ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

DK Shivakumar: ಅನಗತ್ಯ ಹೇಳಿಕೆ ನೀಡಿದರೆ ಶಿಸ್ತುಕ್ರಮ: ಶಾಸಕರಿಗೆ ಡಿಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ

ಪಕ್ಷದ ಶಿಸ್ತನ್ನು ಎಲ್ಲಾ ಶಾಸಕರು ಕಾಪಾಡಬೇಕು. ಪಕ್ಷಕ್ಕೆ ಗೌರವ ನೀಡಬೇಕು. ಮಾಧ್ಯಮಗಳ ಮುಂದೆ ಪಕ್ಷದ ಗೌರವವನ್ನು ಹಾಳು ಮಾಡಬಾರದು. ಮುಖ್ಯಮಂತ್ರಿಗಳೂ ಸಹ ಈಗಾಗಲೇ ಈ ವಿಚಾರದ ಬಗ್ಗೆ ಹೇಳಿದ್ದಾರೆ. ಮುಂದಕ್ಕೆ ಎಲ್ಲರ ಭವಿಷ್ಯ ಪಕ್ಷದಲ್ಲಿದೆಯೇ ಹೊರತು ಮಾಧ್ಯಮಗಳಲ್ಲಿ ಇಲ್ಲ ಎಂದು ಡಿಸಿಎಂ ಹೇಳಿದರು.

ಅನಗತ್ಯ ಹೇಳಿಕೆ ನೀಡಿದರೆ ಶಿಸ್ತುಕ್ರಮ: ಶಾಸಕರಿಗೆ ಡಿಸಿಎಂ ಡಿಕೆಶಿ ಎಚ್ಚರಿಕೆ

ಡಿಸಿಎಂ ಡಿಕೆ ಶಿವಕುಮಾರ್ -

ಹರೀಶ್‌ ಕೇರ
ಹರೀಶ್‌ ಕೇರ Apr 13, 2026 3:28 PM

ಬೆಂಗಳೂರು, ಏ.13: "ಪಕ್ಷದ ಶಾಸಕರು ಹೈಕಮಾಂಡ್ ವರಿಷ್ಠರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿಲ್ಲ. ಅನವಶ್ಯಕವಾಗಿ ಏನೇನೋ ಹೇಳಿಕೆ ನೀಡಿದರೆ ಶಿಸ್ತು ಕ್ರಮ ಜರುಗಿಸಲಾಗುವುದು" ಎಂದು ಕೆಪಿಸಿಸಿ (KPCC) ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DCM DK Shivakumar) ಅವರು ಎಚ್ಚರಿಕೆ ನೀಡಿದರು.

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು.

25 ಜನ ಶಾಸಕರು ದೆಹಲಿಗೆ ತೆರಳಿರುವ ಬಗ್ಗೆ ಕೇಳಿದಾಗ, "ಪಕ್ಷದ ಶಿಸ್ತನ್ನು ಎಲ್ಲಾ ಶಾಸಕರು ಕಾಪಾಡಬೇಕು. ಪಕ್ಷಕ್ಕೆ ಗೌರವ ನೀಡಬೇಕು. ಮಾಧ್ಯಮಗಳ ಮುಂದೆ ಪಕ್ಷದ ಗೌರವವನ್ನು ಹಾಳು ಮಾಡಬಾರದು. ಮುಖ್ಯಮಂತ್ರಿಗಳೂ ಸಹ ಈಗಾಗಲೇ ಈ ವಿಚಾರದ ಬಗ್ಗೆ ಹೇಳಿದ್ದಾರೆ. ಮುಂದಕ್ಕೆ ಎಲ್ಲರ ಭವಿಷ್ಯ ಪಕ್ಷದಲ್ಲಿದೆಯೇ ಹೊರತು ಮಾಧ್ಯಮಗಳಲ್ಲಿ ಇಲ್ಲ" ಎಂದರು.

DK Shivakumar: ಡಿಕೆ ಶಿವಕುಮಾರ್‌ ಡಿನ್ನರ್‌ ಪಾರ್ಟಿ, ಸಿಎಂ ಸಹಿತ ಎಲ್ಲ ಶಾಸಕರು ಹಾಜರ್

ಶಾಸಕರು ದೆಹಲಿಗೆ ತೆರಳುವ ಮುಂಚೆ ನಿಮ್ಮ ಬಳಿ ಚರ್ಚೆ ಮಾಡಿದ್ದಾರೆಯೇ ಎಂದು ಕೇಳಿದಾಗ, "ಒಂದಷ್ಟು ಜನ ಮಾಡಿದ್ದಾರೆ. ಹೈಕಮಾಂಡ್ ಬಳಿ ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪೇನಿಲ್ಲ. ಮೊದಲ ಹಾಗೂ ಎರಡನೇ ಬಾರಿ ಗೆದ್ದಿರುವವರೂ ಮಂತ್ರಿಗಳಾಗಬಹುದು. ಈ ಹಿಂದೆ ಈ ರೀತಿ ನಡೆದಿದೆ. ಆದರೆ ಇದು ಸಮಯವಲ್ಲ. ಇನ್ನೂ ಚುನಾವಣೆಗಳು ನಡೆಯುತ್ತಿವೆ. ಒಂದಷ್ಟು ಜನ ತಮಿಳುನಾಡಿಗೆ ತೆರಳಿದ್ದಾರೆ. ಮೊದಲು ಚುನಾವಣೆ ಆಗಲಿ, ಆನಂತರ ಇದರ ಬಗ್ಗೆ ಯೋಚಿಸೋಣ" ಎಂದರು.

ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿ ಬಗ್ಗೆ ಕೇಳಿದಾಗ, "ಪಕ್ಷದಿಂದ ತಮಿಳುನಾಡಿಗೆ ತೆರಳುವಂತೆ ಸೂಚನೆ ನೀಡಿದ್ದರು. ಅಲ್ಲಿಗೆ ಹೋಗಿ ಬಂದಿದ್ದೇನೆ. ಮತ್ತೆ ತೆರಳಬೇಕಾಗಿದೆ. ಆ ಬಗ್ಗೆ ಎಐಸಿಸಿ ಅಧ್ಯಕ್ಷರಿಗೆ ವರದಿ ನೀಡಬೇಕಿತ್ತು. ಭೇಟಿ ಮಾಡಿ ವರದಿ ಮಾಡಿದ್ದೇನೆ" ಎಂದು ತಿಳಿಸಿದರು.