77th Republic Day: 77ನೇ ಗಣರಾಜ್ಯೋತ್ಸವಕ್ಕೆ ಜಿಲ್ಲಾಕ್ರೀಡಾಂಗಣ ಸರ್ವರೀತಿಯಲ್ಲೂ ಸಜ್ಜು: ಗಮನ ಸೆಳೆಯಲಿದೆ ಫಲಪುಷ್ಪಪ್ರದರ್ಶನ
ನಗರದ ಸರ್‌ಎಂವಿ ಜಿಲ್ಲಾ ಕ್ರೀಡಾಂಗಣ 77ನೇ ಗಣರಾಜ್ಯೋತ್ಸವ ಆಚರಣೆಗೆ ಮಧುವಣ ಗಿತ್ತಿಯಂತೆ ಸಿದ್ಧವಾಗಿದೆ. ಈ ಸಿದ್ಧತೆಗಳ ಹಿಂದೆ ರಾತ್ರಿ 10 ಗಂಟೆಯಾದರೂ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಯುವಜನಸೇವೆ ಮತ್ತು ಕ್ರೀಡಾ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಅಹರ್ನಿಶಿ ಶ್ರಮಿಸಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು
ಫಲಪುಷ್ಪ ಪ್ರದರ್ಶನದಲ್ಲಿ ಸಾಲುಮರದ ತಿಮ್ಮಕ್ಕ ಪುತ್ಥಳಿ, ಜಾಗೃತಿ ಫಲಕಗಳು, ಹೈನೋದ್ಯಮದ ಸಂಕೇತ ಮನಸೆಳೆಯುವಂತಿರುವ ಚಿತ್ರ -
ಮುನಿರಾಜು ಎಂ.ಅರಿಕೆರೆ
ವಿದ್ಯಾರ್ಥಿಗಳು: ಪೋಲೀಸರಿಂದ ಮೂಡಿಬರಲಿದೆ ಆಕರ್ಷಕ ಪಥಸಂಚಲನ: ಸಾಂಸ್ಕೃತಿಕ ಕಾರ್ಯಕ್ರಮಗಳು ಕಲರವ
ಚಿಕ್ಕಬಳ್ಳಾಪುರ: 77ನೇ ಗಣರಾಜ್ಯೋತ್ಸವ(77th Republic Day)ಕ್ಕೆ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಸಕಲ ರೀತಿಯಲ್ಲಿ ಸಜ್ಜಾಗಿದ್ದು ಪ್ರಧಾನ ವೇದಿಕೆ ಸಿದ್ಧತೆ, ಫಲಪುಷ್ಪ ಪ್ರದರ್ಶನದ ಒಪ್ಪ ಓರಣ ದಲ್ಲಿ ಅಧಿಕಾರಿ ಕಾರ್ಮಿಕರು ತೊಡಗಿದ್ದರೆ, ಪೊಲೀಸ್ ಮತ್ತು ವಿದ್ಯಾರ್ಥಿಗಳ ಪಥ ಸಂಚಲನದ ತಂಡಗಳು ಕಳೆದ 5 ದಿನಗಳಿಂದ ಸರ್.ಎಂ.ವಿ.ಜಿಲ್ಲಾ ಕ್ರೀಡಾಂಗಣದಲ್ಲಿ ತಾಲೀಮಿನಲ್ಲಿ ತಲ್ಲೀನರಾಗಿದ್ದರು.
ನಗರದ ಸರ್‌ಎಂವಿ ಜಿಲ್ಲಾ ಕ್ರೀಡಾಂಗಣ 77ನೇ ಗಣರಾಜ್ಯೋತ್ಸವ ಆಚರಣೆಗೆ ಮಧುವಣ ಗಿತ್ತಿಯಂತೆ ಸಿದ್ಧವಾಗಿದೆ. ಈ ಸಿದ್ಧತೆಗಳ ಹಿಂದೆ ರಾತ್ರಿ 10 ಗಂಟೆಯಾದರೂ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಯುವಜನಸೇವೆ ಮತ್ತು ಕ್ರೀಡಾ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಅಹರ್ನಿಶಿ ಶ್ರಮಿಸಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.
ಇದನ್ನೂ ಓದಿ: Republic Day 2026: ವಂದೇ ಮಾತರಂ ಗೀತೆಯ ಐತಿಹಾಸಿಕ ಮಹತ್ವ ಸ್ಮರಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಒಂದೆಡೆ ನೂತನ ಫೆವಿಲಿಯನ್ ಬ್ಲಾಕ್ ನಿರ್ಮಾಣಕ್ಕೆ ಹಳೆಯ ಕಟ್ಟಡವನ್ನು ನೆಲೆಸಮ ಗೊಳಿಸಿದ್ದರೂ, ಬೃಹತ್ ಪೆಂಡಾಲ್‌ಗಳ ಅಡಿಯಲ್ಲಿ ಕಾರ್ಯಕ್ರಮದ ಆಯೋಜನೆ ಆಗಿರು ವುದು ಕಾರ್ಯಕ್ರಮದ ಮಹತ್ವ ಘನತೆ ಗೌರವವನ್ನು ಎತ್ತಿ ತೋರಿಸುವಂತಿದೆ.
ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟನೆ ಮಾಡುವ 77ನೇ ಗಣರಾಜ್ಯೋತ್ಸವ ಕಾರ್ಯ ಕ್ರಮದಲ್ಲಿ ಎಲ್ಲೂ ಲೋಪವಾಗದಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿಗಳೇ ಮೊದಲಾಗಿ ಎಲ್ಲಾ ಅಧಿಕಾರಿಗಳು ಟೊಂಕಕಟ್ಟಿ ನಿಂತಿರುವುದು ಸಿದ್ಧತೆಗಳ ನಾವಿನ್ಯತೆಯಿಂದ ಅವರ ಬದ್ಧತೆ ಎದ್ದು ಕಾಣುತ್ತಿತ್ತು.
ಗಣರಾಜ್ಯೋತ್ಸವದ ಮುನ್ನಾದಿನವದ ಭಾನುವಾರ ಬೆಳಗಿನಿಂದ ಸಂಜೆಯ ತನಕ ಕ್ರೀಡಾಂ ಗಣದಲ್ಲಿ ಪೊಲೀಸರು, ಶಾಲಾ ವಿದ್ಯಾರ್ಥಿಗಳು, ಅರಣ್ಯ ಇಲಾಖೆ, ಸ್ಕೌಟ್ಸ್ ಅಂಡ್ ಗೈಡ್ಸ್, ನಗರಸಭೆ ಸಿಬ್ಬಂದಿ,ಗೃಹರಕ್ಷಕದಳದ ಬೆಟಾಲಿಯನ್‌ಗಳು ಬೆವರು ಸುರಿಸಿ ಕರಾರುವಕ್ಕಾಗಿ ಪಥಸಂಚಲ ಮೂಡಿಬರುವಂತೆ ಎಲ್ಲಾ ಬೆಟಾಲಿಯನ್‌ಗಳ ಮುಖ್ಯಸ್ಥರು ಗಮನ ಹರಿಸಿದ್ದು ಕಂಡು ಬಂದಿತು.
ಫಲಪುಷ್ಪಗಳ ಆಕರ್ಷಣೆ: ಪ್ರಮುಖ ಆಕರ್ಷಣೆಗಳಾಗಿ ಹೂವುಗಳಿಂದ ಅಲಂಕರಿಸಿದ ಐಸಿಸಿ ಮಹಿಳಾ ವಿಶ್ವಕಪ್ ಕಲಾಕೃತಿಯ ಚಿತ್ರ, ಕ್ರಿಕೆಟ್ ಬ್ಯಾಟ್ ಮತ್ತು ಬಾಲ್, ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಅವರ ಪ್ರತಿಮೆ, ಡಾ.ಎಂ.ಹೆಚ್.ಮರೀಗೌಡರ ಪ್ರತಿಮೆ, ಹಸು-ಕರು ಪ್ರತಿಮೆ, ಜಿಲ್ಲೆಯ ರೈತ ಮಹಿಳೆಯರಿಂದ ತಯಾರಿಸಲ್ಪಡುವ ಹೂವಿನ ಜೋಡಣೆ ಕಲಾಕೃತಿ, ಹೂವುಗಳಿಂದ ಅಲಂಕರಿಸಿದ ಆಧುನಿಕ ಮಹಿಳೆ ಕಲಾಕೃತಿ, ಮಾದರಿ ಕೈತೋಟ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಖಂಡಿತ ಯಶಸ್ವಿಯಾಗಲಿದೆ.
ವಿವಿಧ ಹಣ್ಣು ತರಕಾರಿಗಳಲ್ಲಿ ಮಾಡಿರುವ ಕಲಾಕೃತಿಗಳ ಕೆತ್ತನೆ ಮಾಡಲಾಗಿದ್ದು, ಜಾನೂರ್ ಕಲಾಕೃತಿಗಳ ಪ್ರದರ್ಶನ,ಜಿ.ಐ ಟ್ಯಾಗ್ ಹೊಂದಿರುವ ಭೌಗೋಳಿಕ ಗುರುತಿಸು ವಿಕೆಯ ಬೆಳೆಗಳ ಪ್ರದರ್ಶನ, ಔಷಧಿ ಸಸ್ಯಗಳ ಪ್ರದರ್ಶನ, ಜೇನು ಸಾಕಾಣಿಕೆ ಪ್ರದರ್ಶನ, ಐಸಿಎಂಆರ್ ಶಿಫಾರಸ್ಸಿನನ್ವಯ ಸಮತೋಲನ ಆಹಾರ ವಿಂಗಡಣೆ ಕುರಿತ ಕಲಾಕೃತಿ, ಹೂವು ಕುಂಡಗಳ ಜೋಡಣೆ, ವಿವಿಧ ರೀತಿಯ ದೇಶೀಯ ಹಾಗೂ ವಿದೇಶೀಯ ಹೂ, ಹಣ್ಣು ಹಾಗೂ ತರಕಾರಿಗಳ ಪ್ರದರ್ಶನ, ಎಕ್ಸೋಟಿಕ್ ಫ್ರೂಟ್ಸ್, ಫ್ಲವರ್ ಡಿಸ್ಪ್ʼಲೇ ಜತೆಗೆ ಇಲಾಖಾ ಯೋಜನೆಗಳ ಮಾಹಿತಿ ನೀಡಲು ತೋಟಗಾರಿಕೆ ಸಿದ್ಧತೆ ಮಾಡಿಕೊಳ್ಳು ತ್ತಿದ್ದುದು ಕಂಡು ಬಂದಿತು.
ಬೆAಗಳೂರಿನಲ್ಲಿ ತರಬೇತಿ ನೀಡಿರುವ 20 ಮಂದಿ ಮಹಿಳೆಯರಿಂದ ಬೊಕ್ಕೆ ತಯಾರಿ ಬಗ್ಗೆ ಆಸಕ್ತರಿಗೆ ತರಬೇತಿ ನೀಡಲಾಗುವುದು.ಹೂವುಗಳನ್ನು ಬಳಸಿಕೊಂಡು ಹೇಗೆ ಕಾರ್ಯಕ್ರಮ ಗಳಿಗೆ ಅಂಲಕಾರದ ಬೊಕ್ಕೆ ತಯಾರಿಸುವ ಕಟ್ ಪ್ಲವರ್ ಅರೇಂಜ್‌ಮೆಂಟ್ ಕಲೆಯನ್ನು ತಿಳಿಸಲು ಉತ್ಸಾಹದಲ್ಲಿದ್ದಾರೆ.
ಹೂಕುಂಡಗಳ ಮಾರಾಟಕ್ಕೂ ವ್ಯವಸ್ಥೆ ಮಾಡಲಾಗಿದ್ದು ಆಸಕ್ತರು ಬಂದು ಇಲಾಖೆ ನಿಗದಿ ಮಾಡಿರುವ ಬೆಲೆಯನ್ನು ನೀಡಿ ಸ್ಥಳದಲ್ಲಿಯೇ ಖರೀದಿ ಮಾಡಬಹುದು.ಜಿಲ್ಲೆಯ ಎಲ್ಲ ರೈತರು, ಸಾರ್ವಜನಿಕರನ್ನು ಆಹ್ವಾನಿಸುತ್ತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜಂಟಿ ನಿರ್ದೇಶಕಿ ಮನವಿ ಮಾಡಿದ ಅವರು ತೋಟಗಾರಿಕೆ ಇಲಾಖೆ ಬಗ್ಗೆ ರೈತರಿಗೆ ಮಾಹಿತಿ ನೀಡುವ ಮಾಹಿತಿ ಕೇಂದ್ರವನ್ನು ತರೆಯಲಾಗುವುದು ಎನ್ನುವುದು ಜಿಲ್ಲಾ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಎಂ.ಗಾಯಿತ್ರಿ ಅವರ ಮಾತಾಗಿತ್ತು.
ಒಟ್ಟಾರೆ ಗಣರಾಜ್ಯೋತ್ಸವದ ಸಿದ್ಧತೆಗಳು ಭರದಿಂದ ಸಾಗಿದ್ದು ಸೋಮವಾರದ ಬೆಳಗ್ಗೆ ಅತಿಥಿ ಅಭ್ಯಾಗತರು ಆಗಮಿಸಿ ಕಾರ್ಯಕ್ರಮ ಯಶಸ್ವಿಯಾಗಿದ್ದಾಗಲೇ ಈ ಎಲ್ಲಾ ಸಿದ್ಧತೆ ಗಳಿಗೆ ಧನ್ಯತೆಯ ಭಾವ ಮೂಡಲಿದೆ ಎನ್ನುವುದು ಸಾರ್ವಜನಿಕರ ಮನದ ಮಾತಾಗಿದೆ.