ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿನಯ್‌ ಸಾವಿನ ಸುತ್ತ, ನಿಗೂಢತೆಯ ಹುತ್ತ

ದೇಶಪ್ರೇಮ, ಬಿಜೆಪಿ ಸಂಬಂಧಿತ ಮಾಹಿತಿಗಳನ್ನು ವಿನಯ್ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರ ಪಡಿಸುತ್ತಿದ್ದರು. ಕೊಡಗಿನ ಸಮಸ್ಯೆಗಳ ಬಗ್ಗೆ ಚರ್ಚಿಸುವ ಅನೇಕ ವಾಟ್ಸಪ್ ಗ್ರೂಪ್ ಗಳಂತೆಯೇ ಕೊಡಗಿನ ಸಮಸ್ಯೆಗಳು ಎಂಬ ವಾಟ್ಸಪ್ ಗ್ರೂಪ್ ಕಾರ್ಯಪ್ರವೃತ್ತ ವಾಗಿದೆ. ಕಳೆದ ಫೆಬ್ರವರಿಯಲ್ಲಿ ಈ ಬಳಗಕ್ಕೆ ಸೇರ್ಪಡೆಯಾಗಿದ್ದ ವಿನಯ್ ನನ್ನು ಆ ಬಳಗದ ಇತರರು ಅಡ್ಮಿನ್ ಮಾಡಿದ್ದರು. ಆದರೆ, ಅಡ್ಮಿನ್ ಆದ ಕೇವಲ 5 ದಿನಗಳಲ್ಲಿಯೇ ವಿನಯ್ ಪಾಲಿಗೆ ಆಘಾತ ಕಾದಿತ್ತು.

ವಿನಯ್‌ ಸಾವಿನ ಸುತ್ತ, ನಿಗೂಢತೆಯ ಹುತ್ತ

Profile Ashok Nayak Apr 5, 2025 4:52 PM

ಅನಿಲ್ ಎಚ್.ಟಿ.ಮಡಿಕೇರಿ

ಘಟನೆಯಲ್ಲಿ ಕೊಡಗಿನ ಶಾಸಕರ ಪಾತ್ರವಾದರೂ ಏನು?

ಕೊಡಗು ಜಿಲ್ಲೆಯ ಗೋಣಿಮರೂರು ಗ್ರಾಮದ ಯೋಧನ ಮಗ ವಿನಯ್ ಸಾವಿನ ಪ್ರಕರಣ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಕೊಡಗಿನ ಕಾಂಗ್ರೆಸ್ ಶಾಸಕರ ಹೆಸರೂ ಈ ಪ್ರಕರಣದಲ್ಲಿ ತಳಕು ಹಾಕಿ ಕೊಂಡಿರುವುದು ಬಿಜೆಪಿಗರಿಗೆ ಮತ್ತೊಂದು ಹೋರಾಟಕ್ಕೆ ಪ್ರಬಲ ಅಸ್ತ್ರ ನೀಡಿದಂತಾಗಿದೆ.

ಘಟನೆ ಏನು?: ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಪುಟ್ಟ ಗ್ರಾಮ ಗೋಣಿಮರೂರು. ಬೆಂಗಳೂರಿನ ಸಾಫ್ಟ್‌ ವೇರ್ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸು ತ್ತಿದ್ದ ವಿನಯ್ ಕೊಡಗು ಬಿಜೆಪಿಯ ಸಾಮಾಜಿಕ ಜಾಲತಾಣದ ಸಂಚಾಲಕರಾಗಿದ್ದರು.

ದೇಶಪ್ರೇಮ, ಬಿಜೆಪಿ ಸಂಬಂಧಿತ ಮಾಹಿತಿಗಳನ್ನು ವಿನಯ್ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರ ಪಡಿಸುತ್ತಿದ್ದರು. ಕೊಡಗಿನ ಸಮಸ್ಯೆಗಳ ಬಗ್ಗೆ ಚರ್ಚಿಸುವ ಅನೇಕ ವಾಟ್ಸಪ್ ಗ್ರೂಪ್ ಗಳಂತೆಯೇ ಕೊಡಗಿನ ಸಮಸ್ಯೆಗಳು ಎಂಬ ವಾಟ್ಸಪ್ ಗ್ರೂಪ್ ಕಾರ್ಯಪ್ರವೃತ್ತ ವಾಗಿದೆ. ಕಳೆದ ಫೆಬ್ರವರಿಯಲ್ಲಿ ಈ ಬಳಗಕ್ಕೆ ಸೇರ್ಪಡೆಯಾಗಿದ್ದ ವಿನಯ್ ನನ್ನು ಆ ಬಳಗದ ಇತರರು ಅಡ್ಮಿನ್ ಮಾಡಿದ್ದರು. ಆದರೆ, ಅಡ್ಮಿನ್ ಆದ ಕೇವಲ 5 ದಿನಗಳಲ್ಲಿಯೇ ವಿನಯ್ ಪಾಲಿಗೆ ಆಘಾತ ಕಾದಿತ್ತು.

ಇದನ್ನೂ ಓದಿ: Vinay Somaiah death: ವಿನಯ್‌ ಸೋಮಯ್ಯ ಆತ್ಮಹತ್ಯೆ ಪ್ರಕರಣ: ಕಾಂಗ್ರೆಸ್‌ ಶಾಸಕ ಸೇರಿ ಮೂವರ ಮೇಲೆ ಎಫ್‌ಐಆರ್

ಸಾಮಾಜಿಕ ಜಾಲತಾಣದಲ್ಲಿ ಪೋಟೊ ವೈರಲ್: ವಿರಾಜಪೇಟೆ ಕ್ಷೇತ್ರ ವ್ಯಾಪ್ತಿಯ ನಾಪೋಕ್ಲು ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯ ಕಳಪೆಯಾಗಿತ್ತು. ಯಾರೋ ಒಬ್ಬ ಈ ಶೌಚಾಲಯದ ಸ್ಥಿತಿಯ ಫೋಟೊಗೇ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ಶಾಸಕರಾದ ಎ.ಎಸ್. ಪೊನ್ನಣ್ಣ (ದಿ.ಎ.ಕೆ.ಸುಬ್ಬಯ್ಯ ಅವರ ಪುತ್ರ) ಅವರ ಫೋಟೊ ವನ್ನು ಅಳವಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಕೊಡಗು ಸಂಚಾ ಲಕ ತೆನ್ನೀರ ಮೈನಾ ಕೊಡಗಿನ ಸಮಸ್ಯೆಗಳು ಗ್ರೂಪ್ ನ ಮೂವರು ಅಡ್ಮಿನ್ ಗಳಾದ ಮೇಲೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ದೂರಿನನ್ವಯ ಕ್ರಮ ಕೈಗೊಂಡ ಪೊಲೀಸರು ವಿನಯ್ ಸೇರಿದಂತೆ ಮೂವರು ಅಡ್ಮಿನ್ ಗಳನ್ನೂ ಬಂಧಿಸಿದ್ದರು. ವಿನಯ್ ಜೈಲಿನಿಂದ ಜಾಮೀನು ಪಡೆದು ಬಿಡುಗಡೆಯಾದರು. ವಿನಯ್ ಇದೀಗ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭ ಡೆತ್ ನೋಟ್ ನಲ್ಲಿ ಬರೆದಿರು ವಂತೆ ತನಗೆ ಪೊಲೀಸರಿಂದ ಕಿರುಕುಳವಿತ್ತು.

ಮನೆಗೂ ಕರೆ ಮಾಡಿ ಪೊಲೀಸರು ಹಿಂಸಿಸುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿಯೂ ತನ್ನ ವಿರುದ್ಧ ಟೀಕೆಗಳು ಮುಂದುವರಿದಿತ್ತು. ಇದರಿಂದ ಮಾನಸಿಕವಾಗಿ ತಾನು ಜಿಗುಪ್ಸೆ ಗೊಂಡಿದ್ದೆ ಎಂದು ಉಲ್ಲೇಖಿಸಲಾಗಿದೆ.

ಪೊನ್ನಣ್ಣ ಅವರಿಗೂ ವಿನಯ್ ಯಾರೂ ಎಂದೇ ಗೊತ್ತಿಲ್ಲ

ಮಡಿಕೇರಿ ಶಾಸಕ ಡಾ.ಮಂಥರ್ ಗೌಡ ಅವರಿರುವ ಮತ್ತೊಂದು ಗ್ರೂಪ್ ನಲ್ಲಿ ನ.25ರಂದು ರಾತ್ರಿ ವಿನಯ್ ಆಸ್ಪತ್ರೆ ದುಸ್ಥಿತಿ ವಿಚಾರಕ್ಕೆ ಸಂಬಂಧಿಸಿದಂತೆ ಕಟುವಾಗಿಯೇ ಸಂದೇಶ ಹಾಕಿದ್ದಾರೆ. ಈ ಸಂದೇಶ ಗಮನಿಸಿದ ಮಂಥರ್ ಗೌಡ, ವಾಟ್ಸಪ್ ಕಾಲ್ ಮೂಲಕ ವಿನಯ್ ಜತೆ ಮಾತನಾಡಿ, ಗ್ರೂಪ್ ನಲ್ಲಿ ಸಂದೇಶ ಹಾಕುವ ಬದಲಿಗೆ, ನನ್ನ ವೈಯಕ್ತಿಕ ಸಂಖ್ಯೆಗೆ ಸಂದೇಶ ಹಾಕಿದ್ದೇ ಆದಲ್ಲಿ ಸಮಸ್ಯೆ ಪರಿಹಾರ ಸುಲಭ ಎಂದಿದ್ದಾರೆ. ಮಂಥರ್ ಗೌಡ ಅವರಿಗೂ ವಿನಯ್ ಯಾರೆಂದೇ ಗೊತ್ತಿಲ್ಲ. ಗಮನಾರ್ಹ ಎಂದರೆ, ಶಾಸಕರಾದ ಪೊನ್ನಣ್ಣ ಮತ್ತು ಮಂಥರ್ ಗೌಡ ಇವರಿಗೂ ವಿನಯ್ ಸೋಮಯ್ಯ ಪರಿಚಿತರೇನಲ್ಲ.