ಮಹಿಳೆಯರಿಗೆ ಸರ್ಕಾರದಿಂದ ದೀಪಾವಳಿ ಗಿಫ್ಟ್; ಗೃಹಲಕ್ಷ್ಮಿ ಯೋಜನೆಯ ಬಾಕಿ 3 ಕಂತುಗಳ ಹಣ ಬಿಡುಗಡೆ
Gruhalakshmi Scheme: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ದೀಪಾವಳಿ ಕೊಡುಗೆಯನ್ನು ನೀಡಿದೆ. ಕಳೆದ ಮೂರು ತಿಂಗಳಿಂದ ಬಾಕಿ ಉಳಿದಿದ್ದ 34, 35 ಮತ್ತು 36ನೇ ಕಂತುಗಳ ಒಟ್ಟು 7,405.86 ಕೋಟಿ ರೂ ಹಣವನ್ನು ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಸಂಗ್ರಹ ಚಿತ್ರ -
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಫಲಾನುಭವಿಗಳಿಗೆ ರಾಜ್ಯ ಸರ್ಕಾರ ದೀಪಾವಳಿ ಕೊಡುಗೆಯನ್ನು ನೀಡಿದೆ. ಕಳೆದ ಮೂರು ತಿಂಗಳಿಂದ ಬಾಕಿ ಉಳಿದಿದ್ದ 34, 35 ಮತ್ತು 36ನೇ ಕಂತುಗಳ ಒಟ್ಟು 7,405.86 ಕೋಟಿ ರೂ ಹಣವನ್ನು ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಅಕ್ಟೋಬರ್ ತಿಂಗಳವರೆಗೆ ರಾಜ್ಯದ 1.24 ಕೋಟಿ ಮಹಿಳಾ ಫಲಾನುಭವಿಗಳಿಗೆ ಗೃಹಲಕ್ಷ್ಮೀ ಯೋಜನೆಯಡಿ ಒಟ್ಟು 86,838.36 ಕೋಟಿ ರೂ ಹಣ ಪಾವತಿಸಿದಂತಾಗಲಿದೆ.
ಈ ಹಣ ಬಿಡುಗಡೆಯಿಂದಾಗಿ ರಾಜ್ಯದ ಸುಮಾರು 1.24 ಕೋಟಿ ಅರ್ಹ ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ (DBT) ಮೂಲಕ ಬಾಕಿ ಹಣ ಶೀಘ್ರದಲ್ಲೇ ಜಮೆ ಆಗಲಿದೆ. ತಾಂತ್ರಿಕ ಕಾರಣ ಹಾಗೂ ಬಜೆಟ್ ಹೊಂದಾಣಿಕೆಯಿಂದಾಗಿ ಕಳೆದ ಕೆಲವು ತಿಂಗಳುಗಳಿಂದ ಗೃಹಲಕ್ಷ್ಮಿ ಹಣ ಬಿಡುಗಡೆ ವಿಳಂಬವಾಗಿತ್ತು. ಈಗ ಒಟ್ಟಿಗೆ ಮೂರು ಕಂತುಗಳ ಹಣ ಬಿಡುಗಡೆಯಾಗಿರುವುದರಿಂದ ಮಹಿಳೆಯರಲ್ಲಿ ಸಂತಸ ಮೂಡಿಸಿದೆ.
ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಆಗಿದೆಯೇ ಇಲ್ಲವೇ ಎಂಬುದನ್ನು ನೀವು ಮನೆಯಲ್ಲಿಯೇ ಕುಳಿತು ನಿಮ್ಮ ಮೊಬೈಲ್ ಮೂಲಕ ಸುಲಭವಾದ ವಿಧಾನಗಳಲ್ಲಿ ಪರಿಶೀಲಿಸಬಹುದು.
Gruha Lakshmi Scheme: ಗೃಹ ಲಕ್ಷ್ಮೀ ಯೋಜನೆಗೆ ಭರ್ಜರಿ ಅನುದಾನ
- ಮೊದಲಿಗೆ ಗೂಗಲ್ ಪ್ಲೇ ಸ್ಟೋರ್ನಿಂದ DBT Karnataka ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
- ಆಪ್ ಓಪನ್ ಮಾಡಿ, ಫಲಾನುಭವಿ ಮಹಿಳೆಯ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ.
- ನಿಮ್ಮ ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ OTP (ಓಟಿಪಿ) ಸಂಖ್ಯೆಯನ್ನು ಹಾಕಿ ಲಾಗಿನ್ ಆಗಿ.
- ಭವಿಷ್ಯದ ಲಾಗಿನ್ಗಾಗಿ 4 ಅಂಕಿಯ mPIN ಕ್ರಿಯೇಟ್ ಮಾಡಿಕೊಳ್ಳಿ.
- ಲಾಗಿನ್ ಆದ ನಂತರ ಮುಖಪುಟದಲ್ಲಿ ಕಾಣುವ Payment Status (ಪಾವತಿ ಸ್ಥಿತಿ) ಮೇಲೆ ಕ್ಲಿಕ್ ಮಾಡಿ.