ಪತ್ರಕರ್ತ ಜಿ.ಎನ್.ನಾಗರಾಜ್ ನಿಧನಕ್ಕೆ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಂದ ಸಂತಾಪ
ಪತ್ರಕರ್ತ ಜಿ.ಎನ್.ನಾಗರಾಜ್ ನಿಧನಕ್ಕೆ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಂದ ಸಂತಾಪ
-
Vishwavani News
Jun 13, 2021 3:34 PM
ಪಾವಗಡ: ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ದವಡಬೆಟ್ಟ ನಾಗರಾಜ್ ಕೋವಿಡ್ ಸೋಂಕಿನಿಂದ ವಿಧಿವಶರಾಗಿ ರುವ ಹಿನ್ನೆಲೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪಾವಗಡ ಘಟಕದ ಕಚೇರಿಯಲ್ಲಿ ಸಂತಾಪ ಸಭೆಯನ್ನು ಹಮ್ಮಿ ಕೊಂಡಿದ್ದರು.
ಪತ್ರಕರ್ತ ಬೆಟ್ಟ ರವರ ಅಕಾಲ ಮರಣದಿಂದ ಪತ್ರಿಕಾ ಮಾಧ್ಯಮಕ್ಕೆ ಅಪಾರವಾದ ಹಿನ್ನಡೆಯಾಗಿದೆ, ನಾಗರಾಜ್ ರವರು ನಿರಂತರವಾಗಿ ವರದಿಗಳ ಗೋಸ್ಕರ ಪ್ರತಿ ಗ್ರಾಮೀಣ ಭಾಗಗಳಲ್ಲಿ ವಾಸ್ತವಿಕ ಅಂಶವನ್ನು ಸ್ವಯಿಚ್ಛೆಯಿಂದ ತಿಳಿದು ತನ್ನದೇ ಆದ ವಿಶೇಷ ಸುದ್ದಿಗಳ ಮುಖಾಂತರ ತಾಲ್ಲೂಕಿನ ಮತ್ತು ಜಿಲ್ಲೆಯಾದ್ಯಂತ ವರದಿಗಳನ್ನು ಅರಿಯುವ ಅಭಿಮಾನಿಗಳನ್ನು ಹೊಂದಿರು ತ್ತಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ ಜಿಲ್ಲಾ ಘಟಕದಿಂದ ತಕ್ಷಣವೇ ಹತ್ತು ಸಾವಿರ ರೂಗಳನ್ನು ಕೊಡಲು ನಿರ್ಧರಿಸಿರು ತ್ತಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬರುವ ಕರೊನ ವಾರಿಯರ್ಸ್ ಗೆ ತಲುಪಬೇಕಾದ ಸುಮಾರು ಐದು ಲಕ್ಷಗಳನ್ನು ರಾಜ್ಯ ಮತ್ತು ಜಿಲ್ಲಾಧ್ಯಕ್ಷರ ಗಳು ಮುಖ್ಯಮಂತ್ರಿಗಳಿಗೆ ಹಣವನ್ನು ಕೊಡಲು ಮನವಿ ಮಾಡಿ ಒಪ್ಪಿಸಿದ್ದಾರೆoದು ಜಿಲ್ಲಾ ಗ್ರಾಮೀಣ ಉಪಾಧ್ಯಕ್ಷ, ಹಿರಿಯ ಪ್ರಸನ್ನ ಮೂರ್ತಿ ಹಾಗೂ ತಾಲ್ಲೂಕು ಅಧ್ಯಕ್ಷ ಜಿ ಎನ್ ಹನುಮಂತರಾಯಪ್ಪರವರು ತಿಳಿಯಪಡಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ರಾಮಾಂಜನೇಯಲು, ಚಂಚಲಪ್ಪ, ಇಮ್ರಾನ್ ಉಲ್ಲಾ, ಜಯಸಿಂಹ, ನಾಗೇಂದ್ರ, ವಡ್ಡೇ ಶ್ರೀನಿವಾಸುಲು ಪಾಲ್ಗೊಂಡಿದ್ದರು.