ಹಾವೇರಿಯಲ್ಲಿ ಸರಣಿ ಕಳ್ಳತನ; ಇಬ್ಬರು ಆರೋಪಿಗಳ ಬಂಧನ, 4.5 ಲಕ್ಷ ಮೌಲ್ಯದ ವಸ್ತುಗಳು ಜಪ್ತಿ
Haveri News: ಹಾವೇರಿ ನಗರದ ನಾಗೇಂದ್ರ ಮಟ್ಟಿಯಲ್ಲಿ ಸಂಚಲನ ಮೂಡಿಸಿದ್ದ ಸರಣಿ ಕಳ್ಳತನ ಪ್ರಕರಣವನ್ನು ಭೇದಿಸಿರುವ ಹಾವೇರಿ ಶಹರ ಠಾಣೆಯ ಪೊಲೀಸರ ವಿಶೇಷ ತಂಡವು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಒಂದೇ ರಾತ್ರಿ 7ಕ್ಕೂ ಹೆಚ್ಚು ಮನೆಗಳಲ್ಲಿ ಕಳ್ಳತನ ಮಾಡಿ, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಆರೋಪಿಗಳು ದೋಚಿದ್ದರು.
ಹಾವೇರಿ ಸರಣಿ ಕಳ್ಳತನ ಪ್ರಕರಣದ ಆರೋಪಿಗಳು. -
ಹಾವೇರಿ, ಜ.5: ಒಂದು ವಾರದ ಹಿಂದೆ ಹಾವೇರಿ ನಗರದ (Haveri News) ನಾಗೇಂದ್ರ ಮಟ್ಟಿಯಲ್ಲಿ ಸಂಚಲನ ಮೂಡಿಸಿದ್ದ ಸರಣಿ ಕಳ್ಳತನ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಒಂದೇ ರಾತ್ರಿ 7ಕ್ಕೂ ಹೆಚ್ಚು ಮನೆಗಳಲ್ಲಿ ಕಳ್ಳತನ ಮಾಡಿ, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಹಾವೇರಿ ಶಹರ ಠಾಣೆಯ ಪೊಲೀಸರ ವಿಶೇಷ ತಂಡವು ಅರೆಸ್ಟ್ ಮಾಡಿದೆ.
ಸರಣಿ ಕಳ್ಳತನಕ್ಕೆ ಸಂಬಂಧಿಸಿದಂತೆ ಹಾವೇರಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು, ಕಳ್ಳರ ಪತ್ತೆಗಾಗಿ ಜಿಲ್ಲಾ ಎಸ್ಪಿ ಯಶೋಧಾ ನಿರ್ದೇಶನದಲ್ಲಿ ಜಿಲ್ಲಾ ಎಎಸ್‌ಪಿ ಲಕ್ಷ್ಮಣ ಶಿರಕೋಳ , ಡಿವೈಎಸ್ಪಿ ಎಂ.ಎಸ್. ಪಾಟೀಲ್ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆ ಕೈಗೊಂಡಿತ್ತು.
ಕಳ್ಳರ ಸುಳಿವನ್ನು ಬೆನ್ನಟ್ಟಿದ ವಿಶೇಷ ತಂಡವು ದಾವಣಗೆರೆ ಮೂಲದ ಕತರ್ನಾಕ್ ಕಳ್ಳರನ್ನು ಭಾನುವಾರ ಬಂಧಿಸಿದೆ. ದಾವಣಗೆರೆ ನಗರದ 6ನೇ ಕ್ರಾಸ್ ಶಿನವನಗರದ ಆಟೋ ಚಾಲಕ ಮತ್ತು ಗುಜರಿ ವ್ಯಾಪಾರ ಮಾಡಿಕೊಂಡು ಕಳ್ಳತನ ದಂಧೆಗೆ ಇಳಿದಿದ್ದ ಇರ್ಪಾನ್ ಶೇಖ್ ಫಜಲಸಾಬ್ ಗುಜರಿ (35) ಹಾಗೂ ದಾವಣಗೆರೆಯ ಆಜಾದ್ ನಗರದ ಲಂಬು ದಾದಾಪೀರ್ ಫಜಲ್ ಸಾಬ್ ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 2,27,000 ಮೌಲ್ಯದ ಬೆಳ್ಳಿ, ಬಂಗಾರದ ಆಭರಣ, ಒಂದು ಮೊಬೈಲ್, ಒಂದು ಆಟೋ ಸೇರಿದಂತೆ ಒಟ್ಟು 4,50,590 ರೂ. ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
Body Found: ಮನೆಯಲ್ಲಿ ಮಲಗಿದ್ದ ತಾಯಿ- ಮಗು ಕೆರೆಯಲ್ಲಿ ಶವವಾಗಿ ಪತ್ತೆ
ಕಾರ್ಯಾಚರಣೆಯಲ್ಲಿ ಶಹರ ಠಾಣೆಯ ಸಿಪಿಐ ಮೋತಿಲಾಲ್ ಪವಾರ, ಪಿಎಸ್ಐಗಳಾದ ನಾಗರಾಜ ಟಿ.ಎಂ, ಎಂ.ಜಿ. ವಗ್ಗಣ್ಣನವರ, ಜಿ.ಜಿ ದೊಡ್ಡಮನಿ, ಸಿಬ್ಬಂದಿಗಳಾದ ಯಲ್ಲಪ್ಪ ತಹಸೀಲ್ದಾರ, ಮುತ್ತಪ್ಪ ಲಮಾಣಿ, ಚನ್ನಬಸಪ್ಪ ಆರ್.ಬಿ. ಮಲ್ಲೇಶ ಮಾಯಗೊಂಡರ್, ನೀಲಕಂಠ ಲಿಂಗರಾಜ ಹಾಗೂ ಮಾರುತಿ ಹಾಲಭಾವಿ, ಸತೀಶ ಮಾರುಕಟ್ಟೆ ಮತ್ತಿತರರು ಇದ್ದರು.