ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಲಬುರಗಿಯನ್ನು ಪಾಕಿಸ್ತಾನ ಮಾಡಲು ಹೊರಟಿದೆ ಸರ್ಕಾರ: ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ವಿರುದ್ಧ FIR

ಹಿಂದೆ ಮುಸ್ಲಿಂ ಲೀಗ್ ಶಾಸಕರಾಗಿದ್ದ ಖಮರುಲ್ ಇಸ್ಲಾಂ ಅವರು ಕಲಬುರಗಿಯನ್ನು 'ಛೋಟಾ ಪಾಕಿಸ್ತಾನ' ಮಾಡುವುದಾಗಿ ಹೇಳುತ್ತಿದ್ದರು. ಅಂದಿನ ನಾಯಕರಿಂದ ಅದು ಸಾಧ್ಯವಾಗಲಿಲ್ಲ. ಆದರೆ ಇಂದಿನ ನಾಯಕರು ಮತ್ತು ಸರ್ಕಾರ ಮತ್ತೊಮ್ಮೆ ಕಲಬುರಗಿ ಯನ್ನು ಪಾಕಿಸ್ತಾನದ ಮಾದರಿಯಲ್ಲಿ ನಿರ್ಮಿಸಲು ಕೈ ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು

ಕಲಬುರಗಿಯನ್ನು ಪಾಕಿಸ್ತಾನ ಮಾಡಲು ಹೊರಟಿದೆ ಸರ್ಕಾರ: ವಿವಾದಾತ್ಮಕ ಹೇಳಿಕೆ

-

Profile
Ashok Nayak Jun 4, 2026 8:36 AM

ಕಲಬುರಗಿ: ಜಿಲ್ಲೆಯನ್ನು ಪಾಕಿಸ್ತಾನದಂತೆ ಮಾಡಲು ಪ್ರಸ್ತುತ ಸರ್ಕಾರ ಯತ್ನಿಸುತ್ತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ, ಬಿಜೆಪಿಯ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ (ಅಪ್ಪುಗೌಡ)( Former MLA Dattatreya Patil Revoor (Appugowda)) ಅವರ ವಿರುದ್ಧ ಇಲ್ಲಿನ ಸ್ಟೇಷನ್ ಬಝಾರ್ ಪೊಲೀಸ್ ಠಾಣೆಯಲ್ಲಿ ಬುಧವಾರ ಸಂಜೆ ಪ್ರಕರಣ ದಾಖಲಾಗಿದೆ.

ಪ್ರತಿಭಟನಾ ಸಭೆಯಲ್ಲಿ ವಿವಾದಾತ್ಮಕ ಹೇಳಿಕೆ: ಆಳಂದ ಗಲಭೆ ಪ್ರಕರಣವನ್ನು ಸರ್ಕಾರ ಹಿಂಪಡೆದಿರುವುದನ್ನು ಖಂಡಿಸಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ(
BJP State President B.Y. Vijayendra) ಸಮ್ಮುಖದಲ್ಲೇ ವೇದಿಕೆಯಲ್ಲಿ ಮಾತನಾಡಿದ ದತ್ತಾತ್ರೇಯ ಪಾಟೀಲ್, ಹಿಂದೆ ಮುಸ್ಲಿಂ ಲೀಗ್ ಶಾಸಕರಾಗಿದ್ದ ಖಮರುಲ್ ಇಸ್ಲಾಂ ಅವರು ಕಲಬುರಗಿಯನ್ನು 'ಛೋಟಾ ಪಾಕಿಸ್ತಾನ' ಮಾಡುವುದಾಗಿ ಹೇಳುತ್ತಿದ್ದರು. ಅಂದಿನ ನಾಯಕರಿಂದ ಅದು ಸಾಧ್ಯವಾಗಲಿಲ್ಲ. ಆದರೆ ಇಂದಿನ ನಾಯಕರು ಮತ್ತು ಸರ್ಕಾರ ಮತ್ತೊಮ್ಮೆ ಕಲಬುರಗಿ ಯನ್ನು ಪಾಕಿಸ್ತಾನದ ಮಾದರಿಯಲ್ಲಿ ನಿರ್ಮಿಸಲು ಕೈ ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಇದನ್ನೂ ಓದಿ: Kalaburagi Airport: ಕಲಬುರಗಿ-ಬೆಂಗಳೂರು ವಿಮಾನಯಾನಕ್ಕೆ ಮತ್ತೆ ಚೈತನ್ಯ

ಕಾಂಗ್ರೆಸ್ ಮುಖಂಡನಿಂದ ದೂರು: ಮಾಜಿ ಶಾಸಕರ ಈ ವಿವಾದಾತ್ಮಕ ಹೇಳಿಕೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ಮುಖಂಡ ಅಜಗರ್ ಹುಸೈನ್ ಅವರು ಮಂಗಳವಾರ ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರು ನೀಡಿದರು.

ಪ್ರಕರಣ ದಾಖಲು: ಕಾಂಗ್ರೆಸ್ ಮುಖಂಡ ನೀಡಿದ ದೂರಿನನ್ವಯ ಪ್ರಾಥಮಿಕ ತನಿಖೆ ನಡೆಸಿದ ಸ್ಟೇಷನ್ ಬಜಾರ್ ಠಾಣೆಯ ಪೊಲೀಸರು, ಬುಧವಾರ ಸಂಜೆ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ವಿರುದ್ಧ ಅಧಿಕೃತವಾಗಿ FIR ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.