ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

KMF ನಂದಿನಿ ಉತ್ಪನ್ನಗಳು ಸಂಪೂರ್ಣ ಸೇಫ್‌; ತಪ್ಪು ಮಾಹಿತಿ ಹರಡುವವರ ಮೇಲೆ ಕಾನೂನು ಕ್ರಮ ಎಚ್ಚರಿಕೆ!

ಕರ್ನಾಟಕ ಹಾಲು ಒಕ್ಕೂಟದ ಉತ್ಪನ್ನಗಳು ದೇಶ ಮಾತ್ರವಲ್ಲದೆ ವಿಶ್ವದಾದ್ಯಂತ ಮನ್ನಣೆಯನ್ನು ಪಡೆದುಕೊಂಡಿವೆ. ಆದರೆ ಕೆಲ ಕಿಡಿಗೇಡಿಗಳು ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಂದಿನಿ ಉತ್ಪನ್ನಗಳ ಸುರಕ್ಷತೆ ಕುರಿತು ತಪ್ಪು ಮಾಹಿತಿ ಹರಡಲಾಗುತ್ತಿದೆ.

ನಂದಿನಿ ಉತ್ಪನ್ನ ಸಂಪೂರ್ಣ ಸೇಫ್‌; ಸುಳ್ಳು ಆರೋಪ ಮಾಡಿದ್ರೆ  ಕ್ರಮ ಎಚ್ಚರಿಕೆ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Feb 18, 2026 7:17 AM

ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟದ (Karnataka Milk Federation) ಉತ್ಪನ್ನಗಳು ದೇಶ ಮಾತ್ರವಲ್ಲದೆ ವಿಶ್ವದಾದ್ಯಂತ ಮನ್ನಣೆಯನ್ನು ಪಡೆದುಕೊಂಡಿವೆ. ಆದರೆ ಕೆಲ ಕಿಡಿಗೇಡಿಗಳು ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಂದಿನಿ ಉತ್ಪನ್ನಗಳ (Nandini) ಸುರಕ್ಷತೆ ಕುರಿತು ತಪ್ಪು ಮಾಹಿತಿ ಹರಡಲಾಗುತ್ತಿದೆ. ಈ ಕುರಿತು KMF ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ. ತಪ್ಪು ಮಾಹಿತಿ ಹರಡುತ್ತಿರುವವರಿಗೆ ಕೆಎಂಎಫ್ ಇದೀಗ ಎಚ್ಚರಿಕೆಯನ್ನು ನೀಡಿದೆ.

ಸಾರ್ವಜನಿಕ ಪ್ರಕಟಣೆಯಲ್ಲಿ ಏನಿದೆ?

ನಂದಿನಿ ಉತ್ಪನ್ನಗಳು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ನಿಗದಿಪಡಿಸಿದ ಎಲ್ಲಾ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದೇವೆ. ನಂದಿನಿ ಹಾಲು ಮತ್ತು ಹಾಲು ಉತ್ಪನ್ನಗಳು ಸಂಪೂರ್ಣ ಸುರಕ್ಷಿತವಾಗಿವೆ. ಸ್ವಚ್ಛ ಹಾಗೂ ಉತ್ತಮ ಗುಣಮಟ್ಟದ್ದಾಗಿದೆ ನಮ್ಮ ಗ್ರಾಹಕರಿಗೆ ಭರವಸೆ ನೀಡುತ್ತೇವೆ ಎಂದು ಕರ್ನಾಟಕ ಹಾಲು ಒಕ್ಕೂಟ ಮಾಹಿತಿ ನೀಡಿದೆ. ನಂದಿನಿ ಬ್ರಾಂಡ್‌ನ ಘನತೆಗೆ ಧಕ್ಕೆ ತರುವ ನಿಟ್ಟಿನಲ್ಲಿ ದುರುದ್ದೇಶಪೂರಿತವಾಗಿ ಸುಳ್ಳು ಸುದ್ದಿ ಹರಡುತ್ತಿರುವವರ ವಿರುದ್ಧ ಕೆಎಂಎಫ್ ಎಚ್ಚರಿಕೆ ನೀಡಿದ್ದು, ಆಧಾರರಹಿತ ಆರೋಪ ಮಾಡುವವರ ಮತ್ತು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಈಗಾಗಲೇ ಸಂಬಂಧಪಟ್ಟ ವಿಭಾಗಗಳಿಗೆ ಸೂಚನೆ ನೀಡಲಾಗಿದೆ" ಎಂದು ಮಹಾಮಂಡಳಿ ಎಚ್ಚರಿಕೆ ನೀಡಿದೆ.

ಬಮುಲ್​​ ಅಧ್ಯಕ್ಷ ಡಿ.ಕೆ. ಸುರೇಶ್​ ಪ್ರತಿಕ್ರಿಯಿಸಿ, ನಂದಿನಿ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ, ನಂದಿನಿ ಉತ್ಪಾದನೆಯಲ್ಲಿ ಗುಣಮಟ್ಟವಿದೆ, ಅಲ್ಲಿ ಕಲಬೆರಕೆ ಮಾಡೋದು ಅನ್ನೋದು ಇರಲ್ಲ, ಕೆಲವು ಕಿಡಿಗೇಡಿಗಳು ಅಪಪ್ರಚಾರ ಮಾಡ್ತಾರೆ, ಅದರಲ್ಲಿ ಕೆಲವು ಖಾಸಗಿ ಅವರು ಇರಬಹುದು, ನಂದಿನಿ ಗುಣಮಟ್ಟದಲ್ಲಿ ಹಿಂದೆ ಸರಿಯಲ್ಲ, ಮುಂದಕ್ಕೆ ಕೂಡ ಅದನ್ನ ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.

ನಾವು ಖಾಸಗಿಯವರ ಜೊತೆ ಸ್ಪರ್ಧೆ ಮಾಡಬೇಕಾದಾಗ ಅಪಪ್ರಚಾರ ಮಾಡುವುದು ಸಹಜ. ನಂದಿನಿ ಯಾವತ್ತೂ ಗುಣಮಟ್ಟದ ಜೊತೆ ರಾಜಿಯಾಗಿಲ್ಲ. ನಂದಿನಿಗೆ ಎಷ್ಟೇ ನಷ್ಟವಾದರೂ ಎಂದಿಗೂ ಗ್ರಾಹಕರಿಗೆ ಹಾಗೂ ರೈತರಿಗೆ ಅನ್ಯಾಯ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ಗುಣಮಟ್ಟದ ಉತ್ಪನ್ನಗಳನ್ನು ಮುಂದೆಯೂ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.