ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Diwali 2025 Special: ಬಾಯಲ್ಲಿಟ್ಟರೆ ಕರಗುವ ರುಚಿ ರುಚಿಯಾದ ಬಾದಾಮಿ ಬರ್ಫಿ ಮಾಡೋದು ಹೇಗೆ?; ಇಲ್ಲಿದೆ ನೋಡಿ

ಹಬ್ಬ ಬಂತು ಎಂದರೆ ಮನೆ ಕ್ಲೀನಿಂಗ್, ದೇವರ ಸಾಮಗ್ರಿಗಳನ್ನು ಸ್ವಚ್ಛಗೊಳಿಸುವುದು ಹೀಗೆ ಭರ್ಜರಿ ತಯಾರಿ ನಡೆಯುತ್ತದೆ. ಇದರ ಜೊತೆಗೆ ಹಬ್ಬದೂಟ ಮರೆಯಲು ಸಾಧ್ಯವಾಗುತ್ತದೆಯೇ. ಅದಕ್ಕೆ ನಾವಿಂದು ಹಬ್ಬದ ಗಡಿಬಿಡಿಯಲ್ಲಿ ಕಡಿಮೆ ಸಮಯದಲ್ಲಿ ಮಾಡಬಹುದಾದ sweet ರೆಸಿಪಿಯನ್ನು ಹೇಳಿಕೊಡುತ್ತಿದ್ದೇವೆ.

ಬೆಂಗಳೂರು: ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ದೀಪಾವಳಿ (Deepwali) ಕೂಡ ಒಂದು. ಎಲ್ಲರ ಬದುಕಿನಲ್ಲಿ ಬೆಳಕಿನ ಚಿತ್ತಾರವನ್ನು ಮೂಡಿಸುವ ಹಬ್ಬ ಇದಾಗಿದ್ದು, ದೇಶದೆಲ್ಲೆಡೆ ಜನ ಬಹಳ ಸಂಭ್ರಮ ಮತ್ತು ಸಡಗರದಿಂದ ಆಚರಿಸುತ್ತಾರೆ. ಆದರೆ ಹಬ್ಬದ ಖುಷಿ ದುಪ್ಪಟು ಆಗಬೇಕಾದ್ರೆ ಅಲ್ಲಿ ರುಚಿಯಾದ ಶುಚಿಯಾದ ಹಬ್ಬದೂಟ ಜೊತೆಗೆ ಒಂದು ಸ್ವೀಟ್(Sweet Recipe) ಇರಲೇಬೇಕು ಆಗಲೇ ಹಬ್ಬ ಪರಿಪೂರ್ಣಗೊಳ್ಳುವುದು.

ಅದಕ್ಕೆ ನಾವಿಂದು ಕಡಿಮೆ ಸಮಯದಲ್ಲಿ ಮಾಡಬಹುದಾದ ರುಚಿಕರವಾದ ರೆಸಿಸಿಪಿಯೊಂದನ್ನು ಹೇಳಿಕೊಡುತ್ತಿದ್ದು, ಬಾದಾಮಿ ಬರ್ಫಿ(Badami Barfi)ಉತ್ತಮ ಆಯ್ಕೆಯಾಗಿದೆ. ಅದರಲ್ಲೂ ಮನೆಯಲ್ಲಿ ಮಕ್ಕಳಿದ್ದರೆ, ಅವರಿಗೂ ಈ ರೆಸಿಪಿ ತುಂಬ ಇಷ್ಟವಾಗುತ್ತದೆ. ಹಾಗಾದರೆ, ಬನ್ನಿ ಈ ಬಾದಾಮಿ ಬರ್ಫಿಯನ್ನು ಮಾಡುವುದು ಹೇಗೆ? ಮಾಡಲು ಎನ್ನೆಲ್ಲ ಸಾಮಾಗ್ರಿಗಳು ಬೇಕು ಎಂಬುದನ್ನು ನೋಡೊಣ.

ಬೇಕಾಗುವ ಸಾಮಾಗ್ರಿಗಳು

  • ಬಾದಾಮಿ
  • ಗೋಡಂಬಿ
  • ಸಿಹಿ ಸೇರಿಸಿರದ ಖೋವಾ
  • ಸಕ್ಕರೆ
  • ತುಪ್ಪ

ಈ ಸುದ್ದಿಯನ್ನೂ ಓದಿ: Deepavali at Chikkaballapur: ದೀಪಾವಳಿ ಹಬ್ಬಕ್ಕೆ ಸಜ್ಜುಗೊಂಡ ಜಿಲ್ಲೆ : ಹಬ್ಬದ ಸಾಮಾನು ಖರೀದಿ ಜೋರು

ಮಾಡುವ ವಿಧಾನ

  • ಮೊದಲು ಒಂದು 200 ಗ್ರಾಮಿನಸ್ಟು ಬಾದಾಮಿಯನ್ನು ತೆಗೆದುಕೊಂಡು ಒಂದೆರಡು ಗಂಟೆಗಳ ಕಾಲ ನೀರಿನಲ್ಲಿ ನೆನಸಿಟ್ಟುಕೊಳ್ಳಿ.
  • ಇದರೊಂದಿಗೆ ನೂರು ಗ್ರಾಂ ನಷ್ಟು ಬಾದಾಮಿಯನ್ನು ತೆಗೆದುಕೊಂಡು ಹಾಲಿನಲ್ಲಿ ನೆನಸಿಟ್ಟುಕೊಳ್ಳಿ.
  • ಈಗ ನೆನಸಿಟ್ಟುಕೊಂಡ ಬಾದಾಮಿಯನ್ನು ನೀರಿನಿಂದ ಸೋಸಿಕೊಂಡು ಅದರ ಸಿಪ್ಪೆ ತೆಗೆದುಕೊಳ್ಳಿ.
  • ಆಮೇಲೆ ಒಂದು ಮಿಕ್ಸಿ ಜಾರ್ ಅನ್ನು ತೆಗೆದುಕೊಂಡು ಅದಕ್ಕೆ ಸಿಪ್ಪೆ ತೆಗೆದು ಇಟ್ಟುಕೊಂಡಿರುವ ಬಾದಾಮಿಯನ್ನು ಹಾಗೂ ಹಾಲಿನಲ್ಲಿ ನೆನಸಿಟ್ಟುಕೊಂಡಿದ್ದ ಗೊಂಡಂಬಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
  • ಈಗ ಸ್ಟೋವ್ ಹಚ್ಚಿ ಒಂದು ಪ್ಯಾನ್ ಇಟ್ಟು, ಕಾಯಲು ಬಿಡಿ. ಅದು ಬಿಸಿಯಾದ ರುಬ್ಬಿಟ್ಟುಕೊಂಡಿರುವ ಬಾದಾಮಿ ಹಾಗೂ ಗೊಂಡಂಬಿ ಮಿಶ್ರಣವನ್ನು ಅದಕ್ಕೆ ಹಾಕಿ.
  • ಬಳಿಕ ಸಕ್ಕರೆಯನ್ನು ಸೇರಿಸಿ ಸಣ್ಣ ಉರಿಯಲ್ಲಿ ಚೆನ್ನಾಗಿ ಕೈಯಾಡಿಸುತ್ತಾ ಗಂಟಾಗದ ಹಾಗೆ ನೋಡಿಕೊಳ್ಳಿ.
  • ನಂತರ ಆ ಮಿಶ್ರಣಕ್ಕೆ ತುಪ್ಪ ಹಾಗೂ ಖೋವಾವನ್ನು ಸೇರಿಸಿ. ಮಿಶ್ರಣವು ಗಟ್ಟಿ ಆಗುವವರೆಗೂ ಚೆನ್ನಾಗಿ ಕೈಯಾಡಿಸುತ್ತಾ ಇರಿ. ಅದು ಗಟ್ಟಿಯಾದ ಬಳಿಕ ಸ್ಟೋವ್ ಯಿಂದ ಪ್ಯಾನ್ ಅನ್ನು ಕೆಳಗಿಳಿಸಿ.
  • ಕೊನೆಗೆ ಒಂದು ತಟ್ಟೆಯನ್ನು ತೆಗೆದುಕೊಂಡು ಅದಕ್ಕೆ ತುಪ್ಪ ಸವರಿ ಸಿದ್ಧ ಮಾಡಿಟ್ಟುಕೊಂಡಿರುವ ತಟ್ಟೆ ಮೇಲೆ ಬರ್ಫಿ ಮಿಶ್ರಣವನ್ನು ಹಾಕಿ, ಚೆನ್ನಾಗಿ ಸೆಟ್ ಮಾಡಿಕೊಳ್ಳಿ, ಈಗ ಅದರ ಮೇಲೆ ಬೆಳ್ಳಿ ಲೇಪನವನ್ನು ಅಂಟಿಸಿ, ಬರ್ಫಿ ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ಬರ್ಫಿಯನ್ನು ನಿಮಗೆ ಬೇಕಾದ ಆಕಾರದಲ್ಲಿ ತುಂಡರಿಸಿ ಮನೆಯವರಿಗೆ ಬಡಿಸಿ.