋಬಂಡೆಯ ಶ್ರೀ ಸಾಯಿ ಮಂದಿರದಲ್ಲಿ ಆಯೋಜಿಸಲಾಗಿತ್ತು

ಚಿಕ್ಕಬಳ್ಳಾಪುರ: ಈ ಭಾಗದ ಅಭಿವೃದ್ಧಿಗೆ ಕೊಡುಗೆ ನೀಡಿ ವಿಶಿಷ್ಟ  ಪರಂಪರೆ ಕಟ್ಟಿಕೊಟ್ಟಿ ರುವ ಜಿಲ್ಲೆಯ ಹಿರಿಯರಿಗೆ ನಾವು ಋಣಿಗಳಾಗಿದ್ದೇವೆ ಎಂದು ದೇವರಾಜು ಅರಸು ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಜಿ ಎಚ್ ನಾಗರಾಜ್ ಅಭಿಪ್ರಾಯಪಟ್ಟರು.

ಚಿಕ್ಕಬಳ್ಳಾಪುರ ಜಿಲ್ಲಾ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಶ್ರೀಮತಿ ಸಂಜೀವಮ್ಮ ಶ್ರೀ ಹನುಮಂತೇಗೌಡರ ದತ್ತಿ, ಶ್ರೀ ಕೆಬಿ ಪಿಳ್ಳಪ್ಪ ಸ್ಮಾರಕ ದತ್ತಿ, ಶ್ರೀ ಸಿವಿ ವೆಂಕಟರಾಯಪ್ಪ ಶ್ರೀಮತಿ ಸಿ ವಿ ಕಮಲಮ್ಮನವರ ದತ್ತಿ ಮತ್ತು ಶ್ರೀ ಅಂಗಡಿ ನಾರಾಯಣಪ್ಪ ದತ್ತಿ ಕಾರ್ಯ ಕ್ರಮವನ್ನು ಹಾರೋಬಂಡೆಯ ಶ್ರೀ ಸಾಯಿ ಮಂದಿರದಲ್ಲಿ ಆಯೋಜಿಸಲಾಗಿತ್ತು.  

ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬೆಳವಣಿಗೆಗೆ ರಾಜಕೀಯ ಮತ್ತು ರೈತ ಪರ ಹೋರಾಟಗಳಿಗೆ ಜನಪರ ಕಾರ್ಯಗಳನ್ನು ನೀಡಿ ಕಟ್ಟಿ ಬೆಳೆಸಿದ ಗೌರವಕ್ಕೆ ದಿವಂಗತ ಕೆ ಬಿ ಪಿಳ್ಳಪ್ಪನವರು ಮತ್ತು ಸಿವಿ ವೆಂಕಟರಾಯಪ್ಪನವರು ಸಾಕ್ಷಿ ಪ್ರಜ್ಞೆಗಳಾಗಿದ್ದಾರೆ ಎಂದು ಪ್ರಶಂಸಿಸಿದರು. ಅಂತಹ ಮಹನೀಯರ ದಾರಿಯನ್ನು ಮಾರ್ಗಸೂಚಿಗಳನ್ನು ಪಾಲಿಸಿ ಜನಪರವಾಗಿ ಬಾಳುವುದನ್ನು ಸಮಕಾಲೀನ ನಾಯಕರು ಕಲಿಯಬೇಕಾಗಿದೆ ಎಂದು ಮನವಿ ಮಾಡಿದರು.

ಇದನ್ನೂ ಓದಿ: Chintamani News: ತಾತಯ್ಯನವರ 300ನೇ ಜಯಂತೋತ್ಸವದ ಅಂಗವಾಗಿ ನಾಮ ಸಂಕೀರ್ತನೆಯ ಸಂಗೀತೋತ್ಸವ : ವಾನರಾಶಿ ಭಾಗವತರ್

ಜಿಲ್ಲೆಯ ಮಹನೀಯರ ಹೆಸರಿನಲ್ಲಿ ನಡೆಯುತ್ತಿರುವ ದತ್ತಿ ಕಾರ್ಯಕ್ರಮಗಳ ಮೂಲಕ ಅವರ ಜೀವನ ಮತ್ತು ಕಾರ್ಯಗಳನ್ನು ವರ್ತಮಾನದ ಯುವಕರಿಗೆ ಪರಿಚಯ ಮಾಡಿ ಕೊಡುವ ಕಾರ್ಯವನ್ನು ಸಾಹಿತ್ಯ ಪರಿಷತ್ತಿನ ಸ್ನೇಹಿತರು ನಡೆಸುತ್ತಿರುವುದು ಅಭಿನಂದ ನೀಯ.

ಮನುಷ್ಯನ ಜೀವನ ಕ್ಷಣಿಕ, ಅವರು ಮಾಡಿದ ಜನಪರ ಕಾರ್ಯಗಳು, ಬಿಟ್ಟು ಹೋದ ಮೌಲ್ಯಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಟೀಕೆ ಟಿಪ್ಪಣಿಗಳು ಸಹಜ, ಅವುಗಳಿಗೆ ತಲೆಕೆಡೆಸಿಕೊಳ್ಳದೆ ಕೆಲಸ ಮಾಡುವ ಮೂಲಕ ಟೀಕಾಕಾರರಿಗೆ ನಮ್ಮ ಕೆಲಸವನ್ನು ಪರಿಚಯ ಮಾಡಿಕೊಡೋಣ ಎಂದು ಅಭಿಪ್ರಾಯಪಟ್ಟರು.

ಚಿಕ್ಕಬಳ್ಳಾಪುರ ಜಿಲ್ಲೆಗೆ ಹೋರಾಟದ ಪರಂಪರೆ ಇದ್ದು ಭಾರತರತ್ನರು, ಅನುಭಾವಿಗಳು, ಕೃಷಿ ತಜ್ಞರು, ಹೋರಾಟಗಾರರು ಮತ್ತು ಶ್ರಮಜೀವಿ ಸಹೋದರಿಯರು ಇಲ್ಲಿ ಬಾಳಿ ಬೆಳಗಿ ದ್ದಾರೆ. ಇಂತಹ ದತ್ತಿ ಕಾರ್ಯಕ್ರಮಗಳ ಮೂಲಕ ಜಿಲ್ಲೆಯನ್ನು ಕಟ್ಟಿದವರಿಗೆ ನಾವು ಋಣಿಯಾಗಿರೋಣ ಎಂದು ಕಿವಿಮಾತು ಹೇಳಿದರು.

cbpm8s (2)

ಸಿ.ವಿ.ವೆಂಕಟರಾಯಪ್ಪ ಮತ್ತು ಕೆಬಿ ಪಿಳ್ಳಪ್ಪನವರು ಸತ್ಯರಾಜಕಾರಣದ ಸಾಕ್ಷಿ ಪ್ರಜ್ಞೆ ಗಳಾಗಿದ್ದರು. ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಜಿಲ್ಲೆಯ, ರೈತರ, ಶ್ರಮಜೀವಿಗಳು ಹಾಗೂ ದುಡಿಯುವ ಹೆಣ್ಣು ಮಕ್ಕಳ ಬದುಕನ್ನು ಹಸನಾಗಿಸಲು ಕೆಬಿ ಪಿಳ್ಳಪ್ಪನವರು ಮತ್ತು  ಸಿ.ವಿ ವೆಂಕಟರಾಯಪ್ಪ ಶ್ರಮಿಸಿದ್ದಾರೆ. ಅವರು ನಮ್ಮಂತಹ ನೂರಾರು ಜನರನ್ನು ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರ ಪರಿಣಾಮ ಇಂದು ನಮಗೆ ಒಂದು ಸ್ಥಾನಮಾನ, ಜವಾಬ್ದಾರಿ ಹಾಗೂ ಗೌರವ ಲಭಿಸಿದೆ. ಅವರ ಚಿಂತನೆಗಳು ಎಂದೂ ಜನರಿಂದ ಮರೆಯಾಗಬಾರದು ಎಂದು ದತ್ತಿ ಕಾರ್ಯಕ್ರಮಗಳ ಮೂಲಕ ಅವರನ್ನು ಸ್ಮರಿಸಿ ಅವರ ವಿಷಯಗಳನ್ನು ಮರು ಚಿಂತನೆ ಮಾಡುತ್ತಿರುವ ಸಾಹಿತ್ಯ ಪರಿಷತ್ತಿನ ಜವಾಬ್ದಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕೆ.ಬಿ.ಪಿಳ್ಳಪ್ಪನವರ ಸ್ಮಾರಕದತ್ತಿಯ ಕರ್ತೃಗಳಾದ ಮಾಜಿ ಶಾಸಕ ಕೆ.ಪಿ ಬಚ್ಚೇಗೌಡ ಮಾತನಾಡಿ, ನಮ್ಮ ತಂದೆಯವರು ರೈತ ಪರವಾಗಿದ್ದರು ಜನಪರವಾಗಿದ್ದರು.ಈ ಭಾಗದಲ್ಲಿ ಶಿಕ್ಷಣ ಕೇಂದ್ರಗಳನ್ನು ಮಾಡುವವರಿಗೆ ವಿಶೇಷ ನೆರವು ನೀಡಿರುತ್ತಾರೆ. ಮುದ್ದೇನಹಳ್ಳಿಯ ಸಾಯಿಬಾಬಾ ವಸತಿ ಶಾಲೆಯನ್ನು ನಿರ್ಮಿಸುವ ಹಂತದಲ್ಲಿ ತಂದೆಯವರು ಅವರಿಗೆ ಅಗತ್ಯ ಜಮೀನು ನೀರು ಮತ್ತು ನೈತಿಕ ಸಹಕಾರ ನೀಡಿದ್ದಾರೆ. ಆ ಸಂಸ್ಥೆ ಇಂದು ಜಾಗತಿಕವಾಗಿ ಗುರುತಿಸಿಕೊಂಡಿರುವುದು ನನಗೆ ಆನಂದ ತಂದಿದೆ. ರಾಜಕೀಯದಲ್ಲೂ ತನಗಿಂತ ಚಿಕ್ಕವರಿಗೆ ನಿರಂತರ ಶಿಸ್ತಿನ ಪಾಠ ಮಾಡುತ್ತಿದ್ದರು. ಸೋದರರಾದ ನಮಗೆ ತಂದೆಯೇ ಆದರ್ಶ, ಅವರ ಆಶೀರ್ವಾದವೇ ನಮ್ಮನ್ನು ಇಲ್ಲಿನವರೆಗೆ ಬೆಳೆಸಿದೆ. ಅಂತಹ ತಂದೆಯವರ ಮಕ್ಕಳೆಂದು ನಾವು ಅತ್ಯಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ತಂದೆಯ ಶಿಸ್ತು, ಎದೆಗಾರಿಕೆ ಮತ್ತು ಹೋರಾಟಗಳನ್ನು ನಾವು ಎಂದೂ ಗೌರವಿಸಿದ್ದೇವೆ ಮತ್ತು ಅದೇ ರೀತಿ ನಡೆಯಲು ಶಕ್ತಿಮೀರಿ ಪ್ರಾಮಾಣಿಕತೆಯನ್ನು ಉಳಿಸಿಕೊಂಡಿದ್ದೇವೆ. ಇಂದು ರಾಜಕೀಯ ತುಂಬಾ ಕಲ್ಮಶವಾಗಿದ್ದು ಸ್ವಾರ್ಥಪರ, ಅಧಿಕಾರ, ಹಣ ಇವುಗಳು ರಾಜಕೀಯ ವನ್ನು ದಿಕ್ಕು ತಪ್ಪಿಸುತ್ತಿವೆ. ಜನರು ಇಂದೂ ಸಹ ಮೈಸೂರಿನ ರಾಜಪ್ರಭುತ್ವವನ್ನು ಗೌರವದಿಂದ ಸ್ಮರಿಸುತ್ತಾರೆ ಎಂದು ಅಭಿಪ್ರಾಯಪಟ್ಟರು.

ಶಿಕ್ಷಣ ಪ್ರೇಮಿ ಸಿ.ವಿ ವೆಂಕಟರಾಯಪ್ಪ ಮತ್ತು ಶ್ರೀಮತಿ ಕಮಲಮ್ಮ ದತ್ತಿಯ ದಾನಿಗಳಾದ ಶ್ರೀಮತಿ ನಿರ್ಮಲ ಪ್ರಭು ಅವರು ಮಾತನಾಡಿ ಸಿವಿವಿ ಹಾಗೂ ಕೆಬಿ ಪಿಳ್ಳಪ್ಪನವರು ಚಿಕ್ಕಬಳ್ಳಾಪುರ ಜಿಲ್ಲೆಗೆ ವಿಶಿಷ್ಟ ಸೇವೆ ಸಲ್ಲಿಸಿದ್ದು ಅವರ ಪರಂಪರೆಯು ಅದೇ ರೀತಿ ಬಾಳುತ್ತಿರುವುದು ನನಗೆ ಆನಂದವೆನಿಸಿದೆ.

ಸಿವಿವಿ ಅಂತಹ ತಂದೆ, ನವೀನ್ ಕಿರಣ್ ಅಂತಹ ಮಗನನ್ನು ಪಡೆದಿರುವ ಸಾರ್ಥಕತೆ ನನ್ನಲ್ಲಿದೆ. ಚಿಕ್ಕಂದಿನಿಂದಲೇ ನಮ್ಮ ತಂದೆಯವರ ಶಿಸ್ತು, ಸಮಯಪಾಲನೆ, ದೂರದೃಷ್ಟಿ, ತೀಕ್ಷ್ಣ ತಿಳುವಳಿಕೆಯನ್ನು ನಾನು ಸಹಜವಾಗಿ ಕಲಿತು ಜವಾಬ್ದಾರಿಯನ್ನು ಬೆಳೆಸಿಕೊಂಡೆ. ಅಂತಹ ತಂದೆ ಸಿಗದಿದ್ದರೆ ನಾನು ಯಾವ ಸಾಧನೆಯನ್ನು ಮಾಡಲಾಗುತ್ತಿರಲಿಲ್ಲ.

ಸುಮಾರು ಎರಡು ದಶಕಗಳಿಗೂ ಹೆಚ್ಚು ಕಾಲ ನಗರಸಭೆಯ ಅಧ್ಯಕ್ಷರಾಗಿ ನಗರ ನಿರ್ಮಾಣ, ಶಿಕ್ಷಣ ಹಾಗೂ ಜನಪರ ಸೌಲಭ್ಯಗಳನ್ನು ಉತ್ತಮವಾಗಿ ರೂಪಿಸಿದ್ದಾರೆ. ನಗರ ಸಭೆಯ ಸದಸ್ಯರಾಗಿದ್ದ ನನಗೆ ನಮ್ಮ ತಂದೆಯ ಆದರ್ಶ ಮತ್ತು ಅವರ ಕನಸುಗಳನ್ನು ನನಸಾಗಿಸುತ್ತಿರುವ ನನ್ನ ಮಗನ ಬಗ್ಗೆ ನನಗೆ ಅತ್ಯಂತ ಅಭಿಮಾನ ಮತ್ತು ಪ್ರೇಮ. ನಮ್ಮ ತಂದೆ ಮತ್ತು ತಾಯಿಯನ್ನು ನೆನಪಿಗೆ ತಂದ ಪರಿಷತ್ತಿಗೆ ನಾನು ಆಭಾರಿಯಾಗಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.

ದತ್ತಿ ಉಪನ್ಯಾಸಗಳು: ಪುಸ್ತಕ ಪ್ರೀತಿ ಮತ್ತು ಅಧ್ಯಯನ ಸಂಸ್ಕೃತಿ ಎಂಬ ವಿಷಯದ ಬಗ್ಗೆ ವಿಶ್ವವಿದ್ಯಾಲಯ ಶಿಕ್ಷಣ ಕಾಲೇಜಿನ ಡಾ. ಎಂ ಶಂಕರ್ ಹಾಗೂ ಸಮಾಜ ಪರಿವರ್ತನೆಯಲ್ಲಿ ಶ್ರೀ ನಾರಾಯಣ ಗುರು ಅವರ ಕೊಡುಗೆ ವಿಷಯದ ಬಗ್ಗೆ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಕೋಡಿ ರಂಗಪ್ಪ ಉಪನ್ಯಾಸ ನೀಡಿದರು.

ಜಿಲ್ಲಾ ಕಾರ್ಯದರ್ಶಿ ಎಸ್ ಎನ್ ಅಮೃತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಡಾ. ಕೆ ಬಿ ಶ್ರೀನಿವಾಸ ಮೂರ್ತಿ ಉಪಸ್ಥಿತರಿದ್ದರು. ವಿಶ್ವವಿದ್ಯಾಲಯ ಕಾಲೇಜಿನ ಡೀನ್ ಮತ್ತು ಪ್ರಾಂಶುಪಾಲ ಡಾ. ಜಿ ಪಿ ಬಾಹುಬಲಿ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ವೈ ಎಲ್ ಹನುಮಂತ ರಾವ್, ನಿಕಟ ಪೂರ್ವ ಸಮ್ಮೇಳನ ಅಧ್ಯಕ್ಷ ಗೋಪಾಲಗೌಡ ಕಲ್ವ ಮಂಜಲಿ, ಜಿಲ್ಲಾ ಕಸಾಪದ ಚನ್ನಮಲ್ಲಿಕಾರ್ಜುನಯ್ಯ, ಟಿ ನಾರಾಯಣಸ್ವಾಮಿ, ಸರ್ದಾರ್ ಚಾಂದ್ ಪಾಷ, ಪ್ರೇಮ ಲೀಲಾ ವೆಂಕಟೇಶ್, ಮಂಚನಬಲೆ ಶ್ರೀನಿವಾಸ್, ಜಂಟಿ ರ‍್ಯರ‍್ಶಿ ಟಿ ವಿ ಚಂದ್ರಶೇಖರ್, ಮುನಿನಾರಾಯಣಪ್ಪ ತಾಲೂಕು ರ‍್ಯರ‍್ಶ ಕೆ ಎಂ ರೆಡ್ಡಪ್ಪ ಸಮಾಜ ಸೇವಕಿ ಅಣ್ಣಮ್ಮ, ವಿಶ್ವವಿದ್ಯಾಲಯ ಶಿಕ್ಷಣ ಕಾಲೇಜಿನ ಮಹೇಶ್ ಎನ್, ನಾಗರಾಜ್ ಎಚ್, ಕೆ ವಿ ಶಿಕ್ಷಣ ಕಾಲೇಜಿನ ಗುರುರ‍್ತಿ, ಶಿವರಾಂ ಮತ್ತು ವಿಶ್ವವಿದ್ಯಾಲಯ ಶಿಕ್ಷಣ ಕಾಲೇಜು ಹಾಗೂ ಶ್ರೀ ಕೆವಿ ಶಿಕ್ಷಣ ಕಾಲೇಜಿನ ತರಬೇತಿ ವಿದ್ಯಾರ್ಥಿಗಳು ಕಾರ್ಯ ಕ್ರಮದಲ್ಲಿ ಭಾಗಿಗಳಾಗಿದ್ದರು.