ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚಲಿಸುತ್ತಿದ್ದ ಬಸ್‌ ಏಕಾಏಕಿ ಬಂದ್‌; ಕಗ್ಗತ್ತಲಲ್ಲಿ ಪ್ರಯಾಣಿಕರ ಪರದಾಟ

ಚಿಂಚೋಳಿ ಘಟಕದ ಬಸ್‌ಗಳಲ್ಲಿ ಪದೇಪದೇ ಅವ್ಯವಸ್ಥೆ ಕಾಣಿಸಿಕೊಳ್ಳುತ್ತಿರುವ ಆರೋಪ ಕೇಳಿ ಬಂದಿದೆ. ಕೆಲ ದಿನಗಳ ಹಿಂದಷ್ಟೇ ಚಿಂಚೋಳಿಯಲ್ಲಿ ಹೆಡ್‌ಲೈಟ್‌ ಇಲ್ಲದೆ ಬಸ್‌ ಚಲಾಯಿಸಿದ್ದ ಘಟನೆ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಚಲಿಸುತ್ತಿದ್ದ ಬಸ್‌ ಮಾರ್ಗ ಮಧ್ಯೆಯೇ ಬಂದ್‌ ಆಗಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಚಲಿಸುತ್ತಿದ್ದ ಬಸ್‌ ಏಕಾಏಕಿ ಬಂದ್‌; ಕಗ್ಗತ್ತಲಲ್ಲಿ ಪ್ರಯಾಣಿಕರ ಪರದಾಟ

-

Profile
Ashok Nayak Oct 16, 2026 9:36 AM

ಕಲಬುರಗಿ: ಚಲಿಸುತ್ತಿದ್ದ ಕೆಕೆಆರ್‌ಟಿಸಿ ಬಸ್‌(KKRTC Bus) ಏಕಾಏಕಿ ತಾಂತ್ರಿಕ ದೋಷಕ್ಕೊಳಗಾಗಿ ನಿಂತ ಪರಿಣಾಮ ಪ್ರಯಾಣಿಕರು ಕಗ್ಗತ್ತಲಲ್ಲಿ ಪರದಾಡಿದ ಘಟನೆ ಜಿಲ್ಲೆಯ ಕಾಳಗನೂರ ಗ್ರಾಮದ ಬಳಿ ನಡೆದಿದೆ.

ಕಲಬುರಗಿಯಿಂದ ಚಿಂಚೋಳಿಗೆ ತೆರಳುತ್ತಿದ್ದ ಚಿಂಚೋಳಿ ಘಟಕದ ಬಸ್‌ ಮಾರ್ಗ ಮಧ್ಯೆ ಏಕಾಏಕಿ ಕೈಕೊಟ್ಟಿದೆ. ಇದರಿಂದ ಬಸ್‌ನಲ್ಲಿದ್ದ ಪ್ರಯಾಣಿಕರು ಕೆಲಕಾಲ ಅತಂತ್ರರಾಗಿದ್ದು, ರಾತ್ರಿ ವೇಳೆ ಸುರಕ್ಷಿತ ಪ್ರಯಾಣದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Kalaburagi News: ಮಕ್ಕಳಾಗದ ವಿಚಾರಕ್ಕೆ ಗಲಾಟೆ; ಹೆಂಡತಿಯ ಕತ್ತು ಹಿಸುಕಿ ಕೊಲೆಗೈದ ಗಂಡ!

ಚಿಂಚೋಳಿ ಘಟಕದ ಬಸ್‌ಗಳಲ್ಲಿ ಪದೇಪದೇ ಅವ್ಯವಸ್ಥೆ ಕಾಣಿಸಿಕೊಳ್ಳುತ್ತಿರುವ ಆರೋಪ ಕೇಳಿ ಬಂದಿದೆ. ಕೆಲ ದಿನಗಳ ಹಿಂದಷ್ಟೇ ಚಿಂಚೋಳಿಯಲ್ಲಿ ಹೆಡ್‌ಲೈಟ್‌ ಇಲ್ಲದೆ ಬಸ್‌ ಚಲಾಯಿಸಿದ್ದ ಘಟನೆ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಚಲಿಸುತ್ತಿದ್ದ ಬಸ್‌ ಮಾರ್ಗ ಮಧ್ಯೆಯೇ ಬಂದ್‌ ಆಗಿರು ವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸಾರಿಗೆ ಸಂಸ್ಥೆಯ ಬಸ್‌ಗಳ ನಿರ್ವಹಣೆ ಹಾಗೂ ತಾಂತ್ರಿಕ ತಪಾಸಣೆಗೆ ಅಧಿಕಾರಿಗಳು ಆದ್ಯತೆ ನೀಡಬೇಕು. ಇಲ್ಲದಿದ್ದರೆ ಇಂತಹ ಘಟನೆಗಳು ಪ್ರಯಾಣಿಕರ ಸುರಕ್ಷತೆಗೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಿನಕ್ಕೊಂದು ರಗಳೆ: ಚಿಂಚೋಳಿ ಘಟಕದ ಬಸ್‌ಗಳ ನಿರ್ವಹಣೆ ಕುರಿತು ಪ್ರಯಾಣಿಕರಿಂದ ಪದೇಪದೇ ದೂರುಗಳು ಕೇಳಿ ಬರುತ್ತಿದ್ದರೂ, ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.