ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

No Mining: ತಿರುಮಣಿ ವ್ಯಾಪ್ತಿಯ ಸರಕಾರಿ ಭೂಮಿಯಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡದಂತೆ ಜಿಲ್ಲಾಧಿಕಾರಿಗೆ ರೈತರ ಮನವಿ

ರೈತರು ಈಗಾಗಲೇ ಸರ್ಕಾರಿ ಫಾರಂ ನಂಬರ್ 50, 53 ಹಾಗೂ 57ರ ಅಡಿಯಲ್ಲಿ ಅಕ್ರಮ–ಸಕ್ರಮ ಮತ್ತು ಬಗರ್ ಹುಕುಂ ಭೂಮಿ ಮಂಜೂರಾತಿ ಗಾಗಿ ಅರ್ಜಿಗಳನ್ನು ಸಲ್ಲಿಸಿ ದಾಖಲೆಗಳನ್ನು ಹೊಂದಿದ್ದಾರೆ. ಈ ಜಮೀನನ್ನು ಹೊರತುಪಡಿಸಿ ನಮಗೆ ಬೇರೆ ಯಾವುದೇ ಜೀವನೋಪಾಯವಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಕಲ್ಲು ಗಣಿಗಾರಿಕೆಗೆ ಅನುಮತಿ ನೀಡದಂತೆ ಜಿಲ್ಲಾಧಿಕಾರಿಗೆ ರೈತರ ಮನವಿ

-

Ashok Nayak
Ashok Nayak Feb 4, 2026 10:51 PM

ಗುಡಿಬಂಡೆ: ತಾಲ್ಲೂಕಿನ ತಿರುಮಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಸಿಂಗಾನಹಳ್ಳಿ ಮತ್ತು ದೊಡ್ಡನಂಚರ್ಲು ಗ್ರಾಮಗಳ ವ್ಯಾಪ್ತಿಯ ಸರ್ಕಾರಿ ಜಮೀನಿನಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಕೆಲವು ಖಾಸಗಿ ವ್ಯಕ್ತಿಗಳು ಮುಂದಾಗಿದ್ದು, ಈ ಭಾಗದಲ್ಲಿ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಸ್ಥಳೀಯ ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಗುಡಿಬಂಡೆಯ ಸಿಂಗಾನಹಳ್ಳಿ ಗ್ರಾಮದ ಸರ್ವೆ ನಂಬರ್ 45 ಹಾಗೂ ದೊಡ್ಡನಂಚೇರ್ಲು ಗ್ರಾಮದ ಸರ್ವೆ ನಂಬರ್ 228ರಲ್ಲಿ ಕಳೆದ ಹಲವು ವರ್ಷಗಳಿಂದ ಸುಮಾರು 30ಕ್ಕೂ ಹೆಚ್ಚು ರೈತ ಕುಟುಂಬ ಗಳು ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿವೆ. ರೈತರು ಈಗಾಗಲೇ ಸರ್ಕಾರಿ ಫಾರಂ ನಂಬರ್ 50, 53 ಹಾಗೂ 57ರ ಅಡಿಯಲ್ಲಿ ಅಕ್ರಮ–ಸಕ್ರಮ ಮತ್ತು ಬಗರ್ ಹುಕುಂ ಭೂಮಿ ಮಂಜೂರಾತಿ ಗಾಗಿ ಅರ್ಜಿಗಳನ್ನು ಸಲ್ಲಿಸಿ ದಾಖಲೆಗಳನ್ನು ಹೊಂದಿದ್ದಾರೆ. ಈ ಜಮೀನನ್ನು ಹೊರತುಪಡಿಸಿ ನಮಗೆ ಬೇರೆ ಯಾವುದೇ ಜೀವನೋಪಾಯವಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: Gudibande News: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಲಿಕಾ ಹಬ್ಬ ಸಹಕಾರಿ: ಬಿಇಒ ಕೃಷ್ಣಕುಮಾರಿ

ಕಳೆದ ಎರಡು ವರ್ಷಗಳಿಂದ ಈ ಪ್ರದೇಶದಲ್ಲಿ ಗಣಿಗಾರಿಕೆ ನಡೆಸದಂತೆ ಸಂಬಂಧಪಟ್ಟ ಅಧಿಕಾರಿ ಗಳಿಗೆ ಸತತವಾಗಿ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ಆರೋಪಿಸಿದ್ದಾರೆ. ರೈತರು ಸ್ಥಳದಲ್ಲಿ ಇಲ್ಲದ ಸಮಯದಲ್ಲಿ ಕೆಲವು ವ್ಯಕ್ತಿಗಳು ಬಂದು ಜಮೀನಿನಲ್ಲಿ ಸರ್ವೆ ನಡೆಸುವುದು ಹಾಗೂ ಗುರುತುಗಳನ್ನು ಹಾಕುತ್ತಿರುವುದು ರೈತರ ಆತಂಕವನ್ನು ದ್ವಿಗುಣ ಗೊಳಿಸಿದೆ.

ಈ ಪ್ರದೇಶದಲ್ಲಿ ಗಣಿಗಾರಿಕೆ ಆರಂಭವಾದರೆ ಕೇವಲ ರೈತರಿಗೆ ಮಾತ್ರವಲ್ಲದೆ, ಅಲ್ಲಿನ ಪರಿಸರಕ್ಕೂ ಭಾರಿ ಹಾನಿಯಾಗಲಿದೆ. ಇಲ್ಲಿ ನವಿಲು, ಜಿಂಕೆ, ಕಾಡುಹಂದಿ ಹಾಗೂ ಮೊಲ ಸೇರಿದಂತೆ ಅನೇಕ ವನ್ಯಜೀವಿಗಳು ವಾಸಿಸುತ್ತಿದ್ದು, ಗಣಿಗಾರಿಕೆಯಿಂದ ಅವುಗಳ ಆವಾಸಸ್ಥಾನ ನಾಶವಾಗಲಿದೆ. ಅಲ್ಲದೆ, ಸುತ್ತಮುತ್ತಲಿನ ಐದಾರು ಗ್ರಾಮಗಳ ಜಾನುವಾರುಗಳ ಮೇವಿಗಾಗಿ ಇದೇ ಪ್ರದೇಶವನ್ನು ಅವಲಂಬಿ ಸಲಾಗಿದ್ದು, ಗಣಿಗಾರಿಕೆಗೆ ಅನುಮತಿ ನೀಡಬಾರದೆಂದು ರೈತರು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಮಿಲಿಟರಿ ಅಂಜನಪ್ಪ, ಮಿಲಿಟರಿ ಕುಮಾರ್, ಕೆ. ವೆಂಕಟಪತಿ, ನಾರಾಯಣಪ್ಪ, ಗಂಗಾಧರ, ವೆಂಕಟರಮಣಮ್ಮ, ಮುನಿರಾಜು, ಗಜೇಂದ್ರ, ಗಂಗರಾಜು ಹಾಗೂ ಸೀನಪ್ಪ ಸೇರಿದಂತೆ ಇತರರು ಹಾಜರಿದ್ದರು.