Bhim Army: ಭೀಮ್ ಆರ್ಮಿ ಕಾರ್ಯಕರ್ತನ ಕಾರಿಗೆ ಬೆಂಕಿ; RSS ಮೇಲೆ ಆರೋಪ
ಭೀಮ್ ಆರ್ಮಿ ಕಾರ್ಯಕರ್ತನ ಕಾರಿಗೆ ಬೆಂಕಿ ಹಚ್ಚಿದ ಘಟನೆ ಕಲಬುರಗಿ ನಗರದಲ್ಲಿ ಈ ಘಟನೆ ನಡೆದಿದೆ. ಸತೀಶ್ ಹುಗ್ಗಿ ಎಂಬುವವರ ಕಾರಿಗೆ ಕಿಡಿಗೆಡಿಗಳು ಬೆಂಕಿ ಹಚ್ಚಿದ್ದಾರೆ. ಇದು ಶಹಾಬಾದ್ ರಿಂಗ್ ರಸ್ತೆಯ ಬಳಿ ನಡೆದಿದ್ದು, ಸತೀಶ್ ಅವರ ಮನೆ ಮುಂದೆ ನಿಲ್ಲಿಸಿದ್ದ ಕಾರ್ ಮೇಲೆ ದಾಳಿ ನಡೆದಿದೆ. ಸತೀಶ್ ಹುಗ್ಗಿ ಭೀಮ್ ಆರ್ಮಿ ಸಂಘಟನೆಯ ಸ್ಥಳೀಯ ಕಾರ್ಯಕರ್ತರಾಗಿದ್ದರೆ. ಅವರು ಇತ್ತೀಚಿನ ದಿನಗಳಲ್ಲಿ RSS (ರಾಷ್ಟ್ರೀಯ ಸ್ವಯಂಸೇವಕ ಸಂಘ)ಯ ಪಥಸಂಚಲನ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿದ್ದರು.
-
ಕಲಬುರ್ಗಿ: ಭೀಮ್ ಆರ್ಮಿ (Bhim Army) ಕಾರ್ಯಕರ್ತನ ಕಾರಿಗೆ ಬೆಂಕಿ ಹಚ್ಚಿದ ಘಟನೆ ಕಲಬುರಗಿ ನಗರದಲ್ಲಿ ಈ ಘಟನೆ ನಡೆದಿದೆ. ಸತೀಶ್ ಹುಗ್ಗಿ ಎಂಬುವವರ ಕಾರಿಗೆ ಕಿಡಿಗೆಡಿಗಳು ಬೆಂಕಿ ಹಚ್ಚಿದ್ದಾರೆ. ಇದು ಶಹಾಬಾದ್ ರಿಂಗ್ ರಸ್ತೆಯ ಬಳಿ ನಡೆದಿದ್ದು, ಸತೀಶ್ ಅವರ ಮನೆ ಮುಂದೆ ನಿಲ್ಲಿಸಿದ್ದ ಕಾರ್ ಮೇಲೆ ದಾಳಿ ನಡೆದಿದೆ. ಈ ಘಟನೆಯು ದಲಿತ ಸಂಘಟನೆಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸ್ ತನಿಖೆ ನಡೆಸಿದ್ದಾರೆ.
ಸತೀಶ್ ಹುಗ್ಗಿ ಮನೆಗೆ ಬಂದು ಕಾರನ್ನು ಮನೆ ಮುಂದೆ ನಿಲ್ಲಿಸಿದ್ದರು. ಕಿಡಿಗೇಡಿಗಳು ಮುಖ ಮುಚ್ಚಿಕೊಂಡು ಅವರ ಮನೆ ಬಳಿ ಬಂದಿದ್ದರು. ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಕಾರ್ ತಕ್ಷಣ ಬೆಂಕಿ ಹೊತ್ತಿಕೊಂಡಿದ್ದು ಹಿಂಭಾಗ ಸುಟ್ಟು ಹೋಗಿದೆ. ನಂತರ ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಬಂದು ಬೆಂಕಿ ತಡೆಯಲು ಯತ್ನಿಸಿದರೂ, ಕಾರ್ ಹಿಂಭಾಗ ಸಂಪೂರ್ಣ ನಾಶವಾಗಿದೆ. "ನಾನು ಮನೆಗೆ ಒಳಗೆ ಹೋಗುತ್ತಿದ್ದೆ. ಹೊರಗೆ ಕೂಗಾಟ ಕೇಳಿ ಓಡಾಡಿ ಬಂದೆ. ಕಾರ್ ಬೆಂಕಿ ಹೊತ್ತಿಕೊಂಡಿತ್ತು" ಎಂದು ಸತೀಶ್ ಹೇಳಿದ್ದಾರೆ. ಈ ಘಟನೆಯು ಶಾಂತಿಯನ್ನು ಭಂಗಗೊಳಿಸಿ, ಸ್ಥಳೀಯರಲ್ಲಿ ಭಯ ಮೂಡಿಸಿದೆ.
ಸತೀಶ್ ಹುಗ್ಗಿ ಭೀಮ್ ಆರ್ಮಿ ಸಂಘಟನೆಯ ಸ್ಥಳೀಯ ಕಾರ್ಯಕರ್ತರಾಗಿದ್ದರೆ. ಅವರು ಇತ್ತೀಚಿನ ದಿನಗಳಲ್ಲಿ RSS (ರಾಷ್ಟ್ರೀಯ ಸ್ವಯಂಸೇವಕ ಸಂಘ)ಯ ಪಥಸಂಚಲನ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿದ್ದರು. ಕಲಬುರಗಿಯ ಚಿತ್ತಾಪುರದಲ್ಲಿ ನವೆಂಬರ್ 2ರಂದು RSS ಹಮ್ಮಿಕೊಂಡಿರುವ ಪಥಸಂಚಲನಕ್ಕೆ ಭೀಮ್ ಆರ್ಮಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. RSSಗೆ ಅನುಮತಿ ನೀಡಬೇಡ, ಲಾಠಿಗಳೊಂದಿಗೆ ಮೆರವಣಿಗೆಯು ದಲಿತರಲ್ಲಿ ಭಯ ಮೂಡಿಸುತ್ತದೆ ಎಂದು ಹೇಳಿದ್ದರು.
ಈ ಸುದ್ದಿಯನ್ನೂ ಓದಿ: Karnataka high court: ಆರ್‌ಎಸ್‌ಎಸ್ ಪಥಸಂಚಲನ ನಿರಾತಂಕ; ರಾಜ್ಯ ಸರಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ
RSS ಮೇಲೆ ಕೆಂಗಣ್ಣು
ಚಿತ್ತಾಪುರದಲ್ಲಿ ನವೆಂಬರ್ 2ರಂದು RSS ಹಮ್ಮಿಕೊಂಡಿರುವ ಪಥಸಂಚಲನಕ್ಕೆ ಭೀಮ್ ಆರ್ಮಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಸತೀಶ್ ಸಹ ಅದರಲ್ಲಿ ಸಕ್ರಿಯರಾಗಿದ್ದರು. ತಮ್ಮನ್ನು ಬೆದರಿಸಲು ಈ ರೀತಿ ಯೋಜನೆ ರೂಪಿಸಲಾಗಿದೆ. ಇದಕ್ಕೆ ನಾನು ಬೆದರುವುದಿಲ್ಲ ಎಂದು ಅವರು ಹೇಳಿದ್ದಾರೆ.