ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಎಂಎಲ್‌ಸಿ ಡಾ.ಬಿ.ಜಿ.ಪಾಟೀಲ್‌ಗೆ ಮಾತೃ ವಿಯೋಗ

Veeramma Dr Galangalappa Patil: ಖ್ಯಾತ ಉದ್ಯಮಿ ದಿ. ಡಾ.ಗಳಂಗಳಪ್ಪ ಪಾಟೀಲ್ ಅವರ ಪತ್ನಿ ವೀರಮ್ಮನವರು ಪತಿಯ ಹಿಂದಿನ ಶಕ್ತಿಯಾಗಿ ನಿಂತು, ಉದ್ಯಮ ಸಾಮ್ರಾಜ್ಯ ನಿರ್ಮಾಣ ಮಾಡಲು ಬೆನ್ನೆಲುಬಾಗಿ ಕೈಜೋಡಿಸಿದ್ದರು. ಇವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಎಂಎಲ್‌ಸಿ ಡಾ.ಬಿ.ಜಿ.ಪಾಟೀಲ್‌ಗೆ ಮಾತೃ ವಿಯೋಗ

ವೀರಮ್ಮ ಡಾ.ಗಳಂಗಳಪ್ಪ ಪಾಟೀಲ್. -

Profile
Siddalinga Swamy Jun 20, 2026 4:18 PM

ಕಲಬುರಗಿ, ಜೂ.20: ವಿಧಾನ ಪರಿಷತ್ ಸದಸ್ಯ, ಉದ್ಯಮಿ ಡಾ.ಬಿ.ಜಿ. ಪಾಟೀಲ ಹಾಗೂ ಉದ್ಯಮಿ ಡಾ.ಸೂರ್ಯಕಾಂತ ಪಾಟೀಲ್ ಅವರ ತಾಯಿ ಶತಾಯುಷಿ ವೀರಮ್ಮ ಗಳಂಗಳಪ್ಪ ಪಾಟೀಲ್ (Veeramma Dr Galangalappa Patil) ಅವರು ಶನಿವಾರ ನಿಧನರಾದರು. ಇದರಿಂದ ಎಸ್.ಬಿ. ಪಾಟೀಲ್ ಪರಿವಾರದ ಕೊನೆಯ ಹಿರಿಯ ಕೊಂಡಿ ಕಳಚಿದಂತಾಗಿದೆ. ಮೃತರು ಇಬ್ಬರು ಪುತ್ರರು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ನೆಹರು ಗಂಜ್ ಪ್ರದೇಶದಲ್ಲಿರುವ ಎಸ್.ಬಿ.ಪಾಟೀಲ್ ಗ್ರೂಪ್ ಕಚೇರಿ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೃತರ ಅಂತ್ಯಕ್ರಿಯೆಯು ಹುಮನಾಬಾದ್ ರಸ್ತೆಯ ಕಪನೂರನ ಪೈಪ್ ಫ್ಯಾಕ್ಟರಿ ಆವರಣದಲ್ಲಿ ಭಾನುವಾರ (ಜೂನ್‌ 21) ಬೆಳಗ್ಗೆ 11 ಗಂಟೆಗೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಖ್ಯಾತ ಉದ್ಯಮಿ ದಿ.ಡಾ.ಗಳಂಗಳಪ್ಪ ಪಾಟೀಲ್ ಅವರ ಪತ್ನಿ ವೀರಮ್ಮನವರು ಪತಿಯ ಹಿಂದಿನ ಶಕ್ತಿಯಾಗಿ ನಿಂತು, ಉದ್ಯಮ ಸಾಮ್ರಾಜ್ಯ ನಿರ್ಮಾಣ ಮಾಡಲು ಬೆನ್ನೆಲುಬಾಗಿ ಕೈಜೋಡಿಸಿದ್ದರು. ಈ ಮೂಲಕ ಇಂದು ಎಸ್.ಬಿ.ಪಾಟೀಲ್ ಗ್ರೂಪ್ನಲ್ಲಿ ಸಾವಿರಾರು ಕೈಗಳಿಗೆ ಕೆಲಸ ದೊರೆತಿದೆ. ಈ ಸಂಸ್ಥೆಯಲ್ಲಿ ಕೆಲಸ ಮಾಡುವ ಸಾವಿರಾರು ಕುಟುಂಬಗಳು ದಿ.ಗಳಂಗಳಪ್ಪನವರನ್ನು ನಿತ್ಯ ಸ್ಮರಿಸುತ್ತಿವೆ.

ವ್ಯಾಪಾರ, ಉದ್ಯಮದ ಬೆಳವಣಿಗೆ ಕುರಿತಂತೆ ಪತಿ ದಿ.ಡಾ.ಗಳಂಗಳಪ್ಪ ಪಾಟೀಲರೊಂದಿಗೆ ಕೆನಡಾ, ಅಮೆರಿಕ, ಇಂಗ್ಲೆಂಡ್, ಜಪಾನ್, ಜರ್ಮನಿ ಸೇರಿ ಅನೇಕ ದೇಶಗಳಿಗೆ ಪ್ರವಾಸ ಕೈಗೊಂಡಿದ್ದರು. ವೀರಮ್ಮನವರು ಚಿತ್ತಾಪುರ ತಾಲೂಕು ಗುಂಡಗುರ್ತಿ ಗ್ರಾಮದ ಶಿವಶೆಟ್ಟಿ ಪರಿವಾರದಲ್ಲಿ 1933ನೇ ಫೆಬ್ರವರಿ 15ರಂದು ಜನಿಸಿದರು. 1948ರಲ್ಲಿ ದಿ.ಗಳಂಗಳಪ್ಪ ಪಾಟೀಲರ ಕೈಹಿಡಿದಿದ್ದರು.

ವಿ.ಆರ್.ಎಲ್ ಸಮೂಹ ಸಂಸ್ಥೆಗಳ ನಿರ್ದೇಶಕಿ ವಾಣಿ ಆನಂದ ಸಂಕೇಶ್ವರ್, ಮೊಮ್ಮಕ್ಕಳಾದ ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್, ಹೈ.ಕ.ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ. ಕೈಲಾಶ ಪಾಟೀಲ್, ಉದ್ಯಮಿ ಸೋಮನಾಥ.ಎ. ಪಾಟೀಲ್, ಸುಹಾಸ ಎಸ್. ಪಾಟೀಲ್ ಅವರು ಮೃತರ ಮೊಮ್ಮಕ್ಕಳಾಗಿದ್ದಾರೆ.

ವಿ.ಆರ್.ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ್, ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ್, ವಿಜಯಾನಂದ ಟ್ರಾವೆಲ್ಸ್ ವ್ಯವಸ್ಥಾಪಕ ನಿರ್ದೇಶಕ ಶಿವಾ ಸಂಕೇಶ್ವರ್, ಉದ್ಯಮಿಗಳು, ಗಣ್ಯರು, ರಾಜಕೀಯ ಧುರೀಣರು, ಸಂಸ್ಥೆಯ ಸಿಬ್ಬಂದಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.