Dharwad News: ಆನ್‌ಲೈನ್ ಗೇಮ್‌ನಲ್ಲಿ 3 ಲಕ್ಷ ನಷ್ಟ; ಫೈನಾನ್ಸ್ ಕಂಪನಿಗೆ ಹಣ ಕಟ್ಟಲಾಗದೆ ಯುವಕ ಆತ್ಮಹತ್ಯೆ
ಧಾರವಾಡ ತಾಲೂಕಿನಲ್ಲಿ ಫೈನಾನ್ಸ್ ಹಣ ಕಲೆಕ್ಷನ್ ಮಾಡುವ ಯುವಕನೊಬ್ಬ, ಆನ್‌ಲೈನ್ ಗೇಮ್ ಚಟಕ್ಕೆ ಬಿದಿದ್ದ. ಫೈನಾನ್ಸ್ ಹಣವನ್ನು ಆನ್‌ಲೈನ್‌ಗೆ ಗೇಮ್‌ಗೆ ಬಳಸಿಕೊಂಡು ನಷ್ಟ ಅನುಭವಿಸಿದ್ದ. ಹೀಗಾಗಿ ಹಣವನ್ನು ವಾಪಸ್ ಕಟ್ಟಲಾಗದೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
-
ಧಾರವಾಡ, ಡಿ.7: ಫೈನಾನ್ಸ್‌ಗೆ ಕಟ್ಟಬೇಕಿದ್ದ 3 ಲಕ್ಷಕ್ಕೂ ಹೆಚ್ಚು ಹಣವನ್ನು ಆನ್‌ಲೈನ್ ಗೇಮ್‌ಗೆ ಬಳಸಿಕೊಂಡು ನಷ್ಟ ಅನುಭವಿಸಿದ್ದ ಯುವಕ, ಬಳಿಕ ದುಡ್ಡು ವಾಪಸ್ ಕಟ್ಟಲಾಗದೇ ಆತ್ಮಹತ್ಯೆ ಮಾಡಿಕೊಂಡಿರುವುದು ಧಾರವಾಡ (Dharwad News) ತಾಲೂಕಿನ ಮಂಗಳಗಟ್ಟಿ ಗ್ರಾಮದಲ್ಲಿ ನಡೆದಿದೆ. ಬಸವರಾಜ ಸಕ್ರಪ್ಪನ್ನವರ (28) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ.
ಈತ ಗ್ರಾಮದಲ್ಲೇ ಫೈನಾನ್ಸ್ ಹಣವನ್ನು ಕಲೆಕ್ಷನ್ ಮಾಡುವ ಕೆಲಸ ಮಾಡುತ್ತಿದ್ದ. ಆದರೆ, ಆನ್‌ಲೈನ್ ಗೇಮ್ ಚಟಕ್ಕೆ ಬಿದಿದ್ದ ಯುವಕ, ಸಂಗ್ರಹಿಸಿದ್ದ ಫೈನಾನ್ಸ್ ಹಣವನ್ನು ಗೇಮ್‌ಗೆ ಬಳಸಿಕೊಂಡಿದ್ದ. ಇದರಿಂದ 3 ಲಕ್ಷಕ್ಕೂ ಹೆಚ್ಚು ಹಣವನ್ನು ಕಳೆದುಕೊಂಡಿದ್ದ. ಫೈನಾನ್ಸ್ ಹಣವನ್ನು ವಾಪಸ್ ಕಟ್ಟಲಾಗದೇ ಮನನೊಂದು ಮರಕ್ಕೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗರಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಿವಮೊಗ್ಗದ ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಜಯಶ್ರೀ ಹೊಮ್ಮರಡಿ, ಪುತ್ರ ಆತ್ಮಹತ್ಯೆ
ಟ್ರಾಕ್ಟರ್ ಹರಿದು ಇಬ್ಬರು ಯುವಕರ ಸಾವು
ಶಿವಮೊಗ್ಗ: ಬೈಕ್ ಅಪಘಾತದಿಂದ ಕೆಳಗೆ ಬಿದ್ದಾಗ ಟ್ರ್ಯಾಕ್ಟರ್ ಹರಿದು ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಆಯನೂರು– ಹಾರನಹಳ್ಳಿ ರಸ್ತೆಯಲ್ಲಿ ನಡೆದಿದೆ. ಮಲ್ಲಾಪುರ ಗ್ರಾಮದ ಆಕೀಬ್ (25) ಮತ್ತು ಚಾಂದ್ ಪೀರ್ (18) ಮೃತ ದುರ್ದೈವಿಗಳು. ಎರಡು ಬೈಕುಗಳು ಮುಖಾಮುಖಿ ಡಿಕ್ಕಿ ಹೊಡೆದಿದ್ದರಿಂದ, ಬೈಕ್ ಚಾಲಕ ಮತ್ತು ಹಿಂಬದಿ ಸವಾರರಿಬ್ಬರೂ ರಸ್ತೆಗೆ ಬಿದ್ದಿದ್ದರು. ಇದೇ ಸಂದರ್ಭದಲ್ಲಿ ಹಿಂದೆ ಬರುತ್ತಿದ್ದ ಟ್ರ್ಯಾಕ್ಟರ್ ಕೆಳಕ್ಕೆ ಬಿದ್ದವರ ಮೇಲೆ ಹರಿದಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.