ಕುಕ್ಕೆಯಲ್ಲಿ ಆಶ್ಲೇಷ ಬಲಿ ಪೂಜೆ ದಿಟ್ಟಂ ಬದಲಾವಣೆಗೆ ವಿರೋಧ
ಪ್ರತ್ಯೇಕ ಸಂಕಲ್ಪಕ್ಕಾಗಿ ಒಬ್ಬೊಬ್ಬರಿಗೆ ಪ್ರತ್ಯೇಕವಾಗಿ ಮಾಡುತ್ತಿದ್ದಾಗ ಉಂಟಾಗುತ್ತಿದ್ದ ನೂಕು ನುಗ್ಗಲು, ತೊಂದರೆ ತಪ್ಪಿಸಲು ದೂರುಗಳು ಇದ್ದ ಕಾರಣ ಅದನ್ನಾಧರಿಸಿ ಸಾಮೂಹಿಕ ಸಂಕಲ್ಪದ ನಿರ್ಧಾರ ವನ್ನು ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಕೈಗೊಂಡಿದೆ. ಅದರಂತೆ ಪ್ರಸ್ತುತ ಆಶ್ಲೇಷ ಬಲಿ ಪೂಜೆ ನಡೆಯುವ ಸ್ಥಳದ ಸಾಮೂಹಿಕ ಸಂಕಲ್ಪ ಮಾಡಲಾಗುತ್ತಿದೆ.
-
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ(Kukke Shri Subramanya) ಕ್ಷೇತ್ರದಲ್ಲಿ ಆಶ್ಲೇಷ ಬಲಿ ಪೂಜೆಯ ದಿಟ್ಟಂ ಬದಲಾವಣೆ ಮಾಡಿರುವ ಕ್ಷೇತ್ರದ ಆಡಳಿತ ಸಮಿತಿಯ ನಿರ್ಧಾರದ ವಿರುದ್ಧ ಇದೀಗ ಅಸಮಾಧಾನ ವ್ಯಕ್ತವಾಗಿದ್ದು, ಹೋರಾಟ ನಡೆಸುವ ಬಗ್ಗೆ ಚರ್ಚೆಗಳು ಆರಂಭಗೊಂಡಿವೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಸಲಾಗುವ ಆಶ್ಲೇಷ ಬಲಿ ಪೂಜೆ, ನಾಗಪ್ರತಿಷ್ಠೆ ಮಾಡಿಸುವ ಭಕ್ತರಿಗೆ ಸಂಕಲ್ಪ ಮಂದಿರದಲ್ಲಿ ಪ್ರತ್ಯೇಕ (ಪೂಜೆ ಮಾಡಿಸುವವರಿಗೆ ಒಬ್ಬೊಬ್ಬರಂತೆ) ಸಂಕಲ್ಪ ಮಾಡಿಕೊಂಡು ಬರಲಾಗಿತ್ತು.
ಪ್ರತ್ಯೇಕ ಸಂಕಲ್ಪಕ್ಕಾಗಿ ಒಬ್ಬೊಬ್ಬರಿಗೆ ಪ್ರತ್ಯೇಕವಾಗಿ ಮಾಡುತ್ತಿದ್ದಾಗ ಉಂಟಾಗುತ್ತಿದ್ದ ನೂಕು ನುಗ್ಗಲು, ತೊಂದರೆ ತಪ್ಪಿಸಲು ದೂರುಗಳು ಇದ್ದ ಕಾರಣ ಅದನ್ನಾಧರಿಸಿ ಸಾಮೂಹಿಕ ಸಂಕಲ್ಪದ ನಿರ್ಧಾರವನ್ನು ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಕೈಗೊಂಡಿದೆ. ಅದರಂತೆ ಪ್ರಸ್ತುತ ಆಶ್ಲೇಷ ಬಲಿ ಪೂಜೆ ನಡೆಯುವ ಸ್ಥಳದ ಸಾಮೂಹಿಕ ಸಂಕಲ್ಪ ಮಾಡಲಾಗುತ್ತಿದೆ.
ಇದನ್ನೂ ಓದಿ: Kukke Subrahmanya Temple: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಿರುಷಷ್ಠಿ, ಅನ್ಯಧರ್ಮೀಯರಿಗೆ ಆಹ್ವಾನಕ್ಕೆ ವಿರೋಧ
ದಿಟ್ಟಂ ಬದಲಾವಣೆಗೆ ವಿರೋಧ: ಕ್ಷೇತ್ರದಲ್ಲಿ ಈ ಹಿಂದಿನಿಂದ ನಡೆದು ಕೊಂಡು ಬರಲಾಗಿದ್ದ ಸಂಕಲ್ಪದಲ್ಲಿ ಬದಲಾವಣೆ ಮಾಡಿರುವ ಬಗ್ಗೆ ಇದೀಗ ವಿರೋಧ ವ್ಯಕ್ತವಾಗಿದೆ. ಆಶ್ಲೇಷ ಪೂಜೆ ಬಲಿ ಪೂಜೆ ನಡೆಯುವ ಸಂದರ್ಭದಲ್ಲಿ ಮುಂಚಿತವಾಗಿ ಸಂಕಲ್ಪ ಮಾಡಿ ಪೂಜೆಗೆ ಕುಳಿತುಕೊಳ್ಳುವ ಈ ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿ ತಕ್ಷಣ ನಿಲ್ಲಿಸಿರುವುದು ಧಾರ್ಮಿಕ ನಂಬಿಕೆಗೆ ಮತ್ತು ಹಿಂದೂ ಪದ್ಧತಿಯಲ್ಲಿರುವ ಆಚರಣೆಗಳನ್ನು ಮೊಟಕುಗೊಳಿಸುವ ರೀತಿಯಲ್ಲಿ ಅಧಿಕಾರಿಗಳ ಪಿತೂರಿ ನಡೆದಿದೆ ಎಂದು ಆರೋಪ ಕೇಳಿ ಬಂದಿದೆ.
![]()
ಆಶ್ಲೇಷ ಬಲಿ ಪೂಜೆ ಮಾಡಿಸುವಾಗ ಪ್ರತ್ಯೇಕ ಸಂಕಲ್ಪ ಅತ್ಯಗತ್ಯ. ಯಾಕೆಂದರೆ ಪ್ರತಿಯೊಬ್ಬರಿಗೂ ಬೇರೆ ಬೇರೆ ಕಾರಣಗಳಿರುತ್ತವೆ. ಎಲ್ಲರಿಗೂ ಒಂದೇ ಸಂಕಲ್ಪ ಹೇಗೆ ಸಾಧ್ಯ? ಆದ್ದರಿಂದ ಆಶ್ಲೇಷ ಬಲಿ ಪೂಜೆಯಲ್ಲಿ ಪ್ರತ್ಯೇಕ ಸಂಕಲ್ಪವನ್ನು ತಕ್ಷಣ ಮರು ಜಾರಿ ಮಾಡ ಬೇಕು. ದೇವಾಲಯದ ದಿಟ್ಟಂಗೆ ವಿರುದ್ಧ ವಾದ ಸಾಮೂಹಿಕ ಸಂಕಲ್ಪ ಪದ್ಧತಿಯನ್ನು ಕೂಡಲೇ ಕೈಬಿಡಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು.
- ಪ್ರಸನ್ನ ದರ್ಬೆ, ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ