Cyclone Ditwah: ಸೈಕ್ಲೋನ್ ದಿತ್ವಾ ಪ್ರಭಾವ- ಇಂದು ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಮಳೆ, ಇನ್ನೂ 3 ದಿನ ತೀವ್ರ ಚಳಿ
ದಿತ್ವಾ ಚಂಡಮಾರುತದ (Cyclone Ditwah) ಪ್ರಭಾವದಿಂದ ಮುಂದಿನ ಮೂರು ದಿನಗಳ ಕಾಲ ಚಳಿಯ ವಾತಾವರಣ ಮುಂದುವರೆಯಲಿದೆ. ಬೆಂಗಳೂರಲ್ಲಿ ಗರಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಲಿದೆ ಎಂದು ಬೆಂಗಳೂರು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮೈಕೊರೆವ ಚಳಿಯೊಂದಿಗೆ ತುಂತುರು ಮಳೆ ಕೂಡ ಅಲ್ಲಲ್ಲಿ ಬೀಳುವುದು ಮುಂದುವರಿಯಲಿದೆ.
ದಿತ್ವಾ ಚಂಡಮಾರುತದ ಪ್ರಭಾವದಿಂದ ಚಳಿ, ಮಳೆ -
ಬೆಂಗಳೂರು, ಡಿ.1: ದಿತ್ವಾ ಚಂಡಮಾರುತದ (Cyclone Ditwah) ಪ್ರಭಾವದಿಂದ ಬೆಂಗಳೂರು (bengaluru) ನಗರದಲ್ಲಿ ವಿಪರೀತ ಅನಿಸುವಷ್ಟು ಚಳಿಯ (cold) ಅನುಭವ ಆಗುತ್ತಿದೆ. ನಿನ್ನೆ (ಭಾನುವಾರ) ದಾಖಲೆ ಚಳಿ ಕಂಡುಬಂತು. ಮುಂಜಾನೆ, ಸಂಜೆ ಅಲ್ಲದೇ ದಿನವಿಡಿಯೂ ಕಳೆದೆರಡು ದಿನದಿಂದ ಮೋಡ ತುಂಬಿದ್ದು, ಇವತ್ತೂ ಕೂಡಾ ಇದೇ ವಾತಾವರಣ ಕಂಡುಬಂದಿದೆ. ಮೈಕೊರೆವ ಚಳಿಯೊಂದಿಗೆ ತುಂತುರು ಮಳೆ ಕೂಡ ಅಲ್ಲಲ್ಲಿ ಬೀಳುತ್ತಿದೆ. ಈ ನಡುವೆ ಬೆಂಗಳೂರು (Bengaluru) ಸೇರಿದಂತೆ ಹಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆ (Karnataka weather) ಮಳೆಯ ಮುನ್ಸೂಚನೆ ನೀಡಿದೆ.
ದಿತ್ವಾ ಚಂಡಮಾರುತದ ಹಿನ್ನೆಲೆ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಹಗುರ ಮಳೆಯಾಗುವ (Light Rain) ಮುನ್ಸೂಚನೆ ನೀಡಿದೆ. ಜೊತೆಗೆ ಹಗಲಿನಲ್ಲಿ ಗರಿಷ್ಠ ಉಷ್ಣಾಂಶ ಗಣನೀಯವಾಗಿ ಇಳಿಮುಖವಾಗುವ ಸಾಧ್ಯತೆಯಿದೆ ಎಂದು ಹೇಳಿದೆ. ದಕ್ಷಿಣ ಒಳನಾಡು ಕರಾವಳಿ ಜಿಲ್ಲೆಗಳಿಗೆ ಹಗುರ ಮಳೆಯ ಮುನ್ಸೂಚನೆ ನೀಡಿದ್ದರೆ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ದಕ್ಷಿಣ ಕನ್ನಡ, ಉಡುಪಿಯ ಕೆಲವೆಡೆ ಸಾಧಾರಣ ಮಲೆಯಾಗಲಿದೆ ಎಂದು ತಿಳಿಸಿದೆ.
ಅಲ್ಲದೇ ಮುಂದಿನ ಮೂರು ದಿನಗಳ ಕಾಲ ಚಳಿಯ ವಾತಾವರಣ ಮುಂದುವರೆಯಲಿದೆ. ಬೆಂಗಳೂರಲ್ಲಿ ಗರಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಲಿದೆ ಎಂದು ಬೆಂಗಳೂರು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ದಿತ್ವಾ ಸೈಕ್ಲೋನ್ ಎಫೆಕ್ಟ್; ಈ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ
ತೀವ್ರ ಚಳಿಗಾಲದ ಕಾರಣ ನಾಗರಿಕರು ಆರೋಗ್ಯದ ದೃಷ್ಟಿಯಿಂದ ಎಚ್ಚರಿಕೆಯಾಗಿರಬೇಕು. ವಿಶೇಷವಾಗಿ ಮಕ್ಕಳು, ಹಿರಿಯರು ಮತ್ತು ಆರೋಗ್ಯ ಸಮಸ್ಯೆ ಇರುವವರು ಜಾಗರೂಕರಾಗಿರಬೇಕು. ಬೆಳಿಗ್ಗೆ ಹೊರಗೆ ಹೊರಡುವಾಗ ಸ್ವೆಟರ್ ಅಥವಾ ಜಾಕೆಟ್ ಧರಿಸಬೇಕು. ಬಿಸಿ ನೀರು, ಬಿಸಿ ಪಾನೀಯ ಸೇವಿಸಿ ತಂಪಿನಿಂದ ರಕ್ಷಣೆ ಪಡೆಯಬೇಕು. ರಾತ್ರಿ ವಾಹನ ಚಾಲನೆ ತಪ್ಪಿಸಿ, ಹಗಲು ಜಾಗರೂಕವಾಗಿ ವಾಹನ ಚಾಲನೆ ಮಾಡಬೇಕು. ಬಿಸಿನೀರು ಸ್ನಾನ ಉಚಿತ. ತಂಪಾದ, ಶೀತಕರ ಆಹಾರ ಸೇವನೆ ಬೇಡ ಎಂದು ತಜ್ಞರು ಸಲಹೆ ನೀಡಿದ್ದಾರೆ.