Kalaburagi Bandh: ಬಂದ್ ಗೆ ಹಲವೆಡೆ ನೀರಸ ಪ್ರತಿಕ್ರಿಯೆ.!
ವಿಶೇಷ ಪ್ಯಾಕೇಜ್ ಘೋಷ ಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಸಂಯುಕ್ತ ಹೋರಾಟ ಕರ್ನಾಟಕ ಸಮಿತಿ ಕರೆ ನೀಡಿದ ಕಲಬುರಗಿ ಬಂದ್ ಗೆ ನೀರಸ ಪ್ರತಿಕ್ರಿಯೆ ದೊರಕಿದೆ
Source : Kalaburagi reporter
ತೊಗರಿಗೆ ವಿಶೇಷ ಪ್ಯಾಕೇಜ್ ಘೋಷಣೆಗೆ ಆಗ್ರಹಿಸಿ ಕಲಬುರಗಿ ಬಂದ್
ಕಲಬುರಗಿ: ತೊಗರಿಗೆ ಬೆಂಬಲ ಬೆಲೆ, ಹಾನಿಯಾಗಿರುವ ಈ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಘೋಷ ಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಸಂಯುಕ್ತ ಹೋರಾಟ ಕರ್ನಾಟಕ ಸಮಿತಿ ಕರೆ ನೀಡಿದ ಕಲಬುರಗಿ ಬಂದ್ ಗೆ ನೀರಸ ಪ್ರತಿಕ್ರಿಯೆ ದೊರಕಿದೆ.
ನಸುಕಿನ ಜಾವದಲ್ಲಿ ಪ್ರತಿಭಟನೆಗೆ ಇಳಿದ ರೈತ ಮುಖಂಡರು, ಈ ವರ್ಷ ತೊಗರಿ ಬೆಳೆಗಾರರಿಗೆ ತುಂಬಾ ನಷ್ಟವಾಗಿದೆ. ಕೂಡಲೇ ರೈತರ ಸಮಸ್ಯೆಗಳನ್ನು ಈಡೇರಿಸಬೇಕು. ಬೆಳೆ ಹಾನಿ ಅನುಭವಿಸಿದ ಸಾವಿರಾರು ರೈತರು ಬೀದಿ ಪಾಲಾಗಿದ್ದಾರೆ. ಅವರ ನೆರವಿಗೆ ನಿಂತು ಸರಕಾರ ಪರಿಹಾರವಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಬಂದ್ ಗೆ ಕರೆ ನೀಡಿದ್ದಾರೆ.
ಆದರೆ, ಕಲಬುರಗಿ ನಗರದಲ್ಲಿ ಒಳಭಾಗದಲ್ಲಿ ಮಾತ್ರ ಬಂದ್ ಬಿಸಿ ಕಂಡು ಬಂದಿದ್ದು, ನಗರದ ಹೊರವಲಯದ ಪ್ರದೇಶಗಳಲ್ಲಿ ಎಂದಿನಂತೆ ವ್ಯಾಪಾರ ವಹಿವಾಟುಗಳು ಭರ್ಜರಿಯಾಗಿ ನಡೆದಿವೆ. ಎಲ್ಲ ಅಂಗಡಿ ಮುಂಗಟ್ಟುಗಳ ಮಾಲೀಕರು ದಿನನಿತ್ಯದಂತೆ ಕೆಲಸ ಹಾಜರಾಗಿದ್ದಾರೆ. ಹೊರ ವಲಯದ ಪ್ರದೇಶಗಳಲ್ಲಿ ಕಲಬುರಗಿ ಬಂದ್ ಬಿಸಿ ಅಷ್ಟಾಗಿ ತಟ್ಟಿಲ್ಲ ಎನ್ನುವಂತೆ ಜನರ ಓಡಾಟ ನಡೆದಿದೆ.
ಅಲ್ಲದೇ, ಕೇಂದ್ರ ಬಸ್ ನಿಲ್ದಾಣ ಬಸ್ ಗಳ ಸಂಚಾರ ಇಲ್ಲದೇ ಬಿಕೋ ಎನ್ನುತ್ತಿದೆ. ಆದರೆ, ಕಲಬು ರಗಿಯ ರಿಂಗ್ ರಸ್ತೆಗಳಾದ ರಾಮ ಮಂದಿರ, ಆಳಂದ ಚೆಕ್ ಪೋಸ್ಟ್, ಹುಮನಾಮದ್ ರಿಂಗ್ ರಸ್ತೆ ಹಾಗೂ ಸೇಡಂ ರಸ್ತೆಗಳ ಮೂಲಕ ಕಲ್ಯಾಣ ಕರ್ನಾಟಕ ಸಾರಿಗೆಗಳು ಕಾರ್ಯಾಚರಣೆ ನಡೆಸಿದ್ದು, ಜನರು ಸಿಟಿಯಿಂದ ಆಟೋಗಳಿಗೆ ದುಪ್ಪಟ್ಟು ಹಣ ನೀಡಿ ರಿಂಗ್ ರಸ್ತೆಗಳ ಮೂಲಕ ತಮ್ಮ ಪ್ರದೇಶ ಗಳಿಗೆ ತೆರಳುತ್ತಿರುವ ದೃಶ್ಯ ಕಂಡುಬಂತು. ಇದರಿಂದಾಗಿ ತೊಗರಿ ಬೆಳೆಗಾಗಿ ರೈತರು ನೀಡಿದ ಕಲಬುರಗಿ ಬಂದ್ ನೀರಸ ಪ್ರತಿಕ್ರಿಯೆ ಸಿಕ್ಕಿದೆ.
ಬಸ್ ಗಾಗಿ ಹಿಂಡು ಹಿಂಡಾಗಿ ಜನರ ಸಾಲು: ಕಲಬುರಗಿ ಬಂದ್ ಹಿನ್ನಲೆ ಸೂಕ್ತ ಬಸ್ ವ್ಯವಸ್ಥೆ ಇಲ್ಲದೇ ಸಾರ್ವಜನಿಕರು ಪರದಾಟ ನಡೆಸಿದ್ದು, ರಿಂಗ್ ರಸ್ತೆಗಳಿಗೆ ಬರುವ ಬೆರಳೆಣಿಕೆ ಬಸ್ ಗಳಲ್ಲಿ ಸೀಟ್ ಹಿಡಿಯಲು ಹಿಂಡು ಹಿಂಡಾಗಿ ಜನರು ಸಾಲುಗಟ್ಟಿ ನಿಂತ ದೃಶ್ಯ ಸಾಮಾನ್ಯವಾಗಿತ್ತು. ಯಾವು ದೇ ಊರಿನ ಬಸ್ ಬರಲಿ ಅದರಲ್ಲಿ ಹತ್ತಿ ಮುಂದಿನ ಊರಿಗೆ ಹೋಗಲು ಜನ ಹರಸಾಹಸ ಪಡು ತ್ತಿದ್ದಾರೆ. ಒಟ್ಟಿನಲ್ಲಿ ತಮ್ಮ ವಾಸಸ್ಥಾನಗಳಿಗೆ ತೆರಳಲು ಜನರು ದುಪ್ಪಟ್ಟು ಹಣದ ಜತೆಗೆ ಸಾಹಸ ವನ್ನು ಸಹ ಪಡುತ್ತಿರುವುದು ಎಲ್ಲಡೆ ಕಂಡು ಬಂತು.
ಬಂದಿದ್ದರು ಟ್ರಾಫಿಕ್ ಸಿಂಗ್ನಲ್ ಚಾಲೂ.!
ಒಂದು ಕಡೆಗೆ ತೊಗರಿ ಬೆಳೆಗಾಗಿ ಕಲಬುರಗಿ ಜಿಲ್ಲೆ ಬಂದ್ ಮಾಡಿ ರೈತ ಸಂಘಟನೆಗಳು ಬೀದಿ ಗಿಳಿದರೆ, ನಗರದ ಹೊರವಲಯದ ರಾಮ್ ಮಂದಿರ ರಿಂಗ್ ರಸ್ತೆ ಬಳಿ ಟ್ರಾಫಿಕ್ ಪೊಲೀಸರು ಸಿಗ್ನಲ್ ಚಾಲೂ ಇಟ್ಟ ಪ್ರಸಂಗ ನಡೆದಿದೆ. ನಗರದ ಬಹುತೇಕ ಕಡೆಗೆ ಸಿಂಗ್ನಲ್ ಗಳು ಬಂದ್ ಆಗಿದ್ದಾರೆ. ರಾಮ್ ಮಂದಿರ್ ನಲ್ಲಿ ಮಾತ್ರ ಸಿಗ್ನಲ್ ಚಾಲೂ ಇಟ್ಟು ವಾಹನ ಹಾಗೂ ಜನ ದಟ್ಟಣೆ ಹೆಚ್ಚಾಗು ವಂತೆ ಮಾಡಿದರು. ಇದರಿಂದಾಗಿ ರಾಮ ಮಂದಿರ ವೃತ್ತದ ಬಳಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಹಾಗು ಜನರು ಪರದಾಟ ನಡೆಸಿದರು.
ಸ್ವಯಂ ಪ್ರೇರಿತ ಅಂಗಡಿ ಮುಗ್ಗಟ್ಟುಗಳು ಬಂದ್: ಕಲಬುರಗಿ ಬಂದ್ ಘೋಷಣೆ ಮಾಡಿದ್ದ ರಿಂದ ನಗರದಲ್ಲಿನ ಕೇಂದ್ರ ಬಸ್ ನಿಲ್ದಾಣ, ರಾಷ್ಟ್ರಪತಿ ವೃತ್ತದ, ತಿಮ್ಮಾಪುರ ವೃತ್ತ, ಜಗತ್ ವೃತ್ತ, ಮಾರ್ಕೆಟ್, ಗಂಜ್ ಪ್ರದೇಶ ಸೇರಿ ಅನೇಕ ಕಡೆಗೆ ಅಂಗಡಿ ಮಾಲೀಕರು ಸ್ವಯಂ ಪ್ರೇರಿತವಾಗಿ ತಮ್ಮ ಅಂಗಡಿ, ಮುಗ್ಗಟ್ಟುಗಳನ್ನು ಮುಚ್ಚಿ, ರೈತರ ಹೋರಾಟಕ್ಕೆ ಬೆಂಬಲ ನೀಡಿದರು.
ಇದನ್ನೂ ಓದಿ: Kalaburagi Bandh: ತೊಗರಿಗೆ ವಿಶೇಷ ಪ್ಯಾಕೇಜ್ ಘೋಷಣೆಗೆ ಆಗ್ರಹಿಸಿ ಬೆಳ್ಳಂಬೆಳಗ್ಗೆ ಕಲಬುರಗಿ ಬಂದ್