ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೋದಿಯವರಿಂದ ಇಂಡೊನೇಷಿಯಾ ಜತೆ 100 ಟನ್ ಬೀಜ ಪೂರೈಕೆ ಒಪ್ಪಂದ

ಇತ್ತೀಚೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಯವರು ಇಂಡೋನೇಷಿಯಾಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಮಹತ್ವದ ಒಪ್ಪಂದ ಮಾಡಿ ಕೊಂಡು ಬಂದಿದ್ದಾರೆ. ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಡಿಡಬ್ಲೂಆರ್-162 ಹೆಸರಿನ ಗೋಧಿ ತಳಿಯ 100 ಟನ್ ಬೀಜ ಇಂಡೊ ನೇಷಿಯಾಗೆ ಕೊಡುವ ಒಪ್ಪಂದ ಅದಾಗಿದೆ.

ಮೋದಿಯವರಿಂದ ಇಂಡೊನೇಷಿಯಾ ಜತೆ 100 ಟನ್ ಬೀಜ ಪೂರೈಕೆ ಒಪ್ಪಂದ

-

Profile
Ashok Nayak Jul 11, 2026 7:58 AM

ಧಾರವಾಡ: ಇತ್ತೀಚೆಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಬಾಹ್ಯಾಕಾಶಕ್ಕೆ ಮೆಂತೆ ಮತ್ತು ಹೆಸರು ಕಾಳುಗಳನ್ನು ತೆಗೆದುಕೊಂಡು ಹೋಗಿ ಪ್ರಯೋಗ ಮಾಡಲಾಗಿತ್ತು. ಈಗ ಇದೇ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಈ ಬಾರಿ ಮತ್ತೊಂದು ದೇಶಕ್ಕೆ ಗೋಧಿ ತಳಿಯ ಬೀಜ ಕಳಿಸಲಾಗುತ್ತಿದೆ. ಇದಕ್ಕೆ ಸ್ವತಃ ಪ್ರಧಾನಿ ಮೋದಿಯವರೇ ಆ ದೇಶದ ಜತೆ ಒಡಂಬಡಿಕೆ ಮಾಡಿಕೊಂಡು ಬಂದಿದ್ದಾರೆ.

ಇತ್ತೀಚೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಯವರು ಇಂಡೋನೇಷಿಯಾಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಮಹತ್ವದ ಒಪ್ಪಂದ ಮಾಡಿ ಕೊಂಡು ಬಂದಿದ್ದಾರೆ. ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಡಿಡಬ್ಲೂಆರ್-162 ಹೆಸರಿನ ಗೋಧಿ ತಳಿಯ 100 ಟನ್ ಬೀಜ ಇಂಡೊ ನೇಷಿಯಾಗೆ ಕೊಡುವ ಒಪ್ಪಂದ ಅದಾಗಿದೆ. ಈ ಗೋಧಿಯ ಇನ್ನೊಂದು ವಿಶೇಷತೆ ಏನೆಂದರೆ ಉಷ್ಣತೆ ಮತ್ತು ಬರ ಎರಡು ತಡೆದುಕೊಳ್ಳಬೇಕು. ಈ ಅ ರೀತಿಯ ಈ ಡಿಬ್ಲೂಆರ್-162 ಗೋಧಿ ತಳಿ ಇದೆ. ಅಲ್ಲದೇ ಹೆಕ್ಟೇರ್‌ಗೆ 75 ಕ್ವಿಂಟಲ್ ಗೋಧಿ ಉತ್ಪಾದನೆ ಕೊಡಲಿದೆ.

ಇದನ್ನೂ ಓದಿ: Dharwad News: ಪಿಎಚ್‌ಡಿ ವಿದ್ಯಾರ್ಥಿನಿ ಜತೆ ಅನೈತಿಕ ಸಂಬಂಧ; ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗುದೊರೈ ಅಮಾನತು

ಇದು ದೇಶದ ಹಲವು ಕಡೆ ಬೆಳೆದು ಪ್ರಯೋಗ ಮಾಡಲಾಗಿದೆ. ಉಷ್ಣ ಹೆಚ್ಚು ಇರುವ ಕಡೆ ಮತ್ತು ಕಡಿಮೆ ಇರುವ ಕಡೆ ಹೇಗೆ ಇಳುವರಿ ಕೊಡಲಿದೆ ಎಂದು ಪ್ರಯೋಗ ಮಾಡಲಾಗಿದೆ. ಹೀಗಾಗಿ ಇದೇ ತಳಿಯ ಗೋಧಿ ಈಗ ಇಂಡೊನೇಷಿಯಾಗೆ ಕೊಡಲಾಗುತ್ತಿದೆ. ಅಲ್ಲಿಯ ವಾತಾವರಣಕ್ಕೆ ಸುಲಭವಾಗಿ ಹೊಂದಿ ಕೊಳ್ಳಲಿದೆ. ದನಕ್ಕೆ ಇದರ ಹುಲ್ಲು ಹಾಕಬಹುದು. ಯಾಕಂದರೆ ಹೆಚ್ಚು ಪ್ರೋಟೀನ್ ಇರುವ ಗೋಧಿ ಹುಲ್ಲಾಗಿದೆ. ಕೃಷಿ ವಿವಿಯಲ್ಲಿ ಇದನ್ನ ರೈತರ ಸಹಭಾಗಿತ್ವದಲ್ಲೇ ಬೆಳೆದಿದೆ. ಈ ಗೋಧಿ ಈಗ ಕೇವಲ ಭಾರತ ದೇಶದ ಆಹಾರ ಭದ್ರತೆ ಅಷ್ಟೇ ಅಲ್ಲ, ಇಂಡೊನೇಷಿಯಾದ ಆಹಾರ ಭದ್ರತೆ ಕುಡಾ ಆಗಲಿದೆ ಎಂದು ಕೃಷಿ ವಿಜ್ಞಾನಿ ಅಭಿಪ್ರಾಯ ಪಟ್ಟಿದ್ದಾರೆ.

ಏನಿದು ಡಿಡಬ್ಲೂ ಆರ್-162 ಗೋಧಿ ತಳಿ? ಧಾರವಾಡ ಕೃಷಿ ವಿವಿ ಬಹಳ ವರ್ಷಗಳ ಹಿಂದೆ ಈ ಒಂದು ಗೋಧಿ ತಳಿಯನ್ನ ಕಂಡು ಹಿಡಿದಿತ್ತು. 1925ರಲ್ಲೇ ಇದರ ಸಂಶೋಧನೆ ಆರಂಭ ಮಾಡಿ ದ್ದರು. ನಂತರ 1993 ರಲ್ಲಿ ಸಂಶೋಧನೆ ಮುಗಿದು ಈ ಗೋಧಿ ತಳಿಗೆ ಆWಖ-162 ಎಂದು ಹೆಸರು ಕೊಡಲಾಯಿತು. ಈ ಗೋಧಿ ಹೆಚ್ಚು ಪ್ರೋಟೀನ್ ಇರುವಂತದ್ದಾಗಿದೆ. ಅಲ್ಲದೇ ಹೆಚ್ಚು ಇಳುವರಿ ಕೊಡುವ ಗೋಧಿ ಇದಾಗಿದೆ. ಈ ಗೋದಿ ಕೇವಲ ಚಪಾತಿ ಮಾಡಲು ಅಷ್ಟೇ ಅಲ್ಲ, ಬ್ರೆಡ್ ಕೂಡಾ ಮಾಡಲು ಉತ್ತಮವಾಗಿದೆ

ತಳಿಯ ವಿಶೇಷತೆಗಳೇನು? ?

ಧಾರವಾಡ ಕೃಷಿ ವಿವಿಯ ಡಿಡಬ್ಲೂಆರ್-162 ಗೋಧಿ ತಳಿ

1 ಹೆಕ್ಟೇರ್‌ಗೆ ಡಿಡಬ್ಲ್ಯೂ ಆರ್-162 ತಳಿ 75 ಕ್ವಿಂಟಲ್ ಇಳುವರಿ

ಉಷ್ಣ ಹೆಚ್ಚು ಇರುವ ಕಡೆ, ಕಡಿಮೆ ಇರುವ ಕಡೆ ಬೆಳೆ ಲಭ್ಯ

ಇಂಡೋನೆಷಿಯಾ ವಾತಾವರಣಕ್ಕೆ ಸುಲಭವಾಗಿ ಹೊಂದಾಣಿಕೆ