ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರೈಲು ಸೀಟ್‌ನ ಕೆಳಗೆ ಮಹಿಳೆಯ ಮೃತದೇಹ ಪತ್ತೆ; ನಿಗೂಢ ಸಾವಿನಿಂದ ಬೆಚ್ಚಿಬಿದ್ದ ಧಾರವಾಡ

Dharwad News: ಮಹಾರಾಷ್ಟ್ರದ ಸೋಲಾಪುರದಿಂದ ಆಗಮಿಸಿದ ರೈಲು ಧಾರವಾಡ ನಿಲ್ದಾಣದಲ್ಲಿ ನಿಲ್ಲುವಷ್ಟರಲ್ಲಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳಾ ಬೋಗಿಯ ಸೀಟ್‌ನ ಕೆಳಗೆ ಮಹಿಳೆಯೊಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ರೈಲ್ವೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ. ಮೃತ ಮಹಿಳೆಯ ಗುರುತು ಪತ್ತೆಯಾಗಿಲ್ಲ.

ಚಾಟ್‌ಜಿಪಿಟಿ ರಚಿತ ಚಿತ್ರ

ಧಾರವಾಡ, ಆ. 30: ಭಾನುವಾರದ ರಜೆಯ ಮೂಡ್‌ನಲ್ಲಿದ್ದ ಧಾರವಾಡದ ಜನತೆಯನ್ನು ನಿಗೂಢ ಕೊಲೆ ಪ್ರಕರಣವೊಂದು ಬೆಚ್ಚಿ ಬೀಳಿಸಿದೆ. ಮಹಾರಾಷ್ಟ್ರದ ಸೋಲಾಪುರದಿಂದ ಆಗಮಿಸಿದ ರೈಲು ಧಾರವಾಡ ನಿಲ್ದಾಣದಲ್ಲಿ ನಿಲ್ಲುವಷ್ಟರಲ್ಲಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳಾ ಬೋಗಿಯ ಸೀಟ್‌ನ ಕೆಳಗೆ ಮಹಿಳೆಯೊಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ರೈಲ್ವೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ (Dharwad News). ಹಣಕ್ಕಾಗಿ ಕೊಲೆ ಮಾಡಲಾಗಿದೆಯೇ ಅಥವಾ ವೈಯಕ್ತಿಕ ದ್ವೇಷದಿಂದ ಹತ್ಯೆ ನಡೆದಿಯೇ ಎನ್ನುವುದು ತನಿಖೆಯಿಂದಷ್ಟೇ ಗೊತ್ತಾಗಲಿದೆ.

ಮೃತ ಮಹಿಳೆ ಗುರುತು ಇನ್ನೂ ಪತ್ತೆಯಾಗಿಲ್ಲ. ಮಹಿಳೆಯ ವಯಸ್ಸು 30ರಿಂದ 35 ವರ್ಷದೊಳಗಿರಬಹುದು ಎಂದು ಅಂದಾಜಿಸಲಾಗಿದೆ. ಧಾರವಾಡ ಸ್ಟೇಷನ್‌ನಲ್ಲಿ ರೈಲು ನಿಂತ ಸುಮಾರು 90 ನಿಮಿಷಗಳ ನಂತರ ಅಂದರೆ ಬೆಳಗ್ಗೆ 11 ಗಂಟೆ ವೇಳೆಗೆ ಪ್ರಕರಣ ಬೆಳಕಿಗೆ ಬಂದಿದೆ. ಶುಚಿಗೊಳಿಸಲು ಬೋಗಿಯೊಳಗೆ ಸಿಬ್ಬಂದಿ ಪ್ರವೇಶಿಸಿದಾಗ ಮಹಿಳೆಯ ಮೃತದೇಹ ಪತ್ತೆಯಾಗಿದೆ.

ಮಧ್ಯಪ್ರದೇಶದಲ್ಲಿ ಭೀಕರ ಬಸ್ ಅಪಘಾತ: ಆರೋಪಿ ಬಂಧನಕ್ಕೆ ತೆರಳಿದ್ದ ಬೆಂಗಳೂರಿನ ಪೊಲೀಸ್​ ಇನ್ಸ್​ಪೆಕ್ಟರ್ ಸೇರಿ ನಾಲ್ವರ ಸಾವು

ʼʼಮೃತ ಮಹಿಳೆಯ ವಯಸ್ಸು 30ರಿಂದ 35 ವರ್ಷ ಇರಬಹುದು. ಮಹಿಳಾ ಬೋಗಿಯ ಸೀಟ್‌ನ ಕೆಳಗೆ ಅವರ ಮೃತದೇಹ ಪತ್ತೆಯಾಗಿದೆ. ಸ್ಟೇಷನ್‌ಗೆ ರೈಲು ಬೆಳಗ್ಗೆ 9.30ಕ್ಕೆ ತಲುಪಿದರೂ ಸಾವಿನ ಪ್ರಕರಣ ಗೊತ್ತಾಗಿದ್ದು 11 ಗಂಟೆಗೆ. ರೈಲ್ವೆ ಸಿಬ್ಬಂದಿ ಬೋಗಿ ಶುಚಿಗೊಳಿಸುವ ವೇಳೆ ಮೃತದೇಹ ಕಂಡು ಬಂತುʼʼ ಪೊಲೀಸ್‌ ಅಧಿಕಾರಿ ಸೋಮಶೇಖರ್‌ ಜತ್ತಲ್‌ ತಿಳಿಸಿದ್ದಾರೆ.

ಶನಿವಾರ (ಆಗಸ್ಟ್‌ 29) ರಾತ್ರಿ ಸೋಲಾಪುರದಿಂದ ಹೊರಟ ರೈಲು ಭಾನುವಾರ ಬೆಳಗ್ಗೆ 9.30ರ ವೇಳೆಗೆ ಧಾರವಾಡ ತಲುಪಿತು. ಮೃತದೇಹ ಕಂಡುಬಂದ ಕೂಡಲೇ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು. ಧಾರವಾಡ ವಿದ್ಯಾಗಿರಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಮಹಿಳೆಯ ಗುರುತನ್ನು ಪತ್ತೆ ಹಚ್ಚುವ ಕಾರ್ಯ ಆರಂಭವಾಗಿದೆ. ಮಹಿಳೆಯ ಕುತ್ತಿಗೆ, ಮುಖ ಮತ್ತು ಎದೆಯಲ್ಲಿ ಗಾಯದ ಗುರುತು ಕಂಡು ಬಂದಿದ್ದು, ಪ್ರಕರಣವನ್ನು ಇನ್ನಷ್ಟು ಜಟಿಲಗೊಳಿಸಿದೆ. ಪ್ರಯಾಣದ ಸಂದರ್ಭದಲ್ಲಿ ಯಾರೋ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರಿನಲ್ಲಿ 7ನೇ ಮಹಡಿಯಿಂದ ಜಿಗಿದ ಪ್ರೇಮಿಗಳು; ಯುವತಿ ಸಾವು, ಯುವಕನ ಸ್ಥಿತಿ ಗಂಭೀರ

ʼʼಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ. ಎಲ್ಲ ಕೋನಗಳಿಂದಲೂ ಪರಿಶೀಲನೆ ನಡೆಯಲಿದೆ. ಮೃತ ಮಹಿಳೆಯ ಮುಖ, ಕುತ್ತಿಗೆ, ಎದೆ ಭಾಗದಲ್ಲಿ ಗಾಯದ ಗುರುತು ಕಂಡುಬಂದಿದೆʼʼ ಎಂದು ಸೋಮಶೇಖರ್‌ ಜತ್ತಲ್‌ ವಿವರಿಸಿದ್ದಾರೆ. ಕೊಲೆಯ ಮೊದಲು ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ಯಾ ಎನ್ನುವ ಬಗ್ಗೆಯೂ ಪರಿಶೀಲನೆ ನಡೆಯಲಿದೆ. ಸದ್ಯ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ʼʼಮೇಲ್ನೋಟಕ್ಕೆ ಅತ್ಯಾಚಾರ ನಡೆದಿರುವ ಬಗ್ಗೆ ಸಾಕ್ಷಿ ಸಿಕ್ಕಿಲ್ಲ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ವರದಿ ಕೈ ಸೇರಿದ ಬಳಿಕ ಸಾವಿಗೆ ನಿಜವಾದ ಕಾರಣ ತಿಳಿಯಲಿದೆ. ಮೂಲಗಳ ಪ್ರಕಾರ ಮೃತ ಮಹಿಳೆಯ ಮೂಲ ಮಹಾರಾಷ್ಟ್ರ ಎನ್ನಲಾಗಿದೆʼʼ ಎಂದಿದ್ದಾರೆ. ಮಹಿಳೆ ಜತೆ ಬೇರೆ ಯಾರಾದರೂ ಇದ್ದರೇ ಅಥವಾ ಅವರೊಬ್ಬರೇ ಪ್ರಯಾಣಿಸುತ್ತದ್ದರೇ ಎನ್ನುವುದನ್ನೂ ಪರಿಶೀಲಿಸಲಾಗುತ್ತಿದೆ.

ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author