ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Covid Scam: ಕೋವಿಡ್‌ ಹಗರಣ ತನಿಖೆ ಸಿಐಡಿಗೆ: ರಾಜ್ಯ ಸರ್ಕಾರ ಆದೇಶ

ಈ ಮೊದಲು ಹಗರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವ ಬಗ್ಗೆ ಸಂಪುಟ ಸಭೆಯಲ್ಲಿ ನಿರ್ಣಯಿಸಿತ್ತು. ಆದರೆ ಎಸ್ ಐಟಿ ಮುಖ್ಯಸ್ಥರಾಗಲು ಕೆಲ ಹಿರಿಯ ಐಪಿಎಸ್ ಅಧಿಕಾರಿಗಳು ಹಿಂದೇಟು ಹಾಕಿದ್ದರು. ಹೀಗಾಗಿ ಎಫ್‌ಐಆರ್‌ ದಾಖಲಾದ 2 ತಿಂಗಳ ತರುವಾಯ ಪ್ರಕರಣವನ್ನು ಸಿಐಡಿ ತನಿಖೆಗೆ ಸರ್ಕಾರ ವಹಿಸಿದೆ.

ಕೋವಿಡ್‌ ಹಗರಣ ತನಿಖೆ ಸಿಐಡಿಗೆ: ರಾಜ್ಯ ಸರ್ಕಾರ ಆದೇಶ

ಹರೀಶ್‌ ಕೇರ ಹರೀಶ್‌ ಕೇರ Feb 14, 2025 9:01 AM

ಬೆಂಗಳೂರು : ರಾಜ್ಯ ಸರ್ಕಾರವು (karnataka government) ಕೋವಿಡ್ ಹಗರಣದ (covid scam) ತನಿಖೆ ಸಿಐಡಿಗೆ (CID enquiry) ವಹಿಸಿ ಆದೇಶ ಹೊರಡಿಸಿದೆ. ಡಿ.13ರಂದು ವಿಧಾನಸೌಧದ ಠಾಣೆಯಲ್ಲಿ ಈ ಕುರಿತು ಎಫ್‌ಐಆರ್‌ (FIR) ದಾಖಲಾಗಿತ್ತು. ಎಫ್‌ಐಆರ್‌ ದಾಖಲಾದ 2 ತಿಂಗಳ ಬಳಿಕ ಕೋವಿಡ್ ಪ್ರಕರಣದ ತನಿಖೆ ಸಿಐಡಿಗೆ ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯ ರಾಜಕೀಯದಲ್ಲಿ ಭಾರಿ ಆರೋಪ-ಪ್ರತ್ಯಾರೋಪಕ್ಕೆ ತುತ್ತಾಗಿದ್ದ ಕೋವಿಡ್ ಹಗರಣದ ತನಿಖೆಯನ್ನು ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಮೊದಲು ಹಗರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವ ಬಗ್ಗೆ ಸಂಪುಟ ಸಭೆಯಲ್ಲಿ ನಿರ್ಣಯಿಸಿತ್ತು. ಆದರೆ ಎಸ್ ಐಟಿ ಮುಖ್ಯಸ್ಥರಾಗಲು ಕೆಲ ಹಿರಿಯ ಐಪಿಎಸ್ ಅಧಿಕಾರಿಗಳು ಹಿಂದೇಟು ಹಾಕಿದ್ದರು. ಹೀಗಾಗಿ ಎಫ್‌ಐಆರ್‌ ದಾಖಲಾದ 2 ತಿಂಗಳ ತರುವಾಯ ಪ್ರಕರಣವನ್ನು ಸಿಐಡಿ ತನಿಖೆಗೆ ಸರ್ಕಾರ ವಹಿಸಿದೆ ಎನ್ನಲಾಗಿದೆ.

ಏನಿದು ಪ್ರಕರಣ?

ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಎಫ್​ಐಆರ್ ದಾಖಲಾಗಿತ್ತು. ಕೋವಿಡ್‌ ನಿರ್ವಹಣೆ ಸಂದರ್ಭದಲ್ಲಿ 167 ಕೋಟಿ ರೂ. ಪ್ರಮಾಣದ ಅಕ್ರಮ (Covid Scam) ಎಸಗಲಾಗಿದೆ ಎಂದು ಆರೋಪಿಸಿ ಹಲವು ಅಧಿಕಾರಿಗಳ ಮೇಲೆ ವೈದ್ಯಕೀಯ ಶಿಕ್ಷಣ ಇಲಾಖೆ ಮುಖ್ಯ ಲೆಕ್ಕಾಧಿಕಾರಿ ಡಾ.ಎಂ.ವಿಷ್ಣುಪ್ರಸಾದ್ ಅವರು ದೂರು ನೀಡಿದ್ದರು. ವಿಷ್ಣುಪ್ರಸಾದ್‌ ಅವರ ದೂರು ಆಧರಿಸಿ ಬೆಂಗಳೂರಿನ ವಿಧಾನಸೌಧ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಐವರು ವೈದ್ಯರು, ಲ್ಯಾಗ್​ ಎಕ್ಸ್​ಪರ್ಟ್​​ ಕಂಪನಿ‌ ಹಾಗೂ ಜನಪ್ರತಿನಿಧಿಗಳ‌ ವಿರುದ್ಧ ಎಫ್​ಐಆರ್ ದಾಖಲಾಗಿತ್ತು.

ಈ ಬಗ್ಗೆ ರಾಜ್ಯ ಸರ್ಕಾರ ಪ್ರಕರಣದ ತನಿಖೆಗೆ SIT ರಚನೆ ಮಾಡಲು ಮುಂದಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಒಟ್ಟು 167 ಕೋಟಿಗೂ ಅಧಿಕ ಹಣ ಅಕ್ರಮ ಆರೋಪ ಕೇಳಿಬಂದಿದ್ದು, ಡಾ.ಗಿರೀಶ್, ಜಿ.ಪಿ.ರಘು, ​.ಮುನಿರಾಜ್, ಲಾಜ್ ಎಕ್ಸ್​ಪೋರ್ಟ್, ಪ್ರೂಡೆಂಟ್‌ ಮ್ಯಾನೆಜ್‌ಮೆಂಟ್‌ ಸಲೂಷನ್ಸ್ ಕಂಪನಿ ಸೇರಿದಂತೆ ಕೆಲ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಇದನ್ನೂ ಓದಿ: Deadly Virus: ಜೈವಿಕ ಪ್ರಯೋಗಾಲಯದಿಂದ ಕೋವಿಡ್-19ಕ್ಕಿಂತ 100 ಪಟ್ಟು ಹೆಚ್ಚು ಮಾರಕ ವೈರಸ್‌ಗಳು ನಾಪತ್ತೆ!