Health Alert: ಮೆಹಂದಿಯಲ್ಲೂ ಆರೋಗ್ಯಕ್ಕೆ ಮಾರಕ ಅಂಶ ಪತ್ತೆ, ನಿಷೇಧ ಚಿಂತನೆ
ಮೆಹಂದಿ ಬಳಕೆ ವಿಚಾರವಾಗಿ ಈಗಾಗಲೇ ಸಾವಿರಾರು ದೂರುಗಳು ಆರೋಗ್ಯ ಇಲಾಖೆಗೆ ಬಂದಿವೆ. ಬ್ರ್ಯಾಂಡ್ ಹೆಸರಿನಲ್ಲಿ ಕಳಪೆ ಗುಣಮಟ್ಟದ ಮೆಹಂದಿ ಪೌಡರ್, ಐ ಲೈನರ್, ಕಾಜಲ್ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ, ಮೆಹಂದಿಯನ್ನೂ ಕೂಡ ಕೇಂದ್ರ ಸರ್ಕಾರದ ಅಧಿನಿಯಮಕ್ಕೆ ಒಳಪಡಿಸುವಂತೆ ಆರೋಗ್ಯ ಇಲಾಖೆ ಪತ್ರ ಬರೆದಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಟ್ಯಾಟೂ (Tattoo) ಹಾಗೂ ಲಿಪ್ಸ್ಟಿಕ್ (Lipstick) ಗಳಲ್ಲಿ ಕ್ಯಾನ್ಸರ್‌ಕಾರಕ ಅಂಶಗಳು ಕಂಡುಬಂದಿರುವ ಬಳಿಕ ಇದೀಗ ಮೆಹೆಂದಿ (Mehendi) ಯಲ್ಲೂ ಅಪಾಯಕಾರಿ ರಾಸಾಯನಿಕ ಅಂಶಗಳು ಪತ್ತೆಯಾಗಿವೆ. ಕಳಪೆ ಗುಣಮಟ್ಟದ ಮೆಹೆಂದಿಯಿಂದ ಚರ್ಮ ರೋಗ (Skin disease), ಸ್ಕಿನ್ ಅಲರ್ಜಿ, ಕಡಿತದಂತಹ ಸಮಸ್ಯೆಯಿಂದ ಜನರು ಬಳಲುತ್ತಿರುವುದರಿಂದ ಮೆಹೆಂದಿ ಮೇಲೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ (Health alert) ಚಿಂತನೆ ನಡೆಸಿದೆ.
ಮೆಹಂದಿ ಬಳಕೆ ವಿಚಾರವಾಗಿ ಈಗಾಗಲೇ ಸಾವಿರಾರು ದೂರುಗಳು ಆರೋಗ್ಯ ಇಲಾಖೆಗೆ ಬಂದಿವೆ. ಬ್ರ್ಯಾಂಡ್ ಹೆಸರಿನಲ್ಲಿ ಕಳಪೆ ಗುಣಮಟ್ಟದ ಮೆಹಂದಿ ಪೌಡರ್, ಐ ಲೈನರ್, ಕಾಜಲ್ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ, ಮೆಹಂದಿಯನ್ನೂ ಕೂಡ ಕೇಂದ್ರ ಸರ್ಕಾರದ ಅಧಿನಿಯಮಕ್ಕೆ ಒಳಪಡಿಸುವಂತೆ ಆರೋಗ್ಯ ಇಲಾಖೆ ಪತ್ರ ಬರೆದಿದೆ.
ಆರೋಗ್ಯ ಇಲಾಖೆ ನೂರಾರು ಪ್ರಾಡೆಕ್ಟ್ಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಆಗ ವಿಚಾರ ಬಹಿರಂಗಗೊಂಡಿದೆ. ರಸ್ತೆ ಬದಿ ಬ್ರ್ಯಾಂಡ್ ಹೆಸರಿನ ಪ್ರಾಡಕ್ಟ್ ಖರೀದಿಸದಂತೆ ಆರೋಗ್ಯ ಇಲಾಖೆ ಸಲಹೆ ನೀಡಿದ್ದಾರೆ. ಇನ್ನು, ಅವಧಿ ಮುಗಿದ ಕಾಸ್ಮೆಟಿಕ್ಸ್ಗಳನ್ನು ಬಳಸುವುದರಿಂದ ಚರ್ಮದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಇಲಾಖೆ ಎಚ್ಚರಿಸಿದೆ.
ಟ್ಯಾಟೂ ಹಾಕಲು ಬಳಸುವ ಬಣ್ಣ ಅಪಾಯಕಾರಿಯಾಗಿದೆ ಅಂತ ವರದಿಯಲ್ಲಿ ಬಹಿರಂಗಗೊಂಡಿದೆ. ಟ್ಯಾಟೂ ಬಣ್ಣದಲ್ಲಿ 22 ಹೆವಿ ಮೆಟಲ್ ಇದ್ದು, ಇದು ಕ್ಯಾನ್ಸರ್ಗೆ ಕಾರಣವಾಗಬಹುದು ಎಂದು ಎಚ್ಚರಿಸಲಾಗಿದೆ. ಟ್ಯಾಟೂ ಹಾಕಲು ಮಾರ್ಗಸೂಚಿ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಆರೋಗ್ಯ ಇಲಾಖೆ ಮುಂದಾಗಿದೆ. ಜೊತೆಗೆ ಲಿಪ್ಸ್ಟಿಕ್ನಲ್ಲಿ ಕಳಪೆ ಗುಣಮಟ್ಟದ ಬಣ್ಣ, ವ್ಯಾಕ್ಸ್ ಬಳಕೆಯ ಆತಂಕ ಎದುರಾಗಿದೆ. ಕಳಪೆ ಲಿಪ್ಸ್ಟಿಕ್ನಿಂದ ಅಲರ್ಜಿಕ್ ರಿಯಾಕ್ಷನ್ ಜೊತೆಗೆ ತುಟಿಗಳ ನ್ಯಾಚುರಲ್ ಪಿಂಗ್ಮೆಂಟೇಷನ್ ಹಾಳಾಗುತ್ತದೆ. ರಾಜ್ಯದ ಎಲ್ಲ ಔಷಧ ಮಳಿಗೆಗಳಲ್ಲಿ ಆಂಟಿಬಯೋಟಿಕ್ ಔಷಧಗಳ ದುರ್ಬಳಕೆ ಆಗಿರುವುದು ಪತ್ತೆಯಾಗಿದೆ.
ಹಸಿರು ಬಟಾಣಿ ಹಾಗೂ ಎಣ್ಣೆಯಲ್ಲಿ ಕರಿದ ಹಸಿರು ಬಟಾಣಿಯಲ್ಲಿ ಕಲರಿಂಗ್ ಏಜೆಂಟ್ ಬಳಸಿರುವುದು ಪತ್ತೆಯಾಗಿತ್ತು. 106 ಮಾದರಿಗಳನ್ನು ಸಂಗ್ರಹಿಸಿದ್ದು 31 ಸ್ಯಾಂಪಲ್ಸ್ ವಿಶ್ಲೇಷಣೆಗೆ ಒಳಪಡಿಸಿ ವರದಿ ಬಿಡುಗಡೆಯಾಗಿತ್ತು. ಈ 31 ಮಾದರಿಗಳಲ್ಲಿ 26 ಮಾದರಿಗಳು ಅಸುರಕ್ಷಿತ ಎಂಬುದು ಪತ್ತೆಯಾಗಿತ್ತು.
ಆಹಾರ ಮತ್ತು ಆರೋಗ್ಯ ಇಲಾಖೆ 5 ಸಾವಿರ ಅಧಿಕ ಆಹಾರ ಪದಾರ್ಥಗಳನ್ನು ಪರೀಕ್ಷೆಗೆ ಒಳಪಡಿಸಿರುವುದು ತಿಳಿದಿದೆ. ಜನವರಿ ತಿಂಗಳಲ್ಲಿ 3608 ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ದು, ಇವುಗಳಲ್ಲಿ 28 ಆಹಾರ ಪದಾರ್ಥಗಳು ಆರೋಗ್ಯ ಮಾರಕವಾಗಿದೆ ಎಂಬುದು ಗೊತ್ತಾಗಿದೆ. ಫೆಬ್ರವರಿ ತಿಂಗಳಲ್ಲಿ 2543 ಆಹಾರ ಪದಾರ್ಥಗಳನ್ನು ಪರೀಕ್ಷೆಗೆ ಒಳಪಡಿಸಿದ್ದು ಇವುಗಳಲ್ಲಿ 8 ಮಾದರಿಗಳು ಅಸುರಕ್ಷಿತ ಎಂಬುದು ತಿಳಿದಿದೆ.
ಇದನ್ನೂ ಓದಿ: Dinesh Gundu Rao: ಟ್ಯಾಟೂದಿಂದ ಎಚ್‌ಐವಿ, ಚರ್ಮದ ಕ್ಯಾನ್ಸರ್: ದಿನೇಶ್ ಗುಂಡೂರಾವ್ ಎಚ್ಚರಿಕೆ