Hubballi News: ಒಂದೇ ತಿಂಗಳಲ್ಲಿ 4.48 ದಶಲಕ್ಷ ಟನ್ ಸರಕು ಸಾಗಣೆ: ನೈಋತ್ಯ ರೈಲ್ವೆ 805.70 ಕೋಟಿ ರೂ. ಆಗಸ್ಟ್ ಗಳಿಕೆ
2026-27ನೇ ಸಾಲಿನ ಆಗಸ್ಟ್ ಅಂತ್ಯದವರೆಗೆ ಒಟ್ಟು ಸರಕು ಸಾಗಣೆ 21.67 JUಗೆ ತಲುಪಿದ್ದು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ 5.8% ರಷ್ಟು ಹೆಚ್ಚಳವಾಗಿದೆ. ಈ ದಾಖಲೆಯ ಸರಕು ಸಾಗಣೆಗೆ ಇಂಧನ ಮತ್ತು ಭಾರಿ ಕೈಗಾರಿಕಾ ಕಚ್ಚಾ ವಸ್ತುಗಳ ಸಾಗಣೆಯಲ್ಲಿನ ಗಣನೀಯ ಏರಿಕೆ ಪ್ರಮುಖ ಕಾರಣ ವಾಗಿದೆ.
-
ಹುಬ್ಬಳ್ಳಿ: ಆಗಸ್ಟ್ 2026ರಲ್ಲಿ ನೈಋತ್ಯ ರೈಲ್ವೆ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದ್ದು, ದಾಖಲೆ ಮಟ್ಟದ ಸರಕು ಸಾಗಣೆ ಹಾಗೂ ಪ್ರಮುಖ ಆದಾಯ ವಿಭಾಗಗಳಲ್ಲಿ ನಿರಂತರ ಬೆಳವಣಿಗೆ ಯನ್ನು ದಾಖಲಿಸಿದೆ. ನೈಋತ್ಯ ರೈಲ್ವೆಯ ಸ್ಥಾಪನೆಯ ನಂತರದ ಆಗಸ್ಟ್ ತಿಂಗಳಲ್ಲೇ ಅತಿ ಹೆಚ್ಚಿನ ಪ್ರಮಾಣದ ಸರಕು ಸಾಗಣೆಯನ್ನು ದಾಖಲಿಸಲಾಗಿದೆ. ಆಗಸ್ಟ್ 2026ರಲ್ಲಿ ಒಟ್ಟು 4.48 ದಶಲಕ್ಷ ಟನ್ ಸರಕನ್ನು ಸಾಗಿಸಲಾಗಿದ್ದು, ಹಿಂದಿನ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಸಿದರೆ 6.3% ರಷ್ಟು ಬೆಳವಣಿಗೆ ಸಾಧಿಸಲಾಗಿದೆ.
ಇದನ್ನೂ ಓದಿ: Dharma Reservoir: ಮಳಗಿ ಧರ್ಮಾ ಡ್ಯಾಂ ಅಸ್ತಿತ್ವಕ್ಕೆ ಧಕ್ಕೆ; ತೂಬು, ಕಾಲುವೆಗಳ ದುರಸ್ತಿಗೆ ರೈತರ ಆಗ್ರಹ
ಇದರೊಂದಿಗೆ, 2026-27ನೇ ಸಾಲಿನ ಆಗಸ್ಟ್ ಅಂತ್ಯದವರೆಗೆ ಒಟ್ಟು ಸರಕು ಸಾಗಣೆ 21.67 JUಗೆ ತಲುಪಿದ್ದು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ 5.8% ರಷ್ಟು ಹೆಚ್ಚಳವಾಗಿದೆ. ಈ ದಾಖಲೆಯ ಸರಕು ಸಾಗಣೆಗೆ ಇಂಧನ ಮತ್ತು ಭಾರಿ ಕೈಗಾರಿಕಾ ಕಚ್ಚಾ ವಸ್ತುಗಳ ಸಾಗಣೆಯಲ್ಲಿನ ಗಣನೀಯ ಏರಿಕೆ ಪ್ರಮುಖ ಕಾರಣವಾಗಿದೆ.
ಆಗಸ್ಟ್ ನಲ್ಲಿ ಕಲ್ಲಿದ್ದಲು ಸಾಗಣೆಯು 37.4% ರಷ್ಟು ಹೆಚ್ಚಳ ಕಂಡು 1.03 ಎಂಟಿಗೆ ತಲುಪಿದೆ. ಹಿಂದಿನ ವರ್ಷದ ಆಗಸ್ಟ್‌ನಲ್ಲಿ ಇದು 0.75 ಆಗಿತ್ತು. ಉಕ್ಕಿನ ಉತ್ಪನ್ನಗಳ ಸಾಗಣೆಯೂ 18.1% ರಷ್ಟು ಹೆಚ್ಚಳ ಕಂಡು, 0.94 JUಯಿಂದ 1.11 ಎಂಟಿಗೆ ಏರಿಕೆಯಾಗಿದೆ. ಸಿಮೆಂಟ್ ಸಾಗಣೆಯಲ್ಲಿ 25% ರಷ್ಟು, ಕಂಟೈನರ್ ಸಾಗಣೆಯಲ್ಲಿ 13.6% ರಷ್ಟು ಹಾಗೂ ಖನಿಜ ತೈಲ ಸಾಗಣೆಯಲ್ಲಿ 6.9% ರಷ್ಟು ಬೆಳವಣಿಗೆ ದಾಖಲಾಗಿದೆ.