ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Leopard Attack: ಚಿರತೆ ದಾಳಿಯಿಂದ ಸಹೋದರ ಸಾವು; ಮೃತ ದೇಹಕ್ಕೆ ರಾಖಿ ಕಟ್ಟಿದ ಸಹೋದರಿ, ಓದಿದವರ ಕರುಳು ಚುರ್‌ ಎನ್ನುತ್ತೆ ಈ ಸ್ಟೋರಿ

ಚಿರತೆ ದಾಳಿಯಿಂದ ಮೂರು ವರ್ಷದ ಬಾಲಕ ಸಾವನ್ನಪ್ಪಿದ್ದು, ಆತನ ಮೃತ ದೇಹಕ್ಕೆ ಸಹೋದರಿ ರಾಖಿ ಕಟ್ಟಿರುವ ಘಟನೆ ಮಹಾರಾಷ್ಟ್ರದ ನಾಸಿಕ್ ನಲ್ಲಿ ನಡೆದಿದೆ. ರಕ್ಷಾ ಬಂಧನದ ದಿನವೇ ಈ ದುರಂತ ಸಂಭವಿಸಿದ್ದು, ಮನೆ ಮಗನ ಸಾವಿನಿಂದ ಮನೆಯವರ ಆಕ್ರಂದನ ಮುಗಿಲು ಮುಟ್ಟಿತ್ತು.

ಚಿರತೆ ದಾಳಿಯಿಂದ ಸಹೋದರ ಸಾವು; ಮೃತ ದೇಹಕ್ಕೆ ರಾಖಿ ಕಟ್ಟಿದ ಸಹೋದರಿ,

ನಾಸಿಕ್: ಮನೆಯಲ್ಲಿ ರಕ್ಷಾ ಬಂಧನ (Rakshabandhan) ಆಚರಣೆಯ ತಯಾರಿ ನಡೆಯುತ್ತಿತ್ತು. ಆದರೆ ಅಷ್ಟರಲ್ಲಿ ದುರಂತವೊಂದು ಸಂಭವಿಸಿದೆ. ಸಹೋದರನ ಮೃತ ದೇಹಕ್ಕೆ ರಾಖಿ (rakhi) ಕಟ್ಟಬೇಕಾದ ದುಸ್ಥಿತಿ ಸಹೋದರಿಯೊಬ್ಬಳಿಗೆ ಬಂದೊದಗಿದೆ. ರಕ್ಷಾ ಬಂಧನದ ದಿನವೇ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮೂರು ವರ್ಷದ ಬಾಲಕನನ್ನು ಚಿರತೆ (Leopard Attack) ಹೊತ್ತೊಯ್ದು ಕೊಂದು ಹಾಕಿದ್ದು, ಬಾಲಕನ ಅಂತ್ಯಕ್ರಿಯೆಗೂ ಮುನ್ನ ಸಹೋದರಿ ಆತನ ಕೈಗೆ ರಾಖಿಯನ್ನು ಕಟ್ಟಿದ್ದಾಳೆ. ಈ ದುರಂತ ಘಟನೆ ಮಹಾರಾಷ್ಟ್ರದ (Maharashtra) ನಾಸಿಕ್‌ನಲ್ಲಿ (Nashik) ನಡೆದಿದೆ.

ಶುಕ್ರವಾರ ರಾತ್ರಿ 8.30ರ ಸುಮಾರಿಗೆ ಆಯುಷ್ ಎಂಬ ಬಾಲಕ ತನ್ನ ಮನೆಯ ಬಳಿ ಆಟವಾಡುತ್ತಿದ್ದ. ಇದ್ದಕ್ಕಿದ್ದಂತೆ ಚಿರತೆಯೊಂದು ಆತನ ಮೇಲೆ ದಾಳಿ ನಡೆಸಿದೆ. ಆದರೆ ಮನೆಯವರ ಗಮನಕ್ಕೆ ಇದು ಬಂದಿರಲಿಲ್ಲ. ಬಾಲಕನ ತಂದೆ ಆತನನ್ನು ಕರೆದಾಗ ಆತ ಪ್ರತಿಕ್ರಿಯಿಸದೇ ಇದ್ದುದರಿಂದ ಬಳಿಕ ಮನೆ ಮಂದಿ ಎಲ್ಲ ಸೇರಿ ಆತನನ್ನು ಹುಡುಕಿದರು. ಮನೆಯಿಂದ ಸ್ವಲ್ಪ ದೂರದಲ್ಲಿ ಆಯುಷ್‌ ಮೃತದೇಹ ಪತ್ತೆಯಾಗಿದೆ. ಮನೆಯ ಅಂಗಳದಿಂದಲೇ ಬಾಲಕನ ಮೃತ ದೇಹ ಇರುವಲ್ಲಿನವರೆಗೆ ರಕ್ತದ ಕಲೆಗಳು ಕಂಡು ಬಂದಿದೆ.

ಮಹಿಳೆಯನ್ನು ಕೊಂದ ಚಿರತೆ

ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ಗುರುವಾರ ಹೊಲದಲ್ಲಿ ಕೆಲಸ ಮಾಡುತ್ತಿದ್ದ 35 ವರ್ಷದ ಮಹಿಳೆಯ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ ಎಂದು ಅಮನ್‌ಗಢ ಹುಲಿ ಅಭಯಾರಣ್ಯದ ಅರಣ್ಯ ಅಧಿಕಾರಿ ಅಂಕಿತಾ ಕಿಶೋರ್ ತಿಳಿಸಿದ್ದಾರೆ.

ಇದನ್ನೂ ಓದಿ: Viral Video: 15 ಸಾವಿರಕ್ಕೂ ಹೆಚ್ಚು ರಾಖಿ ಕಟ್ಟಿಸಿಕೊಂಡ ಪಾಟ್ನಾದ ಖಾನ್ ಸರ್

ಅಫ್ಜಲ್‌ಗಢ ಪ್ರದೇಶದ ಭಿಕ್ಕವಾಲಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪೂನಂ ಎಂಬ ಮಹಿಳೆ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಚಿರತೆ ಆಕೆಯ ಮೇಲೆ ಮಾರಣಾಂತಿಕವಾಗಿ ದಾಳಿ ಮಾಡಿದೆ ಎಂದು ಹೇಳಿದರು. ಮಹಿಳೆಯನ್ನು ಕೊಂದು ಆಕೆಯ ಭುಜದಿಂದ ಮಾಂಸವನ್ನು ತಿಂದು ಹಾಕಿದೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.