Haveri News: ದೇಗುಲ ಕಳಸಾರೋಹಣ ವೇಳೆ ಕ್ರೇನ್ ಬಕೆಟ್ ಮುರಿದು ವ್ಯಕ್ತಿ ಸಾವು, ಮತ್ತೊಬ್ಬ ಗಂಭೀರ
Haveri News: ದೇವಸ್ಥಾನದ ಗೋಪುರದ ಮೇಲೆ ಕಳಸ ಹಿಡಲು ಕ್ರೇನ್ ಮೂಲಕ ಹತ್ತಿರ ಹೋಗುತ್ತಿದ್ದಂತೆ ಕ್ರೇನ್ ಬಕೆಟ್ ಕಳಚಿ ಬಿದ್ದು ದುರಂತ ಸಂಭವಿಸಿದೆ. ಈ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಕ್ರೇನ್ ಮಾಲೀಕನ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
![Temple](https://cdn-vishwavani-prod.hindverse.com/media/images/Temple.max-1280x720.jpg)
![Profile](https://vishwavani.news/static/img/user.png)
ಹಾವೇರಿ: ಗಂಗಾಪರಮೇಶ್ವರಿ ದೇಗುಲದ ಕಳಸಾರೋಹಣ ಸಂದರ್ಭದಲ್ಲಿ ಕ್ರೇನ್ ಬಕೆಟ್ ಮುರಿದು ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ (Haveri News) ಹಾನಗಲ್ ತಾಲೂಕು ಶೇಷಗಿರಿ ಗ್ರಾಮದಲ್ಲಿ ನಡೆದಿದೆ. ಕಳಸವನ್ನು ದೇಗುಲದ ಗೋಪುರದ ಮೇಲೆ ಕೂರಿಸುವಾಗ ಅವಘಡ ಸಂಭವಿಸಿದೆ. ಈ ವೇಳೆ ಮಂಜು ಪಾಟೀಲ್ (42) ಮೃತಪಟ್ಟಿದ್ದು, ಮಂಜು ಬಡಿಗೇರ್ ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡಿರುವ ವ್ಯಕ್ತಿಯನ್ನು ಹಾನಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕ್ರೇನ್ ಮೂಲಕ ದೇವಸ್ಥಾನದ ಗೋಪುರದ ಹತ್ತಿರ ಹೋಗುತ್ತಿದ್ದಂತೆ ಕ್ರೇನ್ ಬಕೆಟ್ ಕಳಚಿ ಬಿದ್ದಿದೆ. ಹೀಗಾಗಿ , ಕ್ರೇನ್ ಮಾಲೀಕನ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇವಸ್ಥಾನದ ಗೋಪುರದ ಮೇಲೆ ಕಳಸ ಹಿಡಲು ಕ್ರೇನ್ ಮೂಲಕ ಹತ್ತಿರ ಹೋಗುತ್ತಿದ್ದಂತೆ ಕ್ರೇನ್ ಬಕೆಟ್ ಕಳಚಿ ಬಿದ್ದು ದುರಂತ ಸಂಭವಿಸಿದೆ. ಈ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಅಡೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಕ್ರೇನ್ ಮಾಲೀಕನ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Road Accident: ರಾಜ್ಯದಲ್ಲಿ ನಾಲ್ಕು ಕಡೆ ಘೋರ ಅಪಘಾತ, ನಾಲ್ವರು ಸಾವು
ಮ್ಯಾಪ್ ನೋಡುತ್ತಾ ಕಾರು ಚಲಾಯಿಸಿ ಕ್ಯಾಂಟರ್‌ಗೆ ಡಿಕ್ಕಿ, ವೈದ್ಯ ಸಾವು
ಬೆಂಗಳೂರು : ಗೂಗಲ್ ಮ್ಯಾಪ್ (Google maps) ಬಳಸಿ ಚಲಾಯಿಸುತ್ತಾ ಇತ್ತೀಚಿಗೆ ಹಲವಾರು ಅಪಘಾತಗಳು (Road Accident) ಸಂಭವಿಸಿವೆ. ಆ ಪಟ್ಟಿಗೆ ಬೆಂಗಳೂರಿನಲ್ಲೇ (Bengaluru news) ಮತ್ತೊಂದು ಘೋರ ಅಪಘಾತ ಸೇರ್ಪಡೆಯಾಗಿದೆ. ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ಹೊಸಕೋಟೆಯಲ್ಲಿ ಘಟನೆ ನಡೆದಿದೆ. ಗೂಗಲ್ ಮ್ಯಾಪ್‌ನಲ್ಲಿ ಮಗ್ನನಾಗಿ ಚಾಲಕ ವೇಗವಾಗಿ ಕಾರು ಚಾಲನೆ ಮಾಡುತ್ತ ರಸ್ತೆ ಬದಿಯಲ್ಲಿ ನಿಂತಿದ್ದ ಕ್ಯಾಂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ವೈದ್ಯರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತ ವೈದ್ಯರನ್ನು ಹೈದ್ರಾಬಾದ್ ಮೂಲದ ಅಮರ್ ಪ್ರಸಾದ ಎಂದು ಗುರುತಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಬಳಿಯ ರಾಷ್ಟ್ರೀಯ ಹೆದ್ದಾರಿ 648ರಲ್ಲಿ ಭೀಕರ ಅಪಘಾತ ಸಂಭವಿಸಿದೆ. ಗೂಗಲ್ ಮ್ಯಾಪ್‌ನಲ್ಲಿ ಮಗ್ನನಾಗಿದ್ದ ಕಾರು ಚಾಲಕ ವೇಗವಾಗಿ ಹೋಗಿ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಕಾರಿನಲ್ಲಿದ್ದ ವೈದ್ಯರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾನೆ.
ಹೈದ್ರಾಬಾದ್ ಮೂಲದ ಅಮರ್ ಪ್ರಸಾದ್, ವೇಣು ಮತ್ತು ಪ್ರವಳಿಕಾ ಎನ್ನುವ ಮೂವರು ಸ್ನೇಹಿತರು ತಮಿಳುನಾಡಿನ ಪಳನಿ ದೇವಸ್ಥಾನಕ್ಕೆ ಹೋಗಬೇಕು ಎಂದು ಕಾರು ಏರಿದ್ದಾರೆ. ಬೆಳಗಿನ ಜಾವ 2 ಗಂಟೆಗೆ ಹೈದ್ರಾಬಾದ್‌ನಿಂದ ಹೊರಟವರು, ಬೆಳಗ್ಗೆ 10 ಗಂಟೆ ಹೊತ್ತಿಗೆ ಹೊಸಕೋಟೆ ಬಳಿ ಬಂದಿದ್ದರು.
ಈ ವೇಳೆ ಗೂಗಲ್ ಮ್ಯಾಪ್ ನೋಡುತ್ತ ಕಾರು ಚಾಲನೆ ಮಾಡಿದ ಚಾಲಕ, ಮ್ಯಾಪ್‌ನತ್ತಲೇ ಹೆಚ್ಚು ಗಮನಹರಿಸಿದ್ದಾನೆ. ನೋಡ ನೋಡುತ್ತಿದ್ದಂತೆಯೇ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಕಾರ್‌ನ ಹಿಂಭಾಗದಲ್ಲಿ ಕೂತಿದ್ದ ಹೈದರಾಬಾದ್ ಮೂಲದ ವೈದ್ಯ ಅಮರ್ ಪ್ರಸಾದ್ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಇನ್ನುಳಿದ ಇಬ್ಬರಿಗೆ ಗಾಯಗಳಾಗಿವೆ. ಅವರನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಟ್ರಾಕ್ಟರ್‌ಗೆ ಕಾರು ಡಿಕ್ಕಿ, ಮಹಿಳೆ ಸಾವು
ಕಲಬುರ್ಗಿ : ಕಲಬುರ್ಗಿಯಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಕಬ್ಬು ತುಂಬಿದ ಟ್ರಾಕ್ಟರ್ ಗೆ ಕಾರು ಢಿಕ್ಕಿಯಾಗಿ ಸ್ಥಳದಲ್ಲೇ ಮಹಿಳೆ ಮೃತಪಟ್ಟಿದ್ದಾರೆ. ಮೂವರು ಗಾಯಗೊಂಡಿರುವ ಘಟನೆ ಅಫಜಲಪುರ ತಾಲ್ಲೂಕಿನ ಚೌಡಾಪುರ ತಾಂಡ ಬಳಿ ನಡೆದಿದೆ.
ಕಲಬುರಗಿ ನಗರ ಪ್ರಶಾಂತ ನಗರ ನಿವಾಸಿ ವಿದ್ಯಾ (40) ಸ್ಥಳದಲ್ಲೇ ಮೃತಪಟ್ಟ ದುರ್ದೈವಿ. ನಿತಿನ್ ಕುಮಾರ್ (42) ಮಕ್ಕಲಾದ್ ವೈಷ್ಣವಿ (15) ಗಂಭೀರ ಗಾಯಗೊಂಡಿದ್ದು, ವೇದಾಂತ (10) ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಗಾಯಗೊಂಡವರಿಗೆ ಕಲಬುರ್ಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: Road Accident: ಭೀಕರ ರಸ್ತೆ ಅಪಘಾತ; ಮಹಾ ಕುಂಭಮೇಳಕ್ಕೆ ತೆರಳುತ್ತಿದ್ದ 8 ಮಂದಿ ಬಲಿ
ಚೌಡಾಪುರ ತಾಂಡಾ ಬಳಿ ಕಬ್ಬು ತುಂಬಿಕೊಂಡು ಹೊರಟಿದ್ದ ಟ್ರಾಕ್ಟರ್ ಗೆ ಕಲಬುರ್ಗಿ ಕಡೆಯಿಂದ ವೇಗವಾಗಿ ಬಂದಂ ಕಾರು ಡಿಕ್ಕಿ ಹೊಡೆದಿದೆ. ಹಾಗಾಗಿ ಈ ಒಂದು ದುರಂತ ಸಂಭವಿಸಿದೆ.ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರೀಶೀಲಿಸಿದರು. ಅಪಘಾತದ ಕುರಿತು ದೇವಲಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.