ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Davanagere news: ಕೋಟಿ ಮೌಲ್ಯದ ಆಸ್ತಿಪಾಸ್ತಿ ತೊರೆದು ಸನ್ಯಾಸ ಸ್ವೀಕರಿಸಿದ ಇಂಜಿನಿಯರಿಂಗ್‌ ವಿದ್ಯಾರ್ಥಿನಿ

ದಾವಣಗೆರೆಯ BIET ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಟಾಪರ್ ಸ್ಟೂಡೆಂಟ್ ಆಗಿದ್ದ ಆಂಚಲ್‌ಕುಮಾರಿ, ಇತ್ತೀಚೆಗೆ ಆಧ್ಯಾತ್ಮದ ಕಡೆಗೆ ಒಲವು ಹೊಂದಿದ್ದರು. ಸಂಸಾರದ ಸುಖಕ್ಕಿಂತ ಸನ್ಯಾಸತ್ವದ ಸುಖ ಶಾಶ್ವತವಾದುದು ಎಂದು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಆಂಚಲ್ ಅವರು ದಾವಣಗೆರೆ ಚೌಕಿಪೇಟೆಯ ಚಿನ್ನದ ವ್ಯಾಪಾರಿ ಮುಕೇಶ್ ಹಾಗೂ ಸುನಿತಾ ಅವರ ಪುತ್ರಿಯಾಗಿದ್ದಾರೆ.

ಆಸ್ತಿಪಾಸ್ತಿ ತೊರೆದು ಸನ್ಯಾಸ ಸ್ವೀಕರಿಸಿದ ಇಂಜಿನಿಯರಿಂಗ್‌ ವಿದ್ಯಾರ್ಥಿನಿ

ಸನ್ಯಾಸ ಸ್ವೀಕರಿಸಿದ ಆಂಚಲ್‌ಕುಮಾರಿ -

ಹರೀಶ್‌ ಕೇರ
ಹರೀಶ್‌ ಕೇರ Feb 6, 2026 1:45 PM

ದಾವಣಗೆರೆ, ಫೆ.06: ಇತ್ತೀಚೆಗೆ ಜೈನ ಸಮುದಾಯದ (Jain community) ಹೆಚ್ಚು ಹೆಚ್ಚು ಯುವಜನತೆ ಸಂಸಾರ ಬಿಟ್ಟುಕೊಟ್ಟು ಸನ್ಯಾಸದ (monk) ಹಾದಿ ತುಳಿಯುತ್ತಿದ್ದಾರೆ. ದಾವಣಗೆರೆಯ (Davanagere news) ಪ್ರತಿಭಾನ್ವಿತ ಇಂಜಿನಿಯರಿಂಗ್ ವಿದ್ಯಾರ್ಥಿನಿ (engineering student) ಆಂಚಲ್ ಕುಮಾರಿ ಇಂದು ತಮ್ಮ 26ನೇ ವಯಸ್ಸಿಗೆ ಜೈನ ಸನ್ಯಾಸಿ ದೀಕ್ಷೆ ಸ್ವೀಕರಿಸುತ್ತಿದ್ದಾರೆ.

ದಾವಣಗೆರೆಯ BIET ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಟಾಪರ್ ಸ್ಟೂಡೆಂಟ್ ಆಗಿದ್ದ ಆಂಚಲ್‌ಕುಮಾರಿ, ಇತ್ತೀಚೆಗೆ ಆಧ್ಯಾತ್ಮದ ಕಡೆಗೆ ಒಲವು ಹೊಂದಿದ್ದರು. ಸಂಸಾರದ ಸುಖಕ್ಕಿಂತ ಸನ್ಯಾಸತ್ವದ ಸುಖ ಶಾಶ್ವತವಾದುದು ಎಂದು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಆಂಚಲ್ ಅವರು ದಾವಣಗೆರೆ ಚೌಕಿಪೇಟೆಯ ಚಿನ್ನದ ವ್ಯಾಪಾರಿ ಮುಕೇಶ್ ಹಾಗೂ ಸುನಿತಾ ಅವರ ಪುತ್ರಿಯಾಗಿದ್ದಾರೆ. ಮುಕೇಶ್ ಅವರಿಗೆ ಒಟ್ಟು ಮೂವರು ಪುತ್ರಿಯರಿದ್ದು, ಮೊದಲ ಇಬ್ಬರಿಗೆ ಮದುವೆಯಾಗಿದೆ. ಇದೀಗ ಆಂಚಲ್, ತಂದೆ-ತಾಯಿ, ಆಸ್ತಿ ಪಾಸ್ತಿ ತೊರೆದು ಇಂದು ಸನ್ಯಾಸ ದೀಕ್ಷೆ ಸ್ವೀಕರಿಸಿದ್ದಾರೆ.

ಗುಜರಾತ್‌ನ ಸೂರತ್‌ನಲ್ಲಿ ಜೈನ ದೀಕ್ಷೆ

ಆಂಚಲ್ ಕುಮಾರಿ ಇಂದು ಗುಜರಾತ್‌ನ ಸೂರತ್‌ನಲ್ಲಿ ಕುಲಚಂದ್ರ ಸುರೇಶ್ವರಜೀ ಗುರುಗಳಿಂದ ಸನ್ಯಾಸತ್ವ ದೀಕ್ಷೆ ಸ್ವೀಕರಿಸುತ್ತಿದ್ದಾರೆ. ಆಂಚಲ್ ಕುಮಾರಿ ಇತ್ತೀಚೆಗೆ ಆಧ್ಯಾತ್ಮದತ್ತ ಹೆಚ್ಚು ಒಲವು ತೋರಿಸಿದ್ದರು. ಸನ್ಯಾಸಿಗಳ ನಗುವನ್ನು ನೋಡಿ ಸನ್ಯಾಸತ್ವದ ಸುಖವೇ ಆನಂದಕರವಾದುದು ಎಂದು ತೀರ್ಮಾನಿಸಿ ಈ ದಿಟ್ಟ ನಿರ್ಧಾರವನ್ನು ಕೈಗೊಂಡಿದ್ದಾರೆ.

Jain Diksha: 100 ಕೋಟಿ ರೂ. ಆಸ್ತಿ ತೊರೆದು ಜೈನ ಸನ್ಯಾಸ ದೀಕ್ಷೆ ಪಡೆದ ಯಾದಗಿರಿ ಉದ್ಯಮಿ!