ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನೋವೈಜ್ಞಾನಿಕ ಕೌನ್ಸೆಲಿಂಗ್‌ ವ್ಯವಸ್ಥೆಗೆ ಡಾ. ಸುಧೀರ್ ಕೆ.ವಿ.ಗೆ ಭಾರತೀಯ ಪೇಟೆಂಟ್

Ujire News: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ), ಉಜಿರೆಯ ಮನೋವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸುಧೀರ್ ಕೆ.ವಿ. ಅವರು “A Psychological Counselling Support System Based on Emotional Pattern Recognition” ಎಂಬ ಆವಿಷ್ಕಾರಕ್ಕೆ ಭಾರತೀಯ ಪೇಟೆಂಟ್ ಪಡೆದಿದ್ದಾರೆ.

ಮನೋವೈಜ್ಞಾನಿಕ ಕೌನ್ಸೆಲಿಂಗ್‌ ವ್ಯವಸ್ಥೆಗೆ ಡಾ. ಸುಧೀರ್‌ಗೆ ಪೇಟೆಂಟ್

-

Profile
Siddalinga Swamy Sep 23, 2026 11:17 PM

ಉಜಿರೆ, ಸೆ.23: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ), ಉಜಿರೆಯ ಮನೋವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸುಧೀರ್ ಕೆ.ವಿ. ಅವರು “A Psychological Counselling Support System Based on Emotional Pattern Recognition” ಎಂಬ ಆವಿಷ್ಕಾರಕ್ಕೆ ಭಾರತೀಯ ಪೇಟೆಂಟ್ ಪಡೆದಿದ್ದಾರೆ. ವ್ಯಕ್ತಿಯ ಭಾವನಾತ್ಮಕ ಮಾದರಿಗಳನ್ನು ಗುರುತಿಸಿ, ಅವುಗಳ ಆಧಾರದ ಮೇಲೆ ಮಾನಸಿಕ ಸ್ಥಿತಿಯನ್ನು ಅರ್ಥೈಸಿ ಸೂಕ್ತವಾದ ಕೌನ್ಸೆಲಿಂಗ್ ಬೆಂಬಲವನ್ನು ಒದಗಿಸುವ ವ್ಯವಸ್ಥೆಯನ್ನು ಈ ಆವಿಷ್ಕಾರ ಒಳಗೊಂಡಿದೆ.

ಮನುಷ್ಯನ ಭಾವನೆಗಳು, ವರ್ತನೆಯ ಮಾದರಿಗಳು ಹಾಗೂ ಮಾನಸಿಕ ಸ್ಥಿತಿಗೆ ಸಂಬಂಧಿಸಿದ ಮಾಹಿತಿಯನ್ನು ಪರಿಗಣಿಸಿ, ಕೌನ್ಸೆಲಿಂಗ್ ಪ್ರಕ್ರಿಯೆಗೆ ಅಗತ್ಯವಾದ ಬೆಂಬಲ ಒದಗಿಸುವ ತಂತ್ರಜ್ಞಾನಾಧಾರಿತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಪ್ರಸ್ತುತ ದಿನಗಳಲ್ಲಿ ಮಾನಸಿಕ ಆರೋಗ್ಯ ಹಾಗೂ ಭಾವನಾತ್ಮಕ ಯೋಗಕ್ಷೇಮದ ಕುರಿತು ಹೆಚ್ಚಿನ ಗಮನ ಹರಿಸಲಾಗುತ್ತಿದ್ದು, ತಂತ್ರಜ್ಞಾನವನ್ನು ಮನೋವೈಜ್ಞಾನಿಕ ಕ್ಷೇತ್ರದೊಂದಿಗೆ ಸಂಯೋಜಿಸುವ ಪ್ರಯತ್ನಗಳು ಮಹತ್ವ ಪಡೆದುಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಡಾ. ಸುಧೀರ್ ಕೆ.ವಿ. ಅವರ ಆವಿಷ್ಕಾರವು ಭಾವನಾತ್ಮಕ ಮಾದರಿ ಗುರುತಿಸುವಿಕೆಯ ಮೂಲಕ ಕೌನ್ಸೆಲಿಂಗ್ ಸೇವೆಗಳಿಗೆ ತಾಂತ್ರಿಕ ಬೆಂಬಲ ಒದಗಿಸುವ ನಿಟ್ಟಿನಲ್ಲಿ ಮಹತ್ವದ ಪ್ರಯತ್ನವಾಗಿದೆ.

ಗ್ರಾಹಕರಿಗೆ ಸಿಹಿ ಸುದ್ದಿ; ಸೆ.27ರ ಭಾನುವಾರ ಕೂಡ ಇರಲಿದೆ ಬ್ಯಾಂಕಿಂಗ್ ಸೇವೆ!

ಡಾ. ಸುಧೀರ್ ಕೆ.ವಿ. ಅವರ ಈ ಸಾಧನೆಯು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಂಶೋಧನೆ ಮತ್ತು ಹೊಸ ಆವಿಷ್ಕಾರಗಳ ಕ್ಷೇತ್ರದಲ್ಲಿನ ಕೊಡುಗೆಯನ್ನು ಮತ್ತಷ್ಟು ಬಲಪಡಿಸಿದೆ. ಅವರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಮನೋವಿಜ್ಞಾನ ವಿಭಾಗದ ಅಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.