ಮತ ಕಳ್ಳತನ ವಿರುದ್ಧ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿ ಬಿಜೆಪಿ ಪ್ರತಿಭಟನೆ
ಪಶ್ಚಿಮ ಪದವೀಧರ ಎಂಎಲ್ಸಿ ಚುನಾವಣೆ(MLC Election) ಮತದಾನ ಸಮಯದಲ್ಲಿ ಹಾವೇರಿ ನಗರದ ಭೂತ ನಂಬರ 85 ರಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪತ್ನಿ ಹೆಸರಲ್ಲಿ ಇನ್ನೋರ್ವ ಮಹಿಳೆ ಮತದಾನ ಹಕ್ಕು ಇಲ್ಲದ ಶಿಲ್ಪಾ ಬಡೆಮ್ಮನವರ ಮತ ಹಾಕಿದ್ದು ಇದು ಮತ ಕಳ್ಳತನ ಈ ಸಮಯದಲ್ಲಿ ಉಸ್ತುವಾರಿ ಸಚವರಾದ ರುದ್ರಪ್ಪ ಲಮಾಣಿ(Rudrappa lamani)ಯವರ ಜೊತೆಯಲ್ಲಿ ಮತದಾನ ನಡೆದಿದ್ದು ಮತ ಕಳ್ಳತನ ಕೆಲಸ ಕಾಂಗ್ರೆಸ್ ನಡೆಸಿದೆ
-
ಹಾವೇರಿ: ಅ. 23 ರಂದು ನಡೆದ ಪಶ್ಚಿಮ ಪದವೀಧರ ಎಂಎಲ್ಸಿ ಚುನಾವಣೆ(MLC Election) ಮತದಾನ ಸಮಯದಲ್ಲಿ ಹಾವೇರಿ ನಗರದ ಭೂತ ನಂಬರ 85 ರಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪತ್ನಿ ಹೆಸರಲ್ಲಿ ಇನ್ನೋರ್ವ ಮಹಿಳೆ ಮತದಾನ ಹಕ್ಕು ಇಲ್ಲದ ಶಿಲ್ಪಾ ಬಡೆಮ್ಮನವರ ಮತ ಹಾಕಿದ್ದು ಇದು ಮತ ಕಳ್ಳತನ ಈ ಸಮಯದಲ್ಲಿ ಉಸ್ತುವಾರಿ ಸಚವರಾದ ರುದ್ರಪ್ಪ ಲಮಾಣಿ(Rudrappa lamani)ಯವರ ಜೊತೆಯಲ್ಲಿ ಮತದಾನ ನಡೆದಿದ್ದು ಮತ ಕಳ್ಳತನ ಕೆಲಸ ಕಾಂಗ್ರೆಸ್ ನಡೆಸಿದೆ.
ಇದನ್ನೂ ಓದಿ: MLC Election 2026: ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ; ಹಾವೇರಿಯಲ್ಲಿ ಶೇ.75.81ರಷ್ಟು ಮತದಾನ
ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ರಾಜೀನಾಮೆ ನೀಡಬೇಕು. ತಪ್ಪಿತಸ್ಥ ಪೋಲಿಂಗ್ ಅಧಿಕಾರಿ ಗಳನ್ನು ಅಮಾನತ್ತು ಮಾಡಬೇಕು. ಮತ ಕಳ್ಳತನದಲ್ಲಿ ಭಾಗಿಯಾದವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಆಗಬೇಕು ಎಂದು ಜಿಲ್ಲಾ ಬಿಜೆಪಿಯಿಂದ ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಅರುಣ ಕುಮಾರ ಪುಜಾರ, ಗವಿಸಿದ್ದಪ್ಪ ದ್ಯಾಮಣ್ಣನವರ ಸೇರಿದಂತೆ ನೂರಾರು ಬಿಜೆಪಿ ಮುಖಂಡರು ಕಾರ್ಯಕರ್ತರು ಪೊಲೀಸ್ ಬ್ಯಾರಿಕೇಡ್ ಮುರಿದು ಕಾಂಗ್ರೆಸ್ ಕಚೇರಿಗೆ ಮುತ್ತಿ ಹಾಕಿ ಪ್ರತಿಭಟನೆ ನಡೆಸಿದರು.
ಈ ಸಮಯದಲ್ಲಿ ಬಾರೀಕೇಟ್ ತಲ್ಲುವಾಗ ಒಬ್ಬ ಪೊಲೀಸ್ ನ ಮೇಲೆ ಎತ್ತಿ ಹಾಕಿ ಗಾಯ ಗೊಳಿಸಿರುವ ದುರಂತ ನಡೆಯಿತು.