ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Nandini Products: ನಂದಿನಿ ಉತ್ಪನ್ನಗಳ ನಕಲಿಗೆ ಬ್ರೇಕ್‌ ಹಾಕಲು ಕೆಎಂಎಫ್‌ ಪ್ಲಾನ್‌

ಕಳೆದ ಕೆಲ ದಿನಗಳ ಹಿಂದೆ ಹೆಮ್ಮೆಯ ನಂದಿನಿ ಬ್ರ‍್ಯಾಂಡ್ ಹೆಸರಲ್ಲಿ ನಕಲಿ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಸದ್ದು ಮಾಡಿದ್ದವು. ಕೆಎಂಎಫ್ ಅಧಿಕಾರಿಗಳೇ ಪೊಲೀಸರೊಂದಿಗೆ ಇವುಗಳ ಪತ್ತೆ ಕೂಡ ಮಾಡಿದ್ದರು. ಇದರ ಬೆನ್ನಲ್ಲೇ ಮತ್ತಷ್ಟು ಅಲರ್ಟ್ ಆಗಿರೋ ಕೆಎಂಎಫ್ ಉತ್ಪನ್ನದ ಮತ್ತಷ್ಟು ಸುರಕ್ಷತೆಗೆ ಹೊಸ ಪ್ಲಾನ್ ಜಾರಿ ಮಾಡಿದೆ.

ನಂದಿನಿ ಉತ್ಪನ್ನಗಳ ನಕಲಿಗೆ ಬ್ರೇಕ್‌ ಹಾಕಲು ಕೆಎಂಎಫ್‌ ಪ್ಲಾನ್‌

ನಂದಿನಿ ಉತ್ಪನ್ನಗಳು -

ಹರೀಶ್‌ ಕೇರ
ಹರೀಶ್‌ ಕೇರ Feb 20, 2026 2:14 PM

ಬೆಂಗಳೂರು, ಫೆ.20: ರಾಜ್ಯದ ಹೆಮ್ಮೆಯ ನಂದಿನಿ ಉತ್ಪನ್ನಗಳ (Nandini Products) ಹೆಸರಲ್ಲಿ ನಕಲಿ ಉತ್ಪನ್ನಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿರುವುದು ಪತ್ತೆಯಾಗಿರುವ ಬೆನ್ನಲ್ಲೇ ಕೆಎಂಎಫ್ (KMF) ಅಲರ್ಟ್ ಆಗಿದ್ದು, ನಕಲಿ ಉತ್ಪನ್ನಗಳ ಹಾವಳಿಗೆ ಬ್ರೇಕ್ ಹಾಕಲು ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಿದೆ. ವಿವರಗಳಿರುವ ಕ್ಯುಆರ್‌ ಕೋಡ್‌ಗಳ (QR code) ಬಳಕೆ ಮೂಲಕ ನಂದಿನಿ ಉತ್ಪನ್ನಗಳ ಶ್ರೇಷ್ಠತೆ ಕಾಪಾಡಲು ಮುಂದಾಗಿದೆ.

ನಂದಿನಿ, ಕರ್ನಾಟಕದ ಹೆಮ್ಮೆಯ ಹಾಲು ಉತ್ಪನ್ನಗಳ ಬ್ರ‍್ಯಾಂಡ್. ರಾಜ್ಯ ಮಾತ್ರವಲ್ಲದೇ ವಿದೇಶಗಳಲ್ಲೂ ತನ್ನ ಕ್ವಾಲಿಟಿಯಿಂದ ಜನರ ಅಚ್ಚುಮೆಚ್ಚು ಎನಿಸಿಕೊಂಡಿದೆ. ಆದರೆ ಕಳೆದ ಕೆಲ ದಿನಗಳ ಹಿಂದೆ ಹೆಮ್ಮೆಯ ನಂದಿನಿ ಬ್ರ‍್ಯಾಂಡ್ ಹೆಸರಲ್ಲಿ ನಕಲಿ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಸದ್ದು ಮಾಡಿದ್ದವು. ಕೆಎಂಎಫ್ ಅಧಿಕಾರಿಗಳೇ ಪೊಲೀಸರೊಂದಿಗೆ ಇವುಗಳ ಪತ್ತೆ ಕೂಡ ಮಾಡಿದ್ದರು. ಇದರ ಬೆನ್ನಲ್ಲೇ ಮತ್ತಷ್ಟು ಅಲರ್ಟ್ ಆಗಿರೋ ಕೆಎಂಎಫ್ ಉತ್ಪನ್ನದ ಮತ್ತಷ್ಟು ಸುರಕ್ಷತೆಗೆ ಹೊಸ ಪ್ಲಾನ್ ಜಾರಿ ಮಾಡಿದೆ.

ಕೆಎಂಎಫ್ ಸದ್ಯ ನಂದಿನಿ ಉತ್ಪನ್ನಗಳ ಪ್ಯಾಕೆಟ್ ಮೇಲೆ ಕ್ಯೂಆರ್ ಕೋಡ್ ಅಳವಡಿಕೆ ಮೂಲಕ ಬ್ರ‍್ಯಾಂಡ್ ಶ್ರೇಣಿ ಕಾಪಾಡುವ ಜೊತೆಗೆ ನಕಲಿ ಉತ್ಪನ್ನಗಳ ಹಾವಳಿಗೂ ಬ್ರೇಕ್ ಹಾಕಲು ಮುಂದಾಗಿದೆ. ಆರಂಭಿಕವಾಗಿ ತುಪ್ಪದ ಪ್ಯಾಕೆಟ್ ಮತ್ತು ಬಾಟಲ್‌ಗಳ ಮೇಲೆ ಈ ಕೋಡ್ ಅಳವಡಿಕೆ ಮಾಡಿದೆ. ತುಪ್ಪ ಕ್ವಾಲಿಟಿ ಅಥವಾ ಅಸಲಿತನವನ್ನು ಪರೀಕ್ಷೆ ಮಾಡಬೇಕಿದ್ದರೆ ನೇರವಾಗಿ ಕೋಡ್‌ ಅನ್ನು ಒಮ್ಮೆ ಸ್ಕ್ಯಾನ್ ಮಾಡಿ, ನಂಬರ್ ಹಾಕಿದರೆ ಒಟಿಪಿ ಬರಲಿದೆ. ಇದನ್ನು ಎಂಟರ್ ಮಾಡಿದ ಕೂಡಲೇ ಆ ತುಪ್ಪದ ಸಂಪೂರ್ಣ ಮಾಹಿತಿ ನಿಮ್ಮ ಫೋನ್‌ನಲ್ಲಿ ಸಿಗಲಿದೆ. ಎಲ್ಲಿ ತಯಾರಾಗಿದೆ, ಯಾವಾಗ ತಯಾರಿಕಾ ಜಾಗದಿಂದ ಮಾರುಕಟ್ಟೆಗೆ ಬಂದಿದೆ, ಅದರ ಮಾರ್ಕೆಟ್ ಕೋಡ್ ಏನು- ಈ ಎಲ್ಲಾ ಅಂಶಗಳು ಇದರಲ್ಲಿ ಒಳಗೊಂಡಿರಲಿದೆ.

KMF ನಂದಿನಿ ಉತ್ಪನ್ನಗಳು ಸಂಪೂರ್ಣ ಸೇಫ್‌; ತಪ್ಪು ಮಾಹಿತಿ ಹರಡುವವರ ಮೇಲೆ ಕಾನೂನು ಕ್ರಮ ಎಚ್ಚರಿಕೆ!

ಸದ್ಯ ಈ ಹೊಸ ಐಡಿಯಾ ತುಪ್ಪದ ಪ್ಯಾಕೆಟ್ ಮೇಲೆ ಮಾತ್ರ ಜಾರಿಗೆ ಬಂದಿದೆ. ಹಂತ ಹಂತವಾಗಿ ಇತರ ಉತ್ಪನ್ನಗಳ ಮೇಲೆಯೂ ಹಾಕಲು ಕೆಎಂಎಫ್ ಚಿಂತನೆ ನಡೆಸಿದೆ. ಈ ಬಗ್ಗೆ ಕೆಎಂಎಫ್ ಎಂಡಿ ಶಿವಸ್ವಾಮಿ ಮಾತನಾಡಿ, ನಕಲಿ ತುಪ್ಪ ತಡೆಗೆ ಈ ಯೋಜನೆ ಸಹಕಾರಿಯಾಗಲಿದೆ. ಇದನ್ನು ನಕಲು ಮಾಡಲು ಪ್ರಯತ್ನ ಮಾಡಿದರೆ ಪತ್ತೆ ಹಚ್ಚಲು ಸಹಕಾರಿಯಾಗಲಿದೆ ಎಂದಿದ್ದಾರೆ.

Nandini Brand Ambassador: ನಂದಿನಿ ಬಮುಲ್ ಉತ್ಪನ್ನಗಳ ರಾಯಭಾರಿಯಾಗಿ ಹಿರಿಯ ನಟಿ ಸುಧಾರಾಣಿ ನೇಮಕ