Missing Case: ನಾಪತ್ತೆಯಾಗಿದ್ದ ಮುಸ್ಲಿಂ ಯುವತಿ ಹಿಂದೂ ಯುವಕನ ಪತ್ನಿಯಾಗಿ ವಾಪಸು
Missing Case: ನಾಪತ್ತೆಯಾಗಿದ್ದ ಮುಸ್ಲಿಂ ಯುವತಿ ಹಿಂದೂ ಯುವಕನ ಪತ್ನಿಯಾಗಿ ವಾಪಸು
ಹರೀಶ್ ಕೇರ
January 11, 2025
ಮಂಗಳೂರು: ನಾಪತ್ತೆಯಾಗಿದ್ದ (Missing Case) ಮುಸ್ಲಿಂ ಯುವತಿ ಹಿಂದು ಯುವಕನ ಜತೆ ಮದುವೆಯಾಗಿ ಮರಳಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ (Dakshina Kannada news) ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದಲ್ಲಿ ನಡೆದಿದೆ. ಸುಹಾನಾ ಎಂಬ ಯುವತಿ ಹರೀಶ್ ಗೌಡ ಎಂಬ ಯುವಕನನ್ನು ಪ್ರೀತಿಸಿ (Love Marriage) ಮದುವೆಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಯುವಕ ಹರೀಶ್ ಗೌಡನನ್ನು ಪ್ರೀತಿಸಿ ಸುಹಾನಾ ಮದುಮೆ ಮಾಡಿಕೊಂಡಿದ್ದಾರೆ. ಸ್ವಇಚ್ಛೆಯಿಂದ ಮದುವೆ ಆಗಿರುವುದಾಗಿ ಯುವತಿ ಹೇಳಿದ್ದಾಳೆ. ಇವರಿಬ್ಬರೂ ಪ್ರೀತಿಸಿ ಹಿಂದೂ ಸಂಪ್ರದಾಯದಂತೆ ಕೊತ್ರೊಟ್ಟು ಸತ್ಯನಾರಾಯಣ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ. ಬಳಿಕ ಜೋಡಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಬಂದಿದ್ದಾರೆ.
ಫೇಸ್ಬುಕ್ನಲ್ಲಿ ಇಬ್ಬರೂ ಪರಿಚಯವಾಗಿ ಪ್ರೀತಿ ಮಾಡಿದ್ದರು. ಬಳಿಕ ಕಂಪ್ಯೂಟರ್ ಕ್ಲಾಸ್ಗೆಂದು ಹೋಗಿದ್ದ ಯುವತಿ ನಾಪತ್ತೆ ಆಗಿದ್ದಳು. ಯುವತಿ ಮನೆಯವರು ಮೂಡುಬಿದಿರೆ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಿಸಿದ್ದರು.
ಮದ್ಯ ಸೇವಿಸಿ ಕಿರುಕುಳ ಕೊಡುತ್ತಿದ್ದ ತಮ್ಮನನ್ನು ಕೊಂದ ಅಣ್ಣ
ಬೆಂಗಳೂರು: ನಿತ್ಯ ಮದ್ಯ ಸೇವಿಸಿ ಮನೆಗೆ ಬಂದು ತಾಯಿ ಜತೆಗೆ ಜಗಳವಾಡುತ್ತಿದ್ದ ತಮ್ಮನನ್ನು ಅಣ್ಣನೇ ಚಾಕುವಿನಿಂದ ಮನಬಂದಂತೆ ಇರಿದು ಹತ್ಯೆ ಮಾಡಿರುವ ಘಟನೆ ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೆ.ಜಿ.ಹಳ್ಳಿ ಅನ್ವರ್ ಲೇಔಟ್ ನಿವಾಸಿ ಅಕ್ರಂ ಬೇಗ್ (28) ಕೊಲೆಯಾದ ದುರ್ದೈವಿ.
ಜ.8ರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಮೃತನ ತಾಯಿ ಅಮೀನ್ ಬೇಗಂ ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಿ, ಆರೋಪಿ ಅಕ್ಟರ್ ಬೇಗ್‌ನನ್ನು (30) ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜ.8ರಂದು ರಾತ್ರಿ ಸುಮಾರು 9.30ಕ್ಕೆ ಅಕ್ರಂ ಬೇಗ್ ಕಂಠಪೂರ್ತಿ ಮದ್ಯ ಸೇವಿಸಿ ಮನೆಗೆ ಬಂದು ತಾಯಿ ಅಮೀನ್ ಬೇಗಂ ಜತೆಗೆ ಜಗಳ ಮಾಡುತ್ತಿದ್ದ. ರಾತ್ರಿ 10.30ಕ್ಕೆ ಸಹೋದರ ಆಕ್ಟರ್ ಬೇಗ್ ಮನೆಗೆ ಬಂದಿದ್ದು, ಸುಮ್ಮನಿರುವಂತೆ ಅಕ್ರಂ ಬೇಗ್‌ಗೆ ಹೇಳಿದ್ದಾನೆ. ಆದರೂ ಆಕ್ರಂ ಬೇಗ್ ತಾಯಿ ಜತೆಗೆ ಜಗಳ ಮುಂದುವರೆಸಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದಾಗ ರೊಚ್ಚಿಗೆದ್ದ ಆಕ್ಟರ್ ಬೇಗ್ ಅಡುಗೆ ಮನೆಯಲ್ಲಿದ್ದ ಚಾಕು ತೆಗೆದು ಅಕ್ರಂ ಬೇಗ್ ಮೇಲೆ ಮನಬಂದಂತೆ ಇರಿದಿದ್ದಾನೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡು ಅಕ್ರಂ ಬೇಗ್ ಕುಸಿದು ಬಿದ್ದಿದ್ದಾನೆ.
ಈ ವೇಳೆ ತಾಯಿ ಆಸ್ಪತ್ರೆಗೆ ದಾಖಲಿಸುವಂತೆ ಕೇಳಿಕೊಂಡರೂ ಆಕ್ಟರ್ ಬೇಗ್ ಸುಮ್ಮನಾಗಿದ್ದಾನೆ. ಬಳಿಕ ಅಮೀನ್ ಬೇಗಂ ತನ್ನ ಪುತ್ರಿ ಹಾಗೂ ಸಂಬಂಧಿಕರಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡು ತಡರಾತ್ರಿ 1.30ಕ್ಕೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಕಿರಿಯ ಪುತ್ರ ಅಕ್ರಂ ಬೇಗ್‌ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಅಕ್ರಂ ಬೇಗ್ ಮೃತಪಟ್ಟಿದ್ದಾನೆ. ಈ ಸಂಬಂಧ ಅಮ್ಮಿನ್ ಬೇಗಂ ನೀಡಿದ ದೂರಿನ ಮೇರೆಗೆ ಕೆ.ಜಿ.ಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಅಕ್ಟರ್ ಬೇಗ್‌ನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: MUDA Case: ಜೆಡಿಎಸ್ ಶಾಸಕ ಜಿಟಿ ದೇವೇಗೌಡರ ಮೇಲೆ ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು