Fire Accident: ಬಿಡದಿ ಬಳಿ ಅಗ್ನಿ ದುರಂತದಲ್ಲಿ ನಾಲ್ವರು ಕಾರ್ಮಿಕರ ದುರ್ಮರಣ, ಮೂವರಿಗೆ ಗಾಯ
Ramanagara: ಅವಘಡದಲ್ಲಿ 7 ಮಂದಿಗೆ ಸುಟ್ಟ ಗಾಯಗಳಾಗಿದ್ದವು. ಗಾಯಾಳುಗಳನ್ನ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಗೊಂಡ ಮೂವರು ಕಾರ್ಮಿಕರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಘಟನೆಗೆ ಕಟ್ಟಡ ನಿರ್ಮಾಣ ಸಂಸ್ಥೆಯ ನಿರ್ಲಕ್ಷ್ಯ ಕಾರಣ ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸಿವೆ.

-

ರಾಮನಗರ: ಜಿಲ್ಲೆಯ (Ramanagara) ಬಿಡದಿ (Bidadi) ಸಮೀಪದ ಬೀಮೇನಹಳ್ಳಿ ಬಳಿ ಸಂಭವಿಸಿದ್ದ ಅಗ್ನಿ ದುರಂತದಲ್ಲಿ (Fire Accident) ಗಾಯಗೊಂಡಿದ್ದ 7 ಕಾರ್ಮಿಕರ ಪೈಕಿ, 4 ಮಂದಿ ಕಾರ್ಮಿಕರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಜಾಯಿದ್ ಅಲಿ, ಶಪೀಜುಲ್ ಶೇಕ್, ಮನ್ರೂಲ್ ಶೇಕ್, ಜಿಯಾಬುರ್ ಶೇಕ್ ಮೃತ ಕಾರ್ಮಿಕರಾಗಿದ್ದಾರೆ. ಮಂಗಳವಾರ (ಅ.7) ಶೆಡ್‌ನಲ್ಲಿ ಗ್ಯಾಸ್ ಲೀಕ್ ಆಗಿ ಈ ಅಗ್ನಿ ಅವಘಡ ಸಂಭವಿಸಿತ್ತು.
ಈ ಅವಘಡದಲ್ಲಿ 7 ಮಂದಿಗೆ ಸುಟ್ಟಗಾಯಗಳಾಗಿದ್ದವು. ಗಾಯಾಳುಗಳನ್ನ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಗೊಂಡ ಮೂವರು ಕಾರ್ಮಿಕರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಘಟನೆಗೆ ಕಟ್ಟಡ ನಿರ್ಮಾಣ ಸಂಸ್ಥೆಯ ನಿರ್ಲಕ್ಷ್ಯ ಕಾರಣ ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸಿವೆ. ಸೂಕ್ತ ಪರಿಹಾರಕ್ಕೆ ಒತ್ತಾಯಿಸಿವೆ. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Pro-Pakistan slogans: ಬಿಡದಿ ಕಾರ್ಖಾನೆಯಲ್ಲಿ ಪಾಕ್ ಪರ ಬರಹ; ಹೈಮದ್ ಹುಸೇನ್, ಸಾದಿಕ್ ಅರೆಸ್ಟ್
ಬಾಲಕಿ ಮೇಲೆ ಅತ್ಯಾಚಾರ; ಕೊಲೆ ಆರೋಪಿಗೆ ಮರಣ ದಂಡನೆ
ಬೆಳಗಾವಿ: ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ವ್ಯಕ್ತಿಗೆ ಪೋಸ್ಕೊ (POCSO) ಕಾಯ್ದೆಯಡಿ ನ್ಯಾಯಾಲಯ ಕೆಲವು ದಿನಗಳ ಗಿಂದೆ ಮರಣ ದಂಡನೆ ವಿಧಿಸಿತ್ತು. 2019ರ ಅಕ್ಟೋಬರ್‌ನಲ್ಲಿ ಬೆಳಗಾವಿಯ ರಾಯ್‌ಬಾಗ್ ತಾಲೂಕಿನ ಭರತೇಶ್ ರಾವ್ ಸಾಬ್ ಮಿರ್ಜಿ (28) ಎಂಬಾತ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ. ಬಾಲಕಿ ಮನೆಗೆ ಹಿಂತಿರುಗುತ್ತಿದ್ದಾಗ ಅಪರಾಧಿಯು ಆಕೆಯನ್ನು ಅಪಹರಿಸಿ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ.
ಭರತೇಶ್ ರಾವ್ ಸಾಬ್ ಮಿರ್ಜಿ ಬಾಲಕಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿ ಕತ್ತು ಹಿಸುಕಿ ಕೊಲೆ ಮಾಡಿದ್ದ. ಬಳಿಕ ಆಕೆಯ ಶವವನ್ನು ಕಲ್ಲಿನಲ್ಲಿ ಕಟ್ಟಿ ಬಾವಿಗೆ ಎಸೆದಿದ್ದಾನೆ ಎಂದು ಆರೋಪಿಸಲಾಗಿತ್ತು. ಬಾಲಕಿ ಮನೆಗೆ ಹಿಂತಿರುಗದ ಕಾರಣ ಆಕೆಯ ತಂದೆ ಕುಡುಚಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ತನಿಖೆಯ ಬಳಿಕ ಭರತೇಶ್ ರಾವ್ ಸಾಬ್ ಮಿರ್ಜಿಯನ್ನು ಬಂಧಿಸಲಾಗಿದ್ದು ಬಳಿಕ ನ್ಯಾಯಾಲಯವು ಅವನನ್ನು ತಪ್ಪಿತಸ್ಥನೆಂದು ಘೋಷಿಸಿತ್ತು. ನ್ಯಾಯಾಲಯವು ಆರೋಪಿಗೆ 45,000 ರೂ. ದಂಡವನ್ನು ಸಹ ವಿಧಿಸಿದೆ.