ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: 6 ವರ್ಷದ ಮಗಳನ್ನೇ ನೀರಿನಲ್ಲಿ ಮುಳುಗಿಸಿ ಕೊಂದ ತಾಯಿ ಬಂಧನ

Murder Case: ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಜಿನ್ನೇನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಘಟನೆ ನಡೆದಿದೆ. ಮಗುವನ್ನು ತಾಯಿ ನೀರಿನಲ್ಲಿ ಮುಳುಗಿಸುತ್ತಿರುವುದನ್ನು ಕಂಡ ಸ್ಥಳೀಯರು ಮಗುವನ್ನು ಪಡೆದು, ಪ್ರಥಮ ಚಿಕಿತ್ಸೆ ನೀಡಿ ಬದುಕಿಸಲು ಯತ್ನಿಸಿದರೂ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.

ಆರು ವರ್ಷದ ಮಗಳನ್ನೇ ನೀರಿನಲ್ಲಿ ಮುಳುಗಿಸಿ ಕೊಂದ ತಾಯಿ!

Profile Prabhakara R Jun 9, 2025 9:33 PM

ಹಾಸನ: ತಾಯಿಯೊಬ್ಬಳು ತನ್ನ ಆರು ವರ್ಷದ ಮಗಳನ್ನೇ ನೀರಿನಲ್ಲಿ ಮುಳುಗಿಸಿ ಕೊಲೆಗೈದಿರುವ ಹೃದಯ ವಿದ್ರಾವಕ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಚನ್ನರಾಯಪಟ್ಟಣ ತಾಲೂಕಿನ ಜಿನ್ನೇನಹಳ್ಳಿ ಕೊಪ್ಪಲು ಗ್ರಾಮದ ಸಾನ್ವಿ (6) ಮೃತ ಬಾಲಕಿ. ತಾಯಿ ಶ್ವೇತಾ, ಮಗಳನ್ನು ಕೊಂದ ನಂತರ ತಾನೂ ಸಾಯುವುದಾಗಿ ಕಿರುಚಾಡುತ್ತಿದ್ದಳು. ಆಗ ಆಕೆಯನ್ನು ಸ್ಥಳೀಯರು ರಕ್ಷಿಸಿ, ಪೊಲೀಸರ ವಶಕ್ಕೆ ನೀಡಿದ್ದಾರೆ.

ತಂದೆ-ತಾಯಿ ನಿಧನ, ಗಂಡನ ಮನೆಯಲ್ಲಿ ಮನಸ್ತಾಪ, ಹೀಗೆ ನಾನಾ ಕಾರಣಗಳಿಂದ ಶ್ವೇತಾ ಗಂಡನಿಂದ ದೂರವಾಗಿ, ಕಳೆದ ಐದು ವರ್ಷಗಳಿಂದ ಶಿವಮೊಗ್ಗ ಬಿಟ್ಟು ತವರು ಮನೆಯಲ್ಲೇ ಇದ್ದರು. ಜತೆಗೆ ಗಂಡ ರಘುನಿಂದ ವಿಚ್ಛೇದನ ಪಡೆಯಲು ಮುಂದಾಗಿದ್ದಳು.

ಕುಟುಂಬಸ್ಥರು ಕಳೆದ ನಾಲ್ಕು ತಿಂಗಳ ಹಿಂದೆ ಗ್ರಾಮದ ಹಿರಿಯರು ಸೇರಿ ರಾಜಿ ಸಂಧಾನದ ಮೂಲಕ ಆಕೆಯನ್ನು ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದರು. ಆದರೆ ಶಿವಮೊಗ್ಗದಲ್ಲಿ ಇರಲು ಸಾಧ್ಯವಾಗದೆ ಶನಿವಾರ ಮಗುವಿನೊಂದಿಗೆ ತವರಿಗೆ ಬಂದಿದ್ದಳು. ಮಗುವನ್ನು ಆಕೆ ನೀರಿನಲ್ಲಿ ಮುಳುಗಿಸುತ್ತಿರುವುದನ್ನು ಕಂಡ ಸ್ಥಳೀಯರು ನೀರಿಗಿಳಿದು ಮಗುವನ್ನು ಆಚೆಗೆ ಎಳೆದು ತಂದು, ಪ್ರಥಮ ಚಿಕಿತ್ಸೆ ನೀಡಿ ಮಗುವನ್ನು ಬದುಕಿಸಲು ಯತ್ನಿಸಿದರೂ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಶ್ವೇತಾ ಅವರನ್ನು ವಶಕ್ಕೆ ಪಡೆದಿರುವ ಹಿರೀಸಾವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ವಿವಾಹಿತ ಪ್ರಿಯತಮೆಯನ್ನು ಬೆಂಗಳೂರಿನ ಹೋಟೆಲ್‌ನಲ್ಲಿ 17 ಬಾರಿ ಇರಿದು ಕೊಂದ ಪ್ರಿಯಕರ!

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಕಗ್ಗೊಲೆ (Murder Case) ಸಂಭವಿಸಿದೆ. ಪ್ರಿಯಕರನಿಂದಲೇ (Lover) ಪ್ರಿಯತಮೆಯ ಬರ್ಬರ ಹತ್ಯೆಯಾಗಿದೆ. ಬೆಂಗಳೂರಿನ (Bengaluru Crime News) ಪೂರ್ಣಪ್ರಜ್ಞ ಲೇಔಟ್‌ನ ಹೋಟೆಲ್ ರೂಮ್‌ನಲ್ಲಿ ಪ್ರಿಯಕರನೇ ತನ್ನ ಪ್ರಿಯತಮೆಯ ಹತ್ಯೆ ಮಾಡಿದ್ದಾನೆ. ಹರಿಣಿ (36) ಎಂಬಾಕೆಯನ್ನು ಪ್ರಿಯಕರ ಯಶಸ್ ಎಂಬಾತ ಚಾಕುವಿನಿಂದ 17 ಬಾರಿ ಇರಿದು ಹತ್ಯೆ ಮಾಡಿದ್ದಾನೆ.

ಜೂನ್ 6 ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿ ಟಿವಿ ಕ್ಯಾಮೆರಾ ಆಧರಿಸಿ ಜೋಡಿಯ ವಿವರಗಳನ್ನು ಪತ್ತೆಹಚ್ಚಲಾಗಿದೆ.

ಮೃತ ಹರಿಣಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಆದರೂ ಯಶಸ್ ಜತೆ ಅನೈತಿಕ ಸಂಬಂಧ ಹೊಂದಿದ್ದಳು. ಸದ್ಯ ಸುಬ್ರಹ್ಮಣ್ಯಪುರ ಠಾಣೆಯ ಪೊಲೀಸರಿಂದ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ.

ಜಾತ್ರೆಯಲ್ಲಿ ಪರಿಚಯವಾಗಿದ್ದ ಮಹಿಳೆ ಬಳಿ ಯಶಸ್ ಫೋನ್​ ನಂಬರ್​​ ಪಡೆದಿದ್ದ. ಬಳಿಕ ಸ್ನೇಹ ಬೆಳೆದು ಚಾಟಿಂಗ್, ಡೇಟಿಂಗ್, ಸುತ್ತಾಟ ಮಾಡಿದ್ದರು. ಕೆಲವು ಸಲ ಲೈಂಗಿಕ ಸಂಪರ್ಕ ಕೂಡ ಬೆಳೆಸಿದ್ದರು. ಪತಿ ದಾಸೇಗೌಡನಿಗೆ ಪತ್ನಿಯ ಅನೈತಿಕ ಸಂಬಂಧ ಗೊತ್ತಾಗಿತ್ತು. ಇದರಿಂದ ಆಕೆಯನ್ನು ಗಂಡ ಮನೆಯಲ್ಲೇ ಕೂಡಿ ಹಾಕಿದ್ದರು.

ಬಳಿಕ ಕೆಲವು ತಿಂಗಳ ನಂತರ ಮತ್ತೆ ಹೊರ ಬಂದಿದ್ದ ಹರಿಣಿ, ಈ ವೇಳೆ ತನ್ನ ಬಾಯ್​ಫ್ರೆಂಡ್ ಯಶಸ್ ಸಂಪರ್ಕಿಸಿದ್ದಾಳೆ. ಇತ್ತ ಹರಿಣಿ ಸಂಪರ್ಕಕ್ಕೆ ಸಿಗದೇ ಹುಚ್ಚನಂತೆ ಆಗಿದ್ದ ಪ್ರಿಯಕರ ಯಶಸ್​, ಸಿಕ್ಕರೆ ಸಾಯಿಸಲು ನಿರ್ಧರಿಸಿದ್ದ. ಹೀಗಾಗಿ ಹರಿಣಿಯನ್ನು ಕೊಲೆ ಮಾಡಲು ಚಾಕು ಕೂಡ ಖರೀದಿಸಿದ್ದ.

ಈ ಸುದ್ದಿಯನ್ನೂ ಓದಿ | Murder Case: ಸಹಜೀವನ ನಡೆಸುತ್ತಿದ್ದವನೇ ಮಹಿಳೆಯ ಹತ್ಯೆಗೈದು ಶವ ಸುಟ್ಟುಹಾಕಿದ!; ಇಬ್ಬರು ಅರೆಸ್ಟ್

ಜೂನ್ 6ರಂದು ಮಾತುಕತೆ ನಡೆಸಿ ಇಬ್ಬರು ಹೋಟೆಲ್​ಗೆ ಹೋಗಿದ್ದರು. ಲೈಂಗಿಕ ಕ್ರಿಯೆ ನಂತರ ಬಳಿಕ ಚಾಕುವಿನಿಂದ ಇರಿದು ಹರಿಣಿಯನ್ನು ಹತ್ಯೆಗೈದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹರಿಣಿ ತನ್ನನ್ನು ದೂರ ಮಾಡಿದ್ದಕ್ಕೆ​ ಕೊಲೆ ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.