ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPS Transfer: ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್​ ಸರ್ಜರಿ: 68 ಐಪಿಎಸ್‌ ಅಧಿಕಾರಿಗಳಿಗೆ ವರ್ಗ, ಬಡ್ತಿ

ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ.ರಶ್ಮಿ ಮಹೇಶ್, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಾಟೇರಿಯಾ, ವಾಣಿಜ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ದೀಪಕ್ ಜೈನ್, ಆರ್ಥಿಕ ಇಲಾಖೆಯ ಜಂಟಿ ಕಾರ್ಯದರ್ಶಿ ಡಾ. ಏಕ್‍ರೂಪ್ ಕೌರ್, ಬಿಎಂಆರ್‍ಸಿಎಲ್‍ನ ವ್ಯವಸ್ಥಾಪಕ ನಿರ್ದೇಶಕ ರವಿಶಂಕರ್ ಜೆ. ಸೇರಿದಂತೆ 68 ಮಂದಿ ಅಧಿಕಾರಿಗಳಿಗೆ ಮುಂಬಡ್ತಿ ನೀಡಲಾಗಿದೆ.

ಪೊಲೀಸ್ ಇಲಾಖೆಗೆ ಮೇಜರ್​ ಸರ್ಜರಿ: 68 ಐಪಿಎಸ್‌ ಅಧಿಕಾರಿಗಳಿಗೆ ವರ್ಗ, ಬಡ್ತಿ

ಐಪಿಎಸ್‌ ಅಧಿಕಾರಿಗಳ ವರ್ಗ -

ಹರೀಶ್‌ ಕೇರ
ಹರೀಶ್‌ ಕೇರ Jan 1, 2026 11:08 AM

ಬೆಂಗಳೂರು, ಜ.01: 2026 ಹೊಸ ವರ್ಷ ಆರಂಭವಾಗಿದ್ದು, ಈ ನಡುವಲ್ಲೇ ಕರ್ನಾಟಕ ರಾಜ್ಯ ಸರ್ಕಾರ (Karnataka government) ಕರ್ನಾಟಕ ಪೊಲೀಸ್​ ಇಲಾಖೆಗೆ ಮೇಜರ್​ ಸರ್ಜರಿ (IPS Transfer) ಮಾಡಿದೆ. ಒಟ್ಟು 68 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮತ್ತು ಮುಂಬಡ್ತಿಗೆ ಆದೇಶಿಸಿದೆ.

ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ.ರಶ್ಮಿ ಮಹೇಶ್, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಾಟೇರಿಯಾ, ವಾಣಿಜ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ದೀಪಕ್ ಜೈನ್, ಆರ್ಥಿಕ ಇಲಾಖೆಯ ಜಂಟಿ ಕಾರ್ಯದರ್ಶಿ ಡಾ. ಏಕ್‍ರೂಪ್ ಕೌರ್, ಬಿಎಂಆರ್‍ಸಿಎಲ್‍ನ ವ್ಯವಸ್ಥಾಪಕ ನಿರ್ದೇಶಕ ರವಿಶಂಕರ್ ಜೆ. ಸೇರಿದಂತೆ 68 ಮಂದಿ ಅಧಿಕಾರಿಗಳಿಗೆ ಮುಂಬಡ್ತಿ ನೀಡಲಾಗಿದೆ.

ಐವರು ಪೊಲೀಸ್ ಉಪ ಆಯುಕ್ತರಾದ (ಡಿಸಿಪಿಗಳು) ಎನ್ ಯತೀಶ್ (ಪಶ್ಚಿಮ), ವಿಕ್ರಮ್ ಅಮಟೆ (ಪೂರ್ವ), ಸೈದುಲು ಅದಾವತ್ (ವೈಟ್‌ಫೀಲ್ಡ್), ಮೊಹಮ್ಮದ್ ಸುಜೀತಾ (ಆಗ್ನೇಯ) ಮತ್ತು ಮಿಥುನ್ ಕುಮಾರ್ (ಈಶಾನ್ಯ) ಅವರು ಬೆಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ.

ಎಸ್ಪಿಗಳ ವರ್ಗಾವಣೆ

ಎಂವಿ ಚಂದ್ರಕಾಂತ್ (ಎಸ್‌ಪಿ, ಬೆಂಗಳೂರು ಗ್ರಾಮಾಂತರ), ಮಲ್ಲಿಕಾರ್ಜುನ ಬಾಲದಂಡಿ (ಎಸ್‌ಪಿ, ಮೈಸೂರು), ಕೆ ರಾಮರಾಜನ್ (ಎಸ್‌ಪಿ, ಬೆಳಗಾವಿ), ಬಿ ನಿಖಿಲ್ (ಎಸ್‌ಪಿ, ಶಿವಮೊಗ್ಗ), ಅರುಣಾಂಶು ಗಿರಿ (ಎಸ್‌ಪಿ, ರಾಯಚೂರು), ಶುಭನ್ವಿತಾ (ಎಸ್‌ಪಿ, ಹಾಸನ), ಜಿತೇಂದ್ರ ಕುಮಾರ್ ದಯಂ (ಎಸ್‌ಪಿ, ಚಿಕ್ಕಮಗಳೂರು ಎಸ್‌ಪಿ), ಕನ್ನಿಕಾ ಸುಕ್ರಿವಾಲ್ (ಎಸ್‌ಪಿ, ಕೋಲಾರ), ಬಿಂದುಮಣಿ (ಎಸ್‌ಪಿ, ಕೊಡಗು), ಶೋಭಾರಾಣಿ (ಎಸ್‌ಪಿ, ಮಂಡ್ಯ), ಸಾರಾ ಫಾತಿಮಾ (ಎಸ್‌ಪಿ, ರೈಲ್ವೆ), ಎಂ.ಮುತ್ತುರಾಜ್ (ಎಸ್‌ಪಿ, ಚಾಮರಾಜನಗರ), ಡಾ.ಬಿ.ಟಿ.ಕವಿತಾ (ಸಿಐಡಿ), ವಿ.ಜೆ.ಸಜಿತ್ (ಎಸ್‌ಪಿ, ಐಎಸ್‌ಡಿ) ಮತ್ತು ಪವನ್ ನೆಜ್ಜೂರು (ಎಸ್‌ಪಿ, ಬಳ್ಳಾರಿ) ವರ್ಗಾವಣೆಯಾಗಿದ್ದಾರೆ.

ಐಜಿಪಿಯಾಗಿ ಮುಂಬಡ್ತಿ

ಡಾ.ಎಂ.ಬಿ.ಬೋರಲಿಂಗಯ್ಯ (ದಕ್ಷಿಣ ವಲಯ), ರಾಮ್‌ನಿವಾಸ್ ಸೆಪಟ್‌ (ಹೈದರಾಬಾದ್, ರಾಷ್ಟ್ರೀಯ ಪೊಲೀಸ್ ತರಬೇತಿ ಶಾಲೆ), ಅನುಪಮಾ ಅಗರ್‌ವಾಲ್‌(ಸಿಆರ್‌ಪಿಎಫ್‌), ಅಜಯ್‌ ಹಿಲೋರಿ (ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ, ಬೆಂಗಳೂರು), ಡಾ.ರೋಹಿಣಿ ಕಟೋಚ್‌ ಸಪೆಟ್‌ (ಹೈದರಾಬಾದ್, ರಾಷ್ಟ್ರೀಯ ಪೊಲೀಸ್ ತರಬೇತಿ ಶಾಲೆ).

IPS Alok Kumar: ಅಲೋಕ್ ಕುಮಾರ್​ಗೆ ಡಿಜಿಪಿಯಾಗಿ ಬಡ್ತಿ, ಕಾರಾಗೃಹ ಇಲಾಖೆಗೆ ವರ್ಗ

ಡಿಐಜಿಯಾಗಿ ಮುಂಬಡ್ತಿ

ಡಾ.ಭೀಮಾಶಂಕರ್ ಎಸ್‌.ಗುಳೇದ್ (ಸಿಐಡಿ, ಆರ್ಥಿಕ ಅಪರಾಧ ವಿಭಾಗ), ನಿಕಂ ಪ್ರಕಾಶ್‌ ಅಮ್ರಿತ್ (ಕೇಂದ್ರ ಸೇವೆ), ಜಿ.ರಾಧಿಕಾ(ಹೈದರಾಬಾದ್, ರಾಷ್ಟ್ರೀಯ ಪೊಲೀಸ್ ತರಬೇತಿ ಶಾಲೆ), ರಾಹುಲ್‌ ಕುಮಾರ್ ಶಹಪುರ್‌ವಾದ್ (ಎನ್‌ಐಎ, ದೆಹಲಿ), ಧರ್ಮೇಂದ್ರ ಕುಮಾರ್‌ ಮೀನಾ (ಕೇಂದ್ರ ಸೇವೆ), ಇಲಾಕಿಯಾ ಕರುಣಾಕರನ್‌ (ನಿಸ್ತಂತು ವಿಭಾಗ), ಡಾ.ಸಿ.ಬಿ.ವೇದಮೂರ್ತಿ (ಗುಪ್ತಚರ ವಿಭಾಗ), ಕೆ.ಎಂ.ಶಾಂತರಾಜು (ಐಎಸ್‌ಡಿ, ಬೆಂಗಳೂರು), ಹನುಮಂತರಾಯ (ಮಾನವ ಹಕ್ಕುಗಳ ಆಯೋಗ), ಡಿ.ದೇವರಾಜ್‌ (ಪೊಲೀಸ್ ತರಬೇತಿ), ಡಾ.ಡಿ.ಆರ್‌.ಸಿರಿಗೌರಿ (ಕರ್ನಾಟಕ ಲೋಕಾಯುಕ್ತ), ಡಾ.ಕೆ.ಧರಣಿದೇವಿ (ಗುಪ್ತಚರ ವಿಭಾಗ), ಎಸ್‌.ಸವಿತಾ (ಹೋಮ್‌ ಗಾರ್ಡ್‌), ಸಿ.ಕೆ.ಬಾಬಾ (ಕೆಎಸ್‌ಆರ್‌ಪಿ), ಅಬ್ದುಲ್‌ ಅಹದ್‌ (ಬಿಎಂಟಿಸಿ, ವಿಚಕ್ಷಣ ದಳ), ಎಸ್‌.ಗಿರೀಶ್‌ (ಮಾದಕ ವಸ್ತು ನಿಗ್ರಹ ಪಡೆ), ಎಂ.ಪುಟ್ಟಮಾದಯ್ಯ (ಪ್ರಾಂಶುಪಾಲರು, ಪೊಲೀಸ್ ತರಬೇತಿ ಶಾಲೆ, ಕಲಬುರಗಿ), ಟಿ.ಶ್ರೀಧರ್‌ (ಪೊಲೀಸ್ ಪ್ರಧಾನ ಕಚೇರಿ), ಎಂ.ಅಶ್ವಿನಿ (ಯುಎನ್ಎಂಐಎಸ್‌ಎಸ್‌), ಎ.ಎನ್‌.ಪ್ರಕಾಶ್‌ ಗೌಡ (ವಿಶೇಷ ಕಾರ್ಯಪಡೆ).

ಜಿನೇಂದ್ರ ಖನಗಾವಿ (ಕಾರಾಗೃಹ), ಜಿ.ಕೆ.ರಶ್ಮಿ (ರೈಲ್ವೆ ಪೊಲೀಸ್), ಟಿ.ಪಿ.ಶಿವಕುಮಾರ್‌ (ಎಸ್‌ಸಿಆರ್‌ಬಿ), ಎನ್.ವಿಷ್ಣುವರ್ಧನ (ಪೊಲೀಸ್ ಅಕಾಡೆಮಿ, ಮೈಸೂರು), ಡಾ.ಸಜೀವ್ ಎಂ.ಪಾಟೀಲ್ (ಪೊಲೀಸ್ ಪ್ರಧಾನ ಕಚೇರಿ), ಕೆ.ಪರಶುರಾಮ್‌ (ಸಂಚಾರ ಮತ್ತು ಸುರಕ್ಷತೆ), ಹೆಚ್‌.ಡಿ.ಆನಂದ್‌ ಕುಮಾರ್ (ಸೈಬರ್ ಕಮಾಂಡ್‌), ಕಲಾ ಕೃಷ್ಣಮೂರ್ತಿ (ಅಪರಾಧ ವಿಭಾಗ, ಪೊಲೀಸ್ ಪ್ರಧಾನ ಕಚೇರಿ).

ಮುಂಬಡ್ತಿ

ಡಾ.ಅನೂಪ್ ಶೆಟ್ಟಿ, ಹರೀಶ್‌ ಪಾಂಡೆ, ಸುಮನಾ ಡಿ.ಪನ್ನೇಕರ್‌, ದಿವ್ಯಾ ಸಾರಾ ಥಾಮಸ್‌, ಡಿಕಾ ಕಿಶೋರ್‌ ಬಾಬು, ಸಿ.ಬಿ.ರಿಷ್ಯಂತ್, ನಿಶಾ ಜೇಮ್ಸ್, ಮಧುರ ವೀಣಾ, ಎಂ.ವಿ.ಚಂದ್ರಕಾಂತ್ (ಎಸ್ಪಿ ಬೆಂ.ಗ್ರಾಮಾಂತರ).