IAF officer Attacked: ಬಯಲಾಯ್ತು ಐಎಎಫ್ ಅಧಿಕಾರಿ ಕೃತ್ಯ; ಯುವಕನ ಮೇಲೆ ತಾನೇ ಹಲ್ಲೆ ಮಾಡಿ ದೂರು ಸಲ್ಲಿಕೆ! ಇಲ್ಲಿದೆ ವಿಡಿಯೋ
IAF officer Attacked: ಬೆಂಗಳೂರಿನಲ್ಲಿ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ವಾಯುಸೇನೆ ಅಧಿಕಾರಿ ಆರೋಪಿಸಿದ್ದರು. ಆದರೆ ಇದೀಗ ಯುವಕನನ್ನು ಅಧಿಕಾರಿಯೇ ರಸ್ತೆಯಲ್ಲಿ ಎಳೆದಾಡಿ ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋ ಬೆಳಕಿಗೆ ಬಂದಿದೆ. ಬಳಿಕ ಅಧಿಕಾರಿಯೇ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.


ಬೆಂಗಳೂರು: ನಗರದಲ್ಲಿ ನಡೆದಿದ್ದ ವಾಯುಸೇನೆ ಅಧಿಕಾರಿ ಮೇಲೆ ಹಲ್ಲೆ ಪ್ರಕರಣಕ್ಕೆ (IAF officer Attacked) ಬಿಗ್ ಟ್ವಿಸ್ಟ್ ಸಿಕ್ಕಿದೆ. ಬೈಕ್ ಸವಾರ ತನ್ನ ಕಾರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದ ಎಂದು ಐಎಎಫ್ ಅಧಿಕಾರಿ ದೂರು ನೀಡಿದ್ದರು. ಆದರೆ, ಇದೀಗ ವಾಯುಸೇನೆ ಅಧಿಕಾರಿಯೇ ಯುವಕನನ್ನು ರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋ ಬೆಳಕಿಗೆ ಬಂದಿದೆ. ಯವಕನ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ ಬಳಿಕ ಏರ್‌ಫೋರ್ಸ್ ಅಧಿಕಾರಿಯೇ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ ಎಂಬ ವಿಷಯ ಬಯಲಾಗಿದೆ.
ಬೆಂಗಳೂರಿನ ಸಿವಿ ರಾಮನ್ ನಗರದ ಗೋಪಾಲನ್ ಗ್ರ್ಯಾಂಡ್ ಮಾಲ್ ಬಳಿ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಮೇಲೆ ಹಲ್ಲೆ ನಡೆದಿದೆ ಎಂಬ ಸುದ್ದಿ ಭಾರಿ ಸದ್ದು ಮಾಡಿತ್ತು. ಆರಂಭದಲ್ಲಿ ಕನ್ನಡ ಭಾಷೆ ವಿಷಯಕ್ಕಾಗಿ ನಡೆದ ಜಗಳ ಎಂದು ವೈರಲ್ ಆಗಿತ್ತಾದರೂ ಬಳಿಕ ಕಾರು, ಬೈಕಿನ ನಡುವೆ ಡಿಕ್ಕಿಯಾಗಿದ್ದರಿಂದ ಜಗಳ ನಡೆದಿತ್ತು ಎಂದು ತಿಳಿದುಬಂದಿತ್ತು.
The IAF officer says:
— ಸುಷ್ಮಾ ಅಯ್ಯಂಗಾರ್ (@malnadkoos) April 21, 2025
I AM BIGGER THAN HIM
I AM TALLER THAN HIM
IF I WANTED I WOULD HAVE DONE ANYTHING I WANT.
I DIDNT DO ANYTHING
This is the truth!
Wonder what @RShivshankar will say after this!
ARMY’s TRUTH AND VALOUR, yeah?#ArrestShiladityaBose pic.twitter.com/fb7TWG8DSr
ಹಲ್ಲೆ ಬಳಿಕ ವಿಂಗ್ ಕಮಾಂಡರ್ ವಿಡಿಯೋ ಮಾಡಿ ಬೈಕ್ ಸವಾರ ವಿನಾಕಾರಣ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ, ದೂರು ನೀಡಿದ್ದರು. ಹೀಗಾಗಿ ಪೊಲೀಸರು, ಯುವಕನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ವಶಕ್ಕೆ ಪಡೆದುಕೊಂಡಿದ್ದರು. ಆದರೆ ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸ್ಥಳದಲ್ಲಿನ ಸಿಸಿಟಿವಿ ದೃಶ್ಯದಿಂದ ಅಧಿಕಾರಿಯ ನಿಜರೂಪ ಬಯಲಾಗಿದೆ.
The IAF officer says:
— ಸುಷ್ಮಾ ಅಯ್ಯಂಗಾರ್ (@malnadkoos) April 21, 2025
I AM BIGGER THAN HIM
I AM TALLER THAN HIM
IF I WANTED I WOULD HAVE DONE ANYTHING I WANT.
I DIDNT DO ANYTHING
This is the truth!
Wonder what @RShivshankar will say after this!
ARMY’s TRUTH AND VALOUR, yeah?#ArrestShiladityaBose pic.twitter.com/fb7TWG8DSr
ಸಿಸಿಟಿವಿ ದೃಶ್ಯದಲ್ಲಿ ಯುವಕ ಹಾಗೂ ಐಎಎಫ್ ಅಧಿಕಾರಿ ನಡುವೆ ಜಗಳ ನಡೆದಿರುವುದು ಕಂಡುಬಂದಿದೆ. ಈ ವೇಳೆ ಯುವಕನಿಗಿಂದ ಹೆಚ್ಚಾಗಿ ವಿಂಗ್ ಕಮಾಂಡ್ ಬೋಸ್ ಅವರೇ, ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ಸ್ಥಳೀಯರು ಎಷ್ಟೇ ಬಿಡಿಸಲು ಪ್ರಯತ್ನಿಸಿದ್ದರೂ ಪ್ರಯೋಜನವಾಗಿಲ್ಲ. ಅಲ್ಲದೇ ಯುವಕನ ಮೊಬೈಲ್ ಕಿತ್ತುಕೊಂಡು ರಸ್ತೆಗೆ ಎಸೆದಿದ್ದಾರೆ. ಹೀಗಾಗಿ ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ಈ ಸುದ್ದಿಯನ್ನೂ ಓದಿ | Viral News: ಒಡಿಶಾದಲ್ಲಿ ಅಮಾನವೀಯ ಘಟನೆ; ಯುವಕರಿಬ್ಬರನ್ನು ಕಂಬಕ್ಕೆ ಕಟ್ಟಿ ಹಲ್ಲೆ, ಮೂತ್ರ ಸೇವಿಸಲು ಒತ್ತಾಯ!