ಹಾವೇರಿ: ಜಮೀನಿಗೆ ರಾತ್ರಿ ವೇಳೆ ನೀರು ಹಾಯಿಸಲು ತೆರಳಿದ್ದ ಸಹೋದರರ ಮೇಲೆ ಚಿರತೆ ದಾಳಿ (Leopard Attack) ನಡೆಸಿದ ಪರಿಣಾಮ ಓರ್ವ ಮೃತಪಟ್ಟು, ಇನ್ನೊಬ್ಬ ಗಂಭೀರ ಗಾಯಗೊಂಡ ಘಟನೆ ಹಾವೇರಿ ಜಿಲ್ಲೆಯ (Haveri News) ರಟ್ಟಿಹಳ್ಳಿ ತಾಲೂಕು ಕಣವಿಶಿದ್ಗೇರಿ ಗ್ರಾಮದಲ್ಲಿ ನಡೆದಿದೆ. ಚಿರತೆ ದಾಳಿಗೊಳಗಾದ ಗ್ರಾಮದ ಬೀರಪ್ಪ ಹನುಮಂತಪ್ಪ ಬಳಗಾವಿ (30) ಮೃತಪಟ್ಟಿದ್ದು, ಇನ್ನೊಬ್ಬ ಸಹೋದರ ಗಣೇಶ ಬಳಗಾವಿ ಗಂಭೀರ ಗಾಯಗೊಂಡಿದ್ದಾರೆ. ಶುಕ್ರವಾರ ರಾತ್ರಿ ತಮ್ಮ ಜಮೀನಿಗೆ ನೀರು ಹಾಯಿಸಲು ತೆಳಿದ್ದ ವೇಳೆ ಏಕಾಏಕಿ ಚಿರತೆ ದಾಳಿ ನಡೆಸಿದ್ದು ಸ್ಥಳದಲ್ಲಿಯೇ ಬೀರಪ್ಪ ಎಂಬುವರು ಮೃತಪಟ್ಟಿದ್ದಾರೆ. ಇನ್ನೊಬ್ಬ ಸಹೋದರ ಗಣೇಶ ಎಂಬುವರು ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ರಟ್ಟಿಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿದ್ದಾರೆ. ರಟ್ಟೀಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಈ ಸುದ್ದಿಯನ್ನೂ ಓದಿ | Fire Accident: ಬಿಡದಿ ಬಳಿ ಅಗ್ನಿ ದುರಂತದಲ್ಲಿ ನಾಲ್ವರು ಕಾರ್ಮಿಕರ ದುರ್ಮರಣ, ಮೂವರಿಗೆ ಗಾಯ
ಇಬ್ಬರು ಮಕ್ಕಳನ್ನು ಕೊಂದು ಮಹಿಳೆ ಆತ್ಮಹತ್ಯೆ, ಪತಿಯ ಮೇಲೆ ದೂರು
ರಾಜಧಾನಿಯಲ್ಲಿ ಒಂದು ಘೋರ ದುರಂತ ಸಂಭವಿಸಿದ್ದು, 5 ವರ್ಷದ ಪುತ್ರಿ ಹಾಗು ಒಂದುವರೆ ವರ್ಷದ ಪುತ್ರನ ಕೊಂದು ಮಹಿಳೆ ಆತ್ಮಹತ್ಯೆಗೆ (Self harming) ಶರಣಾಗಿದ್ದಾರೆ. ಬೆಂಗಳೂರಿನ ಬಾಗಲಗುಂಟೆ ಪಾಳ್ಯ ಭುವನೇಶ್ವರಿ ನಗರದಲ್ಲಿ ಈ ದುರಂತ ಸಂಭವಿಸಿದೆ. ಐದು ವರ್ಷದ ಪುತ್ರಿ ಹಾಗೂ ಒಂದೂವರೆ ವರ್ಷದ ಪುತ್ರನ ಕೊಂದು ತಾಯಿ ವಿಜಯಲಕ್ಷ್ಮಿ ಎಂಬವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬಾಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 5 ವರ್ಷದ ಹಿಂದೆ ವಿಜಯಲಕ್ಷ್ಮಿ, ರಮೇಶ್ ಎಂಬಾತನ ಜೊತೆ ಮದುವೆ ಮಾಡಿಕೊಂಡಿದ್ರು. ಆಕೆಯ ಪತಿ ಮಾಲ್ನಲ್ಲಿ ಕೆಲಸ ಮಾಡುತ್ತಿದ್ದ. ಬೆಂಗಳೂರಲ್ಲಿ ನೆಲೆಸಿದ್ದ ಈ ದಂಪತಿಗೆ 4 ವರ್ಷದ ಬೃಂದಾ, ಒಂದೂವರೆ ವರ್ಷದ ಭುವನ್ ಎಂಬ ಇಬ್ಬರು ಮಕ್ಕಳಿದ್ದರು. ಇವರ ಸಂಸಾರದಲ್ಲಿ ಕೆಲ ಸಮಸ್ಯೆಗಳಿದ್ದವು, ಕೌಟುಂಬಿಕ ಸಮಸ್ಯೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ನಿನ್ನೆ ವಿಜಯಲಕ್ಷ್ಮಿ ತಂಗಿ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆಂದು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ | Fire Tragedy: ಮಡಿಕೇರಿ ಶಾಲೆ ಅಗ್ನಿ ದುರಂತಕ್ಕೆ ಬಿಗ್ ಟ್ವಿಸ್ಟ್; ಅನುಮತಿ ಇಲ್ಲದೆ ವಸತಿ ವ್ಯವಸ್ಥೆ
ತಾನು ಮತ್ತೊಂದು ಮದುವೆಯಾಗಿದ್ದು, ಡೈವೋರ್ಸ್ ಕೊಡುವಂತೆ ಪತ್ನಿಗೆ ಪತಿ ರಮೇಶ್ ಬೆದರಿಕೆ ಹಾಕುತ್ತಿದ್ದ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಹೀಗಾಗಿ ಪದೇ ಪದೆ ಕುಟುಂಬದಲ್ಲಿ ಜಗಳ ಆಗುತ್ತಿತ್ತು. ಈ ವಿಚಾರ ವಿಜಯಲಕ್ಷ್ಮಿ ತನ್ನ ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದಳು ಎನ್ನಲಾಗುತ್ತಿದೆ. ಇದರಿಂದಲೇ ನೊಂದು ತನ್ನ ಮಕ್ಕಳನ್ನು ಕೊಂದು ವಿಜಯಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.