ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkaballapur News: ಮಾರುಕಟ್ಟೆ ಮೌಲ್ಯ ಪರಿಗಣಿಸಿ ಸೂಕ್ತ ಪರಿಹಾರ ನೀಡಲು ಕ್ರಮ: ಜಿ.ಪ್ರಭು

ಭಕ್ತರಹಳ್ಳಿ ಗ್ರಾಮದ ಬಳಿ ಜಮೀನಿನ ಸರ್ಕಾರಿ ಮಾರ್ಗಸೂಚಿ ಮೌಲ್ಯ ಎಕರೆಗೆ ಸುಮಾರು ರೂಪಾಯಿ 15 ಸಾವಿರ ಇದ್ದು, ಅದರ ನಾಲ್ಕು ಪಟ್ಟು ಲೆಕ್ಕದಲ್ಲಿ ಸುಮಾರು ರೂಪಾಯಿ 63,400 ಪರಿಹಾರ ದೊರೆಯಲಿದೆ. ಯಶವಂತಪುರದ ಬಳಿ ಎಕರೆಗೆ ಸುಮಾರು ರೂಪಾಯಿ 51,500 ಪರಿಹಾರ ನಿಗದಿಯಾಗಿ ರುವ ಮಾಹಿತಿಯನ್ನು ಅಧಿಕಾರಿಗಳು ಸಭೆಯಲ್ಲಿ ನೀಡಿದರು.

ಭೂಸ್ವಾಧೀನದಲ್ಲಿ ರೈತರ ಹಿತ ಕಾಪಾಡಲು ಜಿಲ್ಲಾಧಿಕಾರಿ ಭರವಸೆ

-

Profile
Ashok Nayak Sep 18, 2026 11:49 PM

ಚಿಕ್ಕಬಳ್ಳಾಪುರ: ಸಾರ್ವಜನಿಕ ಉದ್ದೇಶದ ಕಾಮಗಾರಿಗಾಗಿ ಭೂಸ್ವಾಧೀನಕ್ಕೆ ಒಳಪಡುವ ರೈತರ ಹಿತಾಸಕ್ತಿ ಕಾಪಾಡುವುದರ ಜತೆಗೆ, ನಿಯಮಾನುಸಾರ ಸೂಕ್ತ ಪರಿಹಾರಧನವನ್ನು ತ್ವರಿತವಾಗಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಭರವಸೆ ನೀಡಿದರು.

ಭಕ್ತರಹಳ್ಳಿ ಕೆರೆಯ ಕೆಳಭಾಗದಲ್ಲಿ ಹೊಸ ಕೆರೆ ನಿರ್ಮಾಣ ಸೇರಿದಂತೆ ಸಾರ್ವಜನಿಕ ಉದ್ದೇಶದ ಕಾಮಗಾರಿಗಳಿಗೆ ಅಗತ್ಯವಿರುವ ಭೂಸ್ವಾಧೀನದ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈತರೊಂದಿಗೆ ಸಭೆ ನಡೆಸಿ ಮಾತನಾಡಿದರು.

ಚಿಂತಾಮಣಿ ತಾಲ್ಲೂಕಿನ ಭಕ್ತರಹಳ್ಳಿ ಹಾಗೂ ಯಶವಂತಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಯೋಜನೆ ಗೆ ಅಗತ್ಯವಿರುವ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ರೈತರ ಅಹವಾಲು ಹಾಗೂ ಅಭಿಪ್ರಾಯಗಳನ್ನು ಜಿಲ್ಲಾಧಿಕಾರಿ ಆಲಿಸಿದರು.

ಇದನ್ನೂ ಓದಿ: Chikkaballapur News: ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ ಅರ್ಹ ರೈತರಿಗೆ ತಲುಪಿಸಲು ವಿಶೇಷ ಅಭಿಯಾನ: ಡಾ.ವೈ.ನವೀನ್ ಭಟ್

ರೈತರ ಜಮೀನು, ದಾಖಲೆಗಳು ಹಾಗೂ ಮಾರುಕಟ್ಟೆ ಮೌಲ್ಯವನ್ನು ಪರಿಶೀಲಿಸಿ, ಸರ್ಕಾರದ ನಿಯಮಾನುಸಾರ ಪರಿಹಾರಧನ ನಿಗದಿಪಡಿಸಲಾಗುವುದು. ಪರಿಹಾರಧನ ಬಿಡುಗಡೆಗೆ ಯಾವುದೇ ರೀತಿಯ ವಿಳಂಬವಾಗದಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಭಕ್ತರಹಳ್ಳಿ ಗ್ರಾಮದ ಬಳಿ ಜಮೀನಿನ ಸರ್ಕಾರಿ ಮಾರ್ಗಸೂಚಿ ಮೌಲ್ಯ ಎಕರೆಗೆ ಸುಮಾರು ರೂಪಾಯಿ 15 ಸಾವಿರ ಇದ್ದು, ಅದರ ನಾಲ್ಕು ಪಟ್ಟು ಲೆಕ್ಕದಲ್ಲಿ ಸುಮಾರು ರೂಪಾಯಿ 63,400 ಪರಿಹಾರ ದೊರೆಯಲಿದೆ. ಯಶವಂತಪುರದ ಬಳಿ ಎಕರೆಗೆ ಸುಮಾರು ರೂಪಾಯಿ 51,500 ಪರಿಹಾರ ನಿಗದಿಯಾಗಿರುವ ಮಾಹಿತಿಯನ್ನು ಅಧಿಕಾರಿಗಳು ಸಭೆಯಲ್ಲಿ ನೀಡಿದರು.

ಆದರೆ ತಮ್ಮ ಜಮೀನಿನ ಪ್ರಸ್ತುತ ಮಾರುಕಟ್ಟೆ ಮೌಲ್ಯ ಎಕರೆಗೆ ಸುಮಾರು ರೂಪಾಯಿ 70ರಿಂದ 80 ಲಕ್ಷದವರೆಗೆ ಇದೆ. ಹೀಗಾಗಿ ವಾಸ್ತವ ಮಾರುಕಟ್ಟೆ ಮೌಲ್ಯ ಪರಿಗಣಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಮನವಿ ಮಾಡಿದರು.

18cbpm13a GP

ರೈತರ ಮನವಿ ಆಲಿಸಿದ ಜಿಲ್ಲಾಧಿಕಾರಿ, ಮಾರುಕಟ್ಟೆ ಮೌಲ್ಯ ಸೇರಿದಂತೆ ಸಂಬಂಧಿಸಿದ ಎಲ್ಲ ಅಂಶಗಳನ್ನು ಪರಿಶೀಲಿಸಿ, ಲಭ್ಯ ದಾಖಲೆ ಹಾಗೂ ಸರ್ಕಾರದ ನಿಯಮಗಳ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರೈತರೊಂದಿಗೆ ಸಮಾಲೋಚನೆ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸುವ ಮೂಲಕ ಪಾರದರ್ಶಕವಾಗಿ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕ ಉದ್ದೇಶದ ಕಾಮಗಾರಿ ಹಾಗೂ ರೈತರ ಹಿತಾಸಕ್ತಿಯನ್ನು ಸಮನ್ವಯಗೊಳಿಸಿ ಪರಿಹಾರ ಒದಗಿಸಲು ಜಿಲ್ಲಾಡಳಿತ ಬದ್ಧವಾಗಿದೆ ಎಂದರು.

ಉಪವಿಭಾಗಾಧಿಕಾರಿ ಅಶ್ವಿನ್, ತಹಶೀಲ್ದಾರ್ ಸುಧರ್ಶನ್ ಯಾದವ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ರೈತರು ಸಭೆಯಲ್ಲಿ ಉಪಸ್ಥಿತರಿದ್ದರು.