ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jain Diksha: 100 ಕೋಟಿ ರೂ. ಆಸ್ತಿ ತೊರೆದು ಜೈನ ಸನ್ಯಾಸ ದೀಕ್ಷೆ ಪಡೆದ ಯಾದಗಿರಿ ಉದ್ಯಮಿ!

Jain Diksha: ಯಾದಗಿರಿ ತಾಲೂಕಿನ ಸೈದಾಪುರ ಪಟ್ಟಣದ ನಿವಾಸಿ, ಉದ್ಯಮಿ ದಿಲೀಪ್ ಕುಮಾರ್ ದೋಖಾ ಎಂಬುವವರು ಜೈನ್ ದೀಕ್ಷೆ ಪಡೆದಿದ್ದಾರೆ. ಇವರು ಜೈನ ದೀಕ್ಷೆ ಪಡೆದಿದ್ದಕ್ಕೆ ಕುಟುಂಬಸ್ಥರು ಹಾಗೂ ಸಂಬಂಧಿಕರಿಂದ ಕೊನೆಯದಾಗಿ ಅದ್ಧೂರಿಯಾಗಿ ಮೆರವಣಿಗೆ ಮಾಡುವ ಮೂಲಕ ಬೀಳ್ಕೊಡುಗೆ ನೀಡಲಾಗಿದೆ.

100 ಕೋಟಿ ರೂ. ಆಸ್ತಿ ತೊರೆದು ಜೈನ ಸನ್ಯಾಸ ದೀಕ್ಷೆ ಪಡೆದ ಯಾದಗಿರಿ ಉದ್ಯಮಿ!

Profile Prabhakara R May 22, 2025 5:59 PM

ಯಾದಗಿರಿ: ಕಳೆದ ವರ್ಷ ನಗರದ ಜೈನ್ ಬಡಾವಣೆಯ 26 ವರ್ಷದ ನಿಖಿತಾ ಎಂಬ ಯುವತಿ ಜೈನ ದೀಕ್ಷೆ ಪಡೆದಿದ್ದಳು. ಇದರ ಬೆನ್ನಲ್ಲೇ ಈಗ ಜಿಲ್ಲೆಯ ಮತ್ತೊಬ್ಬ ವ್ಯಕ್ತಿ, 100 ಕೋಟಿ ರೂ. ಆಸ್ತಿ, ಮೂವರು ಹೆಣ್ಣು ಮಕ್ಕಳು ಮತ್ತು ಪತ್ನಿಯನ್ನು ತೊರೆದು ಜೈನ ಸನ್ಯಾಸ ದೀಕ್ಷೆ ಪಡೆದಿದ್ದಾರೆ. ಯಾದಗಿರಿ ತಾಲೂಕಿನ ಸೈದಾಪುರ ಪಟ್ಟಣದ ನಿವಾಸಿ ದಿಲೀಪ್ ಕುಮಾರ್ ದೋಖಾ ಜೈನ್ ದೀಕ್ಷೆ ಪಡೆದ ಉದ್ಯಮಿ. ಇವರು ನೂರು ಕೋಟಿ ಆಸ್ತಿ, ಲೌಕಿಕ ಸುಖ-ಭೋಗಗಳನ್ನು ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದ್ದಾರೆ.

ದಿಲೀಪ್ ಕುಮಾರ್ ದೋಖಾ ಅವರು ಕಳೆದ 12 ವರ್ಷಗಳಿಂದ ಅಮೆರಿಕದಲ್ಲಿ ಮೆಡಿಸಿನ್ ಉತ್ಪಾದನಾ ವ್ಯವಹಾರ ಮಾಡುತ್ತಿದ್ದರು. ಬೆಂಗಳೂರಿನಲ್ಲೂ ಆಸ್ತಿ ಹೊಂದಿದ್ದಾರೆ. ಇವರಿಗೆ ಮದುವೆ ಕೂಡ ಆಗಿದ್ದು, ಪತ್ನಿ, ಮೂವರು ಹೆಣ್ಣು ಮಕ್ಕಳು ಇದ್ದಾರೆ. ಇದೀಗ ಪತ್ನಿಯನ್ನು ಒಬ್ಬಂಟಿಯಾಗಿ ಬಿಟ್ಟು ಜೈನ ಸನ್ಯಾಸಿಯಾಗಿದ್ದಾರೆ.

55 ವರ್ಷದ ದಿಲೀಪ್ ಕುಮಾರ್ ದೋಖಾ ಅವರು 14 ವರ್ಷದ ವಯಸ್ಸಿನಲ್ಲೇ ಜೈನ ದೀಕ್ಷೆ ಪಡೆಯಲು ಹೋಗಿದ್ದರು. ಅದರೆ ಪೋಷಕರು ಬೇಡ ಅಂದಿದ್ದಕ್ಕೆ ಮನಸ್ಸು ಬದಲಿಸಿದ್ದರು. ಆದರೆ ಇದೀಗ ಜೈನ ದೀಕ್ಷೆ ಪಡೆದುಕೊಂಡಿದ್ದಾರೆ. ಇನ್ನು ಇವರು ಜೈನ ದೀಕ್ಷೆ ಪಡೆದಿದ್ದಕ್ಕೆ ಕುಟುಂಬಸ್ಥರು ಹಾಗೂ ಸಂಬಂಧಿಕರಿಂದ ಕೊನೆಯದಾಗಿ ಅದ್ಧೂರಿಯಾಗಿ ಮೆರವಣಿಗೆ ಮಾಡುವ ಮೂಲಕ ಬೀಳ್ಕೊಡುಗೆ ನೀಡಲಾಗಿದೆ. ಸೈದಾಪುರ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಾರೋಟಿದಲ್ಲಿ ಮೆರವಣಿಗೆ ಮಾಡಲಾಗಿದೆ.

ಈ ಸುದ್ದಿಯನ್ನೂ ಓದಿ | Roopa Gururaj Column: ನಮಗೆ ಮುಳುವಾಗುವ ನಮ್ಮ ಕೋಪ

ಕಠಿಣ ಹಾದಿಯಲ್ಲಿ ಸಾಗಲು ಮುಂದಾಗಿರುವ ದಿಲೀಪ್ ಕುಮಾರ್ ದೋಖಾ ಅವರ ಪತ್ನಿ ಲೀಲಾಭಾಯಿ ಪ್ರತಿಕ್ರಿಯಿಸಿ, ಇನ್ಮುಂದೆ ನನ್ನ ಪತಿ ಐಷಾರಾಮಿ ಕಾರು ಬಿಟ್ಟು ನಡೆದುಕೊಂಡೇ ಓಡಾಡಬೇಕು, ಬರಿಗಾಲಲ್ಲಿ ಊರಿಂದ ಊರಿಗೆ ನಡೆದುಕೊಂಡು ಹೋಗಬೇಕು. ತಲೆ ಕೂದಲು ಕಿತ್ತುಕೊಳ್ಳಬೇಕು, ಬಿಳಿ ಬಟ್ಟೆ ಮಾತ್ರ ಧರಿಸಬೇಕು‌‌. ಮನೆ ಮನೆಗೆ ಹೋಗಿ ಭಿಕ್ಷೆ ಬೇಡಿಕೊಂಡು ಊಟ ಮಾಡಬೇಕು. ಬೇಡ ಅಂದ್ರೆ ನನ್ನುನ್ನು ಒಬ್ಬಂಟಿಯಾಗಿ ಬಿಟ್ಟು ಹೊರಟಿದ್ದಾರೆಂದು ಕಣ್ಣೀರು ಹಾಕಿದ್ದಾರೆ.