ನನ್ನ ಆಯ್ಕೆ ಮುಂದು ಮಾಡಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಟೀಕೆ ಸರಿಯಲ್ಲ: ಸಂದೀಪ್‌ರೆಡ್ಡಿ
ನನಗೆ ಜಿಲ್ಲಾಧ್ಯಕ್ಷ ಪದವಿ ಸ್ವೀಕರಿಸಿದ ಕೂಡಲೇ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ನಿರ್ಮಲಾನಂಥ ನಾಥ ಮಹಾಸ್ವಾಮೀಜಿಗೆ ಗುರುಗಳಿಗೆ ಪೋನ್ ಮಾಡಿದೆ. ಕುಂಭಮೇಳದಲ್ಲಿ ಇದ್ದರೂ ಕರೆ ಸ್ವೀಕರಿಸಿ ಅಲ್ಲಿಂದಲೇ ಆಶೀರ್ವಾಧ ಮಾಡಿದ್ದಾರೆ. ಇವತ್ತು ಖುದ್ಧಾಗಿ ಭೇಟಿ ಮಾಡಿ ಮತ್ತೊಮ್ಮೆ ಅವರ ಅಶೀ ರ್ವಾದ ಪಡೆದಿದ್ದೇನೆ. ನಿನ್ನ ಕಾರ್ಯದಲ್ಲಿ ಯಶಸ್ಸು ನಿಗಲಿ ಎಂದಿದ್ದಾರೆ. ಇದರಿಂದಾಗಿ ನನ್ನ ಆತ್ಮಸ್ಥೆöÊರ್ಯ ಹೆಚ್ಚಿದೆ ಎಂದರು

ಚಿಕ್ಕಬಳ್ಳಾಪುರ ನಗರ ಹೊರವಲಯದ ಆಂಜನೇಯ ಗುಡಿಯ ಬಳಿ ನೂತನ ಜಿಲ್ಲಾಧ್ಯಕ್ಷ ಸಂದೀಪ್ ರೆಡ್ಡಿ ಮಾಧ್ಯಮದೊಂದಿಗೆ ಮಾತನಾಡಿದರು.

ಚಿಕ್ಕಬಳ್ಳಾಪುರ: ಜಿಲ್ಲಾಧ್ಯಕ್ಷರ ನೇಮಕ ವಿಚಾರವನ್ನು ಮುಂದಿಟ್ಟುಕೊಂಡು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಟೀಕಿಸುತ್ತಿರುವುದು ಸರಿಯಲ್ಲ. ಇದರಿಂದಾಗಿ ಅಧ್ಯಕ್ಷರ ವರ್ಚಸ್ಸು, ಪಕ್ಷದ ಘನತೆಗೆ ಕುಂದು ಬರಲಿದೆ.ದಯವಿಟ್ಟು ಯಾರೂ ಹೀಗೆ ಮಾಡಬೇಡಿ ಎಂದು ನೂತನ ಜಿಲ್ಲಾಧ್ಯಕ್ಷ ಸಂದೀಪ್‌ರೆಡ್ಡಿ ಮನವಿ ಮಾಡಿದರು.
ನಗರ ಹೊರವಲಯ ಆದಿಚುಂಚನಗಿರಿ ಶಾಖಾ ಮಠದಲ್ಲಿ ಚುಂಚಶ್ರೀಗಳ ಆಶೀರ್ವಾದ, ವೀರಾಂ ಜನೇಯಸ್ವಾಮಿ ದರ್ಶನ ಪಡೆದ ನಂತರ ಸುದ್ದಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ ದರು.
ಇದನ್ನೂ ಓದಿ: Chikkaballapur News: ರೈತರ ಹಿತ ಕಾಯುವುದು ರಾಷ್ಟ್ರೀಯ ಬ್ಯಾಂಕುಗಳು ಮಾತ್ರ : ಪ್ರಗತಿಪರ ರೈತ ಜಿ.ಎನ್. ನಾರಾಯಣಸ್ವಾಮಿ ಅಭಿಮತ
ನನಗೆ ಜಿಲ್ಲಾಧ್ಯಕ್ಷ ಪದವಿ ಸ್ವೀಕರಿಸಿದ ಕೂಡಲೇ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ನಿರ್ಮಲಾ ನಂಥನಾಥ ಮಹಾಸ್ವಾಮೀಜಿಗೆ ಗುರುಗಳಿಗೆ ಪೋನ್ ಮಾಡಿದೆ. ಕುಂಭಮೇಳದಲ್ಲಿ ಇದ್ದರೂ ಕರೆ ಸ್ವೀಕರಿಸಿ ಅಲ್ಲಿಂದಲೇ ಆಶೀರ್ವಾಧ ಮಾಡಿದ್ದಾರೆ. ಇವತ್ತು ಖುದ್ಧಾಗಿ ಭೇಟಿ ಮಾಡಿ ಮತ್ತೊಮ್ಮೆ ಅವರ ಅಶೀರ್ವಾಧ ಪಡೆದಿದ್ದೇನೆ. ನಿನ್ನ ಕಾರ್ಯದಲ್ಲಿ ಯಶಸ್ಸು ನಿಗಲಿ ಎಂದಿದ್ದಾರೆ. ಇದರಿಂ ದಾಗಿ ನನ್ನ ಆತ್ಮಸ್ಥೆöÊರ್ಯ ಹೆಚ್ಚಿದೆ ಎಂದರು.
ಯಾವುದಾದರೂ ನೇಮಕಾತಿ ನಡೆದಾಗ ಉಳಿದ ಆಕಾಂಕ್ಷಿಗಳಿಗೆ ಅಸಮಾಧಾನ ಆಗುವುದು ಸಹಜ ವಾದ ಪ್ರಕ್ರಿಯೆ. ಯಾವುದೇ ಸಂಘಟನೆಗಳಲ್ಲಿ, ಪಕ್ಷಗಳಲ್ಲಿ ಈರೀತಿ ಆದಾಗ ಅದನ್ನು ನಿವಾರಿಸುವ ಶಕ್ತಿ ಪಕ್ಷದ ನಾಯಕರಿಗೆ ಇದೆ. ಅದರಂತೆ ಅವರು ಏನು ಸಮಸ್ಯೆ ಇದೆ ಎಂಬುದನ್ನು ತಿಳಿದು ಸರಿ ಪಡಿಸುತ್ತಾರೆ. ನಾನೂ ಕೂಡ ಅವರ ಜೊತೆ ಕುಳಿತು ಮಾತನಾಡುತ್ತೇನೆ. ಅವರೆಲ್ಲಾ ನನ್ನ ಸ್ನೇಹಿ ತರೇ ಅವರ ಜತೆಕೂಡಿಯೇ ಪಕ್ಷವನ್ನು ಕಟ್ಟುತ್ತೇನೆ ಎಂದರು.
ಜಿಲ್ಲಾಧ್ಯಕ್ಷನಾಗಿ ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ತಾಲೂಕು ಹೋಬಳಿ ಗ್ರಾಮಗಳಿಗೆ ತೆರಳಿ ಪಕ್ಷವನ್ನು ಬಲಪಡಿಸುವ ಕೆಲಸ ಮಾಡುತ್ತೇನೆ. ಮುಂಬರುವ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವಂತೆ ಮಾಡಲು ಹಿರಿಯರು ಕಿರಿಯರು ಎಲ್ಲ ರೊಂದಿಗೆ ಕೂಡಿ ಕೆಲಸ ಮಾಡಲಾಗುವುದು. ಎಲ್ಲೆಲ್ಲಿ ನನ್ನ ಪಕ್ಷದ ಶಕ್ತಿಯಿದೆಯೋ ಅಲ್ಲಿ ಮತ್ತಷ್ಟು ಗಟ್ಟಿಗೊಳಿಸಿ ನಮ್ಮ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಮತ ಪಡೆಯುವಂತೆ ಕಾರ್ಯ ಯೋಜನೆ ರೂಪಿಸಲಾಗುವುದು ಎಂದರು.
ಡಾ.ಕೆ.ಸುಧಾಕರ್ ಅವರ ಮನೆಗೆ ಹೋಗಿ ಭೇಟಿ ಮಾಡಲು ಪ್ರಯತ್ನಿಸಿದ್ದೇನೆ. ಅವರು ಮನೆಯಲ್ಲಿ ಇಲ್ಲ ಹೊರಗೆ ಹೋಗಿದ್ದಾರೆ ಎಂಬ ವಿಚಾರ ಅವರ ಸಿಬ್ಬಂದಿಯಿಂದ ತಿಳಿ ಯಿತು. ಪೋನ್ ಮೂಲಕ ಸಂಪರ್ಕಿಸಲು ಕೂಡ ಪ್ರಯತ್ನಿಸಿದೆ ಬ್ಯುಸಿ ಬಂತು. ಶೀಘ್ರದಲ್ಲಿಯೇ ಅವರನ್ನು ಭೇಟಿ ಮಾಡಿ ಅವರ ಆಶೀರ್ವಾಧ ಪಡೆದುಕೊಂಡು ಕೆಲಸ ಪ್ರಾರಂಬಿಸುತ್ತೇನೆ ಎಂದರು.
ಮೂಲ ಮತ್ತು ವಲಸಿಗ ಎಂಬುದು ಯಾವುದೇ ಪಕ್ಷಕ್ಕೂ ಅನ್ವಯಿಸಲ್ಲ ಎಂದು ಹೇಳಬೇಕಾಗುತ್ತದೆ. ಒಂದು ಪಕ್ಷವನ್ನು ಕಟ್ಟಬೇಕಾದರೆ ಮೂಲ ಇರಬೇಕು ಹೊಸಬರೂ ಬೇಕಾಗುತ್ತದೆ. ಒಬ್ಬರೇ ಇದ್ದಲ್ಲಿ ಪಕ್ಷ ಬೆಳೆಯುವುದಿಲ್ಲ. ನಾವು ಹಳಬರು ಮಾತ್ರ ಪಕ್ಷವನ್ನು ಕಟ್ಟುತ್ತೇವೆ ಎಂಬುದು ಸರಿಯಲ್ಲ. ಮೂಲ ವಲಸಿಗ ಎಂಬ ವಿಚಾರ ಯಾರೋ ತೇಲಿಬಿಟ್ಟಿರಬಹುದು ಅಷ್ಟೇ ಎಂದರು.
ಎAಪಿ.ಎಲೆಕ್ಷನ್‌ನಲ್ಲಿ ನಾನು ಅವರ ಜತೆ ನಿಂತಿಲ್ಲ ಎಂಬುದು ಸುಳ್ಳು.ನಾನು ತನುಮತ ಧನವನ್ನು ಅರ್ಪಿಸಿ ಪ್ರಚಾರ ಮಾಡಿರುವುದು ಕ್ಷೇತ್ರದ ಜನತೆಗೆ ತಿಳಿದಿದೆ.ಅಲೋಕ್ ವಿಶ್ವನಾಥ್ ನನ್ನ ಸ್ನೇಹಿ ತರು, ಅವರಿಗೆ ಟಿಕೆಟ್ ಕೇಳಿದ್ದು ನಿಜ.ಟಿಕೆಟ್ ಕೈತಪ್ಪಿದ ಕೂಡಲೇ ಪಕ್ಷದ ಅಭ್ಯರ್ಥಿಯ ಪರ ನಾನು, ವಿಶ್ವನಾಥ್, ಮುನಿರಾಜು, ಸೀಕಲ್ ರಾಮಚಂದ್ರಗೌಡ ವೇಣುಗೋಪಾಲ್ ಕೆಲಸ ಮಾಡಿದ್ದೇವೆ.ನಾವು ಪಕ್ಷದ ವಿರುದ್ಧ, ನಾಯಕರ ವಿರುದ್ಧ ಒಂದೂ ಮಾತನಾಡಿಲ್ಲ. ಇದ್ದರೆ ತೋರಿಸಿ,ನಮಗೆ ಪಕ್ಷವೇ ಮುಖ್ಯವಾದ್ದರಿಂದ ಅದು ಸೂಚಿಸಿದ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ ಪರಿಣಾಮವೇ ೮೫ಸಾವಿರಕ್ಕೂ ಹೆಚ್ಚು ಮತ ಯಲಹಂಕದಲ್ಲಿ ಪಡೆಯಲು ಸಾಧ್ಯವಾಗಿದೆ ಎಂದರು.
ಜಿಲ್ಲಾಧ್ಯಕ್ಷರ ಆಯ್ಕೆ ಆಂತರಿಕ ಪ್ರಜಾಪ್ರಭುತ್ವಕ್ಕೆ ಬದ್ಧವಾಗಿಯೇ ನಡೆದಿದೆ. ಏಕಪಕ್ಷೀಯವಾಗಿ ಆಗಿಲ್ಲ. ಜನರ ಅಭಿಪ್ರಾಯ,ಪದಾಧಿಕಾರಿಗಳ ಅಭಿಪ್ರಾಯ,ಆರ್‌ಎಸ್‌ಎಸ್ ಮುಖಂಡರ ಅಭಿಪ್ರಾಯ ಪಡೆದು ೨ ರಿಂದ ೩ ತಿಂಗಳ ಪ್ರಯತ್ನದ ಫಲವಾಗಿ ಜಿಲ್ಲಾಧ್ಯಕ್ಷರ ಆಯ್ಕೆ ಆಗಿದೆ.ನಿಜ ಹೇಳಬೇಕೆಂದರೆ ನನಗೂ ವಿಜಯೇಂದ್ರ ಅವರಿಗೂ ಮುಖತಃ ಭೇಟಿಯೇ ಆಗಿಲ್ಲ. ನನ್ನ ನೇಮಕದ ವೇಳೆ ೨೦-೩೦ ಸೆಕೆಂಡ್ ಪೋನ್‌ನಲ್ಲಿ ಮಾತ್ರ ಮಾತಾಡಿ ಪಕ್ಷವನ್ನು ಸಮರ್ಥವಾಗಿ ಕಟ್ಟಿಕೊಂಡು ಮುನ್ನಡೆಯಿರಿ ಎಂದು ಹೇಳಿದ್ದು ಬಿಟ್ಟರೆ ನಮ್ಮ ನಡುವೆ ಬೇರೇನೂ ನಡೆದಿಲ್ಲ.ಸತ್ಯ ಹೀಗಿದ್ದರೂ ಇಲ್ಲ ಸಲ್ಲದ ಊಹಾಪೋಹಗಳನ್ನು ಹಬ್ಬಿಸುತ್ತಿರುವುದು ತಪ್ಪು.ಇದರಿಂದಾಗಿ ರಾಜ್ಯಾಧ್ಯಕ್ಷರ ವರ್ಚಸ್ಸು, ಪಕ್ಷದ ಘನೆತೆಗೆ ಕುಂದಾಗಲಿದೆ. ಯಾರೂ ಹೀಗೆ ಮಾಡಬೇಡಿ ಎಂದು ಮನವಿ ಮಾಡಿದರು.