Ishant Sharma: ಅಂಜನಾದ್ರಿ ಬೆಟ್ಟಕ್ಕೆ ಕ್ರಿಕೆಟಿಗ ಇಶಾಂತ್ ಶರ್ಮಾ ಭೇಟಿ
ಗೆಳೆಯನ ಜೊತೆಗೆ ಬಂದಿದ್ದ ಇಶಾಂತ್ ಶರ್ಮಾ ಅವರು 575 ಮೆಟ್ಟಿಲುಗಳನ್ನು ಏರುವ ಮೂಲಕ ಹನುಮನ ದರ್ಶನ ಪಡೆದುಕೊಂಡು ವಿಶೇಷ ಪೂಜೆಯನ್ನು ಸಲ್ಲಿಸಿದರು. ನಂತರ ಬೆಟ್ಟದ ಮೇಲಿಂದ ಹಂಪಿಯ ಸೌಂದರ್ಯ ಹಾಗೂ ಬೆಟ್ಟಗಳ ಸಾಲುಗಳ ಪರಿಸರವನ್ನು ಕಣ್ತುಂಬಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡರು. ಅಭಿಮಾನಿಗಳು ಸಹ ಇಶಾಂತ್ ಶರ್ಮಾ ಅವರ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.
ಅಂಜನಾದ್ರಿಯಲ್ಲಿ ಇಶಾಂತ್ ಶರ್ಮಾ -
ಕೊಪ್ಪಳ, ಜ.10: ಹಂಪಿ (Hampi) ಬಳಿ ಇರುವ, ರಾಮಾಯಣ ಕಾಲದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಅಂಜನಾದ್ರಿ ಬೆಟ್ಟಕ್ಕೆ (Anjanadri Hills) ಟೀಂ ಇಂಡಿಯಾ ಕ್ರಿಕೆಟಿಗ (Cricketer) ಇಶಾಂತ್ ಶರ್ಮಾ (Ishant Sharma) ಭೇಟಿ ನೀಡಿದ್ದಾರೆ. ಆಂಜನೇಯ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟಕ್ಕೆ ಶುಕ್ರವಾರ (ಜ.9) ಇಶಾಂತ್ ಶರ್ಮಾ ಭೇಟಿ ನೀಡಿ, ಹನುಮನ ದರ್ಶನ ಪಡೆದರು.
ಗೆಳೆಯನ ಜೊತೆಗೆ ಬಂದಿದ್ದ ಇಶಾಂತ್ ಶರ್ಮಾ ಅವರು 575 ಮೆಟ್ಟಿಲುಗಳನ್ನು ಏರುವ ಮೂಲಕ ಹನುಮನ ದರ್ಶನ ಪಡೆದುಕೊಂಡು ವಿಶೇಷ ಪೂಜೆಯನ್ನು ಸಲ್ಲಿಸಿದರು. ನಂತರ ಬೆಟ್ಟದ ಮೇಲಿಂದ ಹಂಪಿಯ ಸೌಂದರ್ಯ ಹಾಗೂ ಬೆಟ್ಟಗಳ ಸಾಲುಗಳ ಪರಿಸರವನ್ನು ಕಣ್ತುಂಬಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡರು. ಅಭಿಮಾನಿಗಳು ಸಹ ಇಶಾಂತ್ ಶರ್ಮಾ ಅವರ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.
ಐಪಿಎಲ್‌ನ ಆರ್‌ಸಿಬಿ ಪಂದ್ಯಗಳು ಬೆಂಗಳೂರಿನಿಂದ ಶಿಫ್ಟ್
ಬೆಂಗಳೂರು: ಈ ಬಾರಿಯ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಬೆಂಗಳೂರಿನಲ್ಲಿ (Bengaluru) ಆಡುವುದು ಅನುಮಾನ ಎನ್ನಲಾಗುತ್ತಿದ್ದು ಮಧ್ಯಪ್ರದೇಶದ ಇಂದೋರ್ (Indore) ಅಥವಾ ಛತ್ತೀಸ್‌ಗಢದ ರಾಯ್‌ಪುರದಲ್ಲಿ(Raipur) ತವರಿನ ಪಂದ್ಯ ನಡೆಯುವ ಸಾಧ್ಯತೆಯಿದೆ. ಆರ್‌ಸಿಬಿ ಚಾಂಪಿಯನ್ ಬಳಿಕ ಕಾಲ್ತುಳಿತ ಸಂಭವಿಸಿ 11 ಮಂದಿ ಸಾವನ್ನಪ್ಪಿದ ಬಳಿಕ ಚಿನ್ನಸ್ವಾಮಿಯಲ್ಲಿ ಸುರಕ್ಷತೆ ಪ್ರಶ್ನೆ ಎದ್ದಿದೆ. ಈ ಬಾರಿಯ ಐಪಿಎಲ್ ಪಂದ್ಯವನ್ನು ಬೆಂಗಳೂರಿನಲ್ಲಿ ನಡೆಸುವ ಬಗ್ಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದರೂ ಆರ್‌ಸಿಬಿ ತಂಡ ಇಲ್ಲಿಯವರೆಗೆ ಕೆಎಸ್‌ಸಿಎಯನ್ನು ಸಂಪರ್ಕಿಸಿಲ್ಲ.
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಿವೃತ್ತಿಯಿಂದ ಹೊರಬರಬೇಕೆಂದ ರಾಬಿನ್ ಉತ್ತಪ್ಪ!
ಈ ಮೊದಲು ಮಹಾರಾಷ್ಟ್ರದ ಪುಣೆಗೆ ಆರ್‌ಸಿಬಿ ಪಂದ್ಯಗಳು ಸ್ಥಳಾಂತರವಾಗಲಿದೆ ಎಂಬ ವರದಿಯಾಗಿತ್ತು. ಆದರೆ ಈಗ ರಾಜಸ್ಥಾನ ರಾಯಲ್ಸ್ ಪಂದ್ಯಗಳು ಪುಣೆಯಲ್ಲಿ ನಡೆಯಲಿದೆ. ರಾಜಸ್ಥಾನ ಕ್ರಿಕೆಟ್ ಅಸೋಸಿಯೇಷನ್ ಜೊತೆಗಿನ ಭಿನ್ನಾಭಿಪ್ರಾಯಗಳಿಂದಾಗಿ ಆರ್‌ಆರ್ ಪಂದ್ಯಗಳು ಪುಣೆಗೆ ಸ್ಥಳಾಂತರವಾಗಿದೆ. ಛತ್ತೀಸ್‌ಗಢದ ರಾಯ್‌ಪುರ ಆರ್‌ಸಿಬಿಯ ಹೊಸ ತವರು ಆಗಲು ಮುಂಚೂಣಿಯಲ್ಲಿದ್ದು ಮಧ್ಯಪ್ರದೇಶದ ಇಂದೋರ್ ಕೂಡ ರೇಸ್‌ನಲ್ಲಿದೆ ಎಂದು ವರದಿಯಾಗಿದೆ.
ಆಂಧ್ರಪ್ರದೇಶ ವಿರುದ್ಧ ದೆಹಲಿ ತಂಡಗಳ ನಡುವಿನ ವಿಜಯ್ ಹಜಾರೆ ಟೂರ್ನಿ ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ನಡೆಯಬೇಕಿತ್ತು. ಕೊನೆಕ್ಷಣದವರೆಗೂ ಚಿನ್ನಸ್ವಾಮಿಯಲ್ಲಿ ಪಂದ್ಯ ನಡೆಯಲಿದೆ ಎನ್ನಲಾಗುತ್ತಿತ್ತು. ಆದರೆ ಕೊನೆಗೆ ಈ ಪಂದ್ಯಗಳು ಬೆಂಗಳೂರು ವಿಮಾನ ನಿಲ್ದಾಣ ಬಳಿ ಇರುವ ಬಿಸಿಸಿಐ (BCCI) ನಿರ್ಮಾಣ ಮಾಡಿರುವ ಸೆಂಟರ್ ಆಫ್ ಎಕ್ಸೆಲೆನ್ಸ್ (Centre of Excellence) ಮೈದಾನದಲ್ಲಿ ನಡೆದಿತ್ತು.
ಕ್ರಿಕೆಟ್ ಆಡುವ ವೇಳೆ ನೆಲಕ್ಕೆ ಕುಸಿದು ಮಿಜೋರಾಂನ ಮಾಜಿ ರಣಜಿ ಆಟಗಾರ ಸಾವು!